ಭೂತಾನ್ ಪ್ರಧಾನಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಸಭೆ

February 18th, 07:40 pm

ಇಂಡಿಯಾ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಭೂತಾನ್ ಪ್ರಧಾನಮಂತ್ರಿ ಮಾನ್ಯ ತ್ಸೆರಿಂಗ್ ಟೋಬ್ಗೆ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.

ಭಾರತದ 77ನೇ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ

January 26th, 11:12 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ 77ನೇ ಗಣರಾಜ್ಯೋತ್ಸವದ ಶುಭಾಶಯ ಮತ್ತು ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದರು.

PM Modi arrives in Bhutan for a two-day state visit

November 11th, 10:42 am

PM Modi arrived in Bhutan a short while ago. His two-day visit seeks to strengthen the special ties of friendship and cooperation between the two countries. The PM was given a warm welcome by Prime Minister of Bhutan Mr. Tshering Tobgay at the airport.

ಭೂತಾನ್ ಗೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ

November 11th, 07:28 am

ನಾನು 2025ರ ನವೆಂಬರ್ 11-12 ರವರೆಗೆ ಭೂತಾನ್ ಸಂಸ್ಥಾನಕ್ಕೆ ಭೇಟಿ ನೀಡಲಿದ್ದೇನೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 2025 ರ ನವೆಂಬರ್ 11-12 ರವರೆಗೆ ಭೂತಾನ್‌ಗೆ ರಾಜ್ಯ ಭೇಟಿ ನೀಡಲಿದ್ದಾರೆ

November 09th, 09:59 am

ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು ಪ್ರಧಾನಿ ಮೋದಿ 2025 ರ ನವೆಂಬರ್ 11-12 ರವರೆಗೆ ಭೂತಾನ್‌ಗೆ ರಾಜ್ಯ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಭೂತಾನ್ ರಾಜ ಹಿಸ್ ಮೆಜೆಸ್ಟಿ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಮತ್ತು ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್‌ಗೇ ಅವರನ್ನು ಭೇಟಿ ಮಾಡಲಿದ್ದಾರೆ. ಭೂತಾನ್‌ನ ನಾಲ್ಕನೇ ದೊರೆ ಹಿಸ್ ಮೆಜೆಸ್ಟಿ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70 ನೇ ಜನ್ಮ ದಿನಾಚರಣೆ ಮತ್ತು ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿಯೂ ಪ್ರಧಾನಿ ಭಾಗವಹಿಸಲಿದ್ದಾರೆ.

PM Modi expresses gratitude to world leaders for birthday wishes

September 17th, 03:03 pm

The Prime Minister Shri Narendra Modi expressed his gratitude to the world leaders for greetings on his 75th birthday, today.

ಪ್ರಧಾನಮಂತ್ರಿ ಮೋದಿ ಅವರಿಂದ ಭೂತಾನ್‌ ಪ್ರಧಾನಮಂತ್ರಿ ಅವರ ಶ್ರೀ ರಾಮ ಜನ್ಮಭೂಮಿ ಮಂದಿರ ಭೇಟಿಗೆ ಸ್ವಾಗತ

September 06th, 08:28 pm

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಭೂತಾನ್ ಪ್ರಧಾನಮಂತ್ರಿ ತೋಬ್ಗೆ ಮತ್ತು ಅವರ ಪತ್ನಿ ಪ್ರಾರ್ಥನೆ ಸಲ್ಲಿಸುವುದನ್ನು ನೋಡಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಭು ಶ್ರೀ ರಾಮನ ಆದರ್ಶಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಬಲವನ್ನು ಮತ್ತು ಸ್ಫೂರ್ತಿಯನ್ನು ನೀಡುತ್ತಲಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು

August 15th, 07:26 pm

79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.

ಭೂತಾನ್ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

April 04th, 01:30 pm

ಇಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ 6 ನೇ ಬಿಮ್ ಸ್ಟೆಕ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂತಾನ್ ಪ್ರಧಾನಮಂತ್ರಿ ತ್ಶೆರಿಂಗ್ ಟೋಬ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಭಾರತ ಮತ್ತು ಭೂತಾನ್ ನಡುವಿನ ಅನನ್ಯ ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ಗಾಢವಾಗಿಸಲು ಬದ್ಧ : ಪ್ರಧಾನಮಂತ್ರಿ

February 21st, 07:16 pm

ನವದೆಹಲಿಯಲ್ಲಿ ನಡೆದಿರುವ ಎಸ್ ಒ ಯು ಎಲ್ ನಾಯಕತ್ವ ಸಮಾವೇಶದಲ್ಲಿ ಭೂತಾನ್‌ ಪ್ರಧಾನಿ ಶೆರಿಂಗ್ ಟೋಬ್ಗೇ ಅವರ ಭಾಷಣವನ್ನು ಶ್ಲಾಘಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತ ಮತ್ತು ಭೂತಾನ್ ನಡುವಿನ ಅನನ್ಯ ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ಆಳವಾಗಿಸಲು ನಾವು ಬದ್ಧ ಎಂದು ಭರವಸೆ ನೀಡಿದ್ದಾರೆ.

ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ

January 26th, 05:56 pm

ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳು ಮತ್ತು ಶುಭಸಂದೇಶಗಳಿಗಾಗಿ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನ್ಯವಾದಗಳನ್ನು ತಿಳಿಸಿದರು.

ಗ್ರೀನ್ ಹೈಡ್ರೋಜನ್ ಫ್ಯೂಲ್ ಸೆಲ್ ಬಸ್, ಸುಸ್ಥಿರತೆಯನ್ನು ಹೆಚ್ಚಿಸಿ ಮುಂಬರುವ ಪೀಳಿಗೆಗೆ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ: ಪ್ರಧಾನಮಂತ್ರಿ

October 21st, 08:08 pm

ಗ್ರೀನ್ ಹೈಡ್ರೋಜನ್ ಫ್ಯೂಯಲ್ ಸೆಲ್ ಬಸ್‌ನಲ್ಲಿ ಭೂತಾನ್ ಪ್ರಧಾನಮಂತ್ರಿ ಶೆರಿಂಗ್ ಟೊಬ್ಗೆ ಅವರ ಸವಾರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಗ್ರೀನ್ ಹೈಡ್ರೋಜನ್ ಫ್ಯೂಲ್ ಸೆಲ್ ಬಸ್ ಸುಸ್ಥಿರತೆಯನ್ನು ಹೆಚ್ಚಿಸುವ ಮತ್ತು ಮುಂಬರುವ ಪೀಳಿಗೆಗೆ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ಭಾರತದ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದರು.

ಭೂತಾನ್ ಭಾರತದ ವಿಶೇಷ ಸ್ನೇಹಿತ, ಆದ್ದರಿಂದ ಮುಂಬರುವ ದಿನಗಳಲ್ಲಿ ನಮ್ಮ ಸಹಕಾರ ಇನ್ನೂ ಉತ್ತಮಗೊಳ್ಳುತ್ತಲೇ ಇರುತ್ತದೆ: ಪ್ರಧಾನಮಂತ್ರಿ

October 21st, 07:27 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭೂತಾನ್ ನ ಪ್ರಧಾನಮಂತ್ರಿ ತ್ಸೆರಿಂಗ್ ಟೊಬ್ಗೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಭೂತಾನ್ ಭಾರತದ ಅತ್ಯಂತ ವಿಶೇಷ ಸ್ನೇಹಿತ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದಗಳು

August 15th, 09:20 pm

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, ಪ್ರಗತಿಯತ್ತ ರಾಷ್ಟ್ರದ ಪ್ರಯಾಣ ಮತ್ತು ಅದರ ಬೆಳೆಯುತ್ತಿರುವ ಜಾಗತಿಕ ಪ್ರಭಾವವನ್ನು ಒತ್ತಿ ಹೇಳಿದರು. ಪ್ರಧಾನಿಯವರು ಅಂತಾರಾಷ್ಟ್ರೀಯ ಸಂಬಂಧಗಳ ಬಲವನ್ನು ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಹಂಚಿಕೊಂಡ ದೃಷ್ಟಿಯನ್ನು ಎತ್ತಿ ತೋರಿಸಿದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ ದೇಶವಾಸಿಗಳಿಗೆ ಕೃತಜ್ಞತೆಗಳು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

June 30th, 11:00 am

'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.

ಪ್ರಧಾನ ಮಂತ್ರಿ ಮತ್ತು ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ವಿವಿಧ ರಾಷ್ಟ್ರಗಳ ನಾಯಕರು

June 08th, 12:24 pm

2024ರ ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭವನ್ನು 2024 ಜೂನ್ 9ರಂದು ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಭಾರತದ ನೆರೆಹೊರೆಯ ರಾಷ್ಟ್ರಗಳು ಮತ್ತು ಹಿಂದೂ ಮಹಾಸಾಗರ ಪ್ರದೇಶದ ದೇಶಗಳ ನಾಯಕರನ್ನು ಗೌರವಾನ್ವಿತ ಅತಿಥಿಗಳಾಗಿ ಆಹ್ವಾನಿಸಲಾಗಿದೆ.

ಗ್ಯಾಲ್ಟ್‌ಸುಯೆನ್ ಜೆಟ್ಸನ್ ಪೆಮಾ ವಾಂಗ್‌ಚುಕ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ

March 23rd, 08:58 am

ಭಾರತ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಭೂತಾನಿನ ಥಿಂಪುವಿನಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಗ್ಯಾಲ್ಟ್‌ಸುಯೆನ್ ಜೆಟ್ಸನ್ ಪೆಮಾ ವಾಂಗ್‌ಚುಕ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭೂತಾನ್‌ ಪ್ರಧಾನಿ ಗೌರವಾನ್ವಿತ ಶೆರಿಂಗ್ ಟೋಬ್‌ಗೆ ಅವರು ಉದ್ಘಾಟಿಸಿದರು.

ಭೂತಾನ್‌ಗೆ ಆಗಮಿಸಿದ ಪ್ರಧಾನಿ

March 22nd, 09:53 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಮಾರ್ಚ್ 22-23ರಂದು ಭೂತಾನ್‌ಗೆ ಅಧಿಕೃತ ಭೇಟಿಯ ಭಾಗವಾಗಿ ಇಂದು ಪಾರೋಗೆ ಆಗಮಿಸಿದರು. ಈ ಭೇಟಿಯು ಭಾರತ ಮತ್ತು ಭೂತಾನ್ ನಡುವಿನ ನಿಯಮಿತವಾದ ಉನ್ನತ ಮಟ್ಟದ ವಿನಿಮಯ ಸಂಪ್ರದಾಯ ಹಾಗೂ ʻನೆರೆಹೊರೆಯವರಿಗೆ ಮೊದಲ ನೀತಿʼಗೆ ಭಾರತ ಸರ್ಕಾರ ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ.

ಮಾರ್ಚ್ 21-22, 2024ರಂದು ಭೂತಾನ್ ದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

March 22nd, 08:06 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 21-22, 2024 ರಂದು ಭೂತಾನ್ ದೇಶಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಭೇಟಿಯು ಭಾರತ ಮತ್ತು ಭೂತಾನ್ ನಡುವೆ ಆಗಾಗ ನಡೆಯುವ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯಕ್ಕೆ ಅನುಗುಣವಾಗಿದೆ ಮತ್ತು ಭಾರತದ ನೆರೆಹೊರೆ ದೇಶಗಳ ಮೊದಲ ನೀತಿಗೆ ಪೂರಕವಾಗಿದೆ.

ಭೂತಾನ್ ನಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಶ್ರೀ ಶೆರಿಂಗ್ ಟೊಬ್ಗೆ ಮತ್ತು ಪಿಡಿಪಿ ಪಕ್ಷಕ್ಕೆ ಪ್ರಧಾನಮಂತ್ರಿಯವರಿಂದ ಅಭಿನಂದನೆ

January 09th, 10:22 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೂತಾನ್‌ ನಲ್ಲಿ ಸಂಸತ್ತಿನ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಶ್ರೀ ಶೆರಿಂಗ್ ಟೊಬ್ಗೆ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯನ್ನು ಅಭಿನಂದಿಸಿದರು.