ಬಿಹಾರದಲ್ಲಿ ಬಿಒಟಿ (ಟೋಲ್) ಮಾದರಿಯಲ್ಲಿ ₹3936.05 ಕೋಟಿ ವೆಚ್ಚದಲ್ಲಿ ಎನ್ ಎಚ್-31 ಮತ್ತು ಎನ್ ಎಚ್-231 ರ ಖಗಾರಿಯಾ-ಪೂರ್ನಿಯಾ ವಿಭಾಗವನ್ನು (143.529 ಕಿ.ಮೀ) ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆ
June 03rd, 03:24 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು, ಬಿಹಾರದಲ್ಲಿ ಬಿಒಟಿ (ಟೋಲ್) ಅಂದರೆ 'ನಿರ್ಮಿಸಿ, ನಿರ್ವಹಿಸಿ ಮತ್ತು ಹಸ್ತಾಂತರಿಸಿ' ಮಾದರಿಯ ಅಡಿಯಲ್ಲಿ ₹3936.05 ಕೋಟಿ ವೆಚ್ಚದಲ್ಲಿ ಎನ್ ಎಚ್-31 ಮತ್ತು ಎನ್ ಎಚ್-231 ರಸ್ತೆಗಳ ಖಗಾರಿಯಾ-ಪೂರ್ನಿಯಾ ವಿಭಾಗವನ್ನು ಚತುಷ್ಪಥವಾಗಿ (143.529 ಕಿ.ಮೀ) ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ.ಭಾರತ-ಇಟಲಿ ಜಂಟಿ ಘೋಷಣೆ
May 20th, 10:28 pm
ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು 19-20 ಮೇ 2026 ರಂದು ಇಟಲಿಗೆ ಅಧಿಕೃತ ಭೇಟಿ ನೀಡಿದರು. ಜಿ7 ಶೃಂಗಸಭೆಗಾಗಿ ಜೂನ್ 2024ರಲ್ಲಿ ಪ್ರಧಾನಮಂತ್ರಿ ಮೋದಿ ಅವರು ಇಟಲಿಗೆ ನೀಡಿದ್ದ ಭೇಟಿ ಮತ್ತು 2023ರಲ್ಲಿ ಜಿ20 ಶೃಂಗಸಭೆಗಾಗಿ ಪ್ರಧಾನಮಂತ್ರಿ ಮೆಲೋನಿ ಅವರು ಭಾರತಕ್ಕೆ ನೀಡಿದ್ದ ಭೇಟಿಯ ಮುಂದುವರಿಕೆಯಾಗಿ ನಡೆದ ಈ ಭೇಟಿಯು, ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಉತ್ತೇಜನವನ್ನು ನೀಡಿತು. ಉಭಯ ನಾಯಕರು ಭಾರತ-ಇಟಲಿ ಸಂಬಂಧಗಳನ್ನು 'ವಿಶೇಷ ಕಾರ್ಯತಂತ್ರದ ಪಾಲುದಾರಿಕೆ'ಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದರು.ಯುರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 18th, 05:00 am
ಮೊದಲನೆಯದಾಗಿ, ಈ ದುಂಡು ಮೇಜಿನ ಸಭೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಸ್ವೀಡನ್ ಪ್ರಧಾನಮಂತ್ರಿ ಉಲ್ಫ್ ಕ್ರಿಸ್ಟರ್ಸನ್ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಈ ಸಭೆ ಗೋಥೆನ್‌ಬರ್ಗ್‌ನಲ್ಲಿ ನಡೆಯುತ್ತಿರುವುದು ನನಗೆ ಸಂತೋಷ ತಂದಿದೆ. ಇದು ನಾವೀನ್ಯತೆಗೆ ಹೆಸರುವಾಸಿಯಾಗಿದೆ ಮಾತ್ರವಲ್ಲದೆ, ಯುರೋಪಿನ ಉತ್ಪಾದನಾ ಮನೋಭಾವದ ಚೈತನ್ಯಶೀಲ ಸಂಕೇತವಾಗಿಯೂ ನಿಂತಿದೆ.ಭಾರತದ ಪ್ರಧಾನಮಂತ್ರಿ ಅವರ ನೆದರ್‌ಲ್ಯಾಂಡ್ಸ್ ಭೇಟಿ ಕುರಿತು ಭಾರತ- ನೆದರ್‌ಲ್ಯಾಂಡ್ಸ್ ಜಂಟಿ ಹೇಳಿಕೆ
May 17th, 03:45 am
ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಶ್ರೀ ರಾಬ್ ಜೆಟ್ಟನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಮೇ 16-17ರಂದು ನೆದರ್‌ಲ್ಯಾಂಡ್ಸ್ ಗೆ ಅಧಿಕೃತ ಭೇಟಿ ನೀಡಿದ್ದರು. ಇದು ಪ್ರಧಾನಮಂತ್ರಿ ಮೋದಿ ಅವರು ನೆದರ್‌ಲ್ಯಾಂಡ್ಸ್ ಗೆ ನೀಡುತ್ತಿರುವ 2ನೇ ಭೇಟಿಯಾಗಿದೆ.ಭಾರತ-ನೆದರ್ ಲ್ಯಾಂಡ್ಸ್ ಕಾರ್ಯತಂತ್ರ ಪಾಲುದಾರಿಕೆಯ ಮಾರ್ಗಸೂಚಿ (2026-2030)
May 17th, 03:15 am
