ಅಕ್ಟೋಬರ್ 4ರಂದು 62,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಯುವ ಕೇಂದ್ರಿತ ಉಪಕ್ರಮಗಳನ್ನು ಅನಾವರಣಗೊಳಿಸಲಿರುವ ಪ್ರಧಾನಮಂತ್ರಿ
October 03rd, 03:54 pm
ಯುವ ಅಭಿವೃದ್ಧಿಗಾಗಿ ಐತಿಹಾಸಿಕ ಉಪಕ್ರಮವೊಂದರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಗ್ಗೆ 11 ಗಂಟೆಗೆ 62,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಯುವ ಕೇಂದ್ರಿತ ಉಪಕ್ರಮಗಳನ್ನು ಅನಾವರಣಗೊಳಿಸಲಿದ್ದಾರೆ. ಇದು ದೇಶಾದ್ಯಂತ ಶಿಕ್ಷಣ, ಕೌಶಲ್ಯ ಮತ್ತು ಉದ್ಯಮಶೀಲತೆಗೆ ನಿರ್ಣಾಯಕ ಉತ್ತೇಜನ ನೀಡುತ್ತದೆ. ಈ ಕಾರ್ಯಕ್ರಮವು ಪ್ರಧಾನಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿ ಆಯೋಜಿಸಲಾದ ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವದ ನಾಲ್ಕನೇ ಆವೃತ್ತಿಯಾದ ಕೌಶಲ್ ದೀಕ್ಷಾಂತ್ ಸಮಾರೋಹ್ ಅನ್ನು ಸಹ ಒಳಗೊಂಡಿರುತ್ತದೆ. ಅಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ ಬರುವ ಕೈಗಾರಿಕಾ ತರಬೇತಿ ಸಂಸ್ಥೆಗಳ 46 ಅಖಿಲ ಭಾರತ ಟಾಪರ್ ಗಳನ್ನು ಸನ್ಮಾನಿಸಲಾಗುವುದು.ಸೆಪ್ಟೆಂಬರ್ 12 ರಂದು ನವದೆಹಲಿಯಲ್ಲಿ ನಡೆಯಲಿರುವ ಜ್ಞಾನ ಭಾರತಂ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
September 11th, 04:57 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 12 ರಂದು ಸಂಜೆ 4:30ರ ಸುಮಾರಿಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಜ್ಞಾನ ಭಾರತಂ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಹಸ್ತಪ್ರತಿ ಡಿಜಿಟಲೀಕರಣ, ಸಂರಕ್ಷಣೆ ಮತ್ತು ಸಾರ್ವಜನಿಕ ಪ್ರವೇಶವನ್ನು ವೇಗಗೊಳಿಸಲು ಮೀಸಲಾದ ಡಿಜಿಟಲ್ ವೇದಿಕೆಯಾದ ಜ್ಞಾನ ಭಾರತಂ ಪೋರ್ಟಲ್ ಅನ್ನು ಸಹ ಅವರು ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಅಲ್ಲಿ ನೆರೆದ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.ನವದೆಹಲಿಯ ವಿಜ್ಞಾನ ಭವನದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 28th, 11:15 am
ಶ್ರವಣಬೆಳಗೊಳದ ಸ್ವಾಮಿ ಚಾರುಕೀರ್ತಿ ಜಿ ಮುಖ್ಯಸ್ಥರಾದ ಪರಮ ಶ್ರದ್ಧೆಯ ಆಚಾರ್ಯ ಶ್ರೀ ಪ್ರಜ್ಞಾಸಾಗರ ಮಹಾರಾಜ್ ಜಿ, ನನ್ನ ಸಹೋದ್ಯೋಗಿ ಗಜೇಂದ್ರ ಸಿಂಗ್ ಶೇಖಾವತ್ ಜಿ, ನನ್ನ ಸಹ ಸಂಸದ ನವೀನ್ ಜೈನ್ ಜಿ, ಭಗವಾನ್ ಮಹಾವೀರ ಅಹಿಂಸಾ ಭಾರತಿ ಟ್ರಸ್ಟ್ ಅಧ್ಯಕ್ಷ ಪ್ರಿಯಾಂಕ್ ಜೈನ್ ಜಿ, ಕಾರ್ಯದರ್ಶಿ ಮಮತಾ ಜೈನ್ ಜಿ, ಇತರೆ ಗೌರವಾನ್ವಿತ ಗಣ್ಯರೆ, ಪೂಜ್ಯ ಸಾಧು ಸಂತರೆ, ಮಹಿಳೆಯರೆ ಮತ್ತು ಮಹನೀಯರೆ, ಜೈ ಜಿನೇಂದ್ರ!ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
June 28th, 11:01 am
ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರ ಶತಮಾನೋತ್ಸವ ಆಚರಣೆಯ ಪಾವಿತ್ರ್ಯವನ್ನು ಪ್ರಸ್ತಾಪಿಸಿದ ಅವರು, ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಒಂದು ಮಹತ್ವದ ಸಂದರ್ಭಕ್ಕೆ ದೇಶ ಸಾಕ್ಷಿಯಾಗುತ್ತಿದೆ. ಪೂಜ್ಯ ಆಚಾರ್ಯರ ಅಮರ ಸ್ಫೂರ್ತಿಯಿಂದ ತುಂಬಿರುವ ಈ ಕಾರ್ಯಕ್ರಮವು ಅಸಾಧಾರಣ ಮತ್ತು ಉನ್ನತಿಗೇರಿಸುವ ವಾತಾವರಣವನ್ನು ಸೃಷ್ಟಿಸುತ್ತಿದೆ. ಇಲ್ಲಿ ನೆರೆದಿರುವ ಎಲ್ಲಾ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕ ಅವಕಾಶಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.ಜೂನ್ 28 ರಂದು ನವದೆಹಲಿಯಲ್ಲಿ ಆಚಾರ್ಯ ವಿದ್ಯಾನಂದ ಜೀ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
June 27th, 05:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 28 ರಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಆಚಾರ್ಯ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ಶ್ರೀ ನಾರಾಯಣ ಗುರು ಮತ್ತು ಗಾಂಧೀಜಿ ನಡುವಿನ ಸಂವಾದದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 24th, 11:30 am
ಬ್ರಹ್ಮಋಷಿ ಸ್ವಾಮಿ ಸಚ್ಚಿದಾನಂದ ಜೀ, ಶ್ರೀಮಠ ಸ್ವಾಮಿ ಶುಭಾಂಗ-ನಂದಾ ಜೀ, ಸ್ವಾಮಿ ಶಾರದಾನಂದ ಜೀ, ಎಲ್ಲಾ ಪೂಜ್ಯ ಸಾಧು ಸಂತರೆ, ಸರ್ಕಾರದ ನನ್ನ ಸಹೋದ್ಯೋಗಿ ಶ್ರೀ ಜಾರ್ಜ್ ಕುರಿಯನ್ ಜೀ, ಸಂಸತ್ತಿನ ನನ್ನ ಸಹೋದ್ಯೋಗಿ ಶ್ರೀ ಅಡೂರ್ ಪ್ರಕಾಶ್ ಜೀ, ಇಲ್ಲಿರುವ ಇತರೆ ಎಲ್ಲ ಹಿರಿಯ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ.ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಅವರ ನಡುವಿನ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
June 24th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಭಾರತದ ಇಬ್ಬರು ಶ್ರೇಷ್ಠ ಆಧ್ಯಾತ್ಮಿಕ ಮತ್ತು ನೈತಿಕ ನಾಯಕರಾದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದು ಈ ಸ್ಥಳವು ರಾಷ್ಟ್ರದ ಇತಿಹಾಸದಲ್ಲಿ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಇದು ನಮ್ಮ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕನ್ನು ನೀಡಿದ, ಸ್ವಾತಂತ್ರ್ಯದ ಉದ್ದೇಶಗಳು ಮತ್ತು ಸ್ವತಂತ್ರ ಭಾರತದ ಕನಸಿಗೆ ನಿರ್ದಿಷ್ಟ ಅರ್ಥವನ್ನು ನೀಡಿದ ಐತಿಹಾಸಿಕ ಘಟನೆಯಾಗಿದೆ ಎಂದು ಅವರು ಒತ್ತಿ ಹೇಳಿದರು. 