Assam has picked up a new momentum of development: PM Modi at the foundation stone laying of Ammonia-Urea Fertilizer Project in Namrup
December 21st, 04:25 pm
In a major boost to the agricultural sector, PM Modi laid the foundation stone of Ammonia-Urea Fertilizer Project at Namrup in Assam. He highlighted the start of new industries, the creation of modern infrastructure, semiconductor manufacturing, new opportunities in agriculture, the advancement of tea gardens and their workers as well as the growing potential of tourism in Assam. The PM reiterated his commitment to preserving Assam’s identity and culture.PM Modi lays foundation stone of Ammonia-Urea Fertilizer Project of Assam Valley Fertilizer and Chemical Company Limited at Namrup, Assam
December 21st, 12:00 pm
In a major boost to the agricultural sector, PM Modi laid the foundation stone of Ammonia-Urea Fertilizer Project at Namrup in Assam. He highlighted the start of new industries, the creation of modern infrastructure, semiconductor manufacturing, new opportunities in agriculture, the advancement of tea gardens and their workers as well as the growing potential of tourism in Assam. The PM reiterated his commitment to preserving Assam’s identity and culture.ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜುಮೊಯಿರ್ ಬಿನಂದಿನಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ
February 24th, 06:40 pm
ಅಸ್ಸಾಂ ರಾಜ್ಯಪಾಲ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜೀ, ಕ್ರಿಯಾತ್ಮಕ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜೀ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳಾದ ಡಾ. ಎಸ್. ಜೈಶಂಕರ್ ಮತ್ತು ಸರ್ಬಾನಂದ ಸೋನೊವಾಲ್, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಜೀ, ಇತರ ಸಚಿವರು, ಸಂಸತ್ ಸದಸ್ಯರು, ವಿಧಾನಸಭೆಯ ಸದಸ್ಯರು, ಎಲ್ಲಾ ಕಲಾವಿದ ಸ್ನೇಹಿತರು ಮತ್ತು ಅಸ್ಸಾಂನ ನನ್ನ ಸಹೋದರಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜುಮೋಯಿರ್ ಬಿನಂದಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು
February 24th, 06:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಮೆಗಾ ಜುಮೋಯಿರ್ ಕಾರ್ಯಕ್ರಮವಾದ ಜುಮೋಯಿರ್ ಬಿನಂದಿನಿ 2025 ರಲ್ಲಿ ಭಾಗವಹಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಚೈತನ್ಯ, ಉತ್ಸಾಹ ಮತ್ತು ಉಲ್ಲಾಸದಿಂದ ತುಂಬಿದ ವಾತಾವರಣವಿತ್ತು ಎಂದು ಹೇಳಿದರು. ಝುಮೋಯಿರ್ ನ ಎಲ್ಲಾ ಕಲಾವಿದರು ಮಾಡಿದ ಅದ್ಭುತವಾದ ಸಿದ್ಧತೆಗಳು ಚಹಾ ತೋಟಗಳ ಪರಿಮಳ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು. ಜನರು ಝುಮರ್ ಮತ್ತು ಚಹಾ ತೋಟ ಸಂಸ್ಕೃತಿಯೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವಂತೆಯೇ, ತಾವೂ ಕೂಡ ಇದೇ ರೀತಿಯ ಸಂಪರ್ಕವನ್ನು ಹೊಂದಿರುವುದಾಗಿ ಅವರು ಹೇಳಿದರು. ಇಂದು ಜುಮೋಯಿರ್ ನೃತ್ಯವನ್ನು ಪ್ರದರ್ಶಿಸುವ ಇಷ್ಟು ದೊಡ್ಡ ಸಂಖ್ಯೆಯ ಕಲಾವಿದರು ದಾಖಲೆಯನ್ನು ಸ್ಥಾಪಿಸುತ್ತಾರೆ ಎಂದು ಅವರು ಹೇಳಿದರು. 2023 ರಲ್ಲಿ 11,000 ಕಲಾವಿದರು ಬಿಹು ನೃತ್ಯ ಪ್ರದರ್ಶಿಸಿದ ದಾಖಲೆಯನ್ನು ಮಾಡಿದ ಸಂದರ್ಭದಲ್ಲಿ ತಮ್ಮ ಅಸ್ಸಾಂ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಅದು ತಮಗೆ ಮರೆಯಲಾಗದ ನೆನಪು ಎಂದು ಹೇಳಿದರು ಮತ್ತು ಇದೇ ರೀತಿಯ ರೋಮಾಂಚಕಾರಿ ಪ್ರದರ್ಶನವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದರು. ಅದ್ಭುತ ಸಾಂಸ್ಕೃತಿಕ ಪ್ರದರ್ಶನವನ್ನು ಆಯೋಜಿಸಿದ್ದಕ್ಕಾಗಿ ಅವರು ಅಸ್ಸಾಂ ಸರ್ಕಾರ ಮತ್ತು ಅದರ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಚಹಾ ಸಮುದಾಯ ಮತ್ತು ಬುಡಕಟ್ಟು ಜನರು ಆಚರಣೆಯಲ್ಲಿ ಭಾಗವಹಿಸುತ್ತಿರುವ ಇಂದು ಅಸ್ಸಾಂಗೆ ಹೆಮ್ಮೆಯ ದಿನವಾಗಿದೆ ಎಂದು ಅವರು ಹೇಳಿದರು. ಈ ವಿಶೇಷ ದಿನದಂದು ಎಲ್ಲರಿಗೂ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಕುರಿತು ಪ್ರಧಾನಮಂತ್ರಿಯವರ ಉತ್ತರ
February 04th, 07:00 pm
ಗೌರವಾನ್ವಿತ ರಾಷ್ಟ್ರಪತಿಯವರ ಭಾಷಣಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಇಲ್ಲಿ ಹಾಜರಿದ್ದೇನೆ. ನಿನ್ನೆ ಮತ್ತು ಇಂದು ತಡರಾತ್ರಿಯವರೆಗೆ, ಎಲ್ಲಾ ಗೌರವಾನ್ವಿತ ಸಂಸದರು ಈ ಕೃತಜ್ಞತಾ ನಿರ್ಣಯವನ್ನು ತಮ್ಮ ಅಭಿಪ್ರಾಯಗಳಿಂದ ಶ್ರೀಮಂತಗೊಳಿಸಿದರು. ಅನೇಕ ಗೌರವಾನ್ವಿತ ಅನುಭವಿ ಸಂಸದರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ಸಂಪ್ರದಾಯದಂತೆ, ಅಗತ್ಯವಿದ್ದಲ್ಲಿ ಪ್ರಶಂಸೆ ವ್ಯಕ್ತವಾಯಿತು, ಸಮಸ್ಯೆಗಳಿದ್ದಲ್ಲಿ ಕೆಲವು ಟೀಕೆಗಳೂ ಕೇಳಿಬಂದವು. ಇದು ಸಹಜ. ಸಭಾಧ್ಯಕ್ಷರೇ, ದೇಶದ ಜನತೆ ನನಗೆ ಹದಿನಾಲ್ಕು ಬಾರಿ ಈ ಸ್ಥಾನದಲ್ಲಿ ಕುಳಿತು ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವ ಅವಕಾಶವನ್ನು ಕರುಣಿಸಿರುವುದು ನನ್ನ ಸೌಭಾಗ್ಯ. ಆದ್ದರಿಂದ, ಇಂದು ನಾನು ಜನತೆಗೆ ಅತ್ಯಂತ ಗೌರವದಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೆಯೇ, ಈ ಚರ್ಚೆಯಲ್ಲಿ ಪಾಲ್ಗೊಂಡು ಅದನ್ನು ಶ್ರೀಮಂತಗೊಳಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು.ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉತ್ತರ
February 04th, 06:55 pm