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿ ಶ್ರೀ ರಾಬ್ ಜೆಟ್ಟನ್ ಅವರು 2026 ಮೇ 16ರಂದು ಹೇಗ್‌ನಲ್ಲಿ ನಡೆದ ಸಭೆಯಲ್ಲಿ ಗಮನ ಕೇಂದ್ರೀಕರಿಸಿದ ಸಮಯಬದ್ಧ ಉಪಕ್ರಮಗಳು ಮತ್ತು ಜಂಟಿ ಕ್ರಿಯಾ ಯೋಜನೆಗಳನ್ನು ಅನುಸರಿಸುವ ಮೂಲಕ ಭಾರತ- ನೆದರ್ ಲ್ಯಾಂಡ್ಸ್ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರ ಪಾಲುದಾರಿಕೆಗೆ ಹೆಚ್ಚಿಸಲು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ಭಾರತ ಮತ್ತು ನೆದರ್ ಲ್ಯಾಂಡ್ಸ್ ಮುಂದಿನ 5 ವರ್ಷಗಳ(2026-2030) ಭಾರತ- ನೆದರ್ ಲ್ಯಾಂಡ್ಸ್ ಕಾರ್ಯತಂತ್ರ ಪಾಲುದಾರಿಕೆಯ ಮಾರ್ಗಸೂಚಿ ಅಳವಡಿಸಿಕೊಂಡವು.ಯೂರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ (ಇಆರ್‌ಟಿ) ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 17th, 12:12 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಮೇ 17ರಂದು ಗೋಥೆನ್‌ಬರ್ಗ್‌ನಲ್ಲಿ ನಡೆದ ಯೂರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ(ಇಆರ್‌ಟಿ)ಯನ್ನು ಉದ್ದೇಶಿಸಿ ಮಾತನಾಡಿದರು. ಸ್ವೀಡನ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಉಲ್ಫ್ ಕ್ರಿಸ್ಟರ್ಸನ್, ಐರೋಪ್ಯ ಒಕ್ಕೂಟ ಆಯೋಗದ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್, ಯೂರೋಪಿನ ಹಿರಿಯ ಉದ್ಯಮ ಮುಖಂಡರು ಮತ್ತು ಪ್ರಮುಖ ಯೂರೋಪ್ ಮತ್ತು ಭಾರತೀಯ ಕಂಪನಿಗಳ ಪ್ರತಿನಿಧಿಗಳು ವೋಲ್ವೊ ಸಮೂಹ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದರು.ಹೈದರಾಬಾದ್‌ನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
May 10th, 03:45 pm
ಸೈಬರಾಬಾದ್‌ನ ಶಕ್ತಿ ರಾಷ್ಟ್ರೀಯ ಮತ್ತು ಜಾಗತಿಕವಾಗಿದೆ. ಇದು ತೆಲಂಗಾಣದ ಮತ್ತು ದೇಶದ ತ್ವರಿತ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿದೆ. ಆದ್ದರಿಂದ, ಇಂದು ಸೈಬರಾಬಾದ್‌ನಿಂದ, ತೆಲಂಗಾಣವನ್ನು ರಾಷ್ಟ್ರದ ದೊಡ್ಡ ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ ಮಾಡಲು ಅನೇಕ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಇಂದು ಅಡಿಪಾಯ ಮತ್ತು ಉದ್ಘಾಟನೆಗಳು ನಡೆದ ಯೋಜನೆಗಳು ಇಲ್ಲಿ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ತೆಲಂಗಾಣದ ಸಂಪರ್ಕವು ಸಹ ಬಲಗೊಳ್ಳುತ್ತದೆ. ಈ ಯೋಜನೆಗಳಿಗಾಗಿ ತೆಲಂಗಾಣದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ತೆಲಂಗಾಣದ ಹೈದರಾಬಾದ್‌ನಲ್ಲಿ ಸುಮಾರು ₹9,400 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 10th, 03:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ಹೈದರಾಬಾದ್‌ನಲ್ಲಿ ಸುಮಾರು ₹9,400 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು ಮತ್ತು ದೇಶಕ್ಕೆ ಸಮರ್ಪಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರೀಯ ಮತ್ತು ಜಾಗತಿಕ ಪ್ರಾಮುಖ್ಯತೆಯ ಕೇಂದ್ರವಾಗಿ ಹೈದರಾಬಾದ್‌ನ ಪರಿವರ್ತನಾ ಮಹತ್ವವನ್ನು ಉಲ್ಲೇಖಿಸಿದರು. ತೆಲಂಗಾಣ ಮತ್ತು ಇಡೀ ರಾಷ್ಟ್ರಕ್ಕೆ ತ್ವರಿತ ಅಭಿವೃದ್ಧಿಯನ್ನು ನೀಡುವಲ್ಲಿ ಈ ಪ್ರದೇಶದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ಅವರು, ಇಂದು ಪ್ರಾರಂಭಿಸಲಾದ ಬಹು ದೊಡ್ಡ ಪ್ರಮಾಣದ ಯೋಜನೆಗಳು ತೆಲಂಗಾಣವನ್ನು ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೇಗೆ ರೂಪಿಸುತ್ತವೆ/ಸ್ಥಾಪಿಸುತ್ತವೆ ಎಂಬುದನ್ನು ವಿವರಿಸಿದರು. ಈ ಯೋಜನೆಗಳ ಉದ್ಘಾಟನೆಗಳು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವುದರ ಜೊತೆಗೆ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದ ಪ್ರಧಾನಮಂತ್ರಿ, ಈ ಯೋಜನೆಗಳಿಗಾಗಿ ತೆಲಂಗಾಣದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.2030-31ರ ವೇಳೆಗೆ ಜಾಗತಿಕ ಜವಳಿ ಮಾರುಕಟ್ಟೆಗಳಲ್ಲಿ ಹತ್ತಿಯ ಕ್ಷೇತ್ರದಲ್ಲಿ ಸ್ವಾವಲಂಬನೆ ಹೊಂದಲು ಮತ್ತು ಜಾಗತಿಕ ಸ್ಪರ್ಧಾತ್ಮಕತೆ ವ್ಯವಸ್ಥೆ ರೂಪಿಸುವ ಉದ್ದೇಶಕ್ಕಾಗಿ ರೂ.5659.22 ಕೋಟಿ ವೆಚ್ಚದ "ಹತ್ತಿ ಉತ್ಪಾದಕತೆಗಾಗಿ ಮಿಷನ್" ಅನ್ನು ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದಿಸಿದೆ
May 05th, 06:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಭಾರತದ ಹತ್ತಿ ವಲಯದಲ್ಲಿನ ಅಡಚಣೆಗಳು, ಕ್ಷೀಣಿಸುತ್ತಿರುವ ಬೆಳವಣಿಗೆ ಮತ್ತು ಗುಣಮಟ್ಟದ ಕಾಳಜಿಗಳನ್ನು ಪರಿಹರಿಸಲು ರೂ.5659.22 ಕೋಟಿ ವೆಚ್ಚದಲ್ಲಿ ಹತ್ತಿ ಉತ್ಪಾದಕತೆಗಾಗಿ ಮಿಷನ್ (2026–27 ರಿಂದ 2030–31) ಅನ್ನು ರೂಪಿಸಲು ವಿಶೇಷ ಅನುದಾನವನ್ನು ಅನುಮೋದಿಸಿದೆ.Ganga Expressway to become new lifeline of Uttar Pradesh’s development: PM Modi in Hardoi
April 29th, 11:35 am
PM Modi inaugurated the 594-km access-controlled Ganga Expressway in Hardoi, calling it a new lifeline for Uttar Pradesh’s development that will boost connectivity, support farmers and create industrial opportunities across multiple districts. He said the expressway will also bring the possibilities of the NCR closer and strengthen the state’s role in the journey towards Viksit Bharat.Prime Minister Shri Narendra Modi Inaugurates 594-km long Access-Controlled Greenfield Ganga Expressway in Hardoi, Uttar Pradesh
April 29th, 11:30 am
PM Modi inaugurated the 594-km access-controlled Ganga Expressway in Hardoi, calling it a new lifeline for Uttar Pradesh’s development that will boost connectivity, support farmers and create industrial opportunities across multiple districts. He said the expressway will also bring the possibilities of the NCR closer and strengthen the state’s role in the journey towards Viksit Bharat.TMC came to power by lying in the name of “Maa, Maati, Manush”: PM Modi in Dakshin Dinajpur, West Bengal
April 11th, 11:40 am
PM Modi addressed a massive rally Dakshin Dinajpur, West Bengal. In his speech, he prioritised women’s safety, justice, and empowerment, outlining measures like fast-tracking cases, increasing women police recruitment, and financial support initiatives. He remarked that while the BJP believes in Sabka Saath, Sabka Vikas, it will also ensure that ‘hisaab’ is fulfilled in West Bengal.The BJP’s resolve is a declaration to end TMC’s jungle raj and syndicate rule: PM Modi in Jangipur, West Bengal
