"ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ, ಸುಧಾರಣೆಗಳು ಮತ್ತು ಹಣಕಾಸು" ಎನ್ನುವ ವಿಷಯದ ಕುರಿತು ಬಜೆಟ್ ನಂತರದ ವೆಬಿನಾರಿನಲ್ಲಿ ಪ್ರಧಾನಮಂತ್ರಿ ಅವರ ಭಾಷಣ
February 27th, 01:01 pm
ಈ ವರ್ಷದ ಮೊದಲ ಬಜೆಟ್ ವೆಬಿನಾರಿಗೆ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ಕಳೆದ ಕೆಲವು ವರ್ಷಗಳಿಂದ, ಬಜೆಟ್ ವೆಬಿನಾರ್ ಗಳು ಅಗತ್ಯವಾದ ಸಂಪ್ರದಾಯವಾಗಿ ಮಾರ್ಪಟ್ಟಿವೆ. ಆಗಾಗ್ಗೆ, ಬಜೆಟ್ ಅನ್ನು ವಿವಿಧ ನಿಯತಾಂಕಗಳ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ - ಕೆಲವೊಮ್ಮೆ ಷೇರು ಮಾರುಕಟ್ಟೆಯ ಪ್ರವೃತ್ತಿಯ ಬಗ್ಗೆ ಚರ್ಚಿಸುವುದು, ಕೆಲವೊಮ್ಮೆ ಆದಾಯ ತೆರಿಗೆ ಪ್ರಸ್ತಾಪಗಳ ಮೇಲೆ ಕೇಂದ್ರೀಕರಿಸುವುದು. ನಿಜವೇನೆಂದರೆ ದೇಶದ ಬಜೆಟ್ ಅಲ್ಪಾವಧಿಯ ವ್ಯಾಪಾರ ದಾಖಲೆಯಲ್ಲ; ಇದು ನೀತಿಯ ಮಾರ್ಗಸೂಚಿಯಾಗಿದೆ. ಆದ್ದರಿಂದ, ಬಜೆಟ್ ನ ಪರಿಣಾಮಕಾರಿತ್ವವನ್ನು ಗಟ್ಟಿಯಾದ ನಿಯತಾಂಕಗಳ ಮೇಲೆ ನಿರ್ಣಯಿಸಬೇಕು: ಮೂಲಸೌಕರ್ಯವನ್ನು ವಿಸ್ತರಿಸುವ, ಸಾಲದ ಹರಿವನ್ನು ಸುಗಮಗೊಳಿಸುವ, ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುವ, ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಹಾಗು ಜನರಿಗೆ ಜೀವನವನ್ನು ಸುಲಭಗೊಳಿಸುವ ಮತ್ತು ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನೀತಿಗಳು. ಬಜೆಟ್ ನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಆರ್ಥಿಕತೆಗೆ ಶಾಶ್ವತ ಶಕ್ತಿಯನ್ನು ಒದಗಿಸುತ್ತವೆ ಮತ್ತು ಮುಖ್ಯವಾಗಿ, ಯಾವುದೇ ಬಜೆಟ್ ಅನ್ನು ಪ್ರತ್ಯೇಕವಾಗಿ ನೋಡಬಾರದು.“ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ ಸುಧಾರಣೆಗಳು ಮತ್ತು ಹಣಕಾಸು” ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು
February 27th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 2026-27ರ ಸರಣಿಯ ಮೊದಲ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ ಸುಧಾರಣೆಗಳು ಮತ್ತು ಹಣಕಾಸು ಎಂಬ ವಿಷಯದ ಮೇಲೆ ಭಾಷಣವನ್ನು ಕೇಂದ್ರೀಕರಿಸಿದರು. ರಾಷ್ಟ್ರೀಯ ಬಜೆಟ್ ಅಲ್ಪಾವಧಿಯ ವ್ಯಾಪಾರ ದಾಖಲೆಗಿಂತ ನೀತಿ ಮಾರ್ಗಸೂಚಿಯಾಗಿದೆ ಎಂದು ಹೇಳಿದ ಶ್ರೀ ಮೋದಿ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಸಾಮೂಹಿಕ ಪ್ರಯತ್ನಕ್ಕೆ ಕರೆ ನೀಡಿದರು.ಕೇಂದ್ರ ಬಜೆಟ್ ಕುರಿತು ಪ್ರಧಾನಮಂತ್ರಿ ಅವರ ಭಾಷಣ
February 01st, 01:38 pm
ಇಂದಿನ ಬಜೆಟ್ ಐತಿಹಾಸಿಕವಾಗಿದೆ; ಇದು ದೇಶದ ನಾರಿ ಶಕ್ತಿ (ಮಹಿಳಾ ಶಕ್ತಿ) ಯ ಪ್ರಬಲ ಪ್ರತಿಬಿಂಬವಾಗಿದೆ. ಮಹಿಳಾ ಹಣಕಾಸು ಸಚಿವೆಯಾಗಿ, ನಿರ್ಮಲಾ ಅವರು ಸತತ ಒಂಬತ್ತನೇ ಬಾರಿಗೆ ದೇಶದ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಬಜೆಟ್ ಅಪಾರ ಅವಕಾಶಗಳ ಹೆದ್ದಾರಿಯಾಗಿದೆ. ಈ ಬಜೆಟ್ ಪ್ರಸ್ತುತ ಕನಸುಗಳನ್ನು ಸಾಕಾರಗೊಳಿಸುತ್ತದೆ ಮತ್ತು ಭಾರತದ ಉಜ್ವಲ ಭವಿಷ್ಯದ ಅಡಿಪಾಯವನ್ನು ಬಲಪಡಿಸುತ್ತದೆ. 2047ರ ಹೊತ್ತಿಗೆ 'ವಿಕಸಿತ ಭಾರತ'ದ (ಅಭಿವೃದ್ಧಿ ಹೊಂದಿದ ಭಾರತ) ಕಡೆಗೆ ನಮ್ಮ ಉನ್ನತ ಹಾರಾಟಕ್ಕೆ ಈ ಬಜೆಟ್ ಬಲವಾದ ಅಡಿಪಾಯವಾಗಿದೆ.ಕೇಂದ್ರ ಬಜೆಟ್ 2026ರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ
February 01st, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ 2026ರ ಕೇಂದ್ರ ಬಜೆಟ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದಿನ ಬಜೆಟ್ ಐತಿಹಾಸಿಕವಾಗಿದ್ದು, ದೇಶದ ಮಹಿಳೆಯರ ಸಬಲೀಕರಣದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು. ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಹಿಳಾ ಹಣಕಾಸು ಸಚಿವರಾಗಿ, ಸತತ ಒಂಬತ್ತನೇ ಬಾರಿಗೆ ದೇಶದ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಅವರು ಶ್ಲಾಘಿಸಿದರು. ಈ ಬಜೆಟ್ ಅಪಾರ ಅವಕಾಶಗಳ ಹೆದ್ದಾರಿಯಾಗಿದ್ದು, ವರ್ತಮಾನದ ಕನಸುಗಳನ್ನು ನನಸಾಗಿಸುವ ಮತ್ತು ಭಾರತದ ಉಜ್ವಲ ಭವಿಷ್ಯದ ಅಡಿಪಾಯವನ್ನು ಬಲಪಡಿಸುವ ಕೆಲಸ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಉನ್ನತ ಮಟ್ಟದ ಹಾರಾಟ ನಡೆಸಲು ಈ ಬಜೆಟ್ ಅಡಿಪಾಯವಾಗಿದೆ ಎಂದು ಅವರು ಒತ್ತಿ ಹೇಳಿದರು.ಆಪರೇಷನ್ ಸಿಂದೂರ ಕುರಿತ ವಿಶೇಷ ಚರ್ಚೆಯಲ್ಲಿ ಲೋಕಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 29th, 05:32 pm
ಈ ಅಧಿವೇಶನದ ಆರಂಭದಲ್ಲೇ ನಾನು ಮಾಧ್ಯಮ ಮಿತ್ರರೊಂದಿಗೆ ಮಾತನಾಡುವಾಗ, ಎಲ್ಲಾ ಸಂಸದರಿಗೂ ಒಂದು ಮನವಿ ಮಾಡಿದ್ದೆ. ಈ ಅಧಿವೇಶನವು ಭಾರತದ ವಿಜಯಗಳ ಆಚರಣೆಯಾಗಿದೆ ಎಂದು ನಾನು ಹೇಳಿದ್ದೆ. ಈ ಸಂಸತ್ತಿನ ಅಧಿವೇಶನವು ಭಾರತದ ಕೀರ್ತಿಯನ್ನು ಬಣ್ಣಿಸುವ ಅಧಿವೇಶನವಾಗಿದೆ.ʻಆಪರೇಷನ್ ಸಿಂದೂರʼ ಕುರಿತ ವಿಶೇಷ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನುಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
July 29th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ ದಿಟ್ಟ, ಯಶಸ್ವಿ ಮತ್ತು ನಿರ್ಣಾಯಕ ಕಾರ್ಯಾಚರಣೆ 'ಆಪರೇಷನ್ ಸಿಂದೂರ' ಕುರಿತ ವಿಶೇಷ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದರು. ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅಧಿವೇಶನದ ಆರಂಭದಲ್ಲಿ ಮಾಧ್ಯಮಗಳ ಜೊತೆಗಿನ ತಮ್ಮ ಸಂವಾದವನ್ನು ಸ್ಮರಿಸಿದರು, ಅಧಿವೇಶನವನ್ನು ಭಾರತದ ವಿಜಯಗಳ ಆಚರಣೆ ಮತ್ತು ಭಾರತದ ವೈಭವಕ್ಕೆ ಗೌರವ ಎಂದು ಪರಿಗಣಿಸುವಂತೆ ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರಿಗೆ ಮನವಿ ಮಾಡಿದ್ದಾಗಿ ಹೇಳಿದರು.2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಹಾದಿ ಸ್ವಾವಲಂಬನೆಯ ಮೂಲಕ ಸಾಗುತ್ತದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ
July 27th, 11:30 am
‘ಮನದ ಮಾತಿನಲ್ಲಿ’ ಮತ್ತೊಮ್ಮೆ ನಾವು ದೇಶದ ಯಶಸ್ಸಿನ ಬಗ್ಗೆ, ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತನಾಡಲಿದ್ದೇವೆ. ಕ್ರೀಡೆಯಾಗಿರಲಿ, ವಿಜ್ಞಾನವಾಗಿರಲಿ ಅಥವಾ ಸಂಸ್ಕೃತಿಯಾಗಿರಲಿ ಎಲ್ಲ ಕ್ಷೇತ್ರಗಳಲ್ಲಿ ಕಳೆದ ಕೆಲವು ವಾರಗಳಲ್ಲಿ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತಹ ಘಟನೆಗಳು ನಡೆದಿವೆ. ಇತ್ತೀಚೆಗೆ, ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಹಿಂದಿರುಗಿದ ಕುರಿತು ದೇಶದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಶುಭಾಂಶು ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ತಕ್ಷಣ, ಜನರು ಸಂತೋಷದಿಂದ ಕುಣಿದು ಕುಪ್ಪಳಿಸಿದರು, ಪ್ರತಿಯೊಬ್ಬರ ಹೃದಯದಲ್ಲೂ ಸಂತಸದ ಅಲೆ ಹರಿದಾಡಿತು. ಇಡೀ ದೇಶ ಹೆಮ್ಮೆಯಿಂದ ಬೀಗಿತು. ಆಗಸ್ಟ್ 2023 ರಲ್ಲಿ ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ಆದಾಗ, ದೇಶದಲ್ಲಿ ಹೊಸ ವಾತಾವರಣವೇ ಸೃಷ್ಟಿಯಾಗಿದ್ದು ನನಗೆ ನೆನಪಿದೆ. ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಮಕ್ಕಳಲ್ಲಿ ಹೊಸ ಕುತೂಹಲವೂ ಅರಳಿತು. ಈಗ ಚಿಕ್ಕ ಚಿಕ್ಕ ಮಕ್ಕಳು ಕೂಡ ನಾವು ಬಾಹ್ಯಾಕಾಶಕ್ಕೆ ಹೋಗುತ್ತೇವೆ, ಚಂದ್ರನ ಮೇಲೆ ಇಳಿಯುತ್ತೇವೆ - ನಾವು ಬಾಹ್ಯಾಕಾಶ ವಿಜ್ಞಾನಿಗಳಾಗುತ್ತೇವೆ ಎಂದು ಹೇಳುತ್ತಾರೆ.ಬಿಹಾರದ ಭಾಗಲ್ಪುರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 24th, 02:35 pm
ವೇದಿಕೆಯಲ್ಲಿರುವ ನಮ್ಮ ಪ್ರೀತಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಿ ಅವರೊಂದಿಗೆ ಗೌರವಾನ್ವಿತ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಜಿ ಇದ್ದಾರೆ, ಅವರು ಬಿಹಾರದ ಅಭಿವೃದ್ಧಿಗೆ ತಮ್ಮ ಸಮರ್ಪಣೆ ಮೂಲಕ ವ್ಯಾಪಕ ಮೆಚ್ಚುಗೆ ಪಡೆದಿದ್ದಾರೆ. ನನ್ನ ಗೌರವಾನ್ವಿತ ಸಂಪುಟ ಸಹೋದ್ಯೋಗಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಜಿ, ಜಿತನ್ ರಾಮ್ ಮಾಂಝಿ ಜಿ, ಲಲ್ಲನ್ ಸಿಂಗ್ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ - ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಜಿ, ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಜಿ, ವಿಜಯ್ ಸಿನ್ಹಾ ಜಿ, ರಾಜ್ಯದ ಇತರೆ ಸಚಿವರೆ, ಸಾರ್ವಜನಿಕ ಪ್ರತಿನಿಧಿಗಳೆ, ಗಣ್ಯರೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,ಪಿಎಂ ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಬಿಹಾರದ ಭಾಗಲ್ ಪುರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
