ಒಡಿಶಾದ ಜಾರ್ಸುಗುಡದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

September 27th, 11:45 am

ಇಲ್ಲಿ ಕೆಲವು ಯುವ ಸ್ನೇಹಿತರು ಅನೇಕ ಕಲಾಕೃತಿಗಳನ್ನು ತಂದಿದ್ದಾರೆ. ಒಡಿಶಾದ ಕಲೆಯ ಮೇಲಿನ ಪ್ರೀತಿ ವಿಶ್ವಪ್ರಸಿದ್ಧವಾಗಿದೆ. ನಾನು ನಿಮ್ಮೆಲ್ಲರಿಂದ ಈ ಉಡುಗೊರೆಗಳನ್ನು ಸ್ವೀಕರಿಸುತ್ತೇನೆ, ನನ್ನ ಎಸ್‌ಪಿಜಿ ಸಹೋದ್ಯೋಗಿಗಳನ್ನು ಈ ಎಲ್ಲಾ ವಸ್ತುಗಳನ್ನು ನಿಮ್ಮಿಂದ ಸಂಗ್ರಹಿಸಲು ವಿನಂತಿಸುತ್ತೇನೆ. ನೀವು ನಿಮ್ಮ ಹೆಸರು ಮತ್ತು ವಿಳಾಸವನ್ನು ಹಿಂಭಾಗದಲ್ಲಿ ಬರೆದರೆ, ಖಂಡಿತವಾಗಿಯೂ ನನ್ನಿಂದ ನಿಮಗೆ ಪತ್ರ ಬರುತ್ತದೆ. ಅಲ್ಲಿ ಹಿಂಭಾಗದಲ್ಲಿ, ಆ ಮಗು ಬಹಳ ಹೊತ್ತಿನಿಂದ ಏನನ್ನೋ ಕೈಯಲ್ಲಿ ಹಿಡಿದಿರುವುದನ್ನು ನಾನು ನೋಡುತ್ತಿದ್ದೇನೆ. ಅವನ ಕೈಗಳು ನೋಯುತ್ತಿರಬೇಕು. ದಯವಿಟ್ಟು ಅವನಿಗೆ ಸಹಾಯ ಮಾಡಿ ಮತ್ತು ಅದನ್ನೂ ಪಡೆಯಿರಿ. ನೀವು ನಿಮ್ಮ ಹೆಸರನ್ನು ಹಿಂಭಾಗದಲ್ಲಿ ಬರೆದಿದ್ದರೆ, ನಾನು ಖಂಡಿತವಾಗಿಯೂ ನಿಮಗೆ ಪತ್ರ ಬರೆಯುತ್ತೇನೆ. ಈ ಕಲಾಕೃತಿಗಳನ್ನು ಸಿದ್ಧಪಡಿಸಿದ್ದಕ್ಕಾಗಿ ನಿಮ್ಮ ಈ ಪ್ರೀತಿಗಾಗಿ ಎಲ್ಲಾ ಯುವಕರು, ಯುವತಿಯರು ಮತ್ತು ಪುಟ್ಟ ಮಕ್ಕಳಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಒಡಿಶಾದ ಜಾರ್ಸುಗುಡದಲ್ಲಿ 60,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

September 27th, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಜಾರ್ಸುಗುಡದಲ್ಲಿ 60,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ಗಣ್ಯರಿಗೆ ಗೌರವಯುತ ಶುಭಾಶಯಗಳನ್ನು ಸಲ್ಲಿಸಿದರು. ಪ್ರಸ್ತುತ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿರುವುದನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಈ ಶುಭ ದಿನಗಳಲ್ಲಿ ಮಾ ಸಮಲೈ ಮತ್ತು ಮಾ ರಾಮಚಂಡಿಯ ಪವಿತ್ರ ಭೂಮಿಗೆ ಭೇಟಿ ನೀಡಿ ಅಲ್ಲಿ ನೆರೆದಿದ್ದ ಜನರನ್ನು ಭೇಟಿ ಮಾಡುವ ಅದೃಷ್ಟ ತಮಗೆ ಸಿಕ್ಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರು ಇರುವುದನ್ನು ಗಮನಿಸಿದ ಪ್ರಧಾನಮಂತ್ರಿ, ಅವರ ಆಶೀರ್ವಾದವೇ ನಿಜವಾದ ಶಕ್ತಿಯ ಮೂಲ ಎಂದು ಹೇಳಿದರು, ಜನರಿಗೆ ನಮನಗಳನ್ನು ಅರ್ಪಿಸಿದರು.

ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ ಚಾಲನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸಿಂಗ್ ಭಾಷಣ

September 26th, 11:30 am

ಇಂದು ನವರಾತ್ರಿಯ ಈ ಪವಿತ್ರ ದಿನಗಳಲ್ಲಿ, ಬಿಹಾರದ ಮಹಿಳಾ ಶಕ್ತಿಯೊಂದಿಗೆ ಸಂತೋಷದಿಂದ ಸೇರಲು ನನಗೆ ಅವಕಾಶ ಸಿಕ್ಕಿದೆ. ನಾನು ಇಲ್ಲಿ ಪರದೆಯನ್ನು ನೋಡುತ್ತಿದ್ದೆ, ಲಕ್ಷಾಂತರ ಮಹಿಳೆಯರು ಮತ್ತು ಸಹೋದರಿಯರು ಕಾಣುತ್ತಿದ್ದಾರೆ. ಈ ಪವಿತ್ರ ನವರಾತ್ರಿ ಹಬ್ಬದ ಸಮಯದಲ್ಲಿ ನಿಮ್ಮೆಲ್ಲರ ಆಶೀರ್ವಾದಗಳು ನಮಗೆಲ್ಲರಿಗೂ ದೊಡ್ಡ ಶಕ್ತಿಯಾಗಿದೆ. ನಾನು ಇಂದು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಇಂದಿನಿಂದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ನನಗೆ ತಿಳಿದುಬಂದಂತೆ, ಇಲ್ಲಿಯವರೆಗೆ 75 ಲಕ್ಷ ಸಹೋದರಿಯರು ಈ ಯೋಜನೆಗೆ ಸೇರಿದ್ದಾರೆ. ಈಗ ಈ 75 ಲಕ್ಷ ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ಹಣವನ್ನು ಏಕಕಾಲದಲ್ಲಿ ಕಳುಹಿಸಲಾಗಿದೆ.

ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ ನೀಡಿದರು

September 26th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರಿಗೂ ನವರಾತ್ರಿಯ ಶುಭಾಶಯ ಕೋರಿದರು. ಬಿಹಾರದ ಮಹಿಳೆಯರೊಂದಿಗೆ ಈ ಆಚರಣೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ಇಂದು ಪ್ರಾರಂಭಿಸಲಾಗುತ್ತಿದೆ. 75 ಲಕ್ಷ ಮಹಿಳೆಯರು ಈಗಾಗಲೇ ಈ ಉಪಕ್ರಮಕ್ಕೆ ಸೇರಿದ್ದಾರೆ . ಈ 75 ಲಕ್ಷ ಮಹಿಳೆಯರಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಏಕಕಾಲದಲ್ಲಿ 10,000 ರೂ. ವರ್ಗಾಯಿಸಲಾಗಿದೆ ಎಂದು ಘೋಷಿಸಿದರು.

ಮಧ್ಯಪ್ರದೇಶದ ಧಾರ್ ನಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

September 17th, 11:20 am

ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್ ಜೀ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಮೋಹನ್ ಯಾದವ್ ಜೀ, ಕೇಂದ್ರದಲ್ಲಿ ನನ್ನ ಸಹೋದ್ಯೋಗಿಗಳಾದ ಸಹೋದರಿ ಸಾವಿತ್ರಿ ಠಾಕೂರ್ ಜೀ, ದೇಶದ ಮೂಲೆ ಮೂಲೆಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕೇಂದ್ರ ಸಚಿವರೇ, ರಾಜ್ಯಗಳ ರಾಜ್ಯಪಾಲರೇ, ರಾಜ್ಯಗಳ ಮುಖ್ಯಮಂತ್ರಿಗಳೇ, ವೇದಿಕೆಯ ಮೇಲೆ ಉಪಸ್ಥಿತರಿರುವ ಇತರ ಎಲ್ಲ ಗಣ್ಯರೇ ಮತ್ತು ದೇಶದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!