100 ವರ್ಷಗಳ ಹಿಂದೆ ನಡೆದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ಭೇಟಿಯು ಇಂದಿಗೂ ಸ್ಪೂರ್ತಿದಾಯಕ ಮತ್ತು ಪ್ರಸ್ತುತವಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಸಾಮೂಹಿಕ ಗುರಿಗಳಿಗೆ ಶಕ್ತಿಶಾಲಿ ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ, ಅವರು ಶ್ರೀ ನಾರಾಯಣ ಗುರುಗಳ ಪಾದಗಳಿಗೆ ನಮನ ಸಲ್ಲಿಸಿದರು ಮತ್ತು ಮಹಾತ್ಮ ಗಾಂಧಿ ಅವರಿಗೆ ಗೌರವನಮನ ಸಲ್ಲಿಸಿದರು.2025ರ ಜೂನ್ 24ರಂದು ಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿ ನಡುವಿನ ಸಂಭಾಷಣೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
June 23rd, 05:24 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜೂನ್ 24ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ಇಬ್ಬರು ಶ್ರೇಷ್ಠ ಆಧ್ಯಾತ್ಮಿಕ ಮತ್ತು ಸನ್ನಡತೆಯ ನಾಯಕರಾದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ನಡುವಿನ ಐತಿಹಾಸಿಕ ಸಂಭಾಷಣೆಯ ಶತಮಾನೋತ್ಸವ ಆಚರಣೆಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.17ನೇ ನಾಗರಿಕ ಸೇವಾ ದಿನದಂದು ಪ್ರಧಾನಮಂತ್ರಿಯವರ ಭಾಷಣ
April 21st, 11:30 am
ನನ್ನ ಸಂಪುಟ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್ ಜಿ, ಶ್ರೀ ಶಕ್ತಿಕಾಂತ ದಾಸ್ ಜಿ, ಡಾ. ಸೋಮನಾಥನ್ ಜಿ, ಇತರ ಹಿರಿಯ ಅಧಿಕಾರಿಗಳು, ದೇಶಾದ್ಯಂತ ನಾಗರಿಕ ಸೇವೆಗಳ ಎಲ್ಲಾ ಸಹೋದ್ಯೋಗಿಗಳು, ಮಹಿಳೆಯರೇ ಮತ್ತು ಮಹನೀಯರೇ!17ನೇ ನಾಗರಿಕ ಸೇವಾ ದಿನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
April 21st, 11:00 am
ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ 17ನೇ ನಾಗರಿಕ ಸೇವಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕ ಸೇವೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನಮಂತ್ರಿಯವರ ಪ್ರಶಸ್ತಿಗಳನ್ನು ಸಹ ಅವರು ಪ್ರದಾನ ಮಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ನಾಗರಿಕ ಸೇವಾ ದಿನದ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು ಮತ್ತು ಸಂವಿಧಾನದ 75ನೇ ವರ್ಷ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿಯಾದ ಈ ವರ್ಷದ ಆಚರಣೆಯ ಮಹತ್ವವನ್ನು ಎತ್ತಿ ತೋರಿಸಿದರು. ಏಪ್ರಿಲ್ 21, 1947 ರಂದು ಸರ್ದಾರ್ ಪಟೇಲ್ ಅವರು 'ಭಾರತದ ಉಕ್ಕಿನ ಚೌಕಟ್ಟು' ಎಂದು ನಾಗರಿಕ ಸೇವಕರನ್ನು ಬಣ್ಣಿಸಿದ ಐತಿಹಾಸಿಕ ಹೇಳಿಕೆಯನ್ನು ಸ್ಮರಿಸಿದ ಶ್ರೀ ಮೋದಿ, ಶಿಸ್ತು, ಪ್ರಾಮಾಣಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ, ಅತ್ಯಂತ ಸಮರ್ಪಣಾಬಾವದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅಧಿಕಾರಶಾಹಿಯನ್ನು ಕುರಿತ ಪಟೇಲ್ ಅವರ ದೃಷ್ಟಿಕೋನವನ್ನು ಒತ್ತಿ ಹೇಳಿದರು. ಭಾರತವು ವಿಕಸಿತ ಭಾರತವಾಗುವ ಸಂಕಲ್ಪದ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಅವರ ಆದರ್ಶಗಳ ಪ್ರಸ್ತುತತೆಯನ್ನು ಅವರು ಒತ್ತಿ ಹೇಳಿದರು ಮತ್ತು ಸರ್ದಾರ್ ಪಟೇಲ್ ಅವರ ದೃಷ್ಟಿಕೋನ ಮತ್ತು ಪರಂಪರೆಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು.ಏಪ್ರಿಲ್ 21 ರಂದು ನಾಗರಿಕ ಸೇವಾ ದಿನದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
April 19th, 01:16 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 17ನೇ ನಾಗರಿಕ ಸೇವಾ ದಿನದ ಅಂಗವಾಗಿ ಏಪ್ರಿಲ್ 21 ರಂದು ಬೆಳಗ್ಗೆ 11 ಗಂಟೆ ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜನೆಯಾಗಿರುವ ಕಾರ್ಯಕ್ರಮದಲ್ಲಿ ನಾಗರಿಕ ಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಧಾನಮಂತ್ರಿಗಳ ಪ್ರಶಸ್ತಿಗಳನ್ನು ಸಹ ಅವರು ಪ್ರದಾನ ಮಾಡಲಿದ್ದಾರೆ.ನವಕಾರ್ ಮಹಾಮಂತ್ರ ದಿವಸ್ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
April 09th, 08:15 am
ಮನಸ್ಸು ಶಾಂತವಾಗಿದೆ, ಮನಸ್ಸು ಸ್ಥಿರವಾಗಿದೆ, ಶಾಂತಿಯೊಂದೇ ಅದ್ಭುತ ಅನುಭೂತಿ, ಮಾತಿಗೆ ಮೀರಿದ, ಆಲೋಚನೆಗೆ ಮೀರಿದ ನವಕಾರ್ ಮಹಾಮಂತ್ರವು ಇನ್ನೂ ಮನಸ್ಸಿನಲ್ಲಿ ಅನುರಣಿಸುತ್ತಿದೆ. ನಮೋ ಅರಿಹಂತನಾಮ್. ನಮೋ ಸಿದ್ಧಾನಾಮ್. ನಮೋ ಆರ್ಯನಾಮ್. ನಮೋ ಉವಜ್ಜಾಯನಾಮ್ । ನಮೋ ಲೋಯೇ ಸವ್ವಸಾಹೂನಾಮ್ । (ನಮೋ ಅರಿಹಂತಾನಂ॥ ನಮೋ ಸಿದ್ಧಾನಂ॥ ನಮೋ ಆಯಾರಿಯಾಣಂ॥ ನಮೋ ಉವಾಜ್ಞಾಯಾಣಂ ॥ ನಮೋ ಏಲ ॥ ಸವ್ವಸಾಹೂಣಂ॥) ಒಂದು ಧ್ವನಿ, ಒಂದು ಹರಿವು, ಒಂದು ಶಕ್ತಿ, ಯಾವುದೇ ಏರಿಳಿತವಿಲ್ಲ, ಇಳಿಕೆಗಳಿಲ್ಲ, ಕೇವಲ ಸ್ಥಿರತೆ, ಕೇವಲ ಸಮಚಿತ್ತತೆ. ಅಂತಹ ಒಂದು ಪ್ರಜ್ಞೆ, ಒಂದೇ ರೀತಿಯ ಲಯ, ಒಳಗೆ ಇದೇ ಬೆಳಕು. ನವಕಾರ್ ಮಹಾಮಂತ್ರದ ಈ ಆಧ್ಯಾತ್ಮಿಕ ಶಕ್ತಿಯನ್ನು ನಾನು ಇನ್ನೂ ನನ್ನೊಳಗೆ ಅನುಭವಿಸುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ, ಬೆಂಗಳೂರಿನಲ್ಲಿ ಇದೇ ರೀತಿಯ ಸಾಮೂಹಿಕ ಮಂತ್ರ ಪಠಣಕ್ಕೆ ನಾನು ಸಾಕ್ಷಿಯಾಗಿದ್ದೆ, ಇಂದು ನನಗೆ ಅದೇ ಭಾವನೆ ಮತ್ತು ಅದೇ ಆಳವಿದೆ. ಈ ಬಾರಿ ಲಕ್ಷಾಂತರ ಪುಣ್ಯಾತ್ಮರು ಒಂದೇ ಪ್ರಜ್ಞೆಯೊಂದಿಗೆ ಸಂಪರ್ಕ ಹೊಂದಿದ್ದಾರೆ, ಒಟ್ಟಿಗೆ ಮಾತನಾಡುವ ಪದಗಳು, ಒಟ್ಟಿಗೆ ಶಕ್ತಿ ಜಾಗೃತಗೊಂಡಿವೆ, ಭಾರತ ಮತ್ತು ವಿದೇಶಗಳಲ್ಲಿ, ಇದು ನಿಜವಾಗಿಯೂ ಹಿಂದೆಂದೂ ಕಾಣದ ಅಪೂರ್ವ ಕ್ಷಣವಾಗಿದೆ.ನವಕರ್ ಮಹಾಮಂತ್ರ ದಿನವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
