ವಿಕಸಿತ ಭಾರತ ಯುವ ನಾಯಕರ ಸಂವಾದ-2026ರ ಸಮಾರೋಪ ಕಲಾಪ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
January 12th, 06:45 pm
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಎಲ್ಲಾ ಸಂಸತ್ ಸದಸ್ಯರೆ, ವಿಕಸಿತ ಭಾರತ ಯುವ ನಾಯಕರ ಸ್ಪರ್ಧೆಯ ವಿಜೇತರೆ, ಇತರೆ ಗಣ್ಯರೆ ಮತ್ತು ವಿದೇಶದಿಂದ ಮತ್ತು ದೇಶದೆಲ್ಲೆಡೆಯಿಂದ ಇಲ್ಲಿಗೆ ಬಂದಿರುವ ನನ್ನ ಯುವ ಸ್ನೇಹಿತರೆ, ನೀವೆಲ್ಲರೂ ಇಲ್ಲಿ ಹೊಸ ಅನುಭವ ಪಡೆದಿರಬೇಕು. ನಿಮಗೆ ದಣಿವಾಗಿರಬೇಕು? ನೀವು 2 ದಿನಗಳ ಕಾರ್ಯಕ್ರಮದಲ್ಲಿ ತೊಡಗಿದ್ದೀರಿ, ಆದ್ದರಿಂದ ಮತ್ತೊಮ್ಮೆ ಕೇಳಲು ನಿಮಗೆ ಆಯಾಸವಾಗುತ್ತಿರಬಹುದು? ನಾನು ಮೊದಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ನಿಮ್ಮಲ್ಲಿ ಹಲವರು ಜನಿಸಿರಲಿಲ್ಲ ಎಂದು ನಾನು ನಂಬುತ್ತೇನೆ. 2014ರಲ್ಲಿ ನಾನು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ನಿಮ್ಮಲ್ಲಿ ಹೆಚ್ಚಿನವರು ಇನ್ನೂ ಮಕ್ಕಳಾಗಿದ್ದಿರಿ. ಆದರೆ ನಾನು ಮುಖ್ಯಮಂತ್ರಿಯೇ ಆಗಿದ್ದಿರಲಿ ಅಥವಾ ಈಗ ಪ್ರಧಾನಮಂತ್ರಿಯೇ ಆಗಿರಲಿ, ನಾನು ಯಾವಾಗಲೂ ಯುವ ಪೀಳಿಗೆಯ ಮೇಲೆ ಅಪಾರ ನಂಬಿಕೆ ಹೊಂದಿದ್ದೇನೆ. ನಾನು ಯಾವಾಗಲೂ ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಪ್ರತಿಭೆಯಿಂದ ಅದ್ಭುತ ಶಕ್ತಿ ಪಡೆದುಕೊಂಡಿದ್ದೇನೆ. ಇಂದು ನೀವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಧ್ಯೇಯದ ಮೇಲೆ ನಿಯಂತ್ರಣ ಹೊಂದಿದ್ದೀರಿ ಎಂದು ನಾನು ನೋಡುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಕಸಿತ ಭಾರತ ಯುವ ನಾಯಕರ ಸಂವಾದ 2026 ಅನ್ನು ಉದ್ದೇಶಿಸಿ ಮಾತನಾಡಿದರು
January 12th, 06:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ 'ವಿಕಸಿತ ಭಾರತ ಯುವ ನಾಯಕರ ಸಂವಾದ 2026'ರ ಸಮಾರೋಪ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿಯವರು, ತಾವು ಮೊದಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಇಂದಿನ ಅನೇಕ ಯುವ ನಾಗರಿಕರು ಇನ್ನೂ ಜನಿಸಿರಲಿಲ್ಲ ಮತ್ತು 2014ರಲ್ಲಿ ತಾವು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರಲ್ಲಿ ಹೆಚ್ಚಿನವರು ಇನ್ನೂ ಮಕ್ಕಳಾಗಿದ್ದರು ಎಂದು ಹೇಳಿದರು. ಇಷ್ಟು ಕಾಲ ಉರುಳಿದರೂ ಸಹ, ಯುವ ಪೀಳಿಗೆಯ ಮೇಲೆ ತಮಗಿರುವ ಭರವಸೆ ಎಂದಿಗೂ ಕುಗ್ಗಿಲ್ಲ ಮತ್ತು ಅದು ಅಚಲವಾಗಿದೆ ಎಂದು ಅವರು ಒತ್ತಿಹೇಳಿದರು. ನಿಮ್ಮ ಸಾಮರ್ಥ್ಯ, ನಿಮ್ಮ ಪ್ರತಿಭೆ - ನಾನು ಯಾವಾಗಲೂ ನಿಮ್ಮಿಂದ ಶಕ್ತಿಯನ್ನು ಪಡೆದಿದ್ದೇನೆ. ಮತ್ತು ಇಂದು ನೋಡಿ, ನೀವೆಲ್ಲರೂ ವಿಕಸಿತ ಭಾರತದ ಗುರಿಯ ಲಗಾಮನ್ನು ಹಿಡಿದಿದ್ದೀರಿ ಎಂದು ಶ್ರೀ ಮೋದಿ ಹೇಳಿದರು.ಶ್ರೀಮದ್ ವಿಜಯರತ್ನ ಸುಂದರ್ ಸುರೀಶ್ವರ್ಜಿ ಮಹಾರಾಜ್ ಅವರ 500ನೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಸಂದೇಶ
January 11th, 01:00 pm
ಈ ಪವಿತ್ರ ಸಮಾರಂಭದಲ್ಲಿ ನಮ್ಮ ಸ್ಫೂರ್ತಿಯ ಸೆಲೆಯಾದ ಪೂಜ್ಯ ಭುವನಭಾನು ಸುರೀಶ್ವರ್ ಜಿ ಮಹಾರಾಜ್ ಅವರ ಪಾದಗಳಿಗೆ ನಾನು ಮೊದಲು ನಮಸ್ಕರಿಸುತ್ತೇನೆ. ಈ ಸಮಾರಂಭದಲ್ಲಿ ಉಪಸ್ಥಿತರಿರುವ ಪ್ರಶಾಂತಮೂರ್ತಿ ಸುವಿಶಾಲ ಗಚ್ಛಾಧಿಪತಿ ಪೂಜ್ಯ ಶ್ರೀಮದ್ ವಿಜಯ್ ರಾಜೇಂದ್ರ ಸುರೀಶ್ವರ ಜೀ ಮಹಾರಾಜ್, ಪೂಜ್ಯ ಗಚ್ಛಾಧಿಪತಿ ಶ್ರೀ ಕಲ್ಪತರು ಸುರೀಶ್ವರ್ ಜಿ ಮಹಾರಾಜ್, ಸರಸ್ವತಿ ಕೃಪಾಪಾತ್ರ ಪರಮ ಪೂಜ್ಯ ಆಚಾರ್ಯ ಭಗವಂತ ಶ್ರೀಮದ್ ವಿಜಯರತ್ನ ಸುಂದರ ಸುರೀಶ್ವರ ಜೀ ಮಹಾರಾಜರು ಮತ್ತು ಇಲ್ಲಿ ನೆರೆದಿರುವ ಎಲ್ಲಾ ಸಾಧು ಸಂತರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.ಶ್ರೀಮದ್ ವಿಜಯರತ್ನ ಸುಂದರ್ ಸುಂದರ್ ಸುರೀಶ್ವರ್ಜಿ ಮಹಾರಾಜ್ ಅವರ 500ನೇ ಪುಸ್ತಕ ಬಿಡುಗಡೆ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ
January 11th, 12:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಂದೇಶದ ಮೂಲಕ ಶ್ರೀಮದ್ ವಿಜಯರತ್ನ ಸುಂದರ್ ಸುಂದರ್ ಸುರೀಶ್ವರ್ಜಿ ಮಹಾರಾಜ್ ಅವರ 500ನೇ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ತಮ್ಮ ಭಾಷಣ ಮಾಡಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ಈ ಪವಿತ್ರ ಸಂದರ್ಭದಲ್ಲಿ ತಾವು ಮೊದಲು ಪೂಜ್ಯ ಭುವನ್ ಭಾನುಸುರೀಶ್ವರ್ ಜೀ ಮಹಾರಾಜ್ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ಪ್ರಶಾಂತಮೂರ್ತಿ ಸುವಿಶಾಲ್ ಗಚ್ಚಾಧಿಪತಿ ಪೂಜ್ಯ ಶ್ರೀಮದ್ ವಿಜಯ ರಾಜೇಂದ್ರಸುರೀಶ್ವರ್ ಜಿ ಮಹಾರಾಜ್, ಪೂಜ್ಯ ಗಚ್ಚಾಧಿಪತಿ ಶ್ರೀ ಕಲ್ಪತರುಸುರೀಶ್ವರ್ ಜೀ ಮಹಾರಾಜ್, ಸರಸ್ವತಿ ಕೃಪಾಪಾತ್ರ ಪರಂ ಪೂಜ್ಯ ಆಚಾರ್ಯ ಭಗವಂತ ಶ್ರೀಮದ್ ವಿಜಯರತ್ನಸುಂದರಸುರೀಶ್ವರ್ ಜೀ ಮಹಾರಾಜ್ ಮತ್ತು ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲಾ ಸಂತರು ಮತ್ತು ಸಾಧ್ವಿಗಳಿಗೆ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದರು. ಊರ್ಜಾ ಮಹೋತ್ಸವ ಸಮಿತಿಯ ಎಲ್ಲಾ ಸದಸ್ಯರನ್ನು ಅವರು ಶ್ಲಾಘಿಸಿದರು ಮತ್ತು ಅಭಿನಂದಿಸಿದರು.'ಮನ್ ಕಿ ಬಾತ್' ಜನರ ಸಾಮೂಹಿಕ ಪ್ರಯತ್ನಗಳನ್ನು ಸಾರ್ವಜನಿಕರಿಗೆ ತಿಳಿಸಲು ಅತ್ಯುತ್ತಮ ವೇದಿಕೆಯಾಗಿದೆ: ಪ್ರಧಾನಿ ಮೋದಿ
November 30th, 11:30 am
ಈ ತಿಂಗಳ ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ಅವರು ಸಂವಿಧಾನ ದಿನಾಚರಣೆ, ವಂದೇ ಮಾತರಂನ 150 ನೇ ವಾರ್ಷಿಕೋತ್ಸವ, ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ, ಐಎನ್ಎಸ್ 'ಮಹೆ' ಸೇರ್ಪಡೆ ಮತ್ತು ಕುರುಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಗೀತಾ ಮಹೋತ್ಸವ ಸೇರಿದಂತೆ ನವೆಂಬರ್ ತಿಂಗಳ ಪ್ರಮುಖ ಘಟನೆಗಳನ್ನು ಹೈಲೈಟ್ ಮಾಡಿದರು. ದಾಖಲೆಯ ಆಹಾರ ಧಾನ್ಯ ಮತ್ತು ಜೇನುತುಪ್ಪ ಉತ್ಪಾದನೆ, ಭಾರತದ ಕ್ರೀಡಾ ಯಶಸ್ಸುಗಳು, ವಸ್ತು ಸಂಗ್ರಹಾಲಯಗಳು ಮತ್ತು ನೈಸರ್ಗಿಕ ಕೃಷಿಯಂತಹ ಹಲವಾರು ಪ್ರಮುಖ ವಿಷಯಗಳನ್ನು ಸಹ ಅವರು ಸ್ಪರ್ಶಿಸಿದರು. ಎಲ್ಲರೂ ಕಾಶಿ-ತಮಿಳು ಸಂಗಮದ ಭಾಗವಾಗಬೇಕೆಂದು ಪ್ರಧಾನಿ ಒತ್ತಾಯಿಸಿದರು.ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 28th, 03:35 pm
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಮಹಾಂತರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಅಶೋಕ್ ಗಜಪತಿ ರಾಜು ಜಿ, ಜನಪ್ರಿಯ ಮುಖ್ಯಮಂತ್ರಿ ಮತ್ತು ಸಹೋದರ ಪ್ರಮೋದ್ ಸಾವಂತ್ ಜಿ, ಮಠ ಸಮಿತಿಯ ಅಧ್ಯಕ್ಷ ಶ್ರೀ ಶ್ರೀನಿವಾಸ ಡೆಂಪೊ ಜಿ, ಉಪಾಧ್ಯಕ್ಷರಾದ ಶ್ರೀ ಆರ್.ಆರ್. ಕಾಮತ್ ಜಿ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳಾದ ಶ್ರೀ ಶ್ರೀಪಾದ ನಾಯಕ್ ಜಿ ಮತ್ತು ದಿಗಂಬರ್ ಕಾಮತ್ ಜಿ ಮತ್ತು ಇಲ್ಲಿರುವ ಇತರೆ ಎಲ್ಲಾ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ,ಗೋವಾದಲ್ಲಿ ನಡೆದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
November 28th, 03:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೋವಾದಲ್ಲಿ ನಡೆದ 'ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠ'ದ 550ನೇ ವರ್ಷದ ಆಚರಣೆಯನ್ನುದ್ದೇಶಿಸಿ ಮಾತನಾಡಿದರು. ಈ ಪವಿತ್ರ ಸಂದರ್ಭದಲ್ಲಿ ತಮ್ಮ ಮನಸ್ಸು ಅತೀವ ಶಾಂತಿಯಿಂದ ತುಂಬಿದೆ ಎಂದು ಪ್ರಧಾನಮಂತ್ರಿ ಅವರು ಬಣ್ಣಿಸಿದರು. ಸಂತರ ಸಾನ್ನಿಧ್ಯದಲ್ಲಿ ಇರುವುದೇ ಒಂದು ಆಧ್ಯಾತ್ಮಿಕ ಅನುಭವ ಎಂದು ಅವರು ಅಭಿಪ್ರಾಯಪಟ್ಟರು. ಇಲ್ಲಿ ನೆರೆದಿರುವ ಅಪಾರ ಸಂಖ್ಯೆಯ ಭಕ್ತರು, ಈ ಮಠದ ಶತಮಾನಗಳಷ್ಟು ಹಳೆಯದಾದ ಚೈತನ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದ ಶ್ರೀ ಮೋದಿ, ಇಂದು ಈ ಸಮಾರಂಭದಲ್ಲಿ ಜನರ ನಡುವೆ ಉಪಸ್ಥಿತರಿರುವುದಕ್ಕೆ ತಾವು ಅತ್ಯಂತ ಭಾಗ್ಯಶಾಲಿ ಎಂದು ಭಾವಿಸುವುದಾಗಿ ತಿಳಿಸಿದರು. ಇಲ್ಲಿಗೆ ಬರುವ ಮುನ್ನ ರಾಮ ಮಂದಿರ ಮತ್ತು ವೀರ ವಿಠಲ ಮಂದಿರಕ್ಕೆ ಭೇಟಿ ನೀಡುವ ಸೌಭಾಗ್ಯ ತಮಗೆ ದೊರೆಯಿತು ಎಂದು ಅವರು ಸ್ಮರಿಸಿದರು. ಅಲ್ಲಿನ ಶಾಂತಿಯುತ ವಾತಾವರಣವು ಈ ಸಮಾರಂಭದ ಆಧ್ಯಾತ್ಮಿಕತೆಯನ್ನು ಇನ್ನಷ್ಟು ಗಾಢವಾಗಿಸಿದೆ ಎಂದು ಅವರು ಹೇಳಿದರು.ಕರ್ನಾಟಕದ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 28th, 11:45 am
ನಾನು ಮಾತು ಆರಂಭಿಸುವ ಮೊದಲು, ಕೆಲವು ಮಕ್ಕಳು ತಮ್ಮ ಚಿತ್ರಕಲೆಗಳನ್ನು ಇಲ್ಲಿಗೆ ತಂದಿದ್ದಾರೆ. ದಯವಿಟ್ಟು ಎಸ್ಪಿಜಿ ಮತ್ತು ಸ್ಥಳೀಯ ಪೊಲೀಸರು ಅವುಗಳನ್ನು ಸಂಗ್ರಹಿಸಿ. ನೀವು ನಿಮ್ಮ ವಿಳಾಸವನ್ನು ಹಿಂಭಾಗದಲ್ಲಿ ಬರೆದರೆ, ನಾನು ಖಂಡಿತವಾಗಿಯೂ ನಿಮಗೆ ಧನ್ಯವಾದ ಪತ್ರವನ್ನು ಕಳುಹಿಸುತ್ತೇನೆ. ಯಾರಾದರೂ ಏನನ್ನಾದರೂ ನನಗೆ ತಂದಿದ್ದರೆ, ದಯವಿಟ್ಟು ಭದ್ರತಾ ಸಿಬ್ಬಂದಿಗೆ ನೀಡಿ, ಅವರು ಅದನ್ನು ಸಂಗ್ರಹಿಸುತ್ತಾರೆ, ನೀವು ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಿರಿ. ಈ ಮಕ್ಕಳು ತುಂಬಾ ಕಷ್ಟಪಟ್ಟು ಕೆಲಸ ಮಾಡಿರುತ್ತಾರೆ, ಹಾಗಾಗಿ, ಅವರಿಗೆ ಅನ್ಯಾಯವಾಗಬಾರದು. ಹಾಗೆ ಮಾಡಿದರೆ, ಅದು ನನಗೆ ನೋವುಂಟು ಮಾಡುತ್ತದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
November 28th, 11:30 am
ಕರ್ನಾಟಕದ ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠದಲ್ಲಿ ಇಂದು ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಭಗವಾನ್ ಶ್ರೀ ಕೃಷ್ಣನ ದಿವ್ಯ ದರ್ಶನದ ತೃಪ್ತಿ, ಶ್ರೀಮದ್ ಭಗವದ್ಗೀತೆಯ ಮಂತ್ರಗಳ ಆಧ್ಯಾತ್ಮಿಕ ಅನುಭವ ಮತ್ತು ಹಲವಾರು ಪೂಜ್ಯ ಸಂತರು ಮತ್ತು ಗುರುಗಳ ಉಪಸ್ಥಿತಿಯು ತಮಗೆ ದೊರೆತ ಪರಮ ಭಾಗ್ಯ. ಇದು ಅಸಂಖ್ಯಾತ ಆಶೀರ್ವಾದಗಳನ್ನು ಪಡೆದಂತೆ ಎಂದು ಅವರು ಹೇಳಿದರು.ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಅನುವಾದ
November 19th, 11:00 am
ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಜಿ, ಕೇಂದ್ರದಲ್ಲಿರುವ ನನ್ನ ಸಹೋದ್ಯೋಗಿಗಳು, ರಾಮಮೋಹನ್ ನಾಯ್ಡು ಜಿ, ಜಿ. ಕಿಶನ್ ರೆಡ್ಡಿ ಜಿ, ಭೂಪತಿ ರಾಜು ಶ್ರೀನಿವಾಸ ವರ್ಮಾ ಜಿ, ಸಚಿನ್ ತೆಂಡೂಲ್ಕರ್ ಜಿ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಜಿ, ರಾಜ್ಯ ಸರ್ಕಾರದ ಸಚಿವ ನಾರಾ ಲೋಕೇಶ್ ಜಿ, ಶ್ರೀ ಸತ್ಯಸಾಯಿ ಕೇಂದ್ರ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಆರ್. ಜೆ. ರತ್ನಾಕರ್ ಜಿ, ಉಪಕುಲಪತಿ ಕೆ. ಚಕ್ರವರ್ತಿ ಜಿ, ಐಶ್ವರ್ಯ ಜಿ, ಇತರ ಎಲ್ಲಾ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ, ಎಲ್ಲರಿಗೂ ಸಾಯಿ ರಾಮ್!ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
