ವಿಶ್ವದ ಎಲ್ಲಾ ನಾಯಕರು ಮತ್ತು ನಾಗರಿಕರ ಆತ್ಮೀಯ ಹಾಗೂ ಹೃತ್ಪೂರ್ವಕವಾದ ಶುಭಾಶಯಗಳಿಗೆ ಪ್ರಧಾನಮಂತ್ರಿಯವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ
June 10th, 11:50 pm
ಪ್ರಧಾನಮಂತ್ರಿಯವರು ವಿಶ್ವದ ಎಲ್ಲಾ ನಾಯಕರು ಮತ್ತು ಎಲ್ಲಾ ವರ್ಗದ ಜನರಿಗೆ ಅವರ ಆತ್ಮೀಯ ಶುಭಾಶಯಗಳು ಮತ್ತು ಅಭಿನಂದನಾ ಸಂದೇಶಗಳಿಗಾಗಿ ತಮ್ಮ ಹೃತ್ಪೂರ್ವಕವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶುಭಾಶಯಗಳಿಂದ ತೀವ್ರವಾಗಿ ಪ್ರಭಾವಿತರಾದ ಅವರು, ಭಾರತಕ್ಕೆ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರದ ಅಭಿವೃದ್ಧಿಯ ಹಾದಿಯಲ್ಲಿ ಕೊಡುಗೆ ನೀಡುವುದು ತಮ್ಮ ಒಂದು ಸೌಭಾಗ್ಯ ಎಂದು ಹೇಳಿದರು. ಜನರ ನಂಬಿಕೆಯೇ ತಮ್ಮ ಶಕ್ತಿಯ ದೊಡ್ಡ ಮೂಲ ಎಂದು ಒತ್ತಿ ಹೇಳಿದ ಪ್ರಧಾನಿಯವರು, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು, 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಭಾರತದ ಜಾಗತಿಕ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸಲು ಇನ್ನೂ ಹೆಚ್ಚಿನ ಸಮರ್ಪಣೆಯೊಂದಿಗೆ ಕೆಲಸ ಮಾಡುವ ತಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸಿದರು.ಸ್ವೀಡನ್ ಪ್ರಧಾನಮಂತ್ರಿ ಜತೆ ಪ್ರಧಾನಮಂತ್ರಿ ದ್ವಿಪಕ್ಷೀಯ ಮಾತುಕತೆ
May 18th, 12:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಡನ್‌ನ ಗೋಥೆನ್‌ಬರ್ಗ್‌ನಲ್ಲಿ ಅಲ್ಲಿನ ಪ್ರಧಾನಮಂತ್ರಿ ಶ್ರೀ ಉಲ್ಫ್ ಕ್ರಿಸ್ಟರ್ಸನ್ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ಸ್ವೀಡನ್‌ನ ರಾಜಕುಮಾರಿ(ಯುವರಾಣಿ) ವಿಕ್ಟೋರಿಯಾ ಕೂಡ ಸಭೆಯಲ್ಲಿ ಭಾಗವಹಿಸಿ, ದೊರೆ ಕಾರ್ಲ್ XVI ಗುಸ್ತಾಫ್ ಮತ್ತು ರಾಜಪತ್ನಿ (ರಾಣಿ) ಸಿಲ್ವಿಯಾ ಅವರ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು. ಪ್ರಧಾನಮಂತ್ರಿ ಶ್ರೀ ಮೋದಿ ಅವರು ದೊರೆಯ 80ನೇ ಹುಟ್ಟುಹಬ್ಬದ ಆತ್ಮೀಯ ಶುಭಾಶಯಗಳನ್ನು ಕೋರಿದರು.ಪ್ರಧಾನಮಂತ್ರಿ ಮತ್ತು ಸ್ವೀಡನ್ ಪ್ರಧಾನಮಂತ್ರಿ ನಡುವೆ ರವೀಂದ್ರನಾಥ ಟ್ಯಾಗೋರ್ ಅವರ ಹಂಚಿಕೆಯ ಸಾಂಸ್ಕೃತಿಕ ಪರಂಪರೆ ಆಚರಿಸುವ ವಿಶೇಷ ಉಡುಗೊರೆಗಳ ವಿನಿಮಯ
May 17th, 11:18 pm
ನೊಬೆಲ್ ಪ್ರಶಸ್ತಿ ವಿಜೇತ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ ಪರಂಪರೆಯನ್ನು ಆಚರಿಸಲು ಸ್ವೀಡನ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಉಲ್ಫ್ ಕ್ರಿಸ್ಟರ್ಸನ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶೇಷ ಸ್ಮರಣಾರ್ಥ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.ಸ್ವೀಡನ್ ದೇಶದ ಆಯ್ದ ವ್ಯಾಪಾರ ನಾಯಕರೊಂದಿಗೆ ಪ್ರಧಾನಮಂತ್ರಿ ಸಂವಾದ
May 17th, 11:16 pm
ಭಾರತ ಮತ್ತು ಸ್ವೀಡನ್ ಪ್ರಜಾಪ್ರಭುತ್ವ, ಪಾರದರ್ಶಕತೆ, ನಾವೀನ್ಯತೆ ಮತ್ತು ಸುಸ್ಥಿರತೆಯ ಹಂಚಿಕೆಯ ಮೌಲ್ಯಗಳಿಂದ ಬಲವಾದ ಸಂಬಂಧ ಹೊಂದಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಇದು ಮಹತ್ವಾಕಾಂಕ್ಷೆಯ ಮತ್ತು ಮುನ್ನೋಟದ ಆರ್ಥಿಕ ಪಾಲುದಾರಿಕೆಗೆ ಭದ್ರ ಬುನಾದಿಯನ್ನು ಹಾಕುತ್ತದೆ ಎಂದ ಅವರು,ಇಂದು ಭಾರತ-ಸ್ವೀಡನ್ ಪಾಲುದಾರಿಕೆ ಕೇವಲ ಆರ್ಥಿಕ ಸಂಬಂಧವಾಗಿಲ್ಲ, ಆದರೆ ಕಲ್ಪನೆಗಳು, ತಂತ್ರಜ್ಞಾನ, ನಾವೀನ್ಯತೆ ಮತ್ತು ಸಹ-ಸೃಷ್ಟಿಯ ಪಾಲುದಾರಿಕೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ಬೆಳವಣಿಗೆಗೆ ಸ್ವೀಡಿಷ್ ಕಂಪನಿಗಳ ದೀರ್ಘಕಾಲೀನ ಕೊಡುಗೆಯನ್ನು ಅವರು ಸ್ವಾಗತಿಸಿದರು ಮತ್ತು ಸಂಶೋಧನೆ, ನಾವೀನ್ಯತೆ, ಹಸಿರು ಪರಿವರ್ತನೆ ಮತ್ತು ಉತ್ಪಾದನಾ ವಲಯದಲ್ಲಿ ಗಾಢವಾದ ಸಹಯೋಗಕ್ಕೆ ಉತ್ತೇಜನ ನೀಡಿದರು.ಪ್ರಧಾನಿ ಮೋದಿ ಸ್ವೀಡನ್‌ಗೆ ಆಗಮಿಸಿದರು
May 17th, 06:09 pm
ಪ್ರಧಾನಿ ಮೋದಿ ಸ್ವೀಡನ್‌ನ ಗೋಥೆನ್‌ಬರ್ಗ್‌ಗೆ ಆಗಮಿಸಿದರು ಮತ್ತು ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರೇ ಅವರ ಆಗಮನವನ್ನು ಆತ್ಮೀಯವಾಗಿ ಸ್ವಾಗತಿಸಿದರು, ಅವರು ತಮ್ಮ ಐದು ರಾಷ್ಟ್ರಗಳ ಪ್ರವಾಸದ ಪ್ರಮುಖ ಹಂತವನ್ನು ಪ್ರಾರಂಭಿಸಿದರು. ಪ್ರಧಾನಿ ಮೋದಿಗೆ ಬೆಂಗಾವಲು ನೀಡಲು ಸ್ವೀಡನ್ ತನ್ನ ಯುದ್ಧ ವಿಮಾನಗಳನ್ನು ಸಹ ಕಳುಹಿಸಿತು. ಈ ಭೇಟಿಯು ಭಾರತ-ಸ್ವೀಡನ್ ಸಂಬಂಧಗಳ ಹೆಚ್ಚುತ್ತಿರುವ ಆಳ ಮತ್ತು ಪ್ರಮುಖ ವಲಯಗಳಲ್ಲಿ ಸಹಕಾರವನ್ನು ಬಲಪಡಿಸುವ ಬಗ್ಗೆ ಹಂಚಿಕೆಯ ಬದ್ಧತೆಯನ್ನು ಒತ್ತಿಹೇಳುತ್ತದೆ.ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಭೇಟಿ ನೀಡುವ ಮುನ್ನ ಪ್ರಧಾನ ಮಂತ್ರಿಯವರ ನಿರ್ಗಮನ ಹೇಳಿಕೆ
