ಮಹಾರಾಷ್ಟ್ರದ ಮುಂಬೈನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 08th, 03:44 pm
ಮಹಾರಾಷ್ಟ್ರ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ ಜಿ, ಜನಪ್ರಿಯ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ರಾಮದಾಸ್ ಅಠಾವಳೆ ಜಿ, ಕೆ.ಆರ್. ನಾಯ್ಡು ಜಿ ಮತ್ತು ಮುರಳೀಧರ್ ಮೊಹೋಲ್ ಜಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಜಿ ಮತ್ತು ಅಜಿತ್ ಪವಾರ್ ಜಿ, ಇಲ್ಲಿರುವ ಸಚಿವರೆ, ಭಾರತದ ಜಪಾನ್ ರಾಯಭಾರಿ ಕೆಯಿಚಿ ಓನೋ ಜಿ, ಇತರೆ ಗಣ್ಯ ಅತಿಥಿಗಳೆ ಮತ್ತು ಸಹೋದರ ಸಹೋದರಿಯರೆ!ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ; ಮುಂಬೈನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಲೋಕಾರ್ಪಣೆ
October 08th, 03:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿಂದು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದರು. ಜತೆಗೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಎಲ್ಲಾ ಗಣ್ಯರನ್ನು ಸ್ವಾಗತಿಸಿದ ಮೋದಿ ಅವರು, ಉಪಸ್ಥಿತರಿದ್ದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಇತ್ತೀಚೆಗೆ ನಡೆದ ವಿಜಯದಶಮಿ ಮತ್ತು ಕೊಜಗರಿ ಪೂರ್ಣಿಮೆಯ ಆಚರಣೆ, ಮುಂಬರುವ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 22nd, 11:36 am
ಅರುಣಾಚಲ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಕೆ.ಟಿ. ಪರ್ನಾಯಕ್ ಜಿ, ರಾಜ್ಯದ ಜನಪ್ರಿಯ ಮತ್ತು ಕ್ರಿಯಾಶೀಲ ಮುಖ್ಯಮಂತ್ರಿ ಪೇಮಾ ಖಂಡು ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಕಿರಣ್ ರಿಜಿಜು, ರಾಜ್ಯ ಸರ್ಕಾರದ ಸಚಿವರು, ನನ್ನ ಸಹ ಸಂಸದರಾದ ನಬಮ್ ರೆಬಿಯಾ ಜಿ ಮತ್ತು ಟ್ಯಾಪಿರ್ ಗಾವೊ ಜಿ, ಎಲ್ಲಾ ಶಾಸಕರು, ಇತರ ಜನಪ್ರತಿನಿಧಿಗಳೆ ಮತ್ತು ಅರುಣಾಚಲ ಪ್ರದೇಶದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅರುಣಾಚಲಪ್ರದೇಶದ ಇಟಾನಗರದಲ್ಲಿ ಸುಮಾರು 5,100 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ
September 22nd, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಸುಮಾರು 5,100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವಶಕ್ತ ಡೊನ್ಯಿ ಪೊಲೊಗೆ ಗೌರವ ಸಲ್ಲಿಸಿ, ಎಲ್ಲರಿಗೂ ಆಶೀರ್ವಾದ ಮಾಡಬೇಕೆಂದು ಪ್ರಾರ್ಥಿಸಿದರು.ಮಿಜೋರಾಂನಲ್ಲಿ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
September 13th, 10:30 am
ಮಿಜೋರಾಂ ರಾಜ್ಯಪಾಲ ಶ್ರೀ ವಿ ಕೆ ಸಿಂಗ್ ಜಿ, ಮುಖ್ಯಮಂತ್ರಿ ಶ್ರೀ ಲಾಲ್ದುಹೋಮ ಜಿ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಶ್ರೀ ಅಶ್ವಿನಿ ವೈಷ್ಣವ್ ಜಿ, ಮಿಜೋರಾಂ ಸರ್ಕಾರದ ಸಚಿವರು, ಸಂಸದರು ಮತ್ತು ಇತರ ಚುನಾಯಿತ ಪ್ರತಿನಿಧಿಗಳು, ಮಿಜೋರಾಂನ ಆತ್ಮೀಯ ಜನತೆಗೆ ನನ್ನ ನಮಸ್ಕಾರಗಳು.ಮಿಜೋರಾಂನ ಐಜ್ವಾಲ್‌ನಲ್ಲಿ 9,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶಂಕುಸ್ಥಾಪನೆ, ಉದ್ಘಾಟನೆ
September 13th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಿಜೋರಾಂನ ಐಜ್ವಾಲ್‌ನಲ್ಲಿಂದು 9,000 ಕೋಟಿ ರೂ.ಗಿಂತ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟನೆ ನೆರವೇರಿಸಿದರು. ಈ ಯೋಜನೆಗಳು ರೈಲ್ವೆ, ರಸ್ತೆ ಮಾರ್ಗಗಳು, ಇಂಧನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡಿವೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ನೀಲಿ ಪರ್ವತಗಳ ಸುಂದರ ಭೂಮಿಯನ್ನು ರಕ್ಷಿಸುತ್ತಿರುವ ಪರಮಾತ್ಮ ಪಥಿಯಾನ್‌ಗೆ ತಲೆಬಾಗಿ ನಮಸ್ಕರಿಸುವೆ. ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದ ಪ್ರತೀಕೂಲ ಹವಾಮಾನದಿಂದಾಗಿ ಐಜ್ವಾಲ್‌ನಲ್ಲಿ ಜನರೊಂದಿಗೆ ಸೇರಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯ ಹೊರತಾಗಿಯೂ, ಈ ಮಾಧ್ಯಮದ ಮೂಲಕವೂ ಜನರ ಪ್ರೀತಿ ಮತ್ತು ವಾತ್ಸಲ್ಯವನ್ನು ಅನುಭವಿಸುತ್ತಿದ್ದೇನೆ ಎಂದು ಪ್ರಧಾನಮಂತ್ರಿ ಹೇಳಿದರು.ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 18th, 02:35 pm
ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಡಾ. ಸಿ.ವಿ. ಆನಂದ ಬೋಸ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಹರ್ದೀಪ್ ಸಿಂಗ್ ಪುರಿ ಜೀ, ಶಾಂತನು ಠಾಕೂರ್ ಜೀ ಮತ್ತು ಸುಕಾಂತ ಮಜುಂದಾರ್ ಜೀ, ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಸಂಸತ್ತಿನ ನನ್ನ ಸಹೋದ್ಯೋಗಿಗಳಾದ ಸೌಮಿಕ್ ಭಟ್ಟಾಚಾರ್ಯ ಜೀ ಮತ್ತು ಜ್ಯೋತಿರ್ಮಯ್ ಸಿಂಗ್ ಮಹತೋ ಜೀ, ಇಲ್ಲಿರುವ ಜನಪ್ರತಿನಿಧಿಗಳೆ, ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನಮಸ್ಕಾರ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ₹5,400 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು
July 18th, 02:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ 5,400 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರ ಸಮರ್ಪಣೆ ಮಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, 'ಉಕ್ಕಿನ ನಗರಿ' ಎಂದೇ ಪ್ರಸಿದ್ಧವಾಗಿರುವ ದುರ್ಗಾಪುರವು ಭಾರತದ ಕಾರ್ಮಿಕ ಶಕ್ತಿಯ ಪ್ರಮುಖ ಕೇಂದ್ರವಾಗಿದೆ ಎಂದು ತಿಳಿಸಿದರು. ಈ ನಗರವು ಭಾರತದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದರು. ಇಂದು