November 19th, 10:30 am
ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಇಂದು ನಡೆದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಅವರು ತಮ್ಮ ಮಾತುಗಳನ್ನು ಸಾಯಿ ರಾಮ್ ನೊಂದಿಗೆ ಪ್ರಾರಂಭಿಸಿದರು ಮತ್ತು ಪುಟ್ಟಪರ್ತಿಯ ಪವಿತ್ರ ಭೂಮಿಯಲ್ಲಿ ಎಲ್ಲರೊಂದಿಗೆ ಇರುವುದು ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅನುಭವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಲ್ಪ ಸಮಯದ ಹಿಂದೆ, ಬಾಬಾ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸುವ ಅವಕಾಶ ತಮಗೆ ಸಿಕ್ಕಿತು ಎಂಬುದನ್ನೂ ಅವರು ಹಂಚಿಕೊಂಡರು. ಬಾಬಾ ಅವರ ಪಾದಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವುದು ಸದಾ ಹೃದಯವನ್ನು ತುಂಬುವ ಆಳವಾದ ಭಾವನಾತ್ಮಕ ಕ್ಷಣ ಎಂದವರು ಬಣ್ಣಿಸಿದರು.ಡೆಹ್ರಾಡೂನ್ ನಲ್ಲಿ ನಡೆದ ಉತ್ತರಾಖಂಡ ರಾಜ್ಯ ರಚನೆಯ ಬೆಳ್ಳಿ ಮಹೋತ್ಸವ ಆಚರಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
November 09th, 01:00 pm
ಉತ್ತರಾಖಂಡದ ರಾಜ್ಯಪಾಲರಾದ ಶ್ರೀ ಗುರ್ಮೀತ್ ಸಿಂಗ್ ಜಿ; ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಜಿ; ಕೇಂದ್ರ ಸರ್ಕಾರದಲ್ಲಿ ನನ್ನ ಸಹೋದ್ಯೋಗಿ ಶ್ರೀ ಅಜಯ್ ಟಂಟಾ ಜಿ; ವಿಧಾನಸಭೆಯ ಸ್ಪೀಕರ್ ಸೋದರಿ ಶ್ರೀಮತಿ ರಿತು ಜಿ; ಉತ್ತರಾಖಂಡ ಸರ್ಕಾರದ ಸಚಿವರು; ವೇದಿಕೆಯಲ್ಲಿ ಉಪಸ್ಥಿತರಿರುವ ಮಾಜಿ ಮುಖ್ಯಮಂತ್ರಿ ಮತ್ತು ಸಂಸತ್ ಸದಸ್ಯರು; ನಮ್ಮನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಪೂಜ್ಯ ಸಂತರು; ಮತ್ತು ಇತರ ಎಲ್ಲಾ ಗಣ್ಯ ಅತಿಥಿಗಳು, ಉತ್ತರಾಖಂಡದ ನನ್ನ ಸಹೋದರ ಮತ್ತು ಸಹೋದರಿಯರೆ!ಡೆಹ್ರಾಡೂನ್ ನಲ್ಲಿ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
November 09th, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡೆಹ್ರಾಡೂನ್ನಲ್ಲಿ 'ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ' ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ₹8140 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, ದೇವಭೂಮಿ ಉತ್ತರಾಖಂಡದ ಜನತೆಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ಎಲ್ಲರಿಗೂ ತಮ್ಮ ಹೃತ್ಪೂರ್ವಕ ನಮನ, ಗೌರವ ಹಾಗೂ ಸೇವೆಯನ್ನು ಸಮರ್ಪಿಸಿದರು.RJD forced Congress to surrender its CM claim at gunpoint: PM Modi in Bhagalpur, Bihar