ಮಧ್ಯಪ್ರದೇಶದ ಧಾರ್‌ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಶಿಲಾನ್ಯಾಸ ಮತ್ತುಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

September 17th, 11:19 am

ಮಧ್ಯಪ್ರದೇಶದ ಧಾರ್‌ನಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಧಾರ್ ಭೋಜಶಾಲಾದ ಪೂಜ್ಯ ಮಾತೆ ಜ್ಞಾನ ದೇವತೆ ವಾಗ್ದೇವಿಯ ಪಾದಗಳಿಗೆ ನಮಸ್ಕರಿಸಿದರು. ಇಂದು ದೈವಿಕ ವಾಸ್ತುಶಿಲ್ಪಿ ಮತ್ತು ಕೌಶಲ್ಯ ಹಾಗು ಸೃಷ್ಟಿಯ ದೇವತೆಯಾದ ಭಗವಾನ್ ವಿಶ್ವಕರ್ಮರ ಜನ್ಮ ದಿನವಾಗಿದೆ ಎಂದು ಹೇಳಿದ ಶ್ರೀ ಮೋದಿ, ಭಗವಾನ್ ವಿಶ್ವಕರ್ಮರಿಗೆ ನಮನ ಸಲ್ಲಿಸಿದರು. ತಮ್ಮ ಕರಕುಶಲತೆ ಮತ್ತು ಸಮರ್ಪಣೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಕೋಟ್ಯಂತರ ಸಹೋದರ ಸಹೋದರಿಯರಿಗೆ ಅವರು ಗೌರವ ಸಲ್ಲಿಸಿದರು.

ವಿಶ್ವಕರ್ಮ ಜಯಂತಿ ಪ್ರಯುಕ್ತ ದೇಶದ ಜನತೆಗೆ ಪ್ರಧಾನಮಂತ್ರಿ ಶುಭಾಶಯ

September 17th, 10:18 am

ಇಂದು ವಿಶ್ವಕರ್ಮ ಜಯಂತಿ ಪ್ರಯುಕ್ತ ದೇಶದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ಸೃಷ್ಟಿಯ ಶಿಲ್ಪಿಯ ವಿಶೇಷ ಪೂಜೆಯ ಈ ಪವಿತ್ರ ಸಂದರ್ಭದಲ್ಲಿ, ಹೊಸ ಸೃಷ್ಟಿಯಲ್ಲಿ ತೊಡಗಿರುವ ಎಲ್ಲಾ ಕರ್ಮಯೋಗಿಗಳಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ವೋಕಲ್ ಫಾರ್ ಲೋಕಲ್’ – ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ಸ್ವದೇಶಿ ಹೆಮ್ಮೆಯಿಂದ ಹಬ್ಬಗಳನ್ನು ಆಚರಿಸಲು ಒತ್ತಾಯಿಸಿದರು

August 31st, 11:30 am

ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಪ್ರಧಾನಿ ಮೋದಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದವರಿಗೆ ಸಹಾಯ ಮಾಡಿದ ಭದ್ರತಾ ಪಡೆಗಳು ಮತ್ತು ನಾಗರಿಕರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾಕೂಟಗಳು, ಸೌರಶಕ್ತಿ, ‘ಆಪರೇಷನ್ ಪೋಲೊ’ ಮತ್ತು ಭಾರತೀಯ ಸಂಸ್ಕೃತಿಯ ಜಾಗತಿಕ ಹರಡುವಿಕೆಯಂತಹ ಪ್ರಮುಖ ವಿಷಯಗಳನ್ನು ಸಹ ಅವರು ಪ್ರಸ್ತಾಪಿಸಿದರು. ಹಬ್ಬದ ಋತುವಿನಲ್ಲಿ ಮೇಡ್-ಇನ್-ಇಂಡಿಯಾ ಉತ್ಪನ್ನಗಳನ್ನು ಖರೀದಿಸುವ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಪ್ರಧಾನಿ ನಾಗರಿಕರಿಗೆ ನೆನಪಿಸಿದರು.

ವಿಶ್ವಕರ್ಮ ಜಯಂತಿಯಂದು ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

September 17th, 09:07 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. ನಿರ್ಮಾಣ ಮತ್ತು ಸೃಷ್ಟಿಗೆ ಸಂಬಂಧಿಸಿದ ನುರಿತ ಮತ್ತು ಕಠಿಣ ಪರಿಶ್ರಮಿ ಕುಶಲಕರ್ಮಿಗಳು ಮತ್ತು ಸೃಷ್ಟಿಕರ್ತರನ್ನು ಪ್ರಧಾನಿಯವರು ಸ್ಮರಿಸಿದರು. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಧಿಸುವಲ್ಲಿ ಕುಶಲಕರ್ಮಿಗಳು ಮತ್ತು ಸೃಷ್ಟಿಕರ್ತರ ಕೊಡುಗೆಗೆ ಯಾವುದೇ ಸಾಟಿಯಿಲ್ಲ ಎಂಬ ವಿಶ್ವಾಸವನ್ನು ಶ್ರೀ ಮೋದಿಯವರು ವ್ಯಕ್ತಪಡಿಸಿದರು.

ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಭಗವಾನ್ ವಿಶ್ವಕರ್ಮ ಅವರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ

September 17th, 08:41 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಭಗವಾನ್ ವಿಶ್ವಕರ್ಮ ಅವರಿಗೆ ನಮನ ಸಲ್ಲಿಸಿದರು.

ರಾಷ್ಟ್ರಕ್ಕೆ ಯಶೋಭೂಮಿ ಸಮರ್ಪಣೆ ಮತ್ತು ವಿಶ್ವಕರ್ಮ ಯೋಜನೆಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

September 17th, 06:08 pm

ಕೇಂದ್ರ ಸಚಿವ ಸಂಪುಟದ ನನ್ನ ಎಲ್ಲಾ ಸಹೋದ್ಯೋಗಿಗಳೆ, ದೇಶದ ಮೂಲೆ ಮೂಲೆಗಳಿಂದ ಆಗಮಿಸಿ, ಈ ಭವ್ಯ ಕಟ್ಟಡದಲ್ಲಿ ಸೇರಿರುವ ಆತ್ಮೀಯ ಸಹೋದರ ಸಹೋದರಿಯರೆ, 70ಕ್ಕಿಂತ ಹೆಚ್ಚಿನ ನಗರಗಳಿಂದ ಈ ಕಾರ್ಯಕ್ರಮಕ್ಕೆ ಸೇರಿರುವ ನನ್ನ ಸಹನಾಗರಿಕರೆ, ಇತರೆ ಗಣ್ಯ ಅತಿಥಿಗಳೆ ಮತ್ತು ನನ್ನ ಕುಟುಂಬ ಸದಸ್ಯರೆ!

ನವದೆಹಲಿಯಲ್ಲಿ ಭಾರತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ - ‘ಯಶೋಭೂಮಿ’ ಮೊದಲನೇ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ

September 17th, 12:15 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ದ್ವಾರಕಾದಲ್ಲಿ ಭಾರತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ (ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್) - ‘ಯಶೋಭೂಮಿ’ಯ ಮೊದಲನೇ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 'ಯಶೋಭೂಮಿ' ಭವ್ಯವಾದ ಸಮಾವೇಶ ಕೇಂದ್ರ, ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ. ಪ್ರಧಾನಿಯವರು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಿಗಳಿಗಾಗಿ ‘ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ’ಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಪಿಎಂ ವಿಶ್ವಕರ್ಮ ಲೋಗೋ, ಘೋಷವಾಕ್ಯ ಮತ್ತು ಪೋರ್ಟಲ್ ಅನ್ನು ಸಹ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ನಿರ್ದಿಷ್ಟವಾಗಿ ರೂಪಿಸಿದ ಸ್ಟಾಂಪ್ ಶೀಟ್, ಟೂಲ್ ಕಿಟ್ ಇ-ಪುಸ್ತಕ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿಯವರು 18 ಫಲಾನುಭವಿಗಳಿಗೆ ವಿಶ್ವಕರ್ಮ ಪ್ರಮಾಣಪತ್ರಗಳನ್ನು ವಿತರಿಸಿದರು.

ವಿಶ್ವಕರ್ಮ ಜಯಂತಿಯಂದು ಜನರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ

September 17th, 09:27 am

ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ತಮ್ಮ ಸಮರ್ಪಣೆ, ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಸಮಾಜದಲ್ಲಿ ಹೊಸತನವನ್ನು ಬೆಳೆಸುತ್ತಾ ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಎಲ್ಲಾ ಕುಶಲಕರ್ಮಿಗಳು ಮತ್ತು ಕೌಶಲ್ಯತೆಯ ಸೃಷ್ಟಿಕರ್ತರನ್ನು ಅವರು ವಂದಿಸಿದರು.

2023ರ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗಾಗಿ 'ಪಿಎಂ ವಿಶ್ವಕರ್ಮ' ಯೋಜನೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ

September 15th, 12:36 pm

ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಸೆಪ್ಟೆಂಬರ್ 17 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ದ್ವಾರಕಾದ `ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋʼ ಕೇಂದ್ರದಲ್ಲಿ ಪಿಎಂ ವಿಶ್ವಕರ್ಮ ಎಂಬ ಹೊಸ ಯೋಜನೆಗೆ ಚಾಲನೆ ನೀಡಲಿದ್ದಾರೆ.

ದಿವ್ಯಾಂಗರು ಪ್ರವೇಶಿಸಬಹುದಾದ ಭಾರತ ನಿರ್ಮಿಸಲು ನಾವು ಕೆಲಸ ಮಾಡುತ್ತಿದ್ದೇವೆ : ಪ್ರಧಾನಮಂತ್ರಿ ನರೇಂದ್ರ ಮೋದಿ

August 15th, 05:01 pm

ಮುಂದಿನ ತಿಂಗಳು ವಿಶ್ವ ಕರ್ಮ ಜಯಂತಿಯಂದು ವಿಶ್ವಕರ್ಮ ಯೋಜನೆ ಆರಂಭಿಸಲಾಗುವುದು ಎಂದು ಪ್ರಧಾನಮಂತ್ರಿ ‍ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಅವರು 77 ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿ, ಈ ಯೋಜನೆ ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರಿಗೆ ಅಂದರೆ ಉಪಕರಣಗಳು ಮತ್ತು ಕೈಯಿಂದ ಕೆಲಸ ಮಾಡುವ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಹಿಂದುಳಿದ ಸಮುದಾಯದ ಬಡಗಿಗಳು, ಅಕ್ಕಸಾಲಿಗರು, ಕಲ್ಲುಕುಟಿಕರು, ಅಗಸರು, ಸವಿತಾ ಸಮಾಜದ ಸಹೋದರ, ಸಹೋದರಿಯರು ಅಂತಹ ಜನರಿಗೆ ಹೊಸ ಶಕ್ತಿ ನೀಡಲು ಆಯಾ ಕುಟುಂಬ ಕೆಲಸ ಮಾಡುತ್ತದೆ. ಬಜೆಟ್‌ ನ 13-15 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಪ್ರಾರಂಭವಾಗಲಿದೆ ಎಂದರು.

ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಅತ್ಯಂತ ಪರಿಣಾಮಕಾರಿ ಎಂದು ಜಗತ್ತು ಒಪ್ಪಿಕೊಂಡಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

September 25th, 11:00 am

ಕಳೆದ ಕೆಲವು ದಿನಗಳಲ್ಲಿ ನಮ್ಮ ಗಮನ ಸೆಳೆದ ವಿಷಯವೆಂದರೆ ಚೀತಾ. ಚೀತಾಗಳ ಬಗ್ಗೆ ಮಾತನಾಡುವಂತೆ ಸಾಕಷ್ಟು ಸಂದೇಶಗಳು ಬಂದಿವೆ. ಉತ್ತರ ಪ್ರದೇಶದ ಅರುಣ್ ಕುಮಾರ್ ಗುಪ್ತಾ ಅಥವಾ ತೆಲಂಗಾಣದ ಎನ್. ರಾಮಚಂದ್ರನ್ ರಘುರಾಮ್, ಗುಜರಾತ್ನ ರಾಜನ್ ಅಥವಾ ದೆಹಲಿಯ ಸುಬ್ರತಾ ಹೀಗೆ ದೇಶದ ಮೂಲೆ ಮೂಲೆಗಳಿಂದ ಚೀತಾಗಳು ಭಾರತಕ್ಕೆ ಮರಳಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. 130 ಕೋಟಿ ಭಾರತೀಯರು ಸಂತೋಷದಿಂದ, ಹೆಮ್ಮೆಯಿಂದ ಬೀಗಿದ್ದಾರೆ; ಇದು ಪ್ರಕೃತಿಯ ಬಗೆಗಿನ ಭಾರತದ ಪ್ರೀತಿ. ಈ ಬಗ್ಗೆ ಜನರು ಕೇಳುವ ಸಾಮಾನ್ಯ ಪ್ರಶ್ನೆಯೆಂದರೆ ಮೋದಿ ಜೀ, ಚೀತಾಗಳನ್ನು ನೋಡಲು ನಮಗೆ ಯಾವಾಗ ಅವಕಾಶ ಸಿಗುತ್ತದೆ?

ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಐಟಿಐ ಕೌಶಲ್ ದೀಕ್ಷಾಂತ್ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

September 17th, 04:54 pm

ದೇಶದ ಲಕ್ಷಾಂತರ ಐಟಿಐ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಇಂದು ತಮಗೆ ಅವಕಾಶ ದೊರತಿರುವುದು ತಮ್ಮ ಸೌಭಾಗ್ಯವಾಗಿದೆ. ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳಿಂದ ಶಿಕ್ಷಕರೇ, ಜಗತ್ತಿನ ಶಿಕ್ಷಣ ವಲಯದ ಇತರೆ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ವಿಶ್ವಕರ್ಮ ಜಯಂತಿ ಅಂಗವಾಗಿ, ಪ್ರಧಾನಮಂತ್ರಿ ಅವರು ವಿಡಿಯೊ ಸಂದೇಶದ ಮೂಲಕ ಕೌಶಲ್ಯ ದೀಕ್ಷಾಂತ್ ಸಮಾರೋಹ್ ಉದ್ದೇಶಿಸಿ ಮಾತನಾಡಿದರು

September 17th, 03:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮೊದಲ ಬಾರಿಗೆ ಕೌಶಲ್ಯ ದೀಕ್ಷಾಂತ್ ಸಮಾರೋಹ್‌ನಲ್ಲಿ, ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಸುಮಾರು 40 ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

India's daughters and mothers are my 'Raksha Kavach': PM Modi at Women Self Help Group Sammelan in Sheopur

September 17th, 01:03 pm

PM Modi participated in Self Help Group Sammelan organised at Sheopur, Madhya Pradesh. The PM highlighted that in the last 8 years, the government has taken numerous steps to empower the Self Help Groups. “Today more than 8 crore sisters across the country are associated with this campaign. Our goal is that at least one sister from every rural family should join this campaign”, PM Modi remarked.

PM addresses Women Self Help Groups Conference in Karahal, Madhya Pradesh

September 17th, 01:00 pm

PM Modi participated in Self Help Group Sammelan organised at Sheopur, Madhya Pradesh. The PM highlighted that in the last 8 years, the government has taken numerous steps to empower the Self Help Groups. “Today more than 8 crore sisters across the country are associated with this campaign. Our goal is that at least one sister from every rural family should join this campaign”, PM Modi remarked.