ಅಮೆರಿಕ ಉಪಾಧ್ಯಕ್ಷ ಮತ್ತು ಕುಟುಂಬಕ್ಕೆ ಪ್ರಧಾನಮಂತ್ರಿ ಆತಿಥ್ಯ

April 21st, 08:56 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕಾದ ಉಪಾಧ್ಯಕ್ಷರಾದ ಗೌರವಾನ್ವಿತ ಜೆ.ಡಿ. ವ್ಯಾನ್ಸ್‌ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಎರಡನೇ ಮಹಿಳೆ ಶ್ರೀಮತಿ ಉಷಾ ವ್ಯಾನ್ಸ್‌, ಅವರ ಮಕ್ಕಳು ಮತ್ತು ಯು.ಎಸ್‌. ಆಡಳಿತದ ಹಿರಿಯ ಸದಸ್ಯರು ಇದ್ದರು.

ಶ್ರೀ ಎಲಾನ್‌ ಮಸ್ಕ್‌ ಅವರೊಂದಿಗಿನ ಸಂಭಾಷಣೆಯಲ್ಲಿ ದ್ವಿಪಕ್ಷೀಯ ತಂತ್ರಜ್ಞಾನ ಸಹಕಾರದ ಸಾಮರ್ಥ್ಯವನ್ನು ಪ್ರಧಾನಮಂತ್ರಿಯವರು ಮಹತ್ವಪೂರ್ಣವಾಗಿ ಹೇಳಿದ್ದಾರೆ

April 18th, 01:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಎಲಾನ್‌ ಮಸ್ಕ್‌ ಅವರೊಂದಿಗೆ ರಚನಾತ್ಮಕ ಸಂವಾದ ನಡೆಸಿದರು. ಇಬ್ಬರೂ ಪರಸ್ಪರ ಹಿತಾಸಕ್ತಿಯ ವಿಷಯಗಳ ವ್ಯಾಪ್ತಿಯನ್ನು ಪರಿಶೀಲಿಸಿ ಸಂವಾದ ನಡೆಸಿದರು. ಈ ವರ್ಷದ ಆರಂಭದಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಇವರಿಬ್ಬರ ಸಭೆಯ ಸಂದರ್ಭದಲ್ಲಿ ನಡೆದ ಚರ್ಚೆಯ ವಿಷಯಗಳನ್ನು ಇಬ್ಬರು ನಾಯಕಯರು ಮರುಪರಿಶೀಲಿಸಿಕೊಂಡರು. ಇವರು ಸಂವಹನವು ತಾಂತ್ರಿಕ ಪ್ರಗತಿಗಾಗಿ ಹಂಚಿಕೆಯ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ.

ಭಾರತದ ಪ್ರಧಾನಮಂತ್ರಿಯವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ಭಾರತ - ಅಮೆರಿಕ ಜಂಟಿ ಹೇಳಿಕೆ

February 14th, 09:07 am

ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾದ ಗೌರವಾನ್ವಿತ ಡೊನಾಲ್ಡ್ ಜೆ. ಟ್ರಂಪ್ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ 2025ರ ಫೆಬ್ರವರಿ 13ರಂದು ವಾಷಿಂಗ್ಟನ್ ಡಿಸಿಯಲ್ಲಿ ಅಧಿಕೃತ ಭೇಟಿಗಾಗಿ ಆತಿಥ್ಯ ವಹಿಸಿದರು.

ಪ್ರಧಾನಿ ಮೋದಿ ವಾಷಿಂಗ್ಟನ್ ಡಿಸಿಗೆ ಆಗಮಿಸಿದರು

February 13th, 11:59 am

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ವಾಷಿಂಗ್ಟನ್ ಡಿಸಿಗೆ ಆಗಮಿಸಿದ್ದಾರೆ. ಭೇಟಿಯ ಸಮಯದಲ್ಲಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ನಾಯಕರನ್ನು ಭೇಟಿ ಮಾಡಲಿದ್ದಾರೆ. ಅವರು ವಿವಿಧ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಮಂತ್ರಿ ಸಂತಾಪ

January 31st, 09:09 am

ವಾಷಿಂಗ್ಟನ್ ಡಿಸಿಯಲ್ಲಿ ಸಂಭವಿಸಿದ ವಿಮಾನ ಮತ್ತು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಮಂತ್ರಿ, ಶ್ರೀ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಪ್ರಧಾನಮಂತ್ರಿ ಶ್ರೀ ಮೋದಿಯವರು ನಾವು ಈ ಸಂದರ್ಭದಲ್ಲಿ ಅಮೆರಿಕ ಜನರ ನೆರವಿಗೆ ನಿಂತು ಒಗ್ಗಟ್ಟು ತೋರಿಸುತ್ತೇವೆ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕದ ಜಂಟಿ ಹೇಳಿಕೆ

September 08th, 11:18 pm

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್ ಬೈಡನ್ ಜೂನಿಯರ್ ಅವರನ್ನು ಭಾರತಕ್ಕೆ ಸ್ವಾಗತಿಸಿದರು, ಭಾರತ ಮತ್ತು ಅಮೆರಿಕ ನಡುವಿನ ನಿಕಟ ಮತ್ತು ಶಾಶ್ವತ ಪಾಲುದಾರಿಕೆಯನ್ನು ಪುನರುಚ್ಚರಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಐತಿಹಾಸಿಕ ಜೂನ್ 2023ರ ವಾಷಿಂಗ್ಟನ್ ಭೇಟಿಯ ಸಾಧನೆಗಳನ್ನು ಕಾರ್ಯಗತಗೊಳಿಸುವಲ್ಲಿ ಆಗಿರುವ ಗಣನೀಯ ಪ್ರಗತಿಯ ಬಗ್ಗೆ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಷಿಂಗ್ಟನ್ ಡಿಸಿಯಲ್ಲಿ ನಡೆದ 'ಭಾರತ-ಯುಎಸ್‌ಎ: ಭವಿಷ್ಯಕ್ಕಾಗಿ ಕೌಶಲ್ಯ' ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

June 22nd, 11:15 am

ವಾಷಿಂಗ್ಟನ್‌ಗೆ ಬಂದ ಮೇಲೆ ಹಲವಾರು ಯುವ ಮತ್ತು ಸೃಜನಶೀಲ ಮನಸ್ಸುಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ಇಂದು ನನಗೆ ಸಂತೋಷವಾಗಿದೆ. ಭಾರತವು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದೊಂದಿಗೆ ವಿವಿಧ ಯೋಜನೆಗಳಲ್ಲಿ ಸಹಕರಿಸುತ್ತಿದೆ, ಇದು ಈ ಸ್ಥಳವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ.

​​​​​​​ಅಮೇರಿಕದ ಪ್ರಥಮ ಮಹಿಳೆಯೊಂದಿಗೆ "ಭಾರತ ಮತ್ತು ಯುಎಸ್ಎ: ಭವಿಷ್ಯಕ್ಕಾಗಿ ಕೌಶಲ್ಯ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

June 22nd, 10:57 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಮೇರಿಕದ ಪ್ರಥಮ ಮಹಿಳೆ ಡಾ. ಜಿಲ್ ಬೈಡೆನ್ ಅವರು ವಾಷಿಂಗ್ಟನ್ ಡಿಸಿ ಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಭಾರತ ಮತ್ತು ಯುಎಸ್ಎ: ಭವಿಷ್ಯಕ್ಕಾಗಿ ಕೌಶಲ್ಯ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.