ಉದ್ಘಾಟಿಸಲಾದ ಯೋಜನೆಗಳು ಈ ಪ್ರದೇಶದ ಸಂಪರ್ಕವನ್ನು ಹೆಚ್ಚಿಸಲಿವೆ, ಅನಿಲ ಆಧಾರಿತ ಸಾರಿಗೆ ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲಿವೆ. ಅಲ್ಲದೆ, ದುರ್ಗಾಪುರದ 'ಉಕ್ಕಿನ ನಗರಿ' ಎಂಬ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಹೇಳಿದರು. ಈ ಯೋಜನೆಗಳು “ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್” ದೃಷ್ಟಿಕೋನಕ್ಕೆ ಅನುಗುಣವಾಗಿವೆ. ಇವು ಪಶ್ಚಿಮ ಬಂಗಾಳವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಾಯ ಮಾಡುತ್ತವೆ. ಇದರ ಜೊತೆಗೆ, ಈ ಯೋಜನೆಗಳು ಈ ಪ್ರದೇಶದ ಯುವಕರಿಗೆ ಸಾಕಷ್ಟು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಈ ಮಹತ್ವದ ಅಭಿವೃದ್ಧಿ ಯೋಜನೆಗಳಿಗಾಗಿ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.ಹರಿಯಾಣದ ಹಿಸಾರ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡದ ಶಿಲಾನ್ಯಾಸ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
April 14th, 11:00 am
ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಹೇಳುತ್ತೇನೆ, ನೀವೆಲ್ಲರೂ 2 ಬಾರಿ ಹೇಳಿ, ಅಮರ್ ರಹೇ! ಅಮರ್ ರಹೇ! (ಲಾಂಗ್ ಲಿವ್! ಲಾಂಗ್ ಲಿವ್!)ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಸಾರ್ ವಿಮಾನ ನಿಲ್ದಾಣದ 410 ಕೋಟಿ ರೂಪಾಯಿ ಮೌಲ್ಯದ ಹೊಸ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು
April 14th, 10:16 am
ವಿಮಾನ ಪ್ರಯಾಣವನ್ನು ಸುರಕ್ಷಿತ, ಕೈಗೆಟುಕುವ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಹಿಸಾರ್ ನಲ್ಲಿ ಮಹಾರಾಜ ಅಗ್ರಸೇನ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡಕ್ಕೆ 410 ಕೋಟಿ ರೂಪಾಯಿ ಮೌಲ್ಯದ ಶಂಕುಸ್ಥಾಪನೆ ನೆರವೇರಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಹರಿಯಾಣದ ಜನರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು, ಅವರ ಶಕ್ತಿ, ಕ್ರೀಡಾ ಮನೋಭಾವ ಮತ್ತು ಸಹೋದರತ್ವವನ್ನು ರಾಜ್ಯದ ವ್ಯಾಖ್ಯಾನಿಸುವ ಗುಣಲಕ್ಷಣಗಳಾಗಿ ಒಪ್ಪಿಕೊಂಡರು. ಈ ಬಿಡುವಿಲ್ಲದ ಸುಗ್ಗಿಯ ಋತುವಿನಲ್ಲಿ ತಮ್ಮ ಆಶೀರ್ವಾದಕ್ಕಾಗಿ ಅವರು ದೊಡ್ಡ ಸಭಿಕರಿಗೆ ಕೃತಜ್ಞತೆ ಸಲ್ಲಿಸಿದರು.ಸಿಲ್ವಾಸ್ಸಾದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಭಾಷಣ
March 07th, 03:00 pm
ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ಆಡಳಿತಾಧಿಕಾರಿ ಶ್ರೀ ಪ್ರಫುಲ್ಭಾಯಿ ಪಟೇಲ್, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀಮತಿ ಕಲ್ಬೆನ್ ಡೆಲ್ಕರ್, ಎಲ್ಲಾ ಗಣ್ಯರೇ, ಸಹೋದರ ಸಹೋದರಿಯರೇ, ನಮಸ್ಕಾರ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಲ್ವಾಸ್ಸಾ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 2580 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು ಮತ್ತು ಚಾಲನೆ ನೀಡಿದರು
March 07th, 02:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಲ್ವಾಸ್ಸಾ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 2580 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಅವರು ಸಿಲ್ವಾಸ್ಸಾದಲ್ಲಿ ನಮೋ ಆಸ್ಪತ್ರೆಯನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಪ್ರದೇಶದೊಂದಿಗೆ ಸಂಪರ್ಕ ಸಾಧಿಸಲು ಮತ್ತು ತೊಡಗಿಸಿಕೊಳ್ಳಲು ಅವಕಾಶ ನೀಡಿದ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಮರ್ಪಿತ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಜನರೊಂದಿಗೆ ತಾವು ಹೊಂದಿರುವ ಆತ್ಮೀಯತೆ ಮತ್ತು ದೀರ್ಘಕಾಲದ ಸಂಪರ್ಕವನ್ನು ಅವರು ನೆನಪಿಸಿಕೊಂಡರು, ಈ ಪ್ರದೇಶದೊಂದಿಗಿನ ತಮ್ಮ ಬಂಧವು ದಶಕಗಳಷ್ಟು ಹಳೆಯದು ಎಂಬುದನ್ನವರು ಹಂಚಿಕೊಂಡರು. 2014 ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಪ್ರದೇಶವು ಸಾಧಿಸಿದ ಪ್ರಗತಿಯನ್ನು ಅವರು ಎತ್ತಿ ತೋರಿಸಿದರು, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಾಮರ್ಥ್ಯವನ್ನು ಆಧುನಿಕತೆ ಮತ್ತು ಪ್ರಗತಿಯ ಗುರುತಾಗಿ ಪರಿವರ್ತಿಸಿರುವುದನ್ನು ಅವರು ಪ್ರಸ್ತಾಪಿಸಿದರು.ರಾಜಸ್ಥಾನದ ಜೈಪುರದಲ್ಲಿ “ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಸಮ್ಮಿಟ್ 2024”ರ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 09th, 11:00 am
ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಬಗಡೆ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಜಿ ಶರ್ಮಾ, ರಾಜಸ್ಥಾನ ಸರ್ಕಾರದ ಸಚಿವರೆ, ಸಂಸದರೆ, ವಿಧಾನಸಭೆ ಸದಸ್ಯರೆ, ಉದ್ಯಮ ಸಹೋದ್ಯೋಗಿಗಳೆ, ವಿವಿಧ ರಾಯಭಾರಿಗಳೆ, ರಾಯಭಾರಿ ಪ್ರತಿನಿಧಿಗಳೆ, ಇತರೆ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ,ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 09th, 10:34 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಜೈಪುರದ ಜೈಪುರ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ (ಜೆಇಸಿಸಿ) ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ 2024 ಮತ್ತು ರಾಜಸ್ಥಾನ ಗ್ಲೋಬಲ್ ಬಿಸಿನೆಸ್ ಎಕ್ಸ್ ಪೋವನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಜಸ್ಥಾನದ ಯಶಸ್ಸಿನ ಪಯಣದಲ್ಲಿ ಇಂದು ಮತ್ತೊಂದು ವಿಶೇಷ ದಿನವಾಗಿದೆ ಎಂದರು. ಪಿಂಕ್ ಸಿಟಿ ಜೈಪುರದಲ್ಲಿ ನಡೆಯುತ್ತಿರುವ ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ 2024ಕ್ಕೆ ಆಗಮಿಸಿರುವ ಎಲ್ಲ ಉದ್ಯಮ ಮತ್ತು ವಾಣಿಜ್ಯ ಮುಖಂಡರು, ಹೂಡಿಕೆದಾರರು, ಪ್ರತಿನಿಧಿಗಳನ್ನು ಅವರು ಅಭಿನಂದಿಸಿದರು. ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ರಾಜಸ್ಥಾನ ಸರ್ಕಾರವನ್ನೂ ಅಭಿನಂದಿಸಿದರು.ಉಡಾನ್ (UDAN) 8ನೇ ವಾರ್ಷಿಕೋತ್ಸವವನ್ನು ಸ್ಮರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
October 21st, 12:52 pm
ಭಾರತದ ವಾಯುಯಾನ ಕ್ಷೇತ್ರವನ್ನು ಕ್ರಾಂತಿಗೊಳಿಸಿದ ಇಂದು ಉಡಾನ್ (ಉಡೇ ದೇಶ್ ಕೆ ಆಮ್ ನಾಗರಿಕ್) ಯೋಜನೆಯ 8ನೇ ವಾರ್ಷಿಕೋತ್ಸವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದರು.ನವದೆಹಲಿಯಲ್ಲಿ ನಡೆದ 2ನೇ ಏಷ್ಯಾ ಪೆಸಿಫಿಕ್ ನಾಗರಿಕ ವಿಮಾನಯಾನ ಸಚಿವರ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 12th, 04:00 pm
ವಿವಿಧ ದೇಶಗಳಿಂದ ಆಗಮಿಸಿರುವ ಎಲ್ಲ ಗಣ್ಯರಿಗೆ ನಾನು ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಕಳೆದ 2 ದಿನಗಳಿಂದ ನಾಗರೀಕ ವಿಮಾನಯಾನ ವಲಯಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ವಿಷಯಗಳನ್ನು ಚರ್ಚಿಸಿದ್ದೀರಿ. ನಮ್ಮ ಸಾಮೂಹಿಕ ಅಥವಾ ಸಂಘಟಿತ ಬದ್ಧತೆ ಮತ್ತು ಏಷ್ಯಾ ಪೆಸಿಫಿಕ್ ವಲಯದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ನಾವು ಕೆಲವು ಪ್ರಕಾಶಮಾನವಾದ ಮನಸ್ಸುಗಳನ್ನು ಹೊಂದಿದ್ದೇವೆ ಎಂದು ನಾನು ನಂಬುತ್ತೇನೆ. ಈ ಸಂಸ್ಥೆಯು 80 ವರ್ಷಗಳನ್ನು ಪೂರೈಸಿದೆ. ನಮ್ಮ ಸಚಿವರಾದ ಶ್ರೀ ನಾಯ್ಡು ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ, 80,000 ಮರಗಳನ್ನು ನೆಡುವ ಪ್ರಮುಖ ಉಪಕ್ರಮವನ್ನು 'ಏಕ್ ಪೆಡ್ ಮಾ ಕೆ ನಾಮ್'(ಭೂತಾಯಿಗಾಗಿ ಒಂದು ಮರ) ಕೈಗೊಳ್ಳಲಾಗಿದೆ. ಆದಾಗ್ಯೂ, ನಾನು ಇನ್ನೊಂದು ವಿಷಯದತ್ತ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ನಮ್ಮ ದೇಶದಲ್ಲಿ, ಒಬ್ಬ ವ್ಯಕ್ತಿ 80 ವರ್ಷ ತಲುಪಿದಾಗ, ಅದನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ನಮ್ಮ ಪೂರ್ವಜರ ಪ್ರಕಾರ, 80ನೇ ವಯಸ್ಸು ತಲುಪುವುದು ಎಂದರೆ ಒಂದು ಸಾವಿರ ಹುಣ್ಣಿಮೆಗಳನ್ನು ನೋಡುವ ಅವಕಾಶ ಹೊಂದಿರುವುದು ಎಂಬರ್ಥ. ಒಂದರ್ಥದಲ್ಲಿ ನಮ್ಮ ಈ ವಲಯದ ಸಂಸ್ಥೆಯೂ ಒಂದು ಸಾವಿರ ಹುಣ್ಣಿಮೆಗಳನ್ನು ಕಣ್ತುಂಬಿಕೊಂಡು ಹತ್ತಿರದಿಂದ ನೋಡಿದ ಅನುಭವ ಪಡೆದಿದೆ. ಹೀಗಾಗಿ, ಭೂಮಿಯ ಮೇಲಿನ ಈ 80 ವರ್ಷಗಳ ಪ್ರಯಾಣವು ಸ್ಮರಣೀಯ, ಯಶಸ್ವಿ ಮತ್ತು ಶ್ಲಾಘನೀಯ ಪ್ರಯಾಣವಾಗಿದೆ.ಮಹಾರಾಷ್ಟ್ರದ ನಾಂದೇಡ್ ಮತ್ತು ಪರ್ಭಾನಿಯಲ್ಲಿ ಪ್ರಧಾನಿ ಮೋದಿಯವರ ರ್‍ಯಾಲಿಗಳಲ್ಲಿ ಎನ್‌ಡಿಎಗೆ ಅಗಾಧ ಬೆಂಬಲ