November 06th, 12:01 pm
In the Bhagalpur rally, PM Modi criticised RJD and Congress for never understanding the value of self-reliance or Swadeshi. He reminded the people that the Congress can never erase the stain of the Bhagalpur riots. Outlining NDA’s roadmap for progress, PM Modi said the government is working to make Bihar a hub for textiles, tourism and technology.No IIT, no IIM, no National Law University — a whole generation’s future was devoured by RJD’s leadership: PM Modi in Araria, Bihar
November 06th, 11:59 am
PM Modi addressed a large public gathering in Araria, Bihar, where people turned up in huge numbers to express their support for the NDA. Speaking with conviction, PM Modi said that the people of Bihar have already made up their minds – ‘Phir Ekbar, NDA Sarkar!’PM Modi stirs up massive rallies with his addresses in Araria & Bhagalpur, Bihar
November 06th, 11:35 am
PM Modi addressed large public gatherings in Araria & Bhagalpur, Bihar, where people turned up in huge numbers to express their support for the NDA. Speaking with conviction, PM Modi said that the people of Bihar have already made up their minds – ‘Phir Ekbar, NDA Sarkar!’The opposition is not a ‘gathbandhan’ but a ‘gharbandhan’: PM Modi during the interaction with Mahila Karyakartas of Bihar
November 04th, 10:30 pm
PM Modi interacted with spirited women karyakartas of the Bharatiya Janata Party from Bihar as part of the “Mera Booth, Sabse Mazboot” outreach initiative. The interaction was marked by warmth, humour, and conviction as PM Modi hailed the vital role of women in strengthening democracy and steering India towards a Viksit Bharat.PM Modi interacts with Mahila Karyakartas of Bihar under “Mera Booth, Sabse Mazboot” initiative
November 04th, 03:30 pm
PM Modi interacted with spirited women karyakartas of the Bharatiya Janata Party from Bihar as part of the “Mera Booth, Sabse Mazboot” outreach initiative. The interaction was marked by warmth, humour, and conviction as PM Modi hailed the vital role of women in strengthening democracy and steering India towards a Viksit Bharat.ನವದೆಹಲಿಯಲ್ಲಿ ನಡೆದ 2025ರ ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025ವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
October 31st, 06:08 pm
ನವದೆಹಲಿಯ ರೋಹಿಣಿಯಲ್ಲಿ ಇಂದು ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025ನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಮೋದಿ, ಈಗಷ್ಟೇ ಕೇಳಿದ ಮಂತ್ರಗಳ ಶಕ್ತಿಯನ್ನು ಎಲ್ಲರೂ ಅನುಭವಿಸಬಹುದು ಎಂದು ಹೇಳಿದರು. ತಾವು ಸಭೆಗೆ ಬಂದಾಗಲೆಲ್ಲಾ ತಮಗೆ ಆಗಿರುವ ಅನುಭವವು ದೈವಿಕ ಮತ್ತು ಅಸಾಮಾನ್ಯವಾದುದು ಎಂದು ಅವರು ಒತ್ತಿ ಹೇಳಿದರು. ಈ ಭಾವನೆಗೆ ಸ್ವಾಮಿ ದಯಾನಂದ ಜೀ ಅವರ ಆಶೀರ್ವಾದ ಕಾರಣವೆಂದೂ ಅವರು ಹೇಳಿದರು. ಸ್ವಾಮಿ ದಯಾನಂದ ಜೀ ಅವರ ಆದರ್ಶಗಳ ಬಗ್ಗೆ ಪ್ರಧಾನಮಂತ್ರಿ ತಮ್ಮ ಆಳವಾದ ಗೌರವವನ್ನು ವ್ಯಕ್ತಪಡಿಸಿದರು. ಹಾಜರಿದ್ದ ಎಲ್ಲಾ ಚಿಂತಕರೊಂದಿಗಿನ ತಮ್ಮ ದಶಕಗಳಷ್ಟು ಹಳೆಯದಾದ ಬಾಂಧವ್ಯವನ್ನು ಅವರು ನೆನೆಪಿಸಿಕೊಂಡರು. ಅದು ತಮಗೆ ಪದೇ ಪದೇ ಅವರ ನಡುವೆ ಇರಲು ಅವಕಾಶವನ್ನು ನೀಡಿದೆ. ಅವರನ್ನು ಭೇಟಿಯಾದಾಗಲೆಲ್ಲಾ ಮತ್ತು ಅವರ ಜೊತೆ ಸಂವಹನ ನಡೆಸಿದಾಗಲೆಲ್ಲಾ ತಾವು ವಿಶಿಷ್ಟ ಶಕ್ತಿ ಮತ್ತು ಅನನ್ಯ ಸ್ಫೂರ್ತಿಯನ್ನು ಪಡೆಯುತ್ತಿರುವುದಾಗಿಯೂ ಅವರು ಹೇಳಿದರು.'ವಂದೇ ಮಾತರಂ' ನ ಚೈತನ್ಯವು ಭಾರತದ ಅಮರ ಪ್ರಜ್ಞೆಗೆ ಸಂಬಂಧಿಸಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
October 26th, 11:30 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಅಕ್ಟೋಬರ್ 31 ರಂದು ನಡೆದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಛಠ್ ಪೂಜಾ ಉತ್ಸವ, ಪರಿಸರ ಸಂರಕ್ಷಣೆ, ಭಾರತೀಯ ನಾಯಿ ತಳಿಗಳು, ಭಾರತೀಯ ಕಾಫಿ, ಬುಡಕಟ್ಟು ಸಮುದಾಯದ ನಾಯಕರು ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯಂತಹ ಆಸಕ್ತಿದಾಯಕ ವಿಷಯಗಳನ್ನು ಅವರು ಸ್ಪರ್ಶಿಸಿದರು. 'ವಂದೇ ಮಾತರಂ' ಹಾಡಿನ 150 ನೇ ವರ್ಷದ ಬಗ್ಗೆ ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದರು.