Cabinet approves 4-laning of Badnawar–Timarwani NH-752D stretch of the Delhi Mumbai expressway in Madhya Pradesh
March 10th, 04:23 pm
The Cabinet Committee on Economic Affairs, chaired by PM Modi, has approved the development of a 4-lane corridor from Badnawar to Timarwani worth ₹3,839.42 crore. It will provide connectivity from Ujjain to the Timarwani interchange at the Delhi-Mumbai Expressway (DME). This will lower logistics costs, facilitate efficient movement of raw materials and finished goods and strengthen access to industrial hubs and MMLPs.ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 28th, 03:35 pm
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಮಹಾಂತರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಅಶೋಕ್ ಗಜಪತಿ ರಾಜು ಜಿ, ಜನಪ್ರಿಯ ಮುಖ್ಯಮಂತ್ರಿ ಮತ್ತು ಸಹೋದರ ಪ್ರಮೋದ್ ಸಾವಂತ್ ಜಿ, ಮಠ ಸಮಿತಿಯ ಅಧ್ಯಕ್ಷ ಶ್ರೀ ಶ್ರೀನಿವಾಸ ಡೆಂಪೊ ಜಿ, ಉಪಾಧ್ಯಕ್ಷರಾದ ಶ್ರೀ ಆರ್.ಆರ್. ಕಾಮತ್ ಜಿ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳಾದ ಶ್ರೀ ಶ್ರೀಪಾದ ನಾಯಕ್ ಜಿ ಮತ್ತು ದಿಗಂಬರ್ ಕಾಮತ್ ಜಿ ಮತ್ತು ಇಲ್ಲಿರುವ ಇತರೆ ಎಲ್ಲಾ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ,ಗೋವಾದಲ್ಲಿ ನಡೆದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
November 28th, 03:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೋವಾದಲ್ಲಿ ನಡೆದ 'ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠ'ದ 550ನೇ ವರ್ಷದ ಆಚರಣೆಯನ್ನುದ್ದೇಶಿಸಿ ಮಾತನಾಡಿದರು. ಈ ಪವಿತ್ರ ಸಂದರ್ಭದಲ್ಲಿ ತಮ್ಮ ಮನಸ್ಸು ಅತೀವ ಶಾಂತಿಯಿಂದ ತುಂಬಿದೆ ಎಂದು ಪ್ರಧಾನಮಂತ್ರಿ ಅವರು ಬಣ್ಣಿಸಿದರು. ಸಂತರ ಸಾನ್ನಿಧ್ಯದಲ್ಲಿ ಇರುವುದೇ ಒಂದು ಆಧ್ಯಾತ್ಮಿಕ ಅನುಭವ ಎಂದು ಅವರು ಅಭಿಪ್ರಾಯಪಟ್ಟರು. ಇಲ್ಲಿ ನೆರೆದಿರುವ ಅಪಾರ ಸಂಖ್ಯೆಯ ಭಕ್ತರು, ಈ ಮಠದ ಶತಮಾನಗಳಷ್ಟು ಹಳೆಯದಾದ ಚೈತನ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದ ಶ್ರೀ ಮೋದಿ, ಇಂದು ಈ ಸಮಾರಂಭದಲ್ಲಿ ಜನರ ನಡುವೆ ಉಪಸ್ಥಿತರಿರುವುದಕ್ಕೆ ತಾವು ಅತ್ಯಂತ ಭಾಗ್ಯಶಾಲಿ ಎಂದು ಭಾವಿಸುವುದಾಗಿ ತಿಳಿಸಿದರು. ಇಲ್ಲಿಗೆ ಬರುವ ಮುನ್ನ ರಾಮ ಮಂದಿರ ಮತ್ತು ವೀರ ವಿಠಲ ಮಂದಿರಕ್ಕೆ ಭೇಟಿ ನೀಡುವ ಸೌಭಾಗ್ಯ ತಮಗೆ ದೊರೆಯಿತು ಎಂದು ಅವರು ಸ್ಮರಿಸಿದರು. ಅಲ್ಲಿನ ಶಾಂತಿಯುತ ವಾತಾವರಣವು ಈ ಸಮಾರಂಭದ ಆಧ್ಯಾತ್ಮಿಕತೆಯನ್ನು ಇನ್ನಷ್ಟು ಗಾಢವಾಗಿಸಿದೆ ಎಂದು ಅವರು ಹೇಳಿದರು.