ಭಾರತೀಯ ಸಮುದಾಯ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ
June 18th, 11:41 pm
ಪ್ಯಾರಿಸ್ ನಗರವು ಬೆಳಕು ಮತ್ತು ಬಣ್ಣಗಳ ನಗರ. ಇದು ಕಲೆ, ಕಲ್ಪನೆಗಳು ಮತ್ತು ನಾವೀನ್ಯತೆಗೆ ಸ್ಫೂರ್ತಿಯ ಸ್ಥಳವಾಗಿದೆ. ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದು ನೀವೆಲ್ಲರೂ ಈ ನಗರವನ್ನು ಇನ್ನಷ್ಟು ಸುಂದರಗೊಳಿಸುತ್ತೀರಿ. ನೀವು ಅದನ್ನು ಹೊಸ ಮತ್ತು ರೋಮಾಂಚಕ ಬಣ್ಣಗಳಿಂದ ತುಂಬುತ್ತೀರಿ.ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 18th, 09:30 pm
ಜೂನ್ 18, 2026 ರಂದು ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ ಮಾಡಿದರು. ಸ್ಥಳಕ್ಕೆ ಆಗಮಿಸಿದಾಗ, ಪ್ರಧಾನಮಂತ್ರಿಗೆ ಆತ್ಮೀಯ ಮತ್ತು ವರ್ಣರಂಜಿತ ಸ್ವಾಗತ ನೀಡಲಾಯಿತು, ಇದು ಮಾತೃಭೂಮಿಯ ಬಗ್ಗೆ ವಲಸಿಗರ ಆಳವಾದ ವಾತ್ಸಲ್ಯವನ್ನು ಪ್ರತಿಬಿಂಬಿಸುತ್ತದೆ.ಫ್ರಾನ್ಸ್ ಮತ್ತು ಸ್ಲೋವಾಕಿಯಾಗೆ ಪ್ರಧಾನಮಂತ್ರಿ ಅವರ ಭೇಟಿ
June 09th, 07:20 pm
ಫ್ರಾನ್ಸ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರಾನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 13 - 14 ಜೂನ್ 2026 (ನೈಸ್), ಮತ್ತು 16 - 19 ಜೂನ್ 2026 (ಎವಿಯನ್ ಮತ್ತು ಪ್ಯಾರಿಸ್) ರವರೆಗೆ ಫ್ರಾನ್ಸ್ ದೇಶಕ್ಕೆ, ಹಾಗೆಯೇ 14 - 16 ಜೂನ್ 2026 ರವರೆಗೆ ಸ್ಲೋವಾಕಿಯಾ ದೇಶಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಭೇಟಿಯ ಮೊದಲ ಹಂತದಲ್ಲಿ, ಪ್ರಧಾನಮಂತ್ರಿಯವರು ಜೂನ್ 14 ರಂದು ಅಧ್ಯಕ್ಷರಾದ ಮ್ಯಾಕ್ರಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಾಗಿ ನೈಸ್ ಗೆ ಭೇಟಿ ನೀಡಲಿದ್ದಾರೆ.ವಿವಾ ಟೆಕ್ 5 ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ಅವರ ದಿಕ್ಸೂಚಿ ಭಾಷಣದ ಪಠ್ಯ
June 16th, 04:00 pm
ಈ ವೇದಿಕೆಯು ಫ್ರಾನ್ಸ್ ನ ತಾಂತ್ರಿಕ ಮುನ್ನೋಟವನ್ನು ಪ್ರತಿಬಿಂಬಿಸುತ್ತದೆ. ಭಾರತ ಮತ್ತು ಫ್ರಾನ್ಸ್ ಗಳು ಅನೇಕ ವಿಷಯಗಳಲ್ಲಿ ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಇವುಗಳಲ್ಲಿ, ತಂತ್ರಜ್ಞಾನ ಮತ್ತು ಡಿಜಿಟಲ್ ಕ್ಷೇತ್ರಗಳು ಸಹಕಾರದ ವಲಯಗಳಾಗಿ ಮೂಡಿ ಬರುತ್ತಿವೆ. ಇಂತಹ ಸಹಕಾರ ಇನ್ನಷ್ಟು ಬೆಳೆಯಬೇಕು ಎನ್ನುವುದು ಈ ಸಮಯದ ಆವಶ್ಯಕತೆಯಾಗಿದೆ. ಇದರಿಂದ ನಮ್ಮ ದೇಶಗಳಿಗೆ ಲಾಭವಾಗುವುದು ಮಾತ್ರವಲ್ಲ ವಿಸ್ತಾರವ್ಯಾಪ್ತಿಯಲ್ಲಿ ವಿಶ್ವಕ್ಕೂ ಲಾಭವಾಗಲಿದೆ.ವಿವಾಟೆಕ್ 5 ನೇ ಆವೃತ್ತಿಯಲ್ಲಿ ಪ್ರಧಾನಿಯವರಿಂದ ಪ್ರಧಾನ ಭಾಷಣ
June 16th, 03:46 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿವಾಟೆಕ್‌ನ 5 ನೇ ಆವೃತ್ತಿಯನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಭಾಷಣ ಮಾಡಿದರು. 2016 ರಿಂದ ಪ್ರತಿವರ್ಷ ಪ್ಯಾರಿಸ್‌ನಲ್ಲಿ ನಡೆಯುವ ಯುರೋಪಿನ ಅತಿದೊಡ್ಡ ಡಿಜಿಟಲ್ ಮತ್ತು ನವೋದ್ಯಮ ಕಾರ್ಯಕ್ರಮಗಳಲ್ಲಿ ಒಂದಾದ ವಿವಾಟೆಕ್ 2021 ರಲ್ಲಿ ಮುಖ್ಯ ಭಾಷಣ ಮಾಡಲು ಪ್ರಧಾನ ಮಂತ್ರಿಯನ್ನು ಗೌರವ ಅತಿಥಿಯಾಗಿ ಆಹ್ವಾನಿಸಲಾಗಿತ್ತು.ವಿವಾ ಟೆಕ್ 5ನೇ ಆವೃತ್ತಿಯಲ್ಲಿ ಜೂನ್ 16ರಂದು ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ
June 15th, 02:16 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಜೂನ್ 16ರಂದು ಸಂಜೆ 4 ಗಂಟೆಗೆ ವಿವಾಟೆಕ್ 5ನೇ ಆವೃತ್ತಿಯಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ವಿವಾ ಟೆಕ್ 2021ರಲ್ಲಿ ಪ್ರಧಾನ ಭಾಷಣ ಮಾಡಲು ಪ್ರಧಾನಮಂತ್ರಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಸಲಾಗಿದೆ.