ತಮಿಳುನಾಡಿನ ಶಿವಗಂಗಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ
December 01st, 10:23 am
ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಶ್ರೀ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ.“ಸಾಂಸ್ಕೃತಿಕ ರಥದಲ್ಲಿ GenZ ಕೆಟಿಎಸ್ 4.0ನತ್ತ” ಪಯಣ ತಮಿಳುನಾಡಿನಿಂದ ಕಾಶಿಗೆ ಯುವ ಜನತೆಯ ಪಯಣ ‘ಸಾಂಸ್ಕೃತಿಕ ಆನಂದದ ಪ್ರಯಾಣ’ವಾಗಿ ಮಾರ್ಪಾಡು
November 30th, 06:56 pm
ಡಿಸೆಂಬರ್ 2ರಿಂದ ಆರಂಭವಾಗಲಿರುವ ಕಾಶಿ ತಮಿಳು ಸಂಗಮ 4.0ಗೆ ಜೆಡ್ ಪೀಳಿಗೆ GenZಯಲ್ಲಿ ಅತ್ಯುತ್ಸಾಹದ ಅಲೆ ಕಂಡುಬರುತ್ತಿದೆ. ಈ ಕಾರ್ಯಕ್ರಮ ಕಾಶಿ ಮತ್ತು ತಮಿಳುನಾಡಿನ ನಡುವಿನ ಪ್ರಾಚೀನ ಸಾಂಸ್ಕೃತಿಕ ಮತ್ತು ಭಾಷಾ ಬಾಂಧವ್ಯಗಳನ್ನು ಬೆಸೆಯಲು ಯುವಜನತೆಯಲ್ಲಿ ಸಕ್ರಿಯ ಶಕ್ತಿತುಂಬಿ ಅವರನ್ನು ಬೆಸೆಯುವ ಉದ್ದೇಶ ಹೊಂದಿದೆ.ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
November 25th, 10:20 am
ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯಂತ ಪೂಜ್ಯ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಜಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷರಾದ ಪೂಜ್ಯ ಮಹಂತ್ ನೃತ್ಯ ಗೋಪಾಲ್ ದಾಸ್ ಜಿ, ಇಲ್ಲಿಗೆ ಆಗಮಿಸಿರುವ ದೇಶದ ಕೋಟ್ಯಂತರ ಭಕ್ತಾದಿಗಳೆ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವ ಇಡೀ ಜಗತ್ತು, ಮಹಿಳೆಯರು ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ಮಂದಿರ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಭಾಷಣ ಮಾಡಿದರು
November 25th, 10:13 am
ದೇಶದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಒಂದು ಮಹತ್ವದ ಸಂದರ್ಭವನ್ನು ಗುರುತಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಪವಿತ್ರ ಶ್ರೀ ರಾಮ ಜನ್ಮಭೂಮಿ ದೇವಾಲಯದ ಶಿಖರದಲ್ಲಿ ಕೇಸರಿ ಧ್ವಜವನ್ನು ವಿಧ್ಯುಕ್ತವಾಗಿ ಹಾರಿಸಿದರು. ಧ್ವಜಾರೋಹಣ ಉತ್ಸವವು ದೇವಾಲಯದ ನಿರ್ಮಾಣದ ಪೂರ್ಣಗೊಳಿಸುವಿಕೆಯನ್ನು ಸಂಕೇತಿಸುತ್ತದೆ ಮತ್ತು ಸಾಂಸ್ಕೃತಿಕ ಆಚರಣೆ ಮತ್ತು ರಾಷ್ಟ್ರೀಯ ಏಕತೆಯ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ , ಇಂದು ಅಯೋಧ್ಯಾ ನಗರವು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಮತ್ತೊಂದು ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಇಂದು ಇಡೀ ಭಾರತ ಮತ್ತು ಇಡೀ ಜಗತ್ತು ಭಗವಾನ್ ಶ್ರೀ ರಾಮನ ಚೈತನ್ಯದಿಂದ ತುಂಬಿದೆ ಎಂದು ಶ್ರೀ ಮೋದಿ ತಿಳಿಸಿದರು, ಪ್ರತಿಯೊಬ್ಬ ರಾಮ ಭಕ್ತನ ಹೃದಯದಲ್ಲಿ ಅನನ್ಯ ತೃಪ್ತಿ, ಅಪರಿಮಿತ ಕೃತಜ್ಞತೆ ಮತ್ತು ಅಪಾರವಾದ ಅಲೌಕಿಕ ಸಂತೋಷವಿದೆ ಎಂದು ಎತ್ತಿ ತೋರಿಸಿದರು. ಶತಮಾನಗಳಷ್ಟು ಹಳೆಯದಾದ ಗಾಯಗಳು ವಾಸಿಯಾಗುತ್ತಿವೆ, ಶತಮಾನಗಳ ನೋವು ಕೊನೆಗೊಳ್ಳುತ್ತಿದೆ ಮತ್ತು ಶತಮಾನಗಳ ಸಂಕಲ್ಪ ಇಂದು ಈಡೇರುತ್ತಿದೆ ಎಂದು ಅವರು ಹೇಳಿದರು. ಇದು 500 ವರ್ಷಗಳ ಕಾಲ ಬೆಂಕಿ ಹೊತ್ತಿಕೊಂಡ ಯಜ್ಞದ ಪರಾಕಾಷ್ಠೆಯನ್ನು ಸೂಚಿಸುತ್ತದೆ ಎಂದು ಅವರು ಘೋಷಿಸಿದರು, ನಂಬಿಕೆಯಲ್ಲಿ ಎಂದಿಗೂ ಅಲುಗಾಡದ, ಒಂದು ಕ್ಷಣವೂ ನಂಬಿಕೆಯಲ್ಲಿ ಮುರಿಯದ ಯಜ್ಞ. ಇಂದು ಭಗವಾನ್ ಶ್ರೀ ರಾಮನ ಗರ್ಭಗುಡಿಯ ಅನಂತ ಶಕ್ತಿ ಮತ್ತು ಶ್ರೀ ರಾಮನ ಕುಟುಂಬದ ದೈವಿಕ ವೈಭವವನ್ನು ಈ ಧರ್ಮ ಧ್ವಜದ ರೂಪದಲ್ಲಿ ಅತ್ಯಂತ ದೈವಿಕ ಮತ್ತು ಭವ್ಯವಾದ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ-2025ರಲ್ಲಿ ರೈತರೊಂದಿಗೆ ಪ್ರಧಾನಮಂತ್ರಿ ಸಂವಾದ
November 20th, 12:30 pm
ಇವೆಲ್ಲವೂ ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು, ಇದು ತ್ಯಾಜ್ಯ... ಸರ್, ಇದು ಬಾಳೆಹಣ್ಣಿನ ತ್ಯಾಜ್ಯದಿಂದ ಬಂದಿದೆ; ಇದು ಬಾಳೆಹಣ್ಣಿನ ಮೌಲ್ಯವರ್ಧನೆಯಿಂದ ಬಂದಿದೆ, ಸರ್ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025ರಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
November 20th, 12:16 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ‘ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025’ರಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ರೈತರನ್ನು ಅಭಿನಂದಿಸಿದ ಶ್ರೀ ಮೋದಿ ಅವರು, ಅಲ್ಲಿನ ಬಾಳೆ ಬೆಳೆಯನ್ನು ವೀಕ್ಷಿಸಿದರು ಮತ್ತು ಬಾಳೆ ತ್ಯಾಜ್ಯದ ಉಪಯೋಗದ ಬಗ್ಗೆ ವಿಚಾರಿಸಿದರು. ಅಲ್ಲಿ ಪ್ರದರ್ಶಿಸಲಾದ ಎಲ್ಲಾ ವಸ್ತುಗಳು ಬಾಳೆ ತ್ಯಾಜ್ಯದಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು ಎಂದು ರೈತರು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ತಮ್ಮ ಉತ್ಪನ್ನಗಳು ಭಾರತದಾದ್ಯಂತ ಆನ್ ಲೈನ್ ನಲ್ಲಿ ಮಾರಾಟವಾಗುತ್ತವೆಯೇ ಎಂದು ಪ್ರಧಾನಮಂತ್ರಿಯವರು ಕೇಳಿದರು, ಅದಕ್ಕೆ ರೈತರು ಹೌದು ಎಂದು ಉತ್ತರಿಸಿದರು. ರೈತ ಉತ್ಪಾದಕ ಸಂಸ್ಥೆಗಳು (FPOs) ಹಾಗೂ ವೈಯಕ್ತಿಕ ಕೊಡುಗೆದಾರರ ಮೂಲಕ ತಾವು ಇಡೀ ತಮಿಳುನಾಡನ್ನು ಪ್ರತಿನಿಧಿಸುತ್ತಿರುವುದಾಗಿ ರೈತರು ತಿಳಿಸಿದರು. ತಮ್ಮ ಉತ್ಪನ್ನಗಳು ಆನ್ ಲೈನ್ನಲ್ಲಿ ಮಾರಾಟವಾಗುವುದರ ಜೊತೆಗೆ ರಫ್ತು ಕೂಡ ಆಗುತ್ತವೆ ಮತ್ತು ಭಾರತದಾದ್ಯಂತ ಸ್ಥಳೀಯ ಮಾರುಕಟ್ಟೆಗಳು ಹಾಗೂ ಸೂಪರ್ಮಾರ್ಕೆಟ್ ಗಳಲ್ಲಿ ಲಭ್ಯವಿವೆ ಎಂದು ಅವರು ಮಾಹಿತಿ ನೀಡಿದರು. ಪ್ರತಿ FPO ನಲ್ಲಿ ಎಷ್ಟು ಜನರು ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ಶ್ರೀ ಮೋದಿ ಕೇಳಿದರು, ಇದಕ್ಕೆ ಉತ್ತರಿಸಿದ ರೈತರು, ಸುಮಾರು ಒಂದು ಸಾವಿರ ಜನರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಇದನ್ನು ಆಲಿಸಿದ ಪ್ರಧಾನಮಂತ್ರಿಯವರು, ಬಾಳೆ ಕೃಷಿಯನ್ನು ಒಂದೇ ಪ್ರದೇಶದಲ್ಲಿ ಪ್ರತ್ಯೇಕವಾಗಿ ಮಾಡಲಾಗುತ್ತಿದೆಯೇ ಅಥವಾ ಇತರ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ರೈತರು, ವಿವಿಧ ಪ್ರದೇಶಗಳು ವಿಭಿನ್ನ ಮತ್ತು ವಿಶೇಷ ಉತ್ಪನ್ನಗಳಲ್ಲಿ ಪರಿಣತಿ ಹೊಂದಿವೆ ಎಂದು ತಿಳಿಸಿದರು ಮತ್ತು ತಮ್ಮಲ್ಲಿ ಜಿಐ (GI - ಭೌಗೋಳಿಕ ಸೂಚಕ) ಟ್ಯಾಗ್ ಹೊಂದಿರುವ ಉತ್ಪನ್ನಗಳು ಸಹ ಇವೆ ಎಂದು ಹೇಳಿದರು.ನವೆಂಬರ್ 19 ರಂದು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
November 18th, 11:38 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 19 ರಂದು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.ತಿರುಪ್ಪೂರು ಕುಮರನ್ ಮತ್ತು ಸುಬ್ರಮಣಿಯ ಶಿವ ಅವರ ಸಂಸ್ಮರಣಾರ್ಥ ದಿನದಂದು ಪ್ರಧಾನಮಂತ್ರಿ ಗೌರವ ನಮನ
October 04th, 04:51 pm
ಭಾರತ ಸ್ವಾತಂತ್ರ್ಯ ಹೋರಾಟದ ಇಬ್ಬರು ಅತ್ಯುನ್ನತ ವ್ಯಕ್ತಿಗಳಾದ ತಿರುಪ್ಪೂರು ಕುಮರನ್ ಮತ್ತು ಸುಬ್ರಮಣಿಯ ಶಿವ ಅವರ ಸಂಸ್ಮರಣಾರ್ಥ ದಿನದ ಅಂಗವಾಗಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.ತಮಿಳುನಾಡಿನ ಚೆನ್ನೈನಲ್ಲಿ ಕಟ್ಟಡ ಕುಸಿತದಿಂದಾಗಿ ಉಂಟಾದ ಜೀವ ಹಾನಿಗೆ ಪ್ರಧಾನಮಂತ್ರಿ ಸಂತಾಪ
September 30th, 09:48 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ಚೆನ್ನೈನಲ್ಲಿ ಕಟ್ಟಡವೊಂದು ಕುಸಿದು ಬಿದ್ದು ಸಂಭವಿಸಿದ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಅವಘಡದಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಶ್ರೀ ಮೋದಿ ಅವರು ಹಾರೈಸಿದ್ದಾರೆ.ಪ್ರಧಾನಮಂತ್ರಿಗಳಿಂದ ತಮಿಳುನಾಡಿನ ಕರೂರಿನಲ್ಲಿ ರಾಜಕೀಯ ರ‍್ಯಾಲಿಯ ಸಂದರ್ಭದಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆಯ ಸಂತ್ರಸ್ತರಿಗೆ ಪಿಎಂಎನ್‌ಆರ್‌ಎಫ್‌ನಿಂದ ಪರಿಹಾರ ಘೋಷಣೆ
September 28th, 12:03 pm
ತಮಿಳುನಾಡಿನ ಕರೂರಿನಲ್ಲಿ ರಾಜಕೀಯ ರ‍್ಯಾಲಿಯ ಸಂದರ್ಭದಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆಯಲ್ಲಿ ಮೃತಪಟ್ಟವರ ವಾರಸುದಾರರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (PMNRF) ನಿಂದ ತಲಾ 2 ಲಕ್ಷ ರೂ.ಗಳ ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಘೋಷಿಸಿದ್ದಾರೆ.ಸ್ವದೇಶಿ ಉತ್ಪನ್ನಗಳು, ವೋಕಲ್ ಫಾರ್ ಲೋಕಲ್ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿಯವರ ಹಬ್ಬದ ಕರೆ.
September 28th, 11:00 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಪ್ರಧಾನಿ ಮೋದಿ ಭಗತ್ ಸಿಂಗ್ ಮತ್ತು ಲತಾ ಮಂಗೇಶ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು. ಭಾರತೀಯ ಸಂಸ್ಕೃತಿ, ಮಹಿಳಾ ಸಬಲೀಕರಣ, ದೇಶಾದ್ಯಂತ ಆಚರಿಸಲಾಗುವ ವಿವಿಧ ಹಬ್ಬಗಳು, ಆರ್ಎಸ್ಎಸ್ನ 100 ವರ್ಷಗಳ ಪಯಣ, ಸ್ವಚ್ಛತೆ ಮತ್ತು ಖಾದಿ ಮಾರಾಟದಲ್ಲಿನ ಏರಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆಯೂ ಅವರು ಮಾತನಾಡಿದರು. ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮಾರ್ಗವು ಸ್ವದೇಶಿತ್ವವನ್ನು ಅಳವಡಿಸಿಕೊಳ್ಳುವುದರಲ್ಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ
September 27th, 10:07 pm
ತಮಿಳುನಾಡಿನ ಕರೂರಿನಲ್ಲಿ ಇಂದು ನಡೆದ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆಯಲ್ಲಿ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತ ಕುಟುಂಬಗಳೊಂದಿಗೆ ರಾಷ್ಟ್ರವು ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಒತ್ತಿ ಹೇಳಿರುವ ಶ್ರೀ ಮೋದಿ ಅವರು, ಅಗತ್ಯ ಬೆಂಬಲ ಮತ್ತು ಸಹಾಯ ಖಾತರಿಪಡಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.ನಾಗಾಲ್ಯಾಂಡ್ ರಾಜ್ಯಪಾಲರಾದ ಶ್ರೀ ಲಾ. ಗಣೇಶನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
August 15th, 08:28 pm
ನಾಗಾಲ್ಯಾಂಡ್ ರಾಜ್ಯಪಾಲರಾದ ತಿರು ಲಾ. ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನಿಷ್ಠಾವಂತ ರಾಷ್ಟ್ರೀಯವಾದಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿರು ಲಾ. ಗಣೇಶನ್ ಅವರನ್ನು ಶ್ಲಾಘಿಸಿದರು.ತಮಿಳುನಾಡಿನಲ್ಲಿ 2157 ಕೋಟಿ ರೂ.