April 11th, 11:38 am
PM Modi addressed a massive rally in Jangipur, West Bengal. In his speech, he lauded BJP’s manifesto, outlining six key guarantees focused on ending syndicate raj, ensuring women’s empowerment, boosting education infrastructure, and delivering transparent governance. He also promised employment opportunities and benefits for government employees.Massive public meetings in Purba Bardhaman, Jangipur & Dakshin Dinajpur, West Bengal
April 11th, 11:30 am
Tapping into the growing momentum in West Bengal, PM Modi addressed a massive public gathering in Purba Bardhaman, highlighting BJP’s vision for a fear-free, Viksit Bengal while launching a sharp attack on the TMC government over corruption, lawlessness and appeasement politics.2023-24ನೇ ಸಾಲಿನ ಹತ್ತಿ ಬೆಳೆಯುವ ರೈತರಿಗೆ ನೇರ ಬೆಂಬಲ ನೀಡಲು ಸಿ.ಸಿ.ಐ.ಗೆ 1,718.56 ಕೋಟಿ ರೂ.ಗಳ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ನಿಧಿಯನ್ನು ಸಂಪುಟ ಅನುಮೋದಿಸಿದೆ
March 18th, 04:08 pm
ರೈತರ ಕಲ್ಯಾಣವನ್ನು ಬಲಪಡಿಸುವ ಮತ್ತು ಆತ್ಮನಿರ್ಭರ್ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2023–24ನೇ ಸಾಲಿನ ಹತ್ತಿ ಋತುವಿಗಾಗಿ ಭಾರತೀಯ ಹತ್ತಿ ನಿಗಮಕ್ಕೆ (ಸಿ.ಸಿ.ಐ.) 1,718.56 ಕೋಟಿ ರೂ.ಗಳ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ನಿಧಿಯನ್ನು ಅನುಮೋದಿಸಿದೆ. ಈ ನಿಧಿಯು ದೇಶಾದ್ಯಂತ ಹತ್ತಿ ರೈತರಿಗೆ ನೇರ ಬೆಲೆ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.ಕೇರಳಂನ ಎರ್ನಾಕುಲಂನಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
March 11th, 02:00 pm
ಕೊಚ್ಚಿಗೆ ಬರುವುದು ಯಾವಾಗಲೂ ಅದ್ಭುತ ಅನುಭವ ನೀಡುತ್ತದೆ. ಇಂದು ಈ ರೋಮಾಂಚಕ ಕರಾವಳಿ ನಗರದಿಂದ, ಕೇರಳಂ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸಲು ನನಗೆ ಅವಕಾಶ ಸಿಕ್ಕಿದೆ. ಸ್ವಲ್ಪ ಸಮಯದ ಹಿಂದೆ, ಕೇರಳದ ಅಭಿವೃದ್ಧಿಗೆ ಸಂಬಂಧಿಸಿದ ಸುಮಾರು 11 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಯಿತು ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಎಲ್ಲಾ ಯೋಜನೆಗಳಿಗಾಗಿ ಕೇರಳದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳಂನ ಎರ್ನಾಕುಲಂನಲ್ಲಿ ಸುಮಾರು 11,000 ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು
March 11th, 01:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅತ್ಯಂತ ಚಟುವಟಿಕೆಯಿಂದ ಕೂಡಿದ ಕರಾವಳಿ ನಗರವಾದ ಕೊಚ್ಚಿಗೆ ಭೇಟಿ ನೀಡಿ, ಕೇರಳಂನ ಅಭಿವೃದ್ಧಿಗೆ ವೇಗ ನೀಡುವ ಅನೇಕ ಅಧಿಕ ಪರಿಣಾಮದ ಯೋಜನೆಗಳನ್ನು ಪ್ರಾರಂಭಿಸಿದರು. ಈ ವೇಳೆ, ಹೂಡಿಕೆಯ ಪ್ರಮಾಣವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸುಮಾರು 11,000 ಕೋಟಿ ರೂ.ಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕೊಚ್ಚಿಗೆ ಬರುವುದು ಸದಾ ತಮ್ಮ ಪಾಲಿಗೆ ಅದ್ಭುತ ಅನುಭವ ಎಂದು ಹೇಳಿದರು. ಈ ಯೋಜನೆಗಳಿಗಾಗಿ ನಾನು ಕೇರಳಂ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಎಂದು ಪ್ರಧಾನಮಂತ್ರಿ ಹೇಳಿದರು.ಮಾರ್ಚ್ 11 ರಂದು ಕೇರಳ ಮತ್ತು ತಮಿಳುನಾಡಿಗೆ ಪ್ರಧಾನಮಂತ್ರಿ ಭೇಟಿ
March 09th, 09:54 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮಾರ್ಚ್ 11 ರಂದು ಕೇರಳ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1:30ರ ಸುಮಾರಿಗೆ, ಪ್ರಧಾನ ಮಂತ್ರಿಗಳು ಕೇರಳದ ಎರ್ನಾಕುಲಂನಲ್ಲಿ ಸುಮಾರು ₹10,800 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ನೆರವೇರಿಸುತ್ತಾರೆ ಮತ್ತು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಸಂಜೆ 5:45ರ ಸುಮಾರಿಗೆ, ಪ್ರಧಾನಮಂತ್ರಿಗಳು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸುಮಾರು ₹5,650 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ."ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು" ವಿಷಯ ಕುರಿತ ಬಜೆಟ್ ನಂತರದ ವೆಬಿನಾರ್‌ನಲ್ಲಿ ಪ್ರಧಾನಮಂತ್ರಿ ಅವರ ಭಾಷಣ
March 03rd, 11:30 am
ಉತ್ಪಾದನೆ, ಸರಕು ಸಾಗಣೆ, ನಮ್ಮ ಎಂಎಸ್ಎಂಇಗಳು, ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ನಮ್ಮ ಸಣ್ಣ ಮತ್ತು ದೊಡ್ಡ ನಗರಗಳು - ಅವು ವಿಭಿನ್ನವಾಗಿ ಕಂಡುಬಂದರೂ - ಇವೆಲ್ಲವೂ ಆರ್ಥಿಕತೆಗೆ ಪರಸ್ಪರ ಸಂಬಂಧ ಹೊಂದಿರುವ ಆಧಾರಸ್ತಂಭಗಳಾಗಿವೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಉದಾಹರಣೆಗೆ, ಬಲಿಷ್ಠವಾದ ಉತ್ಪಾದನೆಯು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ಇದು ರಫ್ತುಗಳನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಎಂಎಸ್ಎಂಇಗಳು ಚೇತರಿಕೆ(ನಮ್ಯತೆ) ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತವೆ. ಉತ್ತಮ ಸರಕು ಸಾಗಣೆ ವ್ಯವಸ್ಥೆಯು ವೆಚ್ಚವನ್ನು ಕಡಿಮೆ ಮಾಡುತ್ತದೆ. ಉತ್ತಮವಾಗಿ ಯೋಜಿಸಲಾದ ನಗರಗಳು ಹೂಡಿಕೆ ಮತ್ತು ಪ್ರತಿಭೆ ಎರಡನ್ನೂ ಆಕರ್ಷಿಸುತ್ತವೆ. ಈ ವರ್ಷದ ಬಜೆಟ್ ಈ ಎಲ್ಲಾ ಆಧಾರಸ್ತಂಭಗಳಿಗೆ ಹೆಚ್ಚಿನ ಶಕ್ತಿ ನೀಡಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು" ಎಂಬ ವಿಷಯದ ಕುರಿತಾದ ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು
March 03rd, 11:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಜೆಟ್ ವೆಬಿನಾರ್ ಸರಣಿಯ ಎರಡನೇ ಕಂತನ್ನು ಉದ್ದೇಶಿಸಿ ಮಾತನಾಡಿದರು, ಇದು ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು. ಕಳೆದ ವಾರದ ವೇಗವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮೊದಲ ವೆಬಿನಾರ್ ಅತ್ಯಂತ ಯಶಸ್ವಿಯಾಗಿದೆ ಮತ್ತು ಬಜೆಟ್ ನಿಬಂಧನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಸಲಹೆಗಳನ್ನು ನೀಡಿದೆ ಎಂದು ಹೇಳಿದರು.