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನಿನ್ನೆ ಮತ್ತು ಇಂದು ಚರ್ಚೆಗಳಲ್ಲಿ ಭಾಗವಹಿಸಿದ ಎಲ್ಲಾ ಗೌರವಾನ್ವಿತ ಸಂಸದರ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಪ್ರಜಾಪ್ರಭುತ್ವದ ಸಂಪ್ರದಾಯವು ಅಗತ್ಯವಿರುವಲ್ಲಿ ಹೊಗಳಿಕೆ ಮತ್ತು ಅಗತ್ಯವಿರುವಲ್ಲಿ ಕೆಲವು ನಕಾರಾತ್ಮಕ ಟೀಕೆಗಳನ್ನು ಒಳಗೊಂಡಿರುತ್ತದೆ, ಇದು ಸಹಜ ಎಂದು ಹೇಳಿದರು. ರಾಷ್ಟ್ರಪತಿಯವರ ಭಾಷಣಕ್ಕೆ 14 ನೇ ಬಾರಿಗೆ ಕೃತಜ್ಞತೆ ಸಲ್ಲಿಸುವ ಅವಕಾಶವನ್ನು ಜನರಿಂದ ಪಡೆಯುವ ಮಹಾನ್ ಸವಲತ್ತು ದೊರೆತಿದೆ ಎಂದು ಹೇಳಿದ ಅವರು, ನಾಗರಿಕರಿಗೆ ತಮ್ಮ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಿದರು ಮತ್ತು ಪ್ರಸ್ತಾಪವನ್ನು ತಮ್ಮ ಆಲೋಚನೆಗಳೊಂದಿಗೆ ಶ್ರೀಮಂತಗೊಳಿಸಿದ್ದಕ್ಕಾಗಿ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಭಾರತವು ತನ್ನ ಪರಂಪರೆಯ ಆಧಾರದ ಮೇಲೆ ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ದೃಢವಾದ ವ್ಯವಸ್ಥೆಯನ್ನು ಹೊಂದಿದೆ: ಪ್ರಧಾನಿ ಮೋದಿ
August 03rd, 09:35 am
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ, ಕೃಷಿಯಲ್ಲಿ ಜಾಗತಿಕ ಸಹಕಾರದ ಅಗತ್ಯತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಮಹತ್ವವನ್ನು ಒತ್ತಿ ಹೇಳಿದರು. ಡಿಜಿಟಲ್ ಕೃಷಿ, ನೀರಿನ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆಯಲ್ಲಿ ಭಾರತದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು.ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ
August 03rd, 09:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ(ಎನ್ಎಎಸ್ಸಿ)ದ ಸಂಕೀರ್ಣದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನ(ಐಸಿಎಇ) ಉದ್ಘಾಟಿಸಿದರು. ಈ ವರ್ಷದ ಸಮ್ಮೇಳನದ ನಿರೂಪಣಾ ವಿಷಯ(ಥೀಮ್) ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ ಪರಿವರ್ತನೆ ಎಂಬುದಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅವನತಿ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಸಂಘರ್ಷಗಳಂತಹ ಜಾಗತಿಕ ಸವಾಲುಗಳ ಮುಖಾಂತರ ಸುಸ್ಥಿರ ಕೃಷಿಯ ಅಗತ್ಯವನ್ನು ನಿಭಾಯಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ. ಸಮ್ಮೇಳನದಲ್ಲಿ ಸುಮಾರು 75 ದೇಶಗಳ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಿದ್ದರು.ಅಸ್ಸಾಂನ ಚಹಾ ತೋಟದ ಗಾರ್ಡನ್ ಸಮುದಾಯವನ್ನು ಅವರ ಕಠಿಣ ಪರಿಶ್ರಮಕ್ಕಾಗಿ ಶ್ಲಾಘಿಸಿದ ಪ್ರಧಾನಮಂತ್ರಿ
March 09th, 02:15 pm
ಅಸ್ಸಾಂ ಚಹಾವು ಪ್ರಪಂಚದಾದ್ಯಂತ ತನ್ನ ಮಾರುಕಟ್ಟೆ ಕ್ಷೇತ್ರ ಹಿಡಿದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದರು. ಅಸ್ಸಾಂನ ಚಹಾ ತೋಟದ ಗಾರ್ಡನ್ ಸಮುದಾಯವನ್ನು ಅವರ ಕಠಿಣ ಪರಿಶ್ರಮಕ್ಕಾಗಿ ಪ್ರಧಾನಮಂತ್ರಿಯವರು ಶ್ಲಾಘಿಸಿದರು