February 24th, 02:30 pm
ರೈತರ ಕಲ್ಯಾಣವನ್ನು ಖಾತ್ರಿಪಡಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಭಾಗಲ್ ಪುರದಲ್ಲಿ ಪಿಎಂ ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಭಾಗವಹಿಸಿದ ಎಲ್ಲ ಗಣ್ಯರು ಮತ್ತು ಜನರನ್ನು ಶ್ರೀ ಮೋದಿ ಸ್ವಾಗತಿಸಿದರು. ಮಹಾಕುಂಭದ ಪವಿತ್ರ ಅವಧಿಯಲ್ಲಿ ಮಂದಾರಾಚಲದ ಭೂಮಿಯಲ್ಲಿ ಹೆಜ್ಜೆ ಹಾಕುವುದು ಒಂದು ದೊಡ್ಡ ಸೌಭಾಗ್ಯ ಎಂದು ಅವರು ಹೇಳಿದರು. ಈ ಸ್ಥಳವು ಆಧ್ಯಾತ್ಮಿಕತೆ, ಪರಂಪರೆ ಮತ್ತು ವಿಕ್ಷಿತ್ ಭಾರತದ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಇದು ಹುತಾತ್ಮ ತಿಲ್ಕಾ ಮಾಂಝಿ ಅವರ ಭೂಮಿ ಮತ್ತು ಸಿಲ್ಕ್ ಸಿಟಿ ಎಂದು ಕೂಡಾ ಪ್ರಸಿದ್ಧವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಬಾಬಾ ಅಜ್ಜೈಬಿನಾಥ್ ಅವರ ಪವಿತ್ರ ಭೂಮಿಯಲ್ಲಿ ಮುಂಬರುವ ಮಹಾ ಶಿವರಾತ್ರಿಗೆ ಸಿದ್ಧತೆಗಳು ನಡೆದಿವೆ ಎಂದು ಅವರು ಉಲ್ಲೇಖಿಸಿದರು. ಇಂತಹ ಪವಿತ್ರ ಸಮಯದಲ್ಲಿ ಪಿಎಂ ಕಿಸಾನ್ ನ 19 ನೇ ಕಂತನ್ನು ಬಿಡುಗಡೆ ಮಾಡುವ ಅದೃಷ್ಟ ನನ್ನದಾಗಿದೆ ಮತ್ತು ಸುಮಾರು 22,000 ಕೋಟಿ ರೂ.ಗಳನ್ನು ನೇರ ಲಾಭ/ನಗದು ವರ್ಗಾವಣೆಯ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು.Key Initiatives in the Union Budget 2025-26: JOBS FOR YOUTH
February 04th, 06:48 pm
The Union Budget for 2025-26 has placed a strong emphasis on generating job opportunities, particularly for the youth, with a series of measures aimed at enhancing skill development, supporting MSMEs (Micro, Small, and Medium Enterprises), and boosting employment prospects across various sectors.Key Initiatives in the Union Budget 2025-26: HEALTHCARE
February 04th, 06:44 pm
The Union Budget 2025-26 marks a significant step toward transforming India's healthcare landscape. With an emphasis on accessibility, affordability, and global positioning, the budget unveils a series of initiatives designed to strengthen the country's healthcare system and improve medical services for all citizens.Budget 2025: Empowering MSMEs for a Thriving Economy
February 04th, 06:38 pm
The Union Budget for 2025 places a strong emphasis on strengthening Micro, Small, and Medium Enterprises (MSMEs), recognizing their critical role in driving India's economic growth, creating jobs, and fostering innovation across sectors. The government has unveiled a series of progressive initiatives aimed at improving access to credit, fostering entrepreneurial spirit, and creating a green-tech ecosystem for MSMEs. These reforms are designed to boost the competitiveness of Indian MSMEs on the global stage, making them more self-reliant, sustainable, and capable of contributing to India’s economic aspirations.Budget 2025: Transforming Urban Infrastructure for New India
February 04th, 06:34 pm
The Union Budget for 2025 has placed a significant emphasis on urban infrastructure, reinforcing the vision of creating sustainable, connected, and efficient cities. With the allocation of Rs. 1 lakh crore under the Urban Challenge Fund, the government has laid out an ambitious plan to overhaul urban spaces, promoting growth, reducing congestion, and encouraging green infrastructure development. This initiative is set to address multiple urban challenges, including better connectivity, reduced dependence on fossil fuels, and improved living standards for millions.Key Initiatives in the Union Budget 2025-26: EDUCATION
February 04th, 06:31 pm
The Union Budget for 2025 introduces several initiatives aimed at transforming the educational landscape in India, with a particular focus on expanding opportunities for youth in the fields of technology, medicine, and innovation. These measures are introduced to equip the future workforce with the skills necessary to thrive in an increasingly digital and competitive global economy.‘Prosperous Farmers, Self-Reliant India’ – PM Modi’s Transformative Efforts Driving New India Forward!
February 04th, 06:27 pm
India’s heart beats in its villages, and without rural prosperity, the dream of a developed India remains incomplete. With this vision, Prime Minister Narendra Modi has undertaken groundbreaking initiatives over the past decade to strengthen the rural economy, keeping farmers at the center. The recently announced budget reflects this commitment to agricultural and rural development.Union Budget 2024-25: How It Will Transform the Lives of India’s Middle Class
February 04th, 06:24 pm
Finance Minister Nirmala Sitharaman’s Union Budget 2024-25 is a game-changer for India’s middle class, offering a mix of tax relief, job creation, affordable housing, and better access to healthcare and education. This budget is not just about numbers; it’s about empowering millions of middle-class families to achieve financial stability, improve their quality of life, and secure a brighter future.India’s 2024-25 Budget: A Transformative Push for Tourism – Jobs, Infrastructure, and Global Appeal
February 04th, 06:20 pm
The Indian government’s 2024-25 budget has unveiled a bold roadmap to position tourism as a cornerstone of economic growth, employment, and cultural diplomacy. With a threefold increase in funding for the Tourism Ministry—rising from ₹850.36 crore (2023-24) to ₹2,541.06 crore—the budget signals a strong commitment to transforming India into a global tourism powerhouse. Here’s how these investments will reshape the sector and what they mean for citizens, businesses, and travelers.Budget 2025-26: A Game Changer for Women’s Welfare and Empowerment
February 04th, 06:17 pm
The Union Budget 2025-26, presented by Finance Minister Nirmala Sitharaman, reflects a strong commitment to women's welfare, economic empowerment, and social upliftment. With a record allocation of ₹4.49 lakh crore towards gender-specific initiatives, marking a 37% increase from last year, this budget sets the stage for greater financial inclusion, entrepreneurship, and employment for women.ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ವೇಗವನ್ನು ಸೇರಿಸುವ ಬಜೆಟ್: ಪ್ರಧಾನಮಂತ್ರಿ
February 01st, 05:53 pm
2025ರ ಕೇಂದ್ರ ಬಜೆಟ್ ಅನ್ನು ಭಾರತದ ಪ್ರಗತಿಗೆ ಗೇಮ್ ಚೇಂಜರ್ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ, ವಿಕಸಿತ ಭಾರತ ಕಡೆಗೆ ದೇಶದ ಪ್ರಯಾಣವನ್ನು ವೇಗಗೊಳಿಸುವಲ್ಲಿ ಈ ಬಜೆಟ್ ಪಾತ್ರವನ್ನು ಒತ್ತಿಹೇಳಿದ್ದಾರೆ.ಕೇಂದ್ರ ಬಜೆಟ್ ಕುರಿತು ಪ್ರಧಾನಮಂತ್ರಿ ಹೇಳಿಕೆ
February 01st, 03:00 pm
ಭಾರತದ ಅಭಿವೃದ್ಧಿ ಪಯಣದಲ್ಲಿ ಇಂದು ಒಂದು ಪ್ರಮುಖ ಮೈಲಿಗಲ್ಲು! ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳ ಬಜೆಟ್, ಇದು ಪ್ರತಿಯೊಬ್ಬ ಭಾರತೀಯನ ಕನಸುಗಳನ್ನು ನನಸಾಗಿಸುವ ಬಜೆಟ್. ನಾವು ಯುವ ಸಮುದಾಯಕ್ಕೆ ಅನೇಕ ಕ್ಷೇತ್ರಗಳನ್ನು ತೆರೆದಿದ್ದೇವೆ. ಸಾಮಾನ್ಯ ನಾಗರಿಕರು ಅಭಿವೃದ್ಧಿ ಹೊಂದಿದ ಭಾರತದ ಧ್ಯೇಯವನ್ನು ಮುನ್ನಡೆಸಲಿದ್ದಾರೆ. ಈ ಬಜೆಟ್ ಶಕ್ತಿ ವರ್ಧಕವಾಗಿದೆ. ಈ ಬಜೆಟ್ ಉಳಿತಾಯವನ್ನು ಹೆಚ್ಚಿಸುತ್ತದೆ, ಹೂಡಿಕೆಯನ್ನು ಹೆಚ್ಚಿಸುತ್ತದೆ, ಜತೆಗೆ ಬಳಕೆಯನ್ನು ಸಹ ಹೆಚ್ಚಿಸುತ್ತದೆ ಮತ್ತು ಬೆಳವಣಿಗೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಈ ಜನತಾ ಜನಾರ್ದನ ಬಜೆಟ್, ಜನರ ಬಜೆಟ್ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ.