ನವದೆಹಲಿಯಲ್ಲಿ ನಡೆದ 2025ರ ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025ವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
October 31st, 06:08 pm
ನವದೆಹಲಿಯ ರೋಹಿಣಿಯಲ್ಲಿ ಇಂದು ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025ನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಮೋದಿ, ಈಗಷ್ಟೇ ಕೇಳಿದ ಮಂತ್ರಗಳ ಶಕ್ತಿಯನ್ನು ಎಲ್ಲರೂ ಅನುಭವಿಸಬಹುದು ಎಂದು ಹೇಳಿದರು. ತಾವು ಸಭೆಗೆ ಬಂದಾಗಲೆಲ್ಲಾ ತಮಗೆ ಆಗಿರುವ ಅನುಭವವು ದೈವಿಕ ಮತ್ತು ಅಸಾಮಾನ್ಯವಾದುದು ಎಂದು ಅವರು ಒತ್ತಿ ಹೇಳಿದರು. ಈ ಭಾವನೆಗೆ ಸ್ವಾಮಿ ದಯಾನಂದ ಜೀ ಅವರ ಆಶೀರ್ವಾದ ಕಾರಣವೆಂದೂ ಅವರು ಹೇಳಿದರು. ಸ್ವಾಮಿ ದಯಾನಂದ ಜೀ ಅವರ ಆದರ್ಶಗಳ ಬಗ್ಗೆ ಪ್ರಧಾನಮಂತ್ರಿ ತಮ್ಮ ಆಳವಾದ ಗೌರವವನ್ನು ವ್ಯಕ್ತಪಡಿಸಿದರು. ಹಾಜರಿದ್ದ ಎಲ್ಲಾ ಚಿಂತಕರೊಂದಿಗಿನ ತಮ್ಮ ದಶಕಗಳಷ್ಟು ಹಳೆಯದಾದ ಬಾಂಧವ್ಯವನ್ನು ಅವರು ನೆನೆಪಿಸಿಕೊಂಡರು. ಅದು ತಮಗೆ ಪದೇ ಪದೇ ಅವರ ನಡುವೆ ಇರಲು ಅವಕಾಶವನ್ನು ನೀಡಿದೆ. ಅವರನ್ನು ಭೇಟಿಯಾದಾಗಲೆಲ್ಲಾ ಮತ್ತು ಅವರ ಜೊತೆ ಸಂವಹನ ನಡೆಸಿದಾಗಲೆಲ್ಲಾ ತಾವು ವಿಶಿಷ್ಟ ಶಕ್ತಿ ಮತ್ತು ಅನನ್ಯ ಸ್ಫೂರ್ತಿಯನ್ನು ಪಡೆಯುತ್ತಿರುವುದಾಗಿಯೂ ಅವರು ಹೇಳಿದರು.'ವಂದೇ ಮಾತರಂ' ನ ಚೈತನ್ಯವು ಭಾರತದ ಅಮರ ಪ್ರಜ್ಞೆಗೆ ಸಂಬಂಧಿಸಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
October 26th, 11:30 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಅಕ್ಟೋಬರ್ 31 ರಂದು ನಡೆದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಛಠ್ ಪೂಜಾ ಉತ್ಸವ, ಪರಿಸರ ಸಂರಕ್ಷಣೆ, ಭಾರತೀಯ ನಾಯಿ ತಳಿಗಳು, ಭಾರತೀಯ ಕಾಫಿ, ಬುಡಕಟ್ಟು ಸಮುದಾಯದ ನಾಯಕರು ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯಂತಹ ಆಸಕ್ತಿದಾಯಕ ವಿಷಯಗಳನ್ನು ಅವರು ಸ್ಪರ್ಶಿಸಿದರು. 'ವಂದೇ ಮಾತರಂ' ಹಾಡಿನ 150 ನೇ ವರ್ಷದ ಬಗ್ಗೆ ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದರು.ನವದೆಹಲಿಯಲ್ಲಿ ಜ್ಞಾನ ಭಾರತಂ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 12th, 04:54 pm
ಇಂದು ವಿಜ್ಞಾನ ಭವನವು ಭಾರತದ ಸುವರ್ಣ ಗತಕಾಲದ ಪುನರುಜ್ಜೀವನಕ್ಕೆ ಸಾಕ್ಷಿಯಾಗಿದೆ. ಕೆಲವು ದಿನಗಳ ಹಿಂದೆ, ನಾನು ಜ್ಞಾನ ಭಾರತಂ ಮಿಷನ್ ಅನ್ನು ಘೋಷಿಸಿದೆ. ಇಂದು ಇಷ್ಟು ಕಡಿಮೆ ಸಮಯದಲ್ಲಿ ನಾವು ಜ್ಞಾನ ಭಾರತಂ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ಪೋರ್ಟಲ್ ಅನ್ನು ಸಹ ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಇದು ಸರ್ಕಾರಿ ಅಥವಾ ಶೈಕ್ಷಣಿಕ ಘಟನೆಯಲ್ಲ; ಜ್ಞಾನ ಭಾರತಂ ಆಂದೋಲನ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಘೋಷಣೆಯಾಗಲಿದೆ. ಸಾವಿರಾರು ತಲೆಮಾರುಗಳ ಆಲೋಚನೆಗಳು ಮತ್ತು ಚಿಂತನೆಗಳು, ಭಾರತದ ಮಹಾನ್ ಸಂತರು ಮತ್ತು ವಿದ್ವಾಂಸರ ಬುದ್ಧಿವಂತಿಕೆ ಮತ್ತು ಸಂಶೋಧನೆ, ನಮ್ಮ ಜ್ಞಾನ ಸಂಪ್ರದಾಯಗಳು, ನಮ್ಮ ವೈಜ್ಞಾನಿಕ ಪರಂಪರೆ, ನಾವು ಜ್ಞಾನ ಭಾರತಂ ಮಿಷನ್ ಮೂಲಕ ಅವುಗಳನ್ನು ಡಿಜಿಟಲೀಕರಣಗೊಳಿಸಲಿದ್ದೇವೆ. ಈ ಆಂದೋಲನಕ್ಕಾಗಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ಜ್ಞಾನ ಭಾರತಂನ ಇಡೀ ತಂಡಕ್ಕೆ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ನಾನು ಶುಭ ಹಾರೈಸುತ್ತೇನೆ.ನವದೆಹಲಿಯಲ್ಲಿ ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
September 12th, 04:45 pm
ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ವಿಜ್ಞಾನ ಭವನ ಇಂದು ಭಾರತದ ಸುವರ್ಣ ಗತಕಾಲದ ಪುನರುಜ್ಜೀವನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಕೆಲವೇ ದಿನಗಳ ಹಿಂದೆ ತಾವು ಜ್ಞಾನ ಭಾರತಂ ಮಿಷನ್ ಘೋಷಿಸಿದ್ದನ್ನು ಮತ್ತು ಇಷ್ಟು ಕಡಿಮೆ ಅವಧಿಯಲ್ಲಿ ಜ್ಞಾನ ಭಾರತಂ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿರುವುದನ್ನು ಅವರು ಒತ್ತಿ ಹೇಳಿದರು. ಈ ಮಿಷನ್‌ಗೆ ಸಂಬಂಧಿಸಿದ ಪೋರ್ಟಲ್ ಸಹ ಪ್ರಾರಂಭಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಇದು ಸರ್ಕಾರಿ ಅಥವಾ ಶೈಕ್ಷಣಿಕ ಕಾರ್ಯಕ್ರಮವಲ್ಲ ಎಂದು ಹೇಳಿದ ಪ್ರಧಾನಮಂತ್ರಿ, ಜ್ಞಾನ ಭಾರತಂ ಮಿಷನ್ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಘೋಷಣೆಯಾಗಲಿದೆ ಎಂದೂ ಹೇಳಿದರು. ಸಾವಿರಾರು ತಲೆಮಾರುಗಳ ಚಿಂತನಶೀಲ ಪರಂಪರೆಯನ್ನು ಅವರು ಉಲ್ಲೇಖಿಸಿದರು. ಭಾರತದ ಮಹಾನ್ ಋಷಿಗಳು, ಆಚಾರ್ಯರು ಮತ್ತು ವಿದ್ವಾಂಸರ ಬುದ್ಧಿವಂತಿಕೆ ಮತ್ತು ಸಂಶೋಧನೆಯನ್ನು ಅವರು ಗುರುತಿಸಿದರು, ಭಾರತದ ಜ್ಞಾನ, ಸಂಪ್ರದಾಯಗಳು ಮತ್ತು ವೈಜ್ಞಾನಿಕ ಪರಂಪರೆಯನ್ನು ಒತ್ತಿ ಹೇಳಿದರು. ಜ್ಞಾನ ಭಾರತಂ ಮಿಷನ್ ಮೂಲಕ ಈ ಪರಂಪರೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ಕಾರ್ಯಾಚರಣೆಗಾಗಿ ಅವರು ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಇಡೀ ಜ್ಞಾನ ಭಾರತಂ ತಂಡ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು.ಶ್ರೀ ನಾರಾಯಣ ಗುರು ಮತ್ತು ಗಾಂಧೀಜಿ ನಡುವಿನ ಸಂವಾದದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 24th, 11:30 am
ಬ್ರಹ್ಮಋಷಿ ಸ್ವಾಮಿ ಸಚ್ಚಿದಾನಂದ ಜೀ, ಶ್ರೀಮಠ ಸ್ವಾಮಿ ಶುಭಾಂಗ-ನಂದಾ ಜೀ, ಸ್ವಾಮಿ ಶಾರದಾನಂದ ಜೀ, ಎಲ್ಲಾ ಪೂಜ್ಯ ಸಾಧು ಸಂತರೆ, ಸರ್ಕಾರದ ನನ್ನ ಸಹೋದ್ಯೋಗಿ ಶ್ರೀ ಜಾರ್ಜ್ ಕುರಿಯನ್ ಜೀ, ಸಂಸತ್ತಿನ ನನ್ನ ಸಹೋದ್ಯೋಗಿ ಶ್ರೀ ಅಡೂರ್ ಪ್ರಕಾಶ್ ಜೀ, ಇಲ್ಲಿರುವ ಇತರೆ ಎಲ್ಲ ಹಿರಿಯ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ.ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಅವರ ನಡುವಿನ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
