ವರುಣಾ ನದಿ ದಂಡೆ ಮತ್ತು ಅದರ ಇಳಿಜಾರು/ಲೂಪ್‌ಗಳು ಸೇರಿ ಉತ್ತರ ಪ್ರದೇಶದಲ್ಲಿ 6/4 ಪಥದ ಎತ್ತರದ ಕಾರಿಡಾರ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ; ಒಟ್ಟು ಬಂಡವಾಳ ವೆಚ್ಚ 10,998.32 ಕೋಟಿ ರೂ.
July 15th, 04:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿಯು ಉತ್ತರ ಪ್ರದೇಶದ ವಾರಣಾಸಿ ನಗರದ ವಾಹನ ದಟ್ಟಣೆ ನಿವಾರಿಸಲು ವರುಣಾ ನದಿಯ ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿ-31 ಮತ್ತು ವಾರಣಾಸಿ ರಿಂಗ್ ರಸ್ತೆಯನ್ನು ಸಂಪರ್ಕಿಸುವ 43.218 ಕಿ.ಮೀ. ಲಿಂಕ್/ಕನೆಕ್ಟರ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ. ಈ ಯೋಜನೆಯು ಮುಖ್ಯ ಸರಕು ಸಾಗಾಣೆ ಮಾರ್ಗ (ಕ್ಯಾರೇಜ್‌ವೇ), ಮೇಲು ಸೇತುವೆಗಳು, ಲೂಪ್‌ಗಳು, ರ‍್ಯಾಂಪ್‌ಗಳು ಮತ್ತು ಸೇವಾ ರಸ್ತೆಗಳನ್ನು ಒಳಗೊಂಡಂತೆ 6/4 ಪಥದ ಪ್ರಧಾನವಾಗಿ ಎತ್ತರದ ಕಾರಿಡಾರ್ ಅನ್ನು ಒಳಗೊಂಡಿದೆ ಮತ್ತು ಇದನ್ನು ಹೈಬ್ರಿಡ್ ಅನ್ಯುಟಿ ಮಾದರಿ (ಎಚ್ ಎಎಂ) ಅಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ಒಟ್ಟು ಬಂಡವಾಳ ವೆಚ್ಚ 10,998.32 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಸಿವಿಲ್ ಕಾಮಗಾರಿಗಳ ವೆಚ್ಚ 4,565.33 ಕೋಟಿ ರೂ. ಮತ್ತು ಭೂ ಸ್ವಾಧೀನ ವೆಚ್ಚ ರೂ.934.91 ಕೋಟಿ ರೂ. ಸೇರಿದೆ.