ಜೆರುಸಲೇಂನಲ್ಲಿ ಟೆಕ್ ವಸ್ತು ಪ್ರದರ್ಶನಕ್ಕೆ ಪ್ರಧಾನಮಂತ್ರಿ ಭೇಟಿ
February 26th, 10:37 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 25ರಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಹಲವಾರು ಕ್ಷೇತ್ರಗಳಲ್ಲಿ ಪ್ರವರ್ತಕ ಇಸ್ರೇಲಿ ಆವಿಷ್ಕಾರಗಳನ್ನು ಪ್ರದರ್ಶಿಸುವ ಪ್ರದರ್ಶನಕ್ಕೆ ಭೇಟಿ ನೀಡಿದರು. ಪ್ರದರ್ಶನದಲ್ಲಿ ಕೃಷಿ-ತಂತ್ರಜ್ಞಾನ, ಜಲ-ತಂತ್ರಜ್ಞಾನ, ಹವಾಮಾನ-ತಂತ್ರಜ್ಞಾನ, ಆರೋಗ್ಯ-ಜೈವಿಕ ತಂತ್ರಜ್ಞಾನ, ಸ್ಮಾರ್ಟ್ ಮೊಬಿಲಿಟಿ, ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ ಮತ್ತು ಕ್ವಾಂಟಮ್ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿರುವ ಪ್ರಮುಖ ಕಂಪನಿಗಳು ಮತ್ತು ಸಂಶೋಧನಾ ಘಟಕಗಳು ಭಾಗವಹಿಸಿದ್ದವು.ನೆಸ್ಸೆಟ್ ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
February 25th, 08:20 pm
ಈ ಗೌರವಾನ್ವಿತ ಸದನದ ಮುಂದೆ ನಿಂತಿರುವುದು ನನಗೆ ಸಂದ ಗೌರವ ಮತ್ತು ಸೌಭಾಗ್ಯವಾಗಿದೆ. ನಾನು ಭಾರತದ ಪ್ರಧಾನಮಂತ್ರಿಯಾಗಿ ಮಾತ್ರವಲ್ಲದೆ, ಒಂದು ಪ್ರಾಚೀನ ನಾಗರಿಕತೆಯ ಪ್ರತಿನಿಧಿಯಾಗಿ ಮತ್ತೊಂದು ಪ್ರಾಚೀನ ನಾಗರಿಕತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ನಾನು ನಿಮ್ಮ ಬಳಿಗೆ 140 ಕೋಟಿ ಭಾರತೀಯರ ಶುಭಾಶಯಗಳು ಹಾಗೂ ಸ್ನೇಹ, ಗೌರವ ಮತ್ತು ಸಹಭಾಗಿತ್ವದ ಸಂದೇಶವನ್ನು ಹೊತ್ತು ತಂದಿದ್ದೇನೆ.ಇಸ್ರೇಲ್ ಸಂಸತ್ತನ್ನು (ನೆಸ್ಸೆಟ್) ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 25th, 08:00 pm
ಕನೆಸೆಟ್‌ಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ನೆಸ್ಸೆಟ್ ನ ಸ್ಪೀಕರ್ ಘನತೆವೆತ್ತ ಅಮೀರ್ ಓಹಾನಾ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತ ನೀಡಿದರು. ಇಸ್ರೇಲ್ ಪ್ರಧಾನಮಂತ್ರಿ, ಘನತೆವೆತ್ತ ಶ್ರೀ ಬೆಂಜಮಿನ್ ನೆತನ್ಯಾಹು; ವಿರೋಧ ಪಕ್ಷದ ನಾಯಕರಾದ ಘನತೆವೆತ್ತ ಶ್ರೀ ಯಾಯಿರ್ ಲಾಪಿಡ್; ಮತ್ತು ಸ್ಪೀಕರ್ ಒಹಾನಾ ಅವರು ಪ್ರಧಾನಮಂತ್ರಿಯವರ ಭಾಷಣಕ್ಕೂ ಮುನ್ನ ಅಧಿವೇಶನದಲ್ಲಿ ಮಾತನಾಡಿ, ಭಾರತ-ಇಸ್ರೇಲ್ ಸಂಬಂಧಗಳಿಗೆ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ವ್ಯಕ್ತಪಡಿಸಿದರು.ಪ್ರಧಾನ ಮಂತ್ರಿ ಮೋದಿ ಇಸ್ರೇಲ್‌ನ ಟೆಲ್ ಅವೀವ್‌ಗೆ ಆಗಮಿಸಿದರು
February 25th, 04:43 pm
ಪ್ರಧಾನ ಮಂತ್ರಿ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಇಸ್ರೇಲ್‌ಗೆ ಆಗಮಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ, ಪ್ರಧಾನಿಯವರು ಫೆಬ್ರವರಿ 25-26, 2026 ರವರೆಗೆ ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಅವರನ್ನು ಪ್ರಧಾನಿ ನೆತನ್ಯಾಹು ಅವರು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು.ಇಸ್ರೇಲ್ ಭೇಟಿಗೆ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
February 25th, 08:28 am
ನನ್ನ ಆತ್ಮೀಯ ಸ್ನೇಹಿತ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ನಾನು 2026ರ ಫೆಬ್ರವರಿ 25ರಿಂದ 26ರವರೆಗೆ ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡಲಿದ್ದೇನೆ.ಪ್ರಧಾನಿ ಮೋದಿ, ಇಸ್ರೇಲಿ ಪ್ರಧಾನಿ ನೇತನ್ಯಾಹು ಸಹ-ಚೇರ್ ಸಿಇಒಗಳ ವೇದಿಕೆಯ ಮೊದಲ ಸಭೆ
July 06th, 07:30 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಇಸ್ರೇಲಿ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಟೆಲ್ ಅವಿವ್ ನಲ್ಲಿ ಸಿಇಒಗಳ ವೇದಿಕೆಯ ಮೊದಲ ಸಭೆಯನ್ನು ಸಹ ವಹಿಸಿಕೊಂಡರು. ವ್ಯಾಪಾರ ಸಭೆಯಲ್ಲಿ ಅವರ ಭಾಷಣದಲ್ಲಿ ಪ್ರಧಾನಿ ಮೋದಿ, ಭಾರತದಲ್ಲಿ ಇಸ್ರೇಲ್ ಪಾಲುದಾರಿಕೆಯನ್ನು ಹೊಸ ಅಧ್ಯಾಯ ಪ್ರಾರಂಭಿಸಿದ್ದು, ಎರಡೂ ದೇಶಗಳ ಜನರ ಬದುಕಿನ ಸುಧಾರಣೆಗೆ ಅವಕಾಶ ನೀಡುತ್ತಿದೆ ಎಂದು ಹೇಳಿದರು.ಪ್ರಧಾನಿ ಮೋದಿ, ಇಸ್ರೇಲಿ ಪ್ರಧಾನಿ ನೇತನ್ಯಾಹು ಇಂಡಿಯಾ-ಇಸ್ರೇಲ್ ಇನೋವೇಶನ್ ಸೇತುವೆ
July 06th, 07:12 pm
ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಟೆಲ್ ಅವಿವ್ ಟೆಕ್ನಾಲಜಿ ಪ್ರದರ್ಶನಕ್ಕೆ ಹಾಜರಿದ್ದರು. ನಾಯಕರು ಯುವ-ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಉತ್ತಮ ಪ್ರಪಂಚಕ್ಕಾಗಿ ನಾವೀನ್ಯತೆಗಳನ್ನು ಉತ್ತೇಜಿಸಲು ಭಾರತ-ಇಸ್ರೇಲ್ ಇನ್ನೋವೇಶನ್ ಸೇತುವೆಯನ್ನು ಉದ್ಘಾಟಿಸಿದರು.ಡ್ಯಾನ್ಜಿಗರ್ ಹೂ ತೋಟಕ್ಕೆ ಪ್ರಧಾನಿ ಮೋದಿಯವರ ಭೇಟಿ
July 04th, 07:43 pm
ಇಸ್ರೇಲ್ ನ ಟೆಲ್ ಅವೀವ್ ನಲ್ಲಿ ಪ್ರಮುಖ ಸಸ್ಯ ವಿಧಗಳ ಸಂಶೋಧನೆ ಹಾಗೂ ಅಭಿವೃದ್ಧಿ ಸೌಲಭ್ಯ ಕುರಿತ ಡ್ಯಾನ್ಜಿಗರ್ ಹೂ ತೋಟದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಭೇಟಿ ನೀಡಿದರುನಾವು ಇಸ್ರೇಲ್ ಅನ್ನು ಪ್ರಮುಖ ಅಭಿವೃದ್ಧಿ ಪಾಲುದಾರ ಎಂದು ಪರಿಗಣಿಸುತ್ತೇವೆ: ಪ್ರಧಾನಿ ಮೋದಿ
July 04th, 07:26 pm
ಪ್ರಧಾನಿ ಮೋದಿ, ಟೆಲ್ ಅವಿವ್ ವಿಮಾನನಿಲ್ದಾಣದಲ್ಲಿ ಸಂಕ್ಷಿಪ್ತ ಭಾಷಣ ಮಾಡಿದರು, ಸ್ವಾಗತಕ್ಕಾಗಿ ಪ್ರಧಾನಿ ನೇತನ್ಯಾಹು ಅವರಿಗೆ ಧನ್ಯವಾದ ನೀಡಿದರು . ಅವರು ಇಸ್ರೇಲ್ ನ ಭೂಮಿಗೆ ಭೇಟಿ ಕೈಗೊಳ್ಳಲು ಮೊದಲ ಭಾರತೀಯ ಪ್ರಧಾನಿಯಾಗಲು ಅವರ ಗೌರವ ಎಂದು ಹೇಳಿದರು. ಭಾರತವು ಹಳೆಯ ನಾಗರೀಕತೆ ಹೊಂದಿರುವ ಯುವ ರಾಷ್ಟ್ರ. ನಮ್ಮ ಚಾಲನಾ ಶಕ್ತಿಯಾಗಿರುವ ಪ್ರತಿಭಾವಂತ ಮತ್ತು ನುರಿತ ಯುವಕರನ್ನು ನಾವು ಹೊಂದಿದ್ದೇವೆ. ನಾವು ಇಸ್ರೇಲ್ ಅನ್ನು ಪ್ರಮುಖ ಅಭಿವೃದ್ಧಿ ಪಾಲುದಾರ ಎಂದು ಪರಿಗಣಿಸುತ್ತೇವೆ.ನೀವು ಮಹಾನ್ ವಿಶ್ವ ನಾಯಕ : ಪ್ರಧಾನಿ ಮೋದಿಯವರಿಗೆ ಪ್ರಧಾನಿ ನೇತನ್ಯಾಹು
July 04th, 07:17 pm
ಪ್ರಧಾನಿ ಮೋದಿಯವರನ್ನು ಇಸ್ರೇಲ್ ಗೆ ಸ್ವಾಗತಿಸುತ್ತಾ, ಪ್ರಧಾನಿ ನೇತನ್ಯಾಹು, ಇಸ್ರೇಲ್ ಗೆ ಸ್ವಾಗತ ... ಆಪ್ಕಾ ಸ್ವಗತ್ ಹೈ ಮೇರೆ ದೋಸ್ತ್ . ನಾವು ನಿಮಗಾಗಿ ದೀರ್ಘಕಾಲದಿಂದ ಕಾಯುತ್ತಿದ್ದೇವೆ, . ನಾವು ಭಾರತವನ್ನು ಪ್ರೀತಿಸುತ್ತೇವೆ ಎಂದು ಅವರು ಹೇಳಿದರು. ವಿಶ್ವಸಂಸ್ಥೆಯ ನಮ್ಮ ಮೊದಲ ಸಭೆಯಲ್ಲಿ ನೀವು ಹೇಳಿದ್ದನ್ನು ನಾನು ನೆನಪಿಸುತ್ತೇನೆ- ಇದು ಭಾರತ ಮತ್ತು ಇಸ್ರೇಲ್ ಸಂಬಂಧಗಳಿಗೆ ಬಂದಾಗ ಆಕಾಶವು ಮಿತಿಯಾಗಿದೆ. ಆದರೆ ಈಗ, ಪ್ರಧಾನಿ, ನನ್ನನ್ನು ಸೇರಿಸಲು ಅವಕಾಶ ಮಾಡಿಕೊಡು- ನಾವು ಬಾಹ್ಯಾಕಾಶದಲ್ಲಿ ಸಹ ಸಹಕಾರ ನೀಡುತ್ತೇವೆ.ಐತಿಹಾಸಿಕ ಭೇಟಿಗೆ ಐತಿಹಾಸಿಕ ಸ್ವಾಗತ
July 04th, 06:45 pm
ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ನ ಟೆಲ್ ಅವಿವ್ ನಲ್ಲಿ ಸ್ವಾಗತಿಸಿದರು. ಇದು ಭಾರತದ ಮೊದಲ ಪ್ರಧಾನ ಮಂತ್ರಿಯವರ ಐತಿಹಾಸಿಕ ಭೇಟಿಯ ಆರಂಭವಾಗಿದೆ.