ಹಡಗು ನಿರ್ಮಾಣ, ಸಾಗಣೆ ಮತ್ತು ಕಡಲ ಲಾಜಿಸ್ಟಿಕ್ಸ್‌ನಲ್ಲಿ ಪಾಲುದಾರಿಕೆಗಾಗಿ ಭಾರತ-ಆರ್‌ಒಕೆ ಸಮಗ್ರ ಚೌಕಟ್ಟು
April 20th, 10:51 pm
ಏಪ್ರಿಲ್ 20, 2026 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೊರಿಯಾ ಗಣರಾಜ್ಯದ (ROK) ಗೌರವಾನ್ವಿತ ಶ್ರೀ ಲೀ ಜೇ ಮ್ಯುಂಗ್ ಅವರ ನಡುವಿನ ಸಭೆಯಲ್ಲಿ, ಹಡಗು ನಿರ್ಮಾಣ, ಸಾಗಣೆ ಮತ್ತು ಕಡಲ ಲಾಜಿಸ್ಟಿಕ್ಸ್‌ನಲ್ಲಿ ಪಾಲುದಾರಿಕೆಗಾಗಿ ತಮ್ಮ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಪರಸ್ಪರ ಪ್ರಯೋಜನಕಾರಿ ಸಹಕಾರದ ಕುರಿತು ಎರಡೂ ಕಡೆಯವರು ಫಲಪ್ರದ ಮತ್ತು ಆಳವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.The teacher recruitment scam has destroyed thousands of families’ dreams: PM Modi in Birbhum, West Bengal
April 09th, 11:45 am
PM Modi launched a sharp attack on the TMC in his address at a massive public meeting in Birbhum, West Bengal. He alleged large-scale irregularities in welfare schemes and called for a decisive mandate for change in the upcoming Assembly elections. He urged people to press the lotus button at every booth and ensure a government that delivers development, dignity and security.The pot of TMC’s sins is now full: PM Modi in Asansol, West Bengal
April 09th, 11:40 am
PM Modi addressed a massive public meeting in Asansol, West Bengal, where he raised concerns over women’s safety, governance and illegal infiltration. Calling for a decisive mandate in the upcoming Assembly elections, he sharply criticised the ruling dispensation, alleging a politics of fear. The PM asserted that if there is one party committed to ensuring women’s rights, it is the BJP.TMC has created a system of “cut money” and commissions: PM Modi in Haldia, West Bengal
April 09th, 11:35 am
Prime Minister Narendra Modi delivered a high-energy address in Haldia, galvanising BJP supporters and setting the tone for the upcoming West Bengal Assembly elections. Addressing a massive gathering, PM Modi invoked the spirit of past political transformation and projected a similar wave sweeping across the state.PM Modi’s Haldia, Asansol & Birbhum rallies build massive momentum ahead of West Bengal polls
April 09th, 11:30 am
