ವಿಶ್ವದ 31 ಜೌಗುಭೂಮಿ ಮಾನ್ಯತೆ ಪಡೆದ ನಗರಗಳ ಪಟ್ಟಿಗೆ ಇಂದೋರ್ ಮತ್ತು ಉದಯಪುರ ಸೇರ್ಪಡೆ : ಪ್ರಧಾನಮಂತ್ರಿ ಅಭಿನಂದನೆ
January 25th, 05:52 pm
ವಿಶ್ವದ 31 ಜೌಗುಭೂಮಿ (ತೇವಾಂಶಯುಕ್ತ ನೆಲ) ಮಾನ್ಯತೆ ಪಡೆದ ನಗರಗಳ ಪಟ್ಟಿಗೆ ಸೇರ್ಪಡೆಗೊಂಡ ಇಂದೋರ್ ಮತ್ತು ಉದಯಪುರ ನಗರಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ. ಈ ಮಾನ್ಯತೆಯು ಸುಸ್ಥಿರ ಅಭಿವೃದ್ಧಿ ಹಾಗೂ ಪ್ರಕೃತಿ ಮತ್ತು ನಗರ ಬೆಳವಣಿಗೆಯ ನಡುವಿನ ಸಾಮರಸ್ಯವನ್ನು ಪೋಷಿಸುವ ಭಾರತದ ಅಚಲ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.