ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶಕ್ಕೆ (ಯು ಎನ್ ಎಫ್ ಸಿ ಸಿ ಸಿ) ಸಲ್ಲಿಸಲಿರುವ ಭಾರತದ ರಾಷ್ಟ್ರೀಯ ನಿರ್ಧರಿತ ಕೊಡುಗೆಗೆ (2031-2035) ಕೇಂದ್ರ ಸಂಪುಟದ ಅನುಮೋದನೆ
March 25th, 05:35 pm
ಭಾರತದ ಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2031 ರಿಂದ 2035ರ ಅವಧಿಯ ಭಾರತದ ರಾಷ್ಟ್ರೀಯ ನಿರ್ಧರಿತ ಕೊಡುಗೆಯನ್ನು (ಎನ್ ಡಿ ಸಿ) ಅನುಮೋದಿಸಿದೆ. ಇದು ಯು ಎನ್ ಎಫ್ ಸಿ ಸಿ ಸಿ ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ದೇಶದ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುವುದಲ್ಲದೆ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ನ್ಯಾಯದ ಬಗೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.ರೋಮ್ ಮತ್ತು ಗ್ಲಾಸ್ಗೋ ಪ್ರವಾಸ ಆರಂಭಕ್ಕೆ ಮುನ್ನ ಪ್ರಧಾನ ಮಂತ್ರಿ ಅವರಿಂದ ನಿರ್ಗಮನ ಹೇಳಿಕೆ
October 28th, 07:18 pm
ಇಟಲಿ ಪ್ರಧಾನ ಮಂತ್ರಿ ಮಾರಿಯೊ ಡ್ರಾಘಿ ಅವರ ಆಹ್ವಾನದ ಮೇರೆಗೆ ನಾನು ಅಕ್ಟೋಬರ್ 29ರಿಂದ 31ರ ವರೆಗೆ ರೋಮ್, ಇಟಲಿ ಮತ್ತು ವ್ಯಾಟಿಕನ್ ಸಿಟಿಗೆ ಭೇಟಿ ನೀಡುತ್ತಿದ್ದೇನೆ. ತರುವಾಯ, ಯುನೈಟೆಡ್ ಕಿಂಗ್ ಡಂನ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಅವರ ಆಹ್ವಾನದ ಮೇರೆಗೆ ನವೆಂಬರ್ 1-2ರಂದು ಗ್ಲಾಸ್ಗೋ, ಯುನೈಟೆಡ್ ಕಿಂಗ್ ಡಂಗೆ ಭೇಟಿ ನೀಡಲಿದ್ದೇನೆ.