ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಪಿಂಗಳಿ ವೆಂಕಯ್ಯನವರ 150ನೇ ಜನ್ಮ ದಿನಾಚರಣೆಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ
August 02nd, 08:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಪಿಂಗಳಿ ವೆಂಕಯ್ಯನವರ 150ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.Prime Minister pays tribute to Munshi Premchand on his birth anniversary
July 31st, 01:48 pm
The Prime Minister, Shri Narendra Modi, paid tributes to renowned litterateur Munshi Premchand on his birth anniversary.Prime Minister shares Sanskrit Subhashitam paying tribute to Shaheed Udham Singh
July 31st, 09:12 am
On the Balidan Diwas of Udham Singh, PM Modi paid heartfelt tributes to the great revolutionary martyr and shared a Sanskrit Subhashitam comparing the spirit of valour to the rising sun. He said that the saga of courage and valour embodied in Udham Singh’s life will continue to inspire every generation in the country.ಚಂದ್ರಶೇಖರ್ ಆಜಾದ್ ಅವರ ಜನ್ಮ ಜಯಂತಿಯಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
July 23rd, 08:22 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಚಂದ್ರಶೇಖರ್ ಆಜಾದ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಚಂದ್ರಶೇಖರ್ ಆಜಾದ್ ಅವರ ನಿರ್ಭೀತ ಧೈರ್ಯ ಮತ್ತು ಅಚಲ ದೇಶಭಕ್ತಿಯು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅವರು ತಿಳಿಸಿದರು.ಲೋಕಮಾನ್ಯ ತಿಲಕ್ ಅವರ ಜನ್ಮ ಜಯಂತಿಯಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
July 23rd, 08:12 am
ಲೋಕಮಾನ್ಯ ತಿಲಕ್ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅವರಿಗೆ ಗೌರವ ಸಲ್ಲಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಅತ್ಯುನ್ನತ ವ್ಯಕ್ತಿಯಾಗಿ, ಲೋಕಮಾನ್ಯ ತಿಲಕರು ರಾಷ್ಟ್ರೀಯತೆಯ ಚೈತನ್ಯವನ್ನು ಜಾಗೃತಗೊಳಿಸಿ, ಅವರ ಮುಂದಿನ ಪೀಳಿಗೆಯವರು ಜನರ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವಂತೆ ಪ್ರೇರೇಪಿಸಿದರು ಎಂದು ಹೇಳಿದರು.Prime Minister speaks with the Amir of Qatar
July 16th, 09:35 pm
Prime Minister Shri Narendra Modi had a telephone conversation today with the Amir of the State of Qatar, H.H. Sheikh Tamim bin Hamad Al Thani.ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
July 06th, 12:21 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತದ ಏಕತೆ, ಘನತೆ ಮತ್ತು ಪ್ರಗತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಗೌರವಾನ್ವಿತ ರಾಷ್ಟ್ರ ನಿರ್ಮಾತೃ, ಖ್ಯಾತ ಶಿಕ್ಷಣ ತಜ್ಞ ಮತ್ತು ದೂರದೃಷ್ಟಿಯ ನಾಯಕ ಎಂದು ಸ್ಮರಿಸಿದರು.ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಪ್ರಧಾನಮಂತ್ರಿ ಅವರಿಂದ ಗೌರವ ನಮನ
