ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆಯೋಜಿಸಿದ್ದ ಪರಾಕ್ರಮ್ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 23rd, 05:15 pm
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ ಜಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಐಎನ್ಎ ಟ್ರಸ್ಟ್ ಅಧ್ಯಕ್ಷರಾದ ಬ್ರಿಗೇಡಿಯರ್ ಆರ್.ಎಸ್. ಛಿಕಾರಾ ಜಿ, ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಹೋರಾಟಗಾರರು ಮತ್ತು ಐಎನ್ಎಯ ಚಿರಂತನ ಪುರುಷ, ಲೆಫ್ಟಿನೆಂಟ್ ಆರ್. ಮಾಧವನ್ ಜಿ,ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯ ಪರಾಕ್ರಮ್ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 23rd, 05:00 pm
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆದ ಪರಾಕ್ರಮ್ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೋದಿ, ಜನವರಿ 23 ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದ ಮಹಿಮಾನ್ವಿತ ದಿನಾಂಕವಾಗಿದೆ ಎಂದು ಹೇಳಿದರು. ನೇತಾಜಿ ಅವರ ಶೌರ್ಯ ಮತ್ತು ಧೈರ್ಯ ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ಅವರ ಬಗ್ಗೆ ನಮಗೆ ಭಕ್ತಿ ತುಂಬುತ್ತದೆ ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ, ಪರಾಕ್ರಮ್ ದಿವಸ್ ರಾಷ್ಟ್ರದ ಚೈತನ್ಯದ ಅವಿಭಾಜ್ಯ ಉತ್ಸವವಾಗಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು. ಜನವರಿ 23 ಪರಾಕ್ರಮ್ ದಿವಸ್, ಜನವರಿ 25 ರಾಷ್ಟ್ರೀಯ ಮತದಾರರ ದಿನ, ಜನವರಿ 26 ಗಣರಾಜ್ಯೋತ್ಸವ, ಜನವರಿ 29 ಬೀಟಿಂಗ್ ರಿಟ್ರೀಟ್ ಮತ್ತು ಜನವರಿ 30 ಪೂಜ್ಯ ಬಾಪು ಅವರ ಪುಣ್ಯತಿಥಿಯಾಗಿರುವುದು ಸಂತೋಷದ ಕಾಕತಾಳೀಯ ಸಂಗತಿ ಎಂದು ಶ್ರೀ ಮೋದಿ ಹೇಳಿದರು. ಇದು ಗಣರಾಜ್ಯದ ಭವ್ಯ ಉತ್ಸವವನ್ನು ಆಚರಿಸುವ ಹೊಸ ಸಂಪ್ರದಾಯವನ್ನು ಸೃಷ್ಟಿಸಿದೆ ಎಂದ ಅವರು ಪರಾಕ್ರಮ್ ದಿವಸ್‌ನಂದು ಎಲ್ಲಾ ನಾಗರಿಕರಿಗೆ ಶುಭಾಶಯಗಳನ್ನು ಕೋರಿದರು.ವಿಡಿಯೋ ಕಾನ್ಫರೆನ್ಸ್ ಮೂಲಕ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ
May 29th, 06:45 pm
ಇಂದು, ಜಗನ್ನಾಥನ ಆಶೀರ್ವಾದದೊಂದಿಗೆ, ದೇಶದ ರೈತರಿಗಾಗಿ ಒಂದು ದೊಡ್ಡ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ‘ವಿಕಸಿತ್ ಕೃಷಿ ಸಂಕಲ್ಪ ಅಭಿಯಾನ’ವು (ಅಭಿವೃದ್ಧಿ ಹೊಂದಿದ ಕೃಷಿ ಸಂಕಲ್ಪ ಅಭಿಯಾನ) ತನ್ನದೇ ಆದ ವಿಶಿಷ್ಟ ಉಪಕ್ರಮವಾಗಿದೆ. ಮುಂಗಾರು ಸಮೀಪಿಸುತ್ತಿದೆ, ಖಾರಿಫ್ ಋತುವಿನ ಸಿದ್ಧತೆಗಳು ನಡೆಯುತ್ತಿವೆ, ಮತ್ತು ಮುಂದಿನ 12 ರಿಂದ 15 ದಿನಗಳಲ್ಲಿ, ವಿಜ್ಞಾನಿಗಳು, ತಜ್ಞರು, ಅಧಿಕಾರಿಗಳು ಮತ್ತು ಪ್ರಗತಿಪರ ರೈತರನ್ನು ಒಳಗೊಂಡ 2,000 ಕ್ಕೂ ಹೆಚ್ಚು ತಂಡಗಳು ದೇಶಾದ್ಯಂತ ಗ್ರಾಮಗಳಿಗೆ ಭೇಟಿ ನೀಡಲಿವೆ. ಈ ತಂಡಗಳು 700 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಕ್ಷಾಂತರ ರೈತರನ್ನು ತಲುಪಲಿವೆ. ಈ ಭವ್ಯವಾದ ಅಭಿಯಾನ, ಮಹತ್ವಾಕಾಂಕ್ಷಿ ಕಾರ್ಯಕ್ರಮ ಮತ್ತು ಭಾರತೀಯ ಕೃಷಿಯ ಉಜ್ವಲ ಭವಿಷ್ಯಕ್ಕಾಗಿ ದೇಶದ ಎಲ್ಲಾ ರೈತರಿಗೂ ಮತ್ತು ಈ ತಂಡಗಳ ಎಲ್ಲಾ ಸದಸ್ಯರಿಗೂ ನನ್ನ ಶುಭ ಹಾರೈಕೆಗಳು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಉದ್ದೇಶಿಸಿ ಭಾಷಣ ಮಾಡಿದರು
May 29th, 06:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಉದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದ ಅವರು, ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಪ್ರಾರಂಭಿಸಿರುವುದು ರೈತರಿಗೆ ಮಹತ್ವದ ಉಪಕ್ರಮವಾಗಿದೆ ಮತ್ತು ಕೃಷಿ ಅಭಿವೃದ್ಧಿಗೆ ಬೆಂಬಲ ನೀಡುವ ವಿಶಿಷ್ಟ ಪ್ರಯತ್ನವಾಗಿದೆ ಎಂದು ಹೇಳಿದರು. ಮಾನ್ಸೂನ್ ಸಮೀಪಿಸುತ್ತಿದ್ದಂತೆ ಮತ್ತು ಮುಂಗಾರು ಋುತುವಿನ ಸಿದ್ಧತೆಗಳು ಪ್ರಾರಂಭವಾಗುತ್ತಿದ್ದಂತೆ, ಮುಂದಿನ 12 ರಿಂದ 15 ದಿನಗಳಲ್ಲಿ, ವಿಜ್ಞಾನಿಗಳು, ತಜ್ಞರು, ಅಧಿಕಾರಿಗಳು ಮತ್ತು ಪ್ರಗತಿಪರ ರೈತರನ್ನು ಒಳಗೊಂಡ 2000 ತಂಡಗಳು 700ಕ್ಕೂ ಜಿಲ್ಲೆಗಳಲ್ಲಿ ಪ್ರಯಾಣಿಸಲಿವೆ ಮತ್ತು ಹಳ್ಳಿಗಳಾದ್ಯಂತ ಲಕ್ಷಾಂತರ ರೈತರನ್ನು ತಲುಪಲಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತದ ಕೃಷಿ ಕ್ಷೇತ್ರವನ್ನು ಬಲಪಡಿಸುವ ಅವರ ಸಮರ್ಪಣೆಯನ್ನು ಗುರುತಿಸಿದ ಅವರು, ಈ ತಂಡಗಳಲ್ಲಿ ಭಾಗವಹಿಸುವ ಎಲ್ಲಾರೈತರಿಗೆ ಮತ್ತು ಭಾಗವಹಿಸುವವರಿಗೆ ಶುಭ ಕೋರಿದರು.