June 24th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಭಾರತದ ಇಬ್ಬರು ಶ್ರೇಷ್ಠ ಆಧ್ಯಾತ್ಮಿಕ ಮತ್ತು ನೈತಿಕ ನಾಯಕರಾದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದು ಈ ಸ್ಥಳವು ರಾಷ್ಟ್ರದ ಇತಿಹಾಸದಲ್ಲಿ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಇದು ನಮ್ಮ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕನ್ನು ನೀಡಿದ, ಸ್ವಾತಂತ್ರ್ಯದ ಉದ್ದೇಶಗಳು ಮತ್ತು ಸ್ವತಂತ್ರ ಭಾರತದ ಕನಸಿಗೆ ನಿರ್ದಿಷ್ಟ ಅರ್ಥವನ್ನು ನೀಡಿದ ಐತಿಹಾಸಿಕ ಘಟನೆಯಾಗಿದೆ ಎಂದು ಅವರು ಒತ್ತಿ ಹೇಳಿದರು. 100 ವರ್ಷಗಳ ಹಿಂದೆ ನಡೆದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ಭೇಟಿಯು ಇಂದಿಗೂ ಸ್ಪೂರ್ತಿದಾಯಕ ಮತ್ತು ಪ್ರಸ್ತುತವಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಸಾಮೂಹಿಕ ಗುರಿಗಳಿಗೆ ಶಕ್ತಿಶಾಲಿ ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ, ಅವರು ಶ್ರೀ ನಾರಾಯಣ ಗುರುಗಳ ಪಾದಗಳಿಗೆ ನಮನ ಸಲ್ಲಿಸಿದರು ಮತ್ತು ಮಹಾತ್ಮ ಗಾಂಧಿ ಅವರಿಗೆ ಗೌರವನಮನ ಸಲ್ಲಿಸಿದರು.ಅಹಮದಾಬಾದ್‌ನ ರಾಮಕೃಷ್ಣ ಮಠ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸ್ ಭಾಷಣ
December 09th, 01:30 pm
ಗೌರವಾನ್ವಿತ ಸ್ವಾಮಿ ಗೌತಮಾನಂದ ಜೀ ಮಹಾರಾಜ್, ದೇಶ ಮತ್ತು ವಿದೇಶಗಳಲ್ಲಿರುವ ರಾಮಕೃಷ್ಣ ಮಿಷನ್ ಮತ್ತು ಮಠದ ಗೌರವಾನ್ವಿತ ಸಾಧು ಸಂತರು, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಮತ್ತು ಈ ಕಾರ್ಯಕ್ರಮಕ್ಕೆ ಭಾಗವಹಿಸಿರುವ ಎಲ್ಲಾ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ, ನಮಸ್ಕಾರ!ಗುಜರಾತ್‌ನ ರಾಮಕೃಷ್ಣ ಮಠ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
December 09th, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ರಾಮಕೃಷ್ಣ ಮಠದಲ್ಲಿಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪೂಜ್ಯ ಶ್ರೀಮತ್ ಸ್ವಾಮಿ ಗೌತಮಾನಂದ ಜಿ ಮಹಾರಾಜ್, ಭಾರತ ಮತ್ತು ವಿದೇಶಗಳ ರಾಮಕೃಷ್ಣ ಮಠ ಮತ್ತು ಮಿಷನ್ ನ ಪೂಜ್ಯ ಸಾಧು ಸಂತರು, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಇತರೆ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿದರು. ಶ್ರೀ ಮೋದಿ ಅವರು ಶಾರದಾ ದೇವಿ, ಗುರುದೇವ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸಿದರು. ಇಂದಿನ ಕಾರ್ಯಕ್ರಮವನ್ನು ಶ್ರೀಮತ್ ಸ್ವಾಮಿ ಪ್ರೇಮಾನಂದ ಮಹಾರಾಜರ ಜನ್ಮದಿನದಂದು ಆಯೋಜಿಸಲಾಗಿದ್ದು, ಅವರಿಗೂ ನಮನ ಸಲ್ಲಿಸಿದರು.ಚೊಚ್ಚಲ ಅಂತಾರಾಷ್ಟ್ರೀಯ ಸೌರಶಕ್ತಿ ಉತ್ಸವ; ಪ್ರಧಾನಿ ನರೇಂದ್ರ ಮೋದಿ ಸಂದೇಶ
September 05th, 11:00 am
ನನ್ನ ಆತ್ಮೀಯ ಸ್ನೇಹಿತರೇ, ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಶುಭಾಶಯಗಳು. ಮೊದಲ ಅಂತಾರಾಷ್ಟ್ರೀಯ ಸೌರಶಕ್ತಿ ಉತ್ಸವಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ಈ ಅದ್ಭುತ ಉಪಕ್ರಮಕ್ಕಾಗಿ ನಾನು ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟವನ್ನು ಅಭಿನಂದಿಸುತ್ತೇನೆ.