July 05th, 12:09 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮಾಜಿ ಕೇಂದ್ರ ಸಚಿವರಾದ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸಮಾಜದ ವಂಚಿತ ಮತ್ತು ದುರ್ಬಲ ವರ್ಗಗಳ ಉನ್ನತಿಗೆ ಅವರು ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ, ಅವರು ಎಂದಿಗೂ ಸ್ಮರಣೀಯರು ಎಂದು ಶ್ರೀ ಮೋದಿಯವರು ಹೇಳಿದ್ದಾರೆ.ಸ್ವಾಮಿ ವಿವೇಕಾನಂದ ಅವರಿಗೆ ಅವರ ನಿರ್ವಾಣ ದಿನದಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
July 04th, 01:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸ್ವಾಮಿ ವಿವೇಕಾನಂದರ ನಿರ್ವಾಣ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಆಧ್ಯಾತ್ಮಿಕ ಸಂಪ್ರದಾಯಗಳು ಮತ್ತು ರಾಷ್ಟ್ರೀಯ ಪ್ರಜ್ಞೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಡುವಲ್ಲಿ ಸ್ವಾಮಿ ವಿವೇಕಾನಂದಜಿ ಅವರ ಅಪ್ರತಿಮ ಕೊಡುಗೆ ಪ್ರಸ್ತುತ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಶ್ರೀ ನರೇಂದ್ರ ಮೋದಿಯವರು ಹೇಳಿದರು. ಅವರ ಅಪಾರ ಬುದ್ಧಿವಂತಿಕೆ ಮತ್ತು ಕಾಲಾತೀತ ಆದರ್ಶಗಳು ದೇಶಾದ್ಯಂತ ಲಕ್ಷಾಂತರ ಯುವಜನರಿಗೆ ಮಾರ್ಗದರ್ಶಕ ಶಕ್ತಿಯಾಗಿ ಉಳಿದಿವೆ. ಅವರ ಆಧ್ಯಾತ್ಮಿಕ ಸಂದೇಶವು ವಿಕಸಿತ ಭಾರತವನ್ನು ನಿರ್ಮಿಸುವ ಸಾಮೂಹಿಕ ಸಂಕಲ್ಪದಲ್ಲಿ ರಾಷ್ಟ್ರವನ್ನು ಪ್ರೇರೇಪಿಸಿ, ಚೈತನ್ಯಗೊಳಿಸುತ್ತದೆ ಎಂದು ಶ್ರೀ ಮೋದಿಯವರು ಹೇಳಿದರು.ಹುಲ್ ದಿವಸ್ ಅಂಗವಾಗಿ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
June 30th, 06:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹುಲ್ ದಿವಸ್ ಸಂದರ್ಭದಲ್ಲಿ ವಿದೇಶಿ ಆಡಳಿತದ ಅನ್ಯಾಯದ ವಿರುದ್ಧ ದೃಢವಾಗಿ ನಿಂತ ಸಿಡೋ-ಕನ್ಹು, ಚಾಂದ್-ಭೈರವ್ ಮತ್ತು ಫುಲೋ-ಝಾನೊ ಅವರಂತಹ ಎಲ್ಲಾ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಬುಡಕಟ್ಟು ಘನತೆ ಮತ್ತು ಗೌರವವನ್ನು ರಕ್ಷಿಸಲು ಅವರ ಹೋರಾಟ ಮತ್ತು ತ್ಯಾಗದ ಕಥೆಯು ದೇಶವಾಸಿಗಳ ಹೃದಯದಲ್ಲಿ ಹೊಸ ಶಕ್ತಿಯನ್ನು ತುಂಬುತ್ತಲೇ ಇರುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.ರಾಜರ್ಷಿ ಛತ್ರಪತಿ ಶಾಹು ಜೀ ಮಹಾರಾಜ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
June 26th, 12:46 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜರ್ಷಿ ಛತ್ರಪತಿ ಶಾಹು ಜೀ ಮಹಾರಾಜ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ‘ಅವರು ವಂಚಿತರು, ಶೋಷಿತರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಮಹಾನ್ ಕಾರ್ಯಗಳು ಮತ್ತು ಆದರ್ಶಗಳು ಮುಂದಿನ ಯುಗಗಳವರೆಗೆ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ,’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.ಹಜರತ್ ಇಮಾಮ್ ಹುಸೇನ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
June 26th, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಜರತ್ ಇಮಾಮ್ ಹುಸೇನ್ (ಎ.ಎಸ್.) ಅವರಿಗೆ ಗೌರವ ನಮನ ಸಲ್ಲಿಸಿ, ಸತ್ಯ ಮತ್ತು ನ್ಯಾಯಕ್ಕಾಗಿ ಅವರ ಕಾಲಾತೀತ ತ್ಯಾಗ ಮತ್ತು ಅಚಲ ಬದ್ಧತೆಯನ್ನು ಸ್ಮರಿಸಿದರು. ಇಮಾಮ್ ಹುಸೇನ್ ಅವರ ಜೀವನ ಮತ್ತು ಹುತಾತ್ಮತೆಯು ಧೈರ್ಯ ಮತ್ತು ದೃಢನಿಶ್ಚಯದ ಶಕ್ತಿಯ ಶಾಶ್ವತ ಜ್ಞಾಪನೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪರವಾಗಿ ಬೆಂಬಲ ಸೂಚಿಸಿದವರಿಗೆ ಪ್ರಧಾನಮಂತ್ರಿ ಅವರು ಗೌರವ ಸಲ್ಲಿಸಿದರು
June 25th, 10:53 am
ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ದೃಢವಾಗಿ ಬೆಂಬಲ ಸೂಚಿಸಿ, ರಕ್ಷಿಸಿದ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗೌರವ ಸಲ್ಲಿಸಿದರು. ಇದನ್ನು ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು ಎಂದು ಶ್ರೀ ಮೋದಿಯವರು ಬಣ್ಣಿಸಿದರು. ಬಂಡಾಯವೆದ್ದು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಆದರ್ಶಗಳನ್ನು ಎತ್ತಿಹಿಡಿದ ಅಸಂಖ್ಯಾತ ನಾಗರಿಕರ ಅಸಾಧಾರಣ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಈ ಅವಧಿಯು ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದರು.ಪಹಾಡ್‌ಪುರದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುಟುಂಬದ ಸದಸ್ಯರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಮಂತ್ರಿ
June 20th, 08:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಹಾಡ್‌ಪುರದ ಶಾಲಾ ಆವರಣದಲ್ಲಿರುವ ದಿವಂಗತ ಶ್ರೀ ಶ್ಯಾಮ್ ಚರಣ್ ಮುರ್ಮು, ದಿವಂಗತ ಶ್ರೀ ಲಖನ್ ಮುರ್ಮು ಮತ್ತು ದಿವಂಗತ ಶ್ರೀ ಸಿಪುನ್ ಮುರ್ಮು ಅವರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಿದರು.ಅಜ್ಞಾತ ಸೈನಿಕನ ಸಮಾಧಿ ಸ್ಮಾರಕಕ್ಕೆ ಪ್ರಧಾನಮಂತ್ರಿ ಅವರಿಂದ ಪುಷ್ಪ ನಮನ
June 15th, 06:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಬ್ರಾಟಿಸ್ಲಾವಾದಲ್ಲಿರುವ ಅಜ್ಞಾತ ಸೈನಿಕನ ಸಮಾಧಿ ಸ್ಮಾರಕಕ್ಕೆ ಭೇಟಿ ನೀಡಿ ಸ್ಲೋವಾಕಿಯಾದ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.ಭಾರತದ ಪ್ರಜಾಪ್ರಭುತ್ವದಡಿ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸುತ್ತಿರುವ ಚುನಾಯಿತ ಪ್ರಧಾನಮಂತ್ರಿಯೆಂಬ ಹೆಗ್ಗಳಿಕೆ ಗಳಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜಾಗತಿಕ ನಾಯಕರ ಅಭಿನಂದನೆ
June 09th, 07:32 pm
ಭಾರತದ ಪ್ರಜಾಪ್ರಭುತ್ವದಡಿ ಅತ್ಯಂತ ದೀರ್ಘಾವಧಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಚುನಾಯಿತ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜಾಗತಿಕ ನಾಯಕರು ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿಯವರ ಪರಿವರ್ತನಾತ್ಮಕ ಆಡಳಿತ, ಜಾಗತಿಕ ದಕ್ಷಿಣಕ್ಕಾಗಿ ಅವರ ಪ್ರತಿಪಾದನೆ ಮತ್ತು ಸಮಗ್ರ ಮತ್ತು ಆರ್ಥಿಕವಾಗಿ ಸಕ್ರಿಯ ಭಾರತದ ಅವರ ದೂರದೃಷ್ಟಿಗೆ ಜಗತ್ತಿನಾದ್ಯಂತದ ವಿಶ್ವ ನಾಯಕರು ಗೌರವ ಸಲ್ಲಿಸಿದ್ದಾರೆ.Prime Minister pays tribute to Lokmata Ahilyabai Holkar on her birth anniversary
May 31st, 11:15 am
The Prime Minister, Shri Narendra Modi has paid tributes to Lokmata Ahilyabai Holkar on her birth anniversary.ಎನ್.ಟಿ.ಆರ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
May 28th, 09:56 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎನ್.ಟಿ.ಆರ್. ಗಾರು ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು.ವೀರ ಸಾವರ್ಕರ್ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ
May 28th, 09:52 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀರ ಸಾವರ್ಕರ್ ಅವರನ್ನು ಅವರ ಜಯಂತಿಯಂದು ಸ್ಮರಿಸಿದ್ದಾರೆ ಮತ್ತು ಅವರ ಧೈರ್ಯ, ದೇಶಭಕ್ತಿ ಮತ್ತು ಸಾಮಾಜಿಕ ಸುಧಾರಣೆಗೆ ನೀಡಿದ ಕೊಡುಗೆಗೆ ಗೌರವ ನಮನ ಸಲ್ಲಿಸಿದ್ದಾರೆ.ಮಾಜಿ ಪ್ರಧಾನಮಂತ್ರಿ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
May 21st, 09:02 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದರು.