ಭಾರತೀಯ ವಲಸಿಗರ ಗೌರವಾನ್ವಿತ ಸದಸ್ಯರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
February 08th, 02:48 pm
ಸಚಿವರು, ಸೆನೆಟರ್ಗಳು, ಸಂಸತ್ ಸದಸ್ಯರು ಮತ್ತು ಆಜಾದ್ ಹಿಂದ್ ಫೌಜ್ (ಭಾರತೀಯ ರಾಷ್ಟ್ರೀಯ ಸೇನೆ-ಐ.ಎನ್.ಎ.)ಯ ಹಿರಿಯ ಯೋಧರು ಸೇರಿದಂತೆ ಆಯ್ದ ಭಾರತೀಯ ವಲಸಿಗ ನಾಯಕರೊಂದಿಗೆ ಪ್ರಧಾನಿ ಇಂದು ಸಂವಾದ ನಡೆಸಿದರು. ತುವಾನ್ ಗೋವಿಂದ್ ಸಿಂಗ್ ಡಿಯೋ, ಡಿಜಿಟಲ್ ಸಚಿವ; ದತೋ ಶ್ರೀ ರಮಣನ್ ರಾಮಕೃಷ್ಣನ್, ಮಾನವ ಸಂಪನ್ಮೂಲ ಸಚಿವ; ತುವಾನ್ ಎಂ. ಕುಲಸೆಗರನ್, ಪ್ರಧಾನ ಮಂತ್ರಿಗಳ ಇಲಾಖೆಯ ಉಪ ಮಂತ್ರಿ; ಮತ್ತು ರಾಷ್ಟ್ರೀಯ ಏಕತೆಯ ಉಪ ಸಚಿವ ತುವಾನ್ ಆರ್.ಇವರಲ್ಲಿ ಸೇರಿದ್ದಾರೆ.