Prime Minister Narendra Modi delivered a high-energy address in Haldia, galvanising BJP supporters and setting the tone for the upcoming West Bengal Assembly elections. Addressing a massive gathering, PM Modi invoked the spirit of past political transformation and projected a similar wave sweeping across the state.ಉತ್ತರ ಪ್ರದೇಶದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಂತ Iರ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
March 28th, 12:15 pm
ಉದ್ಘಾಟನೆ ನೆರವೇರಿದೆಯೇ? ಉದ್ಘಾಟನೆ ನೆರವೇರಿದೆಯೇ? ಇನ್ನೂ ಇಲ್ಲ, ಈಗ ಅರ್ಧ ಕೆಲಸ ಮಾತ್ರವೇ ಮುಗಿದಿದೆ. ನಾನು ಆ ಪರದೆಯನ್ನು ಮಾತ್ರ ಸರಿಸಿದ್ದೇನೆ, ಆದರೆ ಇಂದು ಈ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಇಲ್ಲಿ ಹಾಜರಿರುವ ನೀವೆಲ್ಲರೂ ಮಾಡಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ನಿಮ್ಮ ಮೊಬೈಲ್ ಫೋನ್‌ಗಳನ್ನು ಹೊರತೆಗೆಯಿರಿ, ನಿಮ್ಮ ಮೊಬೈಲ್ ಫೋನ್‌ನ ದೀಪವನ್ನು ಆನ್ ಮಾಡಿ, ನೀವೇ ಅದನ್ನು ಉದ್ಘಾಟಿಸುತ್ತಿದ್ದೀರಿ. ದೀಪವನ್ನು ಬೆಳಗುವ ಮೂಲಕ, ಇಲ್ಲಿ ಹಾಜರಿರುವ ಪ್ರತಿಯೊಬ್ಬರೂ ಇಂದು ಈ ವಿಮಾನ ನಿಲ್ದಾಣವನ್ನು ಉದ್ಘಾಟಿಸುತ್ತಿದ್ದಾರೆ. ಇದು ನಿಮ್ಮ ಆಸ್ತಿ, ಇದು ನಿಮ್ಮ ಭವಿಷ್ಯ, ಇದು ನಿಮ್ಮ ಕಠಿಣ ಪರಿಶ್ರಮ. ಆದ್ದರಿಂದ ಇದರ ಉದ್ಘಾಟನೆಯನ್ನು ನಿಮ್ಮ ಕೈಗಳಿಂದಲೇ ಮಾಡಲಾಗುತ್ತಿದೆ. ಭಾರತ ಮಾತೆಗೆ ಜಯವಾಗಲಿ ಎಂದು ಹೇಳುವ ಮೂಲಕ, ನಿಮ್ಮ ಕೈಗಳನ್ನು ಮೇಲಕ್ಕೆತ್ತಿ, ದೀಪವನ್ನು ಸಂಪೂರ್ಣ ತೋರಿಸಿ. ಭಾರತ ಮಾತೆಗೆ ಜಯವಾಗಲಿ! ಭಾರತ ಮಾತೆಗೆ ಜಯವಾಗಲಿ! ಭಾರತ ಮಾತೆಗೆ ಜಯವಾಗಲಿ! ತುಂಬು ಧನ್ಯವಾದಗಳು. ಈಗ ಉದ್ಘಾಟನೆ ಪೂರ್ಣವಾಗಿದೆ.ಸುಮಾರು ₹11,200 ಕೋಟಿ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ I ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
March 28th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಜೇವರ್‌ನಲ್ಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಮ್ಮ ಹೆಮ್ಮೆ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿ , ಇಂದು ವಿಕ್ಷಿತ್ ಯುಪಿ, ವಿಕಸಿತ ಭಾರತ ಅಭಿಯಾನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಭಾರತದ ಅತಿದೊಡ್ಡ ರಾಜ್ಯವು ಈಗ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ಮೊದಲನೆಯದಾಗಿ, ಈ ವಿಮಾನ ನಿಲ್ದಾಣದ ಅಡಿಪಾಯವನ್ನು ಹಾಕಿದ್ದಕ್ಕಾಗಿ ಮತ್ತು ಈಗ ಅದನ್ನು ಉದ್ಘಾಟಿಸಿದ್ದಕ್ಕಾಗಿ ಹಾಗು ಎರಡನೆಯದಾಗಿ, ಈ ಭವ್ಯ ವಿಮಾನ ನಿಲ್ದಾಣದ ಹೆಸರು ಉತ್ತರ ಪ್ರದೇಶದೊಂದಿಗೆ ಸಂಬಂಧ ಹೊಂದಿರುವುದರಿಂದಾಗಿ ತಮಗೆ ಎರಡು ಪಟ್ಟು ಹೆಮ್ಮೆಯಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಸಂತಸ ಹಂಚಿಕೊಂಡರು. ನನ್ನನ್ನು ತನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಸಂಸತ್ ಸದಸ್ಯನನ್ನಾಗಿ ಮಾಡಿದ ರಾಜ್ಯ ಇದು, ಮತ್ತು ಅದರ ಗುರುತು ಈಗ ಈ ಭವ್ಯ ವಿಮಾನ ನಿಲ್ದಾಣದೊಂದಿಗೆ ಸಂಬಂಧ ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು.ಪಶ್ಚಿಮ ಬಂಗಾಳದ ಕೋಲ್ಕೊತಾದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
March 14th, 02:15 pm
ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರ್.ಎನ್. ರವಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶಾಂತನು ಠಾಕೂರ್ ಜಿ, ಸುಕಾಂತ ಮಜುಂದಾರ್ ಜಿ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ ಜಿ, ನನ್ನ ಸಹ ಸಂಸದ ಶಮಿಕ್ ಭಟ್ಟಾಚಾರ್ಯ ಜಿ, ಇತರೆ ಜನಪ್ರತಿನಿಧಿಗಳೆ, ಮಹಿಳೆಯರೆ ಮತ್ತು ಮಹನೀಯರೆ,ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 18,700 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗು ಉದ್ಘಾಟನೆ ನೆರವೇರಿಸಿದರು
March 14th, 02:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 18,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು, ಕೋಲ್ಕತ್ತಾದ ನೆಲದಿಂದ, ಪಶ್ಚಿಮ ಬಂಗಾಳ ಮತ್ತು ಪೂರ್ವ ಭಾರತಕ್ಕೆ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆಯಲಾಗುತ್ತಿದೆ ಎಂದು ಹೇಳಿದರು.ಮಾರ್ಚ್ 13-14 ರಂದು ಅಸ್ಸಾಂಗೆ ಪ್ರಧಾನಮಂತ್ರಿ ಭೇಟಿ
March 12th, 05:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮಾರ್ಚ್ 13-14 ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಅವರು ಕೊಕ್ರಝಾರ್, ಗುವಾಹಟಿ ಮತ್ತು ಸಿಲ್ಚಾರ್‌ನಲ್ಲಿ ₹47,800 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಾರೆ, ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ, ಶಿಲಾನ್ಯಾಸ ಮಾಡುತ್ತಾರೆ, ಹಾಗು ಭೂಮಿ ಪೂಜೆ ಮಾಡುತ್ತಾರೆ ಮತ್ತು ಹಸಿರು ನಿಶಾನೆ ತೋರಲಿದ್ದಾರೆ. ."ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು" ವಿಷಯ ಕುರಿತ ಬಜೆಟ್ ನಂತರದ ವೆಬಿನಾರ್‌ನಲ್ಲಿ ಪ್ರಧಾನಮಂತ್ರಿ ಅವರ ಭಾಷಣ
March 03rd, 11:30 am
ಉತ್ಪಾದನೆ, ಸರಕು ಸಾಗಣೆ, ನಮ್ಮ ಎಂಎಸ್ಎಂಇಗಳು, ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ನಮ್ಮ ಸಣ್ಣ ಮತ್ತು ದೊಡ್ಡ ನಗರಗಳು - ಅವು ವಿಭಿನ್ನವಾಗಿ ಕಂಡುಬಂದರೂ - ಇವೆಲ್ಲವೂ ಆರ್ಥಿಕತೆಗೆ ಪರಸ್ಪರ ಸಂಬಂಧ ಹೊಂದಿರುವ ಆಧಾರಸ್ತಂಭಗಳಾಗಿವೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಉದಾಹರಣೆಗೆ, ಬಲಿಷ್ಠವಾದ ಉತ್ಪಾದನೆಯು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ಇದು ರಫ್ತುಗಳನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಎಂಎಸ್ಎಂಇಗಳು ಚೇತರಿಕೆ(ನಮ್ಯತೆ) ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತವೆ. ಉತ್ತಮ ಸರಕು ಸಾಗಣೆ ವ್ಯವಸ್ಥೆಯು ವೆಚ್ಚವನ್ನು ಕಡಿಮೆ ಮಾಡುತ್ತದೆ. ಉತ್ತಮವಾಗಿ ಯೋಜಿಸಲಾದ ನಗರಗಳು ಹೂಡಿಕೆ ಮತ್ತು ಪ್ರತಿಭೆ ಎರಡನ್ನೂ ಆಕರ್ಷಿಸುತ್ತವೆ. ಈ ವರ್ಷದ ಬಜೆಟ್ ಈ ಎಲ್ಲಾ ಆಧಾರಸ್ತಂಭಗಳಿಗೆ ಹೆಚ್ಚಿನ ಶಕ್ತಿ ನೀಡಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು" ಎಂಬ ವಿಷಯದ ಕುರಿತಾದ ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು
March 03rd, 11:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಜೆಟ್ ವೆಬಿನಾರ್ ಸರಣಿಯ ಎರಡನೇ ಕಂತನ್ನು ಉದ್ದೇಶಿಸಿ ಮಾತನಾಡಿದರು, ಇದು ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು. ಕಳೆದ ವಾರದ ವೇಗವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮೊದಲ ವೆಬಿನಾರ್ ಅತ್ಯಂತ ಯಶಸ್ವಿಯಾಗಿದೆ ಮತ್ತು ಬಜೆಟ್ ನಿಬಂಧನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಸಲಹೆಗಳನ್ನು ನೀಡಿದೆ ಎಂದು ಹೇಳಿದರು.ಅಜ್ಮೀರ್ ನಲ್ಲಿ ಅಭಿವೃದ್ಧಿ ಕಾರ್ಯಗಳು, ಎಚ್ ಪಿ ವಿ ಲಸಿಕೆಗಾಗಿ ದೇಶವ್ಯಾಪಿ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
February 28th, 12:00 pm
ಇಂದು, ತೀರ್ಥರಾಜ ಪುಷ್ಕರ್ ಮತ್ತು ಮಾತಾ ಸಾವಿತ್ರಿಯ ಈ ಪವಿತ್ರ ಭೂಮಿಯಲ್ಲಿ, ನಿಮ್ಮೆಲ್ಲರ ನಡುವೆ ಇದ್ದು ನಿಮ್ಮ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ಈ ವೇದಿಕೆಯಿಂದ, ನಾನು ಸುರಾಸುರನ ತೇಜಜಿ ಧಾಮ ಮತ್ತು ಪೃಥ್ವಿರಾಜ್ ಅವರ ನೆಲ ಅಜ್ಮೀರ್ ಗೆ ನಮಸ್ಕರಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ₹17,000 ಕೋಟಿ ಮೌಲ್ಯದ ರಾಷ್ಟ್ರವ್ಯಾಪಿ ಎಚ್‌ಪಿವಿ ಲಸಿಕೆ ಅಭಿಯಾನಕ್ಕೆ ಚಾಲನೆ ಮತ್ತು ಅಭಿವೃದ್ಧಿ ಯೋಜನೆ ಲೋಕಾರ್ಪಣೆ
February 28th, 11:30 am
ರಾಜಸ್ಥಾನದಲ್ಲಿನ ಡಬಲ್-ಎಂಜಿನ್ ಸರ್ಕಾರ ಎರಡು ವರ್ಷಗಳ ತ್ವರಿತ ಪ್ರಗತಿಯನ್ನು ಪೂರ್ಣಗೊಳಿಸಿದೆ ಎಂದು ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು. ಜನರಿಗೆ ಸೇವೆ ಸಲ್ಲಿಸಲು ಬಂದ ಅಭಿವೃದ್ಧಿಯ ಭರವಸೆಗಳನ್ನು ಸರ್ಕಾರ ಪೂರೈಸುತ್ತಿದೆ. ಮತ್ತು ಇಂದು ಈ ಅಭಿವೃದ್ಧಿಯ ಅಭಿಯಾನವನ್ನು ಮತ್ತಷ್ಟು ವೇಗಗೊಳಿಸುವ ದಿನವಾಗಿದೆ. ಎಂದು ಮೋದಿ ಅವರು ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ ರಸ್ತೆಗಳು, ವಿದ್ಯುತ್, ನೀರು, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು ₹17,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆದಿದ್ದು, ರಾಜಸ್ಥಾನದ ಜನರ ಅನುಕೂಲತೆಯನ್ನು ಹೆಚ್ಚಿಸಲು ಮತ್ತು ಯುವಕರಿಗೆ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದು ಪ್ರಧಾನಿ ಹೇಳಿದರು.ಕೇಂದ್ರ ಬಜೆಟ್ ಕುರಿತು ಪ್ರಧಾನಮಂತ್ರಿ ಅವರ ಭಾಷಣ
February 01st, 01:38 pm
ಇಂದಿನ ಬಜೆಟ್ ಐತಿಹಾಸಿಕವಾಗಿದೆ; ಇದು ದೇಶದ ನಾರಿ ಶಕ್ತಿ (ಮಹಿಳಾ ಶಕ್ತಿ) ಯ ಪ್ರಬಲ ಪ್ರತಿಬಿಂಬವಾಗಿದೆ. ಮಹಿಳಾ ಹಣಕಾಸು ಸಚಿವೆಯಾಗಿ, ನಿರ್ಮಲಾ ಅವರು ಸತತ ಒಂಬತ್ತನೇ ಬಾರಿಗೆ ದೇಶದ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಬಜೆಟ್ ಅಪಾರ ಅವಕಾಶಗಳ ಹೆದ್ದಾರಿಯಾಗಿದೆ. ಈ ಬಜೆಟ್ ಪ್ರಸ್ತುತ ಕನಸುಗಳನ್ನು ಸಾಕಾರಗೊಳಿಸುತ್ತದೆ ಮತ್ತು ಭಾರತದ ಉಜ್ವಲ ಭವಿಷ್ಯದ ಅಡಿಪಾಯವನ್ನು ಬಲಪಡಿಸುತ್ತದೆ. 2047ರ ಹೊತ್ತಿಗೆ 'ವಿಕಸಿತ ಭಾರತ'ದ (ಅಭಿವೃದ್ಧಿ ಹೊಂದಿದ ಭಾರತ) ಕಡೆಗೆ ನಮ್ಮ ಉನ್ನತ ಹಾರಾಟಕ್ಕೆ ಈ ಬಜೆಟ್ ಬಲವಾದ ಅಡಿಪಾಯವಾಗಿದೆ.ಕೇಂದ್ರ ಬಜೆಟ್ 2026ರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ
February 01st, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ 2026ರ ಕೇಂದ್ರ ಬಜೆಟ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದಿನ ಬಜೆಟ್ ಐತಿಹಾಸಿಕವಾಗಿದ್ದು, ದೇಶದ ಮಹಿಳೆಯರ ಸಬಲೀಕರಣದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು. ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಹಿಳಾ ಹಣಕಾಸು ಸಚಿವರಾಗಿ, ಸತತ ಒಂಬತ್ತನೇ ಬಾರಿಗೆ ದೇಶದ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಅವರು ಶ್ಲಾಘಿಸಿದರು. ಈ ಬಜೆಟ್ ಅಪಾರ ಅವಕಾಶಗಳ ಹೆದ್ದಾರಿಯಾಗಿದ್ದು, ವರ್ತಮಾನದ ಕನಸುಗಳನ್ನು ನನಸಾಗಿಸುವ ಮತ್ತು ಭಾರತದ ಉಜ್ವಲ ಭವಿಷ್ಯದ ಅಡಿಪಾಯವನ್ನು ಬಲಪಡಿಸುವ ಕೆಲಸ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಉನ್ನತ ಮಟ್ಟದ ಹಾರಾಟ ನಡೆಸಲು ಈ ಬಜೆಟ್ ಅಡಿಪಾಯವಾಗಿದೆ ಎಂದು ಅವರು ಒತ್ತಿ ಹೇಳಿದರು.ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
January 18th, 03:30 pm
ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಸಿ.ವಿ.ಆನಂದ ಬೋಸ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಸರ್ಬಾನಂದ ಸೋನೊವಾಲ್ ಜೀ, ಸುಕಾಂತ ಮಜುಂದಾರ್ ಜೀ, ಶಂತನು ಠಾಕೂರ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಸೌಮಿಕ್ ಭಟ್ಟಾಚಾರ್ಯ ಜೀ, ಸೌಮಿತ್ರಾ ಖಾನ್ ಜೀ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಜೀ, ಇತರ ಪ್ರತಿನಿಧಿಗಳು, ಮಹಿಳೆಯರು ಮತ್ತು ಮಹನೀಯರೇ!ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ₹830 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ, ಶಂಕುಸ್ಥಾಪನೆ ನೆರವೇರಿಸಿದ ಮತ್ತು ಹಸಿರು ನಿಶಾನೆ ತೋರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 18th, 03:00 pm
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ₹830 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ಹಲವು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿಯವರು, ನಿನ್ನೆ ತಾನು ಮಾಲ್ಡಾದಲ್ಲಿದ್ದೆ ಮತ್ತು ಇಂದು ಹೂಗ್ಲಿಯ ಜನರ ನಡುವೆ ಇರುವ ಭಾಗ್ಯ ನನಗೆ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಿಕಸಿತ ಭಾರತಕ್ಕಾಗಿ ಪೂರ್ವ ಭಾರತದ ಅಭಿವೃದ್ಧಿ ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು, ಇದೇ ಗುರಿಯೊಂದಿಗೆ ಕೇಂದ್ರ ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಒತ್ತಿ ಹೇಳಿದರು. ನಿನ್ನೆಯ ಮತ್ತು ಇಂದಿನ ಕಾರ್ಯಕ್ರಮಗಳು ಈ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅವರು ತಿಳಿಸಿದರು. ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಸಂಬಂಧಿಸಿದ ನೂರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವ ಮತ್ತು ಉದ್ಘಾಟಿಸುವ ಅವಕಾಶ ಈ ಅವಧಿಯಲ್ಲಿ ತಮಗೆ ದೊರೆತಿದೆ ಎಂದು ಪ್ರಧಾನಮಂತ್ರಿಯವರು ಇದೇ ವೇಳೆ ಉಲ್ಲೇಖಿಸಿದರು.ಅಸ್ಸಾಂನ ಗುವಾಹತಿಯಲ್ಲಿ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
December 20th, 03:20 pm
ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳೆ, ನಮ್ಮ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಜಿ, ರಾಮ್ ಮೋಹನ್ ನಾಯ್ಡು ಜಿ, ಮುರಳೀಧರ್ ಮೊಹೋಲ್ ಜಿ, ಪಬಿತ್ರ ಮಾರ್ಗರಿಟಾ ಜಿ, ಅಸ್ಸಾಂ ಸರ್ಕಾರದ ಸಚಿವರೆ, ಇತರ ಗಣ್ಯರೆ, ಸಹೋದರ ಸಹೋದರಿಯರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿಯಲ್ಲಿರುವ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು
December 20th, 03:10 pm
ಅಸ್ಸಾಂನ ಸಂಪರ್ಕ, ಆರ್ಥಿಕ ವಿಸ್ತರಣೆ ಮತ್ತು ಜಾಗತಿಕ ತೊಡಗಿಸಿಕೊಳ್ಳುವಿಕೆಯಲ್ಲಿ ಪರಿವರ್ತನಾತ್ಮಕ ಹೆಜ್ಜೆ ಗುರುತನ್ನು ಮೂಡಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುವಾಹಟಿಯಲ್ಲಿ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಇಂದಿನ ದಿನ ಅಸ್ಸಾಂ ಮತ್ತು ಈಶಾನ್ಯದ ಅಭಿವೃದ್ಧಿ ಹಾಗು ಪ್ರಗತಿಯ ಹಬ್ಬವಾಗಿದೆ ಎಂದು ಹೇಳಿದರು. ಪ್ರಗತಿಯ ಬೆಳಕು ಜನರನ್ನು ತಲುಪಿದಾಗ, ಜೀವನದ ಪ್ರತಿಯೊಂದು ಹಾದಿಯೂ ಹೊಸ ಎತ್ತರವನ್ನು ಮುಟ್ಟಲು ಪ್ರಾರಂಭಿಸುತ್ತದೆ ಎಂದು ಅವರು ತಿಳಿಸಿದರು. ಅಸ್ಸಾಂ ನೆಲದೊಂದಿಗಿನ ತಮ್ಮ ಆಳವಾದ ಬಾಂಧವ್ಯ, ಅದರ ಜನರ ಪ್ರೀತಿ ಮತ್ತು ವಾತ್ಸಲ್ಯ, ಮತ್ತು ವಿಶೇಷವಾಗಿ ಅಸ್ಸಾಂ ಮತ್ತು ಈಶಾನ್ಯದ ತಾಯಂದಿರು ಮತ್ತು ಸಹೋದರಿಯರ ಹೃದಯಸ್ಪರ್ಶಿ ಭಾವನೆ ಮತ್ತು ಆತ್ಮೀಯತೆ ನಿರಂತರವಾಗಿ ತಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಪ್ರದೇಶದ ಅಭಿವೃದ್ಧಿಗಾಗಿ ಸಾಮೂಹಿಕ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಮತ್ತೊಮ್ಮೆ ಅಸ್ಸಾಂನ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಾಗುತ್ತಿದೆ ಎಂದು ಅವರು ತಿಳಿಸಿದರು ದರು. ಭಾರತ ರತ್ನ ಭೂಪೇನ್ ಹಜಾರಿಕಾ ಅವರ ಸಾಲುಗಳನ್ನು ಉಲ್ಲೇಖಿಸಿದ, ಶ್ರೀ ಮೋದಿ ಅವರು ಇದರರ್ಥ ಪ್ರಬಲ ಬ್ರಹ್ಮಪುತ್ರ ನದಿಯ ದಡಗಳು ಬೆಳಗುತ್ತವೆ, ಕತ್ತಲೆಯ ಪ್ರತಿಯೊಂದು ಗೋಡೆ ಮುರಿಯುತ್ತದೆ ಮತ್ತು ಖಂಡಿತವಾಗಿಯೂ ಇದು ಸಂಭವಿಸುತ್ತದೆ ಯಾಕೆಂದರೆ ಇದು ರಾಷ್ಟ್ರದ ದೃಢ ನಿರ್ಧಾರವಾಗಿದೆ ಮತ್ತು ಕೈಗೊಂಡ ಪ್ರತಿಜ್ಞೆಯಾಗಿದೆ.