April 20th, 10:45 am
ಲೋಕಸಭೆ ಚುನಾವಣೆಗೆ ಮುನ್ನ, ಎನ್‌ಡಿಎಗೆ ಜನರ ಅಗಾಧ ಬೆಂಬಲದ ನಡುವೆ ಮಹಾರಾಷ್ಟ್ರದ ನಾಂದೇಡ್ ಮತ್ತು ಪರ್ಭಾನಿಯಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಗುರು ಗೋಬಿಂದ್ ಸಿಂಗ್ ಜಿ, ನಾನಾಜಿ ದೇಶಮುಖ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಅವರು ನಮನ ಸಲ್ಲಿಸಿದರು.ಡಿಎಂಕೆ 'ಡಿವೈಡ್, ಡಿವೈಡ್ ಮತ್ತು ಡಿವೈಡ್' ಮೇಲೆ ಸ್ಥಾಪಿಸಿದೆ ಮತ್ತು 'ಸನಾತನ'ವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ: ವೆಲ್ಲೂರಿನಲ್ಲಿ ಪ್ರಧಾನಿ ಮೋದಿ
April 10th, 02:50 pm
ಲೋಕಸಭೆ ಚುನಾವಣೆಗೂ ಮುನ್ನ ತಮಿಳುನಾಡಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೆಲ್ಲೂರಿನ ರೋಮಾಂಚಕ ಜನರು ಆತ್ಮೀಯ ಸ್ವಾಗತ ಕೋರಿದರು. ವೆಲ್ಲೂರಿನ ಇತಿಹಾಸ, ಪುರಾಣ, ಶೌರ್ಯಕ್ಕೆ ನಾನು ತಲೆಬಾಗುತ್ತೇನೆ ಎಂದರು. ವೆಲ್ಲೂರು ಬ್ರಿಟಿಷರ ವಿರುದ್ಧ ಒಂದು ಪ್ರಮುಖ ಕ್ರಾಂತಿಯನ್ನು ಸೃಷ್ಟಿಸಿತು ಮತ್ತು ಪ್ರಸ್ತುತ, ಎನ್.ಡಿ.ಎ.ಗೆ ಅದರ ದೃಢವಾದ ಬೆಂಬಲವು 'ಫಿರ್ ಏಕ್ ಬಾರ್ ಮೋದಿ ಸರ್ಕಾರ್'ನ ಮನೋಭಾವವನ್ನು ಪ್ರದರ್ಶಿಸುತ್ತದೆ.ತಮಿಳುನಾಡಿನಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿರುವಾಗ ವೆಲ್ಲೂರು ಮತ್ತು ಮೆಟ್ಟುಪಾಳ್ಯಂನಲ್ಲಿ ಭಾರೀ ಜನ ಬೆಂಬಲ
April 10th, 10:30 am
ಲೋಕಸಭೆ ಚುನಾವಣೆಗೆ ಮುನ್ನ, ತಮಿಳುನಾಡಿನಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೆಲ್ಲೂರು ಮತ್ತು ಮೆಟ್ಟುಪಾಳ್ಯಂನಲ್ಲಿ ಭಾರೀ ಜನ ಬೆಂಬಲದಿಂದ ಆತ್ಮೀಯ ಸ್ವಾಗತ ನೀಡಲಾಯಿತು. ವೆಲ್ಲೂರಿನ ಇತಿಹಾಸ, ಪುರಾಣ, ಶೌರ್ಯಕ್ಕೆ ನಾನು ತಲೆಬಾಗುತ್ತೇನೆ ಎಂದರು. ವೆಲ್ಲೂರು ಬ್ರಿಟಿಷರ ವಿರುದ್ಧ ಒಂದು ಪ್ರಮುಖ ಕ್ರಾಂತಿಯನ್ನು ಸೃಷ್ಟಿಸಿತು ಮತ್ತು ಪ್ರಸ್ತುತ, ಎನ್.ಡಿ.ಎಗೆ ಅದರ ದೃಢವಾದ ಬೆಂಬಲವು 'ಫಿರ್ ಏಕ್ ಬಾರ್ ಮೋದಿ ಸರ್ಕಾರ್'ನ ಮನೋಭಾವವನ್ನು ಪ್ರದರ್ಶಿಸುತ್ತದೆ.Tamil Nadu will shatter the false confidence and pride of the I.N.D.I alliance: PM Modi
March 15th, 11:45 am
On his visit to Tamil Nadu, PM Modi addressed a public rally in Kanyakumari. He said, There is a wave of confidence among the people of Tamil Nadu to reject any mandate that goes against the interests of India. He added, Tamil Nadu will shatter the false confidence and pride of the I.N.D.I. alliance. He said that he had embarked on an ‘Ekta Rally’ in 1991 from Kanyakumari to Kashmir and today I have returned from Kashmir to Kanyakumari.