ಮೇ 31ರಂದು ಮಧ್ಯಪ್ರದೇಶಕ್ಕೆ ಪ್ರಧಾನಮಂತ್ರಿ ಭೇಟಿ
May 30th, 11:15 am
ಲೋಕಮಾತಾ ದೇವಿ ಅಹಲ್ಯಾ ಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 31ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅವರು ಬೆಳಗ್ಗೆ 11:15ರ ಸುಮಾರಿಗೆ ಭೋಪಾಲ್ ನಲ್ಲಿ ಲೋಕಮಾತಾ ದೇವಿ ಅಹಲ್ಯಾಬಾಯಿ ಮಹಿಳಾ ಸಶಕ್ತಿಕರಣ ಮಹಾಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಭೋಪಾಲ್ ನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಹಾಗೂ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ
February 24th, 10:35 am
ಮೊದಲನೆಯದಾಗಿ, ನಾನು ಇಲ್ಲಿಗೆ ಬರುವುದರಲ್ಲಿ ವಿಳಂಬವಾದದ್ದಕ್ಕೆ ಕ್ಷಮೆಯಿರಲಿ. ನಿನ್ನೆ ನಾನು ಇಲ್ಲಿಗೆ ಬಂದಾಗ, ಇಂದು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿವೆ ಎಂದು ತಿಳಿಯಿತು. ರಾಜಭವನದಿಂದ ನಾನು ಹೊರಡುವ ಸಮಯ ಮತ್ತು ಅವರ ಪರೀಕ್ಷೆಯ ಸಮಯ ಒಂದೇ ಆಗುತ್ತಿತ್ತು. ಭದ್ರತಾ ಕಾರಣಗಳಿಂದ ರಸ್ತೆಗಳನ್ನು ಮುಚ್ಚಿದರೆ, ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಲುಪಲು ತೊಂದರೆಯಾಗುವ ಸಾಧ್ಯತೆ ಇತ್ತು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು, ಎಲ್ಲಾ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಿದ ನಂತರವೇ ರಾಜಭವನದಿಂದ ಹೊರಡಲು ನಿರ್ಧರಿಸಿದೆ. ಆದ್ದರಿಂದ, ನಾನು ಉದ್ದೇಶಪೂರ್ವಕವಾಗಿ 15-20 ನಿಮಿಷಗಳ ಕಾಲ ನನ್ನ ಹೊರಡುವಿಕೆಯನ್ನು ವಿಳಂಬ ಮಾಡಿದೆ. ಇದರಿಂದ ನಿಮಗೆಲ್ಲರಿಗೂ ಸ್ವಲ್ಪ ಅನಾನುಕೂಲವಾಯಿತು. ಮತ್ತೊಮ್ಮೆ ನಿಮ್ಮೆಲ್ಲರಿಗೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025 ಅನ್ನು ಉದ್ಘಾಟಿಸಿದರು
February 24th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ (ಜಿಐಎಸ್) 2025 ಅನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಇದ್ದುದರಿಂದ ಮತ್ತು ಕಾರ್ಯಕ್ರಮಕ್ಕೆ ಬರುವ ದಾರಿಯಲ್ಲಿ ತಮ್ಮ ಭದ್ರತಾ ಕ್ರಮಗಳು ವಿದ್ಯಾರ್ಥಿಗಳಿಗೆ ಅನಾನುಕೂಲತೆಯನ್ನುಂಟುಮಾಡಬಹುದಾಗಿದ್ದರಿಂದ ಕಾರ್ಯಕ್ರಮಕ್ಕೆ ಬರುವುದು ವಿಳಂಬವಾಗಿದ್ದಕ್ಕಾಗಿ ಕ್ಷಮೆಯಾಚಿಸಿದರು. ರಾಜ ಭೋಜ ಭೂಮಿಗೆ ಹೂಡಿಕೆದಾರರು ಮತ್ತು ವ್ಯಾಪಾರ ನಾಯಕರನ್ನು ಸ್ವಾಗತಿಸುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ ಎಂದು ಶ್ರೀ ಮೋದಿ ದು ಹೇಳಿದರು. ವಿಕಸಿತ ಮಧ್ಯಪ್ರದೇಶ ಅಥವಾ ಅಭಿವೃದ್ಧಿ ಹೊಂದಿದ ಮಧ್ಯಪ್ರದೇಶವು ವಿಕಸಿತ ಭಾರತದತ್ತ ಪ್ರಯಾಣದಲ್ಲಿ ಅಗತ್ಯವಾಗಿರುವುದರಿಂದ ಇಂದಿನ ಕಾರ್ಯಕ್ರಮವು ಮುಖ್ಯವಾಗಿದೆ ಎಂದು ಅವರು ಹೇಳಿದರು. ಶೃಂಗಸಭೆಯ ಅದ್ಭುತ ಸಂಘಟನೆಗಾಗಿ ಅವರು ಮಧ್ಯಪ್ರದೇಶ ಸರ್ಕಾರವನ್ನು ಅಭಿನಂದಿಸಿದರು.ಪ್ರಯಾಗ್ ರಾಜ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಕಾರ್ಯಾರಂಭ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
December 13th, 02:10 pm
ಉತ್ತರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಜೀ, ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ಗೌರವಾನ್ವಿತ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಜೀ ಮತ್ತು ಬ್ರಜೇಶ್ ಪಾಠಕ್ ಜೀ, ಉತ್ತರ ಪ್ರದೇಶದ ಗೌರವಾನ್ವಿತ ಮಂತ್ರಿಗಳು, ಸಂಸತ್ತು ಮತ್ತು ವಿಧಾನಸಭೆಯ ಗೌರವಾನ್ವಿತ ಸದಸ್ಯರು, ಪ್ರಯಾಗ್ ರಾಜ್ ನ ಮೇಯರ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಹಾಗುಇತರ ಗೌರವಾನ್ವಿತ ಅತಿಥಿಗಳೇ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುಮಾರು 5,500 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಚಾಲನೆಯನ್ನು ಪ್ರಧಾನಿ ನೆರವೇರಿಸಿದರು
December 13th, 02:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುಮಾರು 5,500 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಚಾಲನೆ ನೆರವೇರಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಂಗಮದ ಪವಿತ್ರ ಭೂಮಿಯಾದ ಪ್ರಯಾಗ್‌ರಾಜ್‌ಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು ಮತ್ತು ಮಹಾಕುಂಭದಲ್ಲಿ ಪಾಲ್ಗೊಂಡ ಸಂತರು ಮತ್ತು ಸಾಧುಗಳಿಗೆ ಗೌರವ ನಮನ ಸಲ್ಲಿಸಿದರು. ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಮಹಾಕುಂಭವನ್ನು ಯಶಸ್ವಿಗೊಳಿಸಿದ ನೌಕರರು, ಶ್ರಮಿಕರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಶ್ರೀ ಮೋದಿ ಕೃತಜ್ಞತೆ ಸಲ್ಲಿಸಿದರು. ಮಹಾಕುಂಭದ ಅಗಾಧತೆ ಮತ್ತು ಗಾತ್ರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇದು ವಿಶ್ವದ ಅತಿದೊಡ್ಡ ಜನಸಂಗಮಗಳಲ್ಲಿ ಒಂದಾಗಿದೆ. 45 ದಿನಗಳ ಕಾಲ ನಡೆಯುವ ʻಮಹಾಯಜ್ಞಕ್ಕಾಗಿʼ ಪ್ರತಿದಿನ ಲಕ್ಷಾಂತರ ಭಕ್ತರನ್ನು ಸ್ವಾಗತಿಸುತ್ತದೆ ಮತ್ತು ಈ ಸಂದರ್ಭಕ್ಕಾಗಿ ಸಂಪೂರ್ಣ ಹೊಸ ನಗರವನ್ನೇ ಸ್ಥಾಪಿಸಲಾಗಿದೆ ಎಂದರು. ಪ್ರಯಾಗ್‌ರಾಜ್ ಭೂಮಿಯಲ್ಲಿ ಹೊಸ ಇತಿಹಾಸ ಬರೆಯಲಾಗುತ್ತಿದೆ, ಎಂದು ಪ್ರಧಾನಿ ಉದ್ಗರಿಸಿದರು. ಮುಂದಿನ ವರ್ಷ ನಡೆಯಲಿರುವ ಮಹಾಕುಂಭ ಮೇಳದ ಕಾರ್ಯಕ್ರಮವು ರಾಷ್ಟ್ರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂತಹ ಏಕತೆಯ 'ಮಹಾಯಜ್ಞ'ದ ಬಗ್ಗೆ ವಿಶ್ವದಾದ್ಯಂತ ಚರ್ಚಿಸಲಾಗುವುದು ಎಂದು ಹೇಳಿದರು. ಮಹಾಕುಂಭ ಮೇಳದ ಯಶಸ್ವಿ ಸಂಘಟನೆಗಾಗಿ ಅವರು ಜನತೆಗೆ ಶುಭ ಕೋರಿದರು.ಗುವಾಹತಿಯಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
February 04th, 12:00 pm
ಅಸ್ಸಾಂ ರಾಜ್ಯಪಾಲರಾದ ಗುಲಾಬ್ ಚಂದ್ ಕಟಾರಿಯಾ ಜಿ, ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಜಿ, ಸಂಪುಟದ ನನ್ನ ಸಹೋದ್ಯೋಗಿಗಳೆ, ಸರ್ಬಾನಂದ ಸೋನೋವಾಲ್ ಜಿ ಮತ್ತು ರಾಮೇಶ್ವರ ತೇಲಿ ಜಿ, ಅಸ್ಸಾಂ ಸರ್ಕಾರದ ಸಚಿವರೆ, ಸಂಸದರೆ ಮತ್ತು ಶಾಸಕರೆ, ವಿವಿಧ ಮಂಡಳಿಗಳ ಮುಖ್ಯಸ್ಥರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ!ಅಸ್ಸಾಂನ ಗುವಾಹಟಿಯಲ್ಲಿ 11,000 ಕೋಟಿ ರೂ.ಗಳ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ
February 04th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ 11,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಗುವಾಹಟಿಯಲ್ಲಿ ಕ್ರೀಡೆ ಹಾಗು ವೈದ್ಯಕೀಯ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವ ಯೋಜನೆಗಳು ಪ್ರಮುಖ ಗಮನ ಹರಿಸಿದ ಕ್ಷೇತ್ರಗಳಾಗಿವೆ.ದೆಹಲಿಯ ಕೆಂಪು ಕೋಟೆಯಲ್ಲಿ ಇಂಡಿಯಾ ಆರ್ಟ್, ಆರ್ಕಿಟೆಕ್ಚರ್ ಮತ್ತು ಡಿಸೈನ್ ಬಿನಾಲೆ 2023 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
December 08th, 06:00 pm
ಕೆಂಪು ಕೋಟೆಯ ಈ ಅಂಗಳವು ಸ್ವತಃ ಐತಿಹಾಸಿಕವಾಗಿದೆ. ಈ ಕೋಟೆ ಕೇವಲ ಕಟ್ಟಡವಲ್ಲ; ಇದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸ್ವಾತಂತ್ರ್ಯದ ಮೊದಲು ಮತ್ತು ನಂತರ ಹಲವಾರು ತಲೆಮಾರುಗಳು ಕಳೆದಿವೆ, ಆದರೆ ಕೆಂಪು ಕೋಟೆಯು ಸ್ಥಿರ ಮತ್ತು ಅಳಿಸಲಾಗದು. ಈ ವಿಶ್ವ ಪರಂಪರೆಯ ತಾಣವಾದ ಕೆಂಪು ಕೋಟೆಗೆ ನಿಮ್ಮೆಲ್ಲರನ್ನೂ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.ದೆಹಲಿಯ ಕೆಂಪು ಕೋಟೆಯಲ್ಲಿ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ ಅಥವಾ ಉತ್ಸವ-2023 ಉದ್ಘಾಟಿಸಿದ ಪ್ರಧಾನ ಮಂತ್ರಿ
December 08th, 05:15 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿಂದು ನಡೆಯುತ್ತಿರುವ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ(ಐಎಎಡಿಬಿ) ಅಥವಾ ಉತ್ಸವ-2023 ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಲ್ಲಿ 'ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್' ಮತ್ತು ವಿದ್ಯಾರ್ಥಿಗಳ ವಸ್ತುಪ್ರದರ್ಶನ-ಸಮುನ್ನತಿಯನ್ನು ಸಹ ಉದ್ಘಾಟಿಸಿದರು. ಕಾರ್ಯಕ್ರಮದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು. ನಂತರ ಅವರು ವಸ್ತುಪ್ರದರ್ಶನ ವೀಕ್ಷಿಸಿದರು. ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ವಸ್ತುಪ್ರದರ್ಶನ((ಐಎಎಡಿಬಿ)ವು ದೆಹಲಿಯ ಸಾಂಸ್ಕೃತಿಕ ಸ್ಥಳಕ್ಕೆ ಪೀಠಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ.ಹೈದರಾಬಾದ್‌ನಲ್ಲಿ ನಡೆದ ಕೋಟಿ ದೀಪೋತ್ಸವದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು
November 27th, 08:18 pm
ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಕೋಟಿ ದೀಪೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು, ಕೋವಿಡ್ ಸಾಂಕ್ರಾಮಿಕದ ನಿರ್ಣಾಯಕ ಸಮಯದಲ್ಲಿಯೂ, ನಾವು ಎಲ್ಲಾ ಸಂಬಂಧಿತ ಸಮಸ್ಯೆಗಳು ಮತ್ತು ಸವಾಲುಗಳನ್ನು ಜಯಿಸಲು ದೀಪಗಳನ್ನು ಬೆಳಗಿಸಿದ್ದೇವೆ ಎಂದು ಹೇಳಿದರು. ಜನರು 'ಸ್ಥಳೀಯರಿಗೆ ಧ್ವನಿ' ಎಂದು ನಂಬಿದಾಗ ಮತ್ತು ವ್ಯಕ್ತಪಡಿಸಿದಾಗ ಅವರು ಲಕ್ಷಾಂತರ ಭಾರತೀಯರ ಸಬಲೀಕರಣಕ್ಕಾಗಿ ದಿಯಾವನ್ನು ಸುಡುತ್ತಾರೆ ಎಂದು ಅವರು ಟೀಕಿಸಿದರು. ಉತ್ತರಾಖಂಡದ ಸುರಂಗದಲ್ಲಿ ಸಿಲುಕಿರುವ ವಿವಿಧ ಶ್ರಮಿಕ್‌ಗಳ ಯೋಗಕ್ಷೇಮಕ್ಕಾಗಿ ಅವರು ಪ್ರಾರ್ಥಿಸಿದರು.ಮಥುರಾದಲ್ಲಿ ಸಂತ ಮೀರಾಬಾಯಿ ಅವರ 525 ನೇ ಜನ್ಮ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
November 23rd, 07:00 pm
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬ್ರಜ್ ನ ಗೌರವಾನ್ವಿತ ಸಂತರು, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ನಮ್ಮ ಇಬ್ಬರು ಉಪಮುಖ್ಯಮಂತ್ರಿಗಳು, ಸಂಪುಟದ ಹಲವಾರು ಸದಸ್ಯರು, ಮಥುರಾದ ಸಂಸತ್ ಸದಸ್ಯರು, ಸಹೋದರಿ ಹೇಮಾ ಮಾಲಿನಿ ಜೀ ಮತ್ತು ಬ್ರಜ್ ನ ನನ್ನ ಪ್ರೀತಿಯ ನಿವಾಸಿಗಳೇ!ಉತ್ತರ ಪ್ರದೇಶದ ಮಥುರಾದಲ್ಲಿ ಸಂತ ಮೀರಾಬಾಯಿ ಜನ್ಮೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ
November 23rd, 06:27 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಮಥುರಾದಲ್ಲಿ ಸಂತ ಮೀರಾಬಾಯಿ ಅವರ 525ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸಂತ ಮೀರಾಬಾಯಿ ಜನ್ಮೋತ್ಸವದಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತ ಮೀರಾ ಬಾಯಿ ಅವರ ಗೌರವಾರ್ಥ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ವಸ್ತುಪ್ರದರ್ಶನದಲ್ಲಿ ಹೆಜ್ಜೆ ಹಾಕಿದ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಾಕ್ಷಿಯಾದರು. ಈ ಸಂದರ್ಭವು ಸಂತ ಮೀರಾಬಾಯಿ ಅವರ ಸ್ಮರಣಾರ್ಥ ವರ್ಷವಿಡೀ ಕಾರ್ಯಕ್ರಮಗಳ ಸರಣಿಯ ಚಾಲನೆಗೂ ನಾಂದಿ ಹಾಡಿತು.PM Modi campaigns in Madhya Pradesh’s Betul, Shajapur and Jhabua
November 14th, 11:30 am
Amidst the ongoing election campaigning in Madhya Pradesh, Prime Minister Modi’s rally spree continued as he addressed multiple public meetings in Betul, Shajapur and Jhabua today. PM Modi said, “In the past few days, I have traveled to every corner of the state. The affection and trust towards the BJP are unprecedented. Your enthusiasm and this spirit have decided in Madhya Pradesh – ‘Phir Ek Baar, Bhajpa Sarkar’. The people of Madhya Pradesh will come out of their homes on 17th November to create history.”ಮಾದಕ ವ್ಯಸನದ ವಿರುದ್ಧದ ಅಭಿಯಾನದಲ್ಲಿ ಯುವಕರ ಹೆಚ್ಚುತ್ತಿರುವ ಭಾಗವಹಿಸುವಿಕೆ ತುಂಬಾ ಉತ್ತೇಜನಕಾರಿಯಾಗಿದೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
July 30th, 11:30 am
'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಜುಲೈ ತಿಂಗಳು ಎಂದರೆ ಮುಂಗಾರಿನ ತಿಂಗಳು, ಮಳೆಯ ಋತುಮಾನ. ಕಳೆದ ಕೆಲವು ದಿನಗಳಿಂದ ಪ್ರಕೃತಿ ವಿಕೋಪದಿಂದ ಚಿಂತೆ ಮತ್ತು ಆತಂಕ ಕವಿದಿತ್ತು. ಯಮುನೆ ಸೇರಿದಂತೆ ಹಲವು ನದಿಗಳ ಪ್ರವಾಹದಿಂದಾಗಿ ಹಲವು ಪ್ರದೇಶಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತವೂ ಸಂಭವಿಸಿದೆ. ಇದೇ ಸಮಯದಲ್ಲಿ, ದೇಶದ ಪಶ್ಚಿಮ ಭಾಗ ಮತ್ತು ಕೆಲವು ದಿನಗಳ ಹಿಂದೆ ಗುಜರಾತ್ ನ ಕೆಲ ಪ್ರದೇಶಗಳಿಗೆ ಬಿಪರ್ಜೋಯ್ ಚಂಡಮಾರುತವು ಸಹ ಅಪ್ಪಳಿಸಿತ್ತು. ಆದರೆ ಸ್ನೇಹಿತರೇ, ಈ ವಿಪತ್ತುಗಳ ಮಧ್ಯೆ, ನಾವು ದೇಶವಾಸಿಗಳೆಲ್ಲರೂ ಮತ್ತೊಮ್ಮೆ ಸಾಮೂಹಿಕ ಪ್ರಯತ್ನದ ಶಕ್ತಿಯನ್ನು ತೋರಿಸಿದ್ದೇವೆ. ಸ್ಥಳೀಯ ಜನತೆ, ನಮ್ಮ ಎನ್‌ಡಿಆರ್‌ಎಫ್ ಯೋಧರು, ಸ್ಥಳೀಯ ಆಡಳಿತ ಇಂತಹ ವಿಪತ್ತುಗಳನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದಾರೆ. ಯಾವುದೇ ವಿಪತ್ತನ್ನು ಎದುರಿಸುವಲ್ಲಿ ನಮ್ಮ ಸಾಮರ್ಥ್ಯ ಮತ್ತು ಸಂಪನ್ಮೂಲಗಳು ಬಹು ದೊಡ್ಡ ಪಾತ್ರವನ್ನು ವಹಿಸುತ್ತವೆ - ಆದರೆ ಅದೇ ವೇಳೆ, ನಾವು ತೋರುವ ಸಂವೇದನಶೀಲತೆ ಮತ್ತು ಪರಸ್ಪರರಿಗೆ ಆಸರೆಯಾಗಿ ನಿಲ್ಲುವ ಮನೋಭಾವವು ಮಹತ್ವಪೂರ್ಣವಾಗಿರುತ್ತದೆ. ಸರ್ವಜನ ಹಿತ ಎಂಬ ಭಾವನೆಯೇ ಭಾರತದ ಹೆಗ್ಗುರುತಾಗಿದೆ ಮತ್ತು ಭಾರತದ ಶಕ್ತಿಯಾಗಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಭೇಟಿಯ ಸಂದರ್ಭದಲ್ಲಿ ನೀಡಿದ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
June 01st, 12:00 pm
ಗೌರವಾನ್ವಿತ ಪ್ರಧಾನ ಮಂತ್ರಿ 'ಪ್ರಚಂಡ' ಜೀ, ಎರಡೂ ನಿಯೋಗಗಳ ಸದಸ್ಯರೇ, ಮಾಧ್ಯಮದ ನಮ್ಮ ಸ್ನೇಹಿತರೇ,ನವದೆಹಲಿಯಲ್ಲಿ ಅಧೀನಂ ಅವರೊಂದಿಗಿನ ಸಂವಾದದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
May 27th, 11:31 pm
ಮೊದಲನೆಯದಾಗಿ, ನಾನು ತಲೆಬಾಗಿ ನಮಸ್ಕರಿಸುತ್ತೇನೆ ಮತ್ತು ವಿವಿಧ 'ಆಧೀನಂ'ಗಳೊಂದಿಗೆ ಸಂಬಂಧ ಹೊಂದಿರುವ ನಿಮ್ಮಂತಹ ಎಲ್ಲಾ ಪೂಜ್ಯ ಋಷಿಗಳನ್ನು ಅಭಿನಂದಿಸುತ್ತೇನೆ. ಇಂದು ನನ್ನ ನಿವಾಸದಲ್ಲಿ ನಿಮ್ಮನ್ನು ಕಾಣಲು ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಶಿವನ ಅನುಗ್ರಹದಿಂದಾಗಿ ನಿಮ್ಮಂತಹ ಶಿವನ ಎಲ್ಲಾ ಭಕ್ತರನ್ನು ಒಟ್ಟಿಗೆ ನೋಡುವ ಅವಕಾಶ ನನಗೆ ಸಿಕ್ಕಿದೆ. ನಾಳೆ ನೂತನ ಸಂಸತ್ ಭವನದ ಉದ್ಘಾಟನೆಗೆ ನೀವೆಲ್ಲರೂ ಖುದ್ದಾಗಿ ಆಗಮಿಸಿ ಆಶೀರ್ವಾದ ಮಾಡಲಿದ್ದೀರಿ ಎಂಬುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.ಹೊಸ ಸಂಸತ್ ಭವನದಲ್ಲಿ ರಾಜದಂಡ(ಸೆಂಗೋಲ್) ಪ್ರತಿಷ್ಠಾಪನೆಗೆ ಮುನ್ನ ತಂಜಾವೂರಿನ ಅಧೀನಂರಿಂದ(ಪುರೋಹಿತರು) ಆಶೀರ್ವಾದ ಪಡೆದ ಪ್ರಧಾನಮಂತ್ರಿ
May 27th, 09:14 pm
ನೂತನ ಸಂಸತ್ ಭವನದಲ್ಲಿ ನಾಳೆ ಸೆಂಗೋಲ್ ಪ್ರತಿಷ್ಠಾಪನೆಗೂ ಮುನ್ನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಧೀನರಿಂದ(ಪುರೋಹಿತರು) ಇಂದು ಆಶೀರ್ವಾದ ಪಡೆದರು.