May 15th, 07:56 am
ಪ್ರಧಾನಿ ಮೋದಿ ಅವರು 2026 ರ ಮೇ 15 ರಿಂದ 20 ರವರೆಗೆ ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಐದು ರಾಷ್ಟ್ರಗಳ ಭೇಟಿಯನ್ನು ಕೈಗೊಳ್ಳಲಿದ್ದಾರೆ. ಈ ಭೇಟಿಯ ಸಮಯದಲ್ಲಿ ಅವರು ವಿವಿಧ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದಾರೆ ಮತ್ತು ಪ್ರಮುಖ ವಲಯಗಳಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆಗಳನ್ನು ನಡೆಸಲಿದ್ದಾರೆ. ಸ್ವೀಡನ್‌ನಲ್ಲಿ ಕೈಗಾರಿಕೆಗಾಗಿ ಯುರೋಪಿಯನ್ ದುಂಡು ಮೇಜಿನ ಸಭೆಯಲ್ಲಿ ಮತ್ತು ಓಸ್ಲೋದಲ್ಲಿ ನಡೆಯುವ 3 ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸುವುದು ಈ ಭೇಟಿಯ ಪ್ರಮುಖ ಅಂಶಗಳಾಗಿವೆ.ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಪ್ರಧಾನಿಯವರ ಭೇಟಿ (ಮೇ 15 - 20, 2026)
May 11th, 09:00 pm
ಮೇ 15 ರಿಂದ ಮೇ 20, 2026 ರವರೆಗೆ ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ನೆದರ್ಲ್ಯಾಂಡ್ಸ್‌ನಲ್ಲಿ, ಪ್ರಧಾನಿ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಅವರನ್ನು ಭೇಟಿ ಮಾಡಿ ಪ್ರಧಾನಿ ರಾಬ್ ಜೆಟ್ಟನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸ್ವೀಡನ್‌ನಲ್ಲಿ, ಅವರು ಪ್ರಧಾನಿ ಕ್ರಿಸ್ಟರ್ಸನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಾರ್ವೆಯಲ್ಲಿ, ಅವರು ಕಿಂಗ್ ಹೆರಾಲ್ಡ್ V ಅವರನ್ನು ಭೇಟಿ ಮಾಡಿ ಪ್ರಧಾನಿ ಜೋನಾಸ್ ಗಹರ್ ಸ್ಟೋರೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ನಂತರ, ಅವರು ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮಾತುಕತೆ ನಡೆಸಲು ಇಟಲಿಗೆ ಭೇಟಿ ನೀಡಲಿದ್ದಾರೆ.ಸ್ವೀಡನ್ ಸಾಮ್ರಾಜ್ಯದ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನಮಂತ್ರಿ ಅವರ ಸಭೆ
December 01st, 08:32 pm
ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ, ವ್ಯಾಪಾರ ಮತ್ತು ಹೂಡಿಕೆ ಮತ್ತು ಹವಾಮಾನ ಸಹಕಾರ ಸೇರಿದಂತೆ ತಮ್ಮ ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳ ಬಗ್ಗೆ ನಾಯಕರು ಫಲಪ್ರದ ಚರ್ಚೆ ನಡೆಸಿದರು. ಇಯು, ನಾರ್ಡಿಕ್ ಕೌನ್ಸಿಲ್ ಮತ್ತು ನಾರ್ಡಿಕ್ ಬಾಲ್ಟಿಕ್ 8 ಗ್ರೂಪ್ ಸೇರಿದಂತೆ ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದರು.ಸಿಒಪಿ-28ರಲ್ಲಿ ಕೈಗಾರಿಕಾ ಪರಿವರ್ತನೆಗಾಗಿ ನಾಯಕತ್ವ ಗುಂಪಿನ ಎರಡನೇ ಹಂತಕ್ಕೆ ಭಾರತ ಮತ್ತು ಸ್ವೀಡನ್ ಜಂಟಿಯಾಗಿ ಆತಿಥ್ಯ ವಹಿಸಿವೆ
December 01st, 08:29 pm
ಭಾರತ ಮತ್ತು ಸ್ವೀಡನ್ ಉದ್ಯಮ ಪರಿವರ್ತನೆ ವೇದಿಕೆಯನ್ನು ಸಹ ಪ್ರಾರಂಭಿಸಿವೆ, ಇದು ಎರಡೂ ದೇಶಗಳ ಸರ್ಕಾರಗಳು, ಕೈಗಾರಿಕೆಗಳು, ತಂತ್ರಜ್ಞಾನ ಪೂರೈಕೆದಾರರು, ಸಂಶೋಧಕರು ಮತ್ತು ಚಿಂತಕರ ಚಾವಡಿಗಳನ್ನು ಸಂಪರ್ಕಿಸುತ್ತದೆ.ಕಾಪ್-28ರಲ್ಲಿ ಜಾಗತಿಕ ಗ್ರೀನ್ ಕ್ರೆಡಿಟ್ ಉಪಕ್ರಮದಲ್ಲಿ ಯುಎಇ ಜತೆ ಸಹ ಆತಿಥ್ಯವಹಿಸಿದ ಭಾರತ
December 01st, 08:28 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ 2023ರ ಡಿಸೆಂಬರ್ 1 ರಂದು ದುಬೈನಲ್ಲಿ ಕಾಪ್-28 ನಲ್ಲಿ ‘ಗ್ರೀನ್ ಕ್ರೆಡಿಟ್ಸ್ ಪ್ರೋಗ್ರಾಂ’ ಕುರಿತು ಉನ್ನತ ಮಟ್ಟದ ಕಾರ್ಯಕ್ರಮದ ಸಹ ಆತಿಥ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವೀಡನ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಉಲ್ಫ್ ಕ್ರಿಸ್ಟರ್ಸನ್, ಮೊಜಾಂಬಿಕ್ ಅಧ್ಯಕ್ಷ ಗೌರವಾನ್ವಿತ ಶ್ರೀ ಫಿಲಿಪ್ ನ್ಯುಸಿ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಗೌರವಾನ್ವಿತ ಶ್ರೀ ಚಾರ್ಲ್ಸ್ ಮೈಕೆಲ್ ಭಾಗವಹಿಸಿದ್ದರು.ಸ್ವೀಡನ್‌ನ ಮುಂದಿನ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಉಲ್ಫ್ ಕ್ರಿಸ್ಟರ್ಸನ್ ಅವರಿಗೆ ಪ್ರಧಾನಿ ಅಭಿನಂದನೆ
October 19th, 09:46 am
ಸ್ವೀಡನ್‌ನ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಉಲ್ಫ್ ಕ್ರಿಸ್ಟರ್ಸನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.