April 09th, 07:47 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನವಕರ್ ಮಹಾಮಂತ್ರ ದಿನವನ್ನು ಉದ್ಘಾಟಿಸಿದರು ಮತ್ತು ಅದರಲ್ಲಿ ಭಾಗವಹಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನವಕರ್ ಮಂತ್ರದ ಆಳವಾದ ಆಧ್ಯಾತ್ಮಿಕ ಅನುಭವವನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಮನಸ್ಸಿಗೆ ಶಾಂತಿ ಮತ್ತು ಸ್ಥಿರತೆಯನ್ನು ತರುವ ಸಾಮರ್ಥ್ಯವನ್ನು ಒತ್ತಿ ಹೇಳಿದರು. ಪದಗಳು ಮತ್ತು ಆಲೋಚನೆಗಳನ್ನು ಮೀರಿದ, ಮನಸ್ಸು ಮತ್ತು ಪ್ರಜ್ಞೆಯೊಳಗೆ ಆಳವಾಗಿ ಪ್ರತಿಧ್ವನಿಸುವ ಅಸಾಧಾರಣ ಶಾಂತಿಯ ಭಾವನೆಯ ಬಗ್ಗೆ ಅವರು ಮಾತನಾಡಿದರು. ನವಕರ್ ಮಂತ್ರದ ಮಹತ್ವವನ್ನು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು, ಅದರ ಪವಿತ್ರ ಶ್ಲೋಕಗಳನ್ನು ಪಠಿಸಿದರು ಮತ್ತು ಮಂತ್ರವನ್ನು ಶಕ್ತಿಯ ನಿರಂತರ ಹರಿವು, ಸ್ಥಿರತೆ, ಸಮಚಿತ್ತತೆ ಮತ್ತು ಪ್ರಜ್ಞೆ ಮತ್ತು ಆಂತರಿಕ ಬೆಳಕಿನ ಸಾಮರಸ್ಯದ ಲಯವನ್ನು ಸಾಕಾರಗೊಳಿಸುತ್ತದೆ ಎಂದು ವಿವರಿಸಿದರು. ತಮ್ಮ ವೈಯಕ್ತಿಕ ಅನುಭವದ ಬೆಳಕು ಚೆಲ್ಲುತ್ತಾ, ನವಕರ್ ಮಂತ್ರದ ಆಧ್ಯಾತ್ಮಿಕ ಶಕ್ತಿಯನ್ನು ತಮ್ಮೊಳಗೆ ಹೇಗೆ ಅನುಭವಿಸುತ್ತಿದ್ದಾರೆ ಎಂಬುದನ್ನು ಅವರು ಹಂಚಿಕೊಂಡರು. ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಸಾಮೂಹಿಕ ಮಂತ್ರ ಪಠಣ ಕಾರ್ಯಕ್ರಮವನ್ನು ವೀಕ್ಷಿಸಿದ ಅವರು, ಅದು ತನ್ನ ಮೇಲೆ ಗಾಢ ಪ್ರಭಾವ ಬೀರಿತು ಎಂದರು. ದೇಶ ಮತ್ತು ವಿದೇಶಗಳಾದ್ಯಂತ ಲಕ್ಷಾಂತರ ಸದ್ಗುಣಶೀಲ ಆತ್ಮಗಳು ಏಕೀಕೃತ ಪ್ರಜ್ಞೆಯಲ್ಲಿ ಒಟ್ಟಿಗೆ ಸೇರುವ ಅಪ್ರತಿಮ ಅನುಭವವನ್ನು ಪ್ರಧಾನಿ ಪ್ರಮುಖವಾಗಿ ಉಲ್ಲೇಖಿಸಿದರು. ಸಾಮೂಹಿಕ ಶಕ್ತಿ ಮತ್ತು ಮೇಳೈಸಿದ ಪದಗಳ ಬಗ್ಗೆ ಅವರು ಉಲ್ಲೇಖಿಸಿ, ಇದು ನಿಜವಾಗಿಯೂ ಅಸಾಧಾರಣ ಮತ್ತು ಅಭೂತಪೂರ್ವ ಎಂದು ವಿವರಿಸಿದರು.ನವದೆಹಲಿಯಲ್ಲಿ ಏಪ್ರಿಲ್ 9 ರಂದು ನವ್ ಕಾರ್ ಮಹಾಮಂತ್ರ ದಿವಸ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿ
April 07th, 05:23 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವ್ ಕಾರ್ ಮಹಾಮಂತ್ರ ದಿವಸ ಅಂಗವಾಗಿ ಏಪ್ರಿಲ್ 9 ರಂದು ಬೆಳಗ್ಗೆ 8 ಗಂಟೆ ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜನೆಯಾಗಿರುವ ಕಾರ್ಯಕ್ರಮಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರು ನೆರೆದಿರುವವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ನಮ್ಮ ಭಾಷೆ ನಮ್ಮ ಸಂಸ್ಕೃತಿಯ ವಾಹಕ: ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನಿ ಮೋದಿ
February 21st, 05:00 pm
ಪ್ರಧಾನಿ ಮೋದಿ ನವದೆಹಲಿಯಲ್ಲಿ 98 ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದರು. ರಾಷ್ಟ್ರವು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವ, ಪುಣ್ಯಶ್ಲೋಕ್ ಅಹಲ್ಯಾಬಾಯಿ ಹೋಳ್ಕರ್ ಅವರ 300 ನೇ ಜನ್ಮ ವಾರ್ಷಿಕೋತ್ಸವ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಯತ್ನಗಳಿಂದ ರಚಿಸಲಾದ ನಮ್ಮ ಸಂವಿಧಾನದ 75 ನೇ ವಾರ್ಷಿಕೋತ್ಸವವನ್ನು ವೀಕ್ಷಿಸುತ್ತಿರುವ ಮಹತ್ವದ ಸಮಯದಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು.98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
February 21st, 04:30 pm
1878ರಲ್ಲಿ ಮೊದಲ ಆವೃತ್ತಿಯಿಂದ ಇಲ್ಲಿಯವರೆಗೆ, ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವು 147 ವರ್ಷಗಳ ಭಾರತದ ಪ್ರಯಾಣಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಶ್ರೀ ಮಹಾದೇವ್ ಗೋವಿಂದ ರಾನಡೆ, ಶ್ರೀ ಹರಿ ನಾರಾಯಣ್ ಆಪ್ಟೆ, ಶ್ರೀ ಮಾಧವ ಶ್ರೀಹರಿ ಆನೆ, ಶ್ರೀ ಶಿವರಾಮ ಪರಾಂಜಪೆ, ಶ್ರೀ ವೀರ ಸಾವರ್ಕರ್ ಅವರಂತಹ ಅನೇಕ ದಿಗ್ಗಜರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು ಎಂದು ಅವರು ಹೇಳಿದರು. ಈ ಹೆಮ್ಮೆಯ ಸಂಪ್ರದಾಯದ ಭಾಗವಾಗಲು ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಶ್ರೀ ಶರದ್ ಪವಾರ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಈ ಕಾರ್ಯಕ್ರಮಕ್ಕಾಗಿ ದೇಶದ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಮರಾಠಿ ಪ್ರೇಮಿಗಳನ್ನು ಅಭಿನಂದಿಸಿದರು.I consider industry, and also the private sector of India, as a powerful medium to build a Viksit Bharat: PM Modi at CII Conference
July 30th, 03:44 pm
Prime Minister Narendra Modi attended the CII Post-Budget Conference in Delhi, emphasizing the government's commitment to economic reforms and inclusive growth. The PM highlighted various budget provisions aimed at fostering investment, boosting infrastructure, and supporting startups. He underscored the importance of a self-reliant India and the role of industry in achieving this vision, encouraging collaboration between the government and private sector to drive economic progress.ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಆಯೋಜಿಸಿದ್ದ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮ್ಮೇಳನ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಮಾತನಾಡಿದರು
July 30th, 01:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಆಯೋಜಿಸಿದ್ದ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮ್ಮೇಳನ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ಮತ್ತು ಕೈಗಾರಿಕೆಗಳ ಪಾತ್ರದ ಬಗ್ಗೆ ಸರ್ಕಾರದ ರೂಪುರೇಷೆ ರೂಪಿಸುವುದು ಸಮ್ಮೇಳನದ ಉದ್ದೇಶವಾಗಿದೆ .ಕೈಗಾರಿಕೆಗಳು, ಸರ್ಕಾರ, ರಾಜತಾಂತ್ರಿಕ ಸಮುದಾಯ, ಚಿಂತಕರ ಚಾವಡಿ ಮೊದಲಾದ ಸಾವಿರಕ್ಕೂಕ್ಕೂ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ದೇಶ ಮತ್ತು ವಿದೇಶದ ವಿವಿಧ ಸಿಐಐ ಕೇಂದ್ರಗಳಿಂದ ಅನೇಕ ಜನರು ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.ಭಾರತೀಯ ಕೈಗಾರಿಕೆಗಳ ಒಕ್ಕೂಟದ ಬಜೆಟ್ ನಂತರದ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜುಲೈ 30 ರಂದು ಪ್ರಧಾನಮಂತ್ರಿ ಭಾಷಣ
July 29th, 12:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ 2024 ರ ಜುಲೈ 30 ರಂದು ನಡೆಯಲಿರುವ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮಾವೇಶ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ಕಾಮನ್ ವೆಲ್ತ್ ಕಾನೂನು ಶಿಕ್ಷಣ ಸಂಘ - ಕಾಮನ್ ವೆಲ್ತ್ ಅಟಾರ್ನಿಸ್ ಮತ್ತು ಸಾಲಿಸಿಟರ್ಸ್ ಜನರಲ್ ಕಾನ್ಫರೆನ್ಸ್ 2024 ಅನ್ನು ಫೆಬ್ರವರಿ 3 ರಂದು ಉದ್ಘಾಟಿಸಲಿರುವ ಪ್ರಧಾನಮಂತ್ರಿ
February 02nd, 11:10 am
ಕಾಮನ್ ವೆಲ್ತ್ ಕಾನೂನು ಶಿಕ್ಷಣ ಸಂಘ - ಕಾಮನ್ ವೆಲ್ತ್ ವಕೀಲರು ಮತ್ತು ಸಾಲಿಸಿಟರ್ಸ್ ಜನರಲ್ ಕಾನ್ಫರೆನ್ಸ್ 2024 ಅನ್ನು 3 ನೇ ಫೆಬ್ರವರಿ, 2024 ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಜ್ಞಾನ ಭವನದಲ್ಲಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.