ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಾಡಿದ ಪ್ರಮುಖ ಘೋಷಣೆಗಳು

August 15th, 10:32 am

ತಮ್ಮ 12ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯನ್ನು ಭಾರತದ ಪ್ರಗತಿಯ ಮುಂದಿನ ಅಧ್ಯಾಯದ ಉಡಾವಣಾ ವೇದಿಕೆಯನ್ನಾಗಿ ಪರಿವರ್ತಿಸಿದರು. 79ನೇ ಸ್ವಾತಂತ್ರ್ಯ ದಿನದಂದು, ಅವರು ಹಲವಾರು ದಿಟ್ಟ ಘೋಷಣೆಗಳನ್ನು ಮಾಡಿದರು, ಅವುಗಳು ರಾಷ್ಟ್ರವು ಭವಿಷ್ಯದತ್ತ ಹೆಜ್ಜೆ ಹಾಕುವುದು ಮಾತ್ರವಲ್ಲ, ಜಿಗಿಯಲು ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತವೆ.

ಹೂಡಿಕೆ ಕುರಿತಾದ ಉನ್ನತ ಮಟ್ಟದ ಕಾರ್ಯಪಡೆಯ ಚೊಚ್ಚಲ ಸಭೆ ನಡೆಸಿದ ಭಾರತ-ಸೌದಿ ಅರೇಬಿಯಾ

July 28th, 11:37 pm

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಗೌರವಾನ್ವಿತ ಡಾ.ಪಿ.ಕೆ. ಮಿಶ್ರಾ ಮತ್ತು ಸೌದಿ ಇಂಧನ ಸಚಿವ ರಾಜಕುಮಾರ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಸಹ ಅಧ್ಯಕ್ಷತೆಯಲ್ಲಿ ಹೂಡಿಕೆಗಳ ಕುರಿತ ಭಾರತ-ಸೌದಿ ಅರೇಬಿಯಾ ಉನ್ನತ ಮಟ್ಟದ ಕಾರ್ಯಪಡೆಯ ಮೊದಲ ಸಭೆಯು ಇಂದು ವರ್ಚುವಲ್ ಮಾದರಿಯಲ್ಲಿ ನಡೆಯಿತು.

ನವೆಂಬರ್ 18 ರಂದು ನಡೆಯಲಿರುವ 3ನೇ ' ನೋ ಮನಿ ಫಾರ್ ಟೆರರ್ ' (ಭಯೋತ್ಪಾದನೆಗೆ ಹಣವಿಲ್ಲ) ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತ ಸಚಿವರ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ.

November 17th, 02:59 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 18ರಂದು ಬೆಳಗ್ಗೆ 9.30ಕ್ಕೆ ನವದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್ ನಲ್ಲಿ ನಡೆಯಲಿರುವ ಮೂರನೇ ' ನೋ ಮನಿ ಫಾರ್ ಟೆರರ್ ' (ಎನ್ ಎಂಎಫ್ ಟಿ) ಭಯೋತ್ಪಾದನಾ ನಿಗ್ರಹ ಹಣಕಾಸು ಕುರಿತ ಸಚಿವರ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಉದ್ಯೋಗದ ಡೇಟಾದ ಮೇಲೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ

May 09th, 07:58 pm

ಉದ್ಯೋಗದಲ್ಲಿ ಸಕಾಲಿಕ ಮತ್ತು ವಿಶ್ವಾಸಾರ್ಹ ಮಾಹಿತಿಯ ಪ್ರಾಮುಖ್ಯತೆಯ ದೃಷ್ಟಿಯಿಂದ, ಪ್ರಧಾನ ಮಂತ್ರಿ ಕಚೇರಿ ಮತ್ತು ಸಂಬಂಧಪಟ್ಟ ಸಚಿವಾಲಯಗಳು ದೇಶದ ಅಂಕಿಅಂಶಗಳ ವಾಸ್ತುಶೈಲಿಯಲ್ಲಿ ಸುದೀರ್ಘ ಅಂತರವನ್ನು ತುಂಬಲು ಪರಿಹಾರ ನೀಡುವಂತೆ ನಿರ್ದೇಶಿಸಿದ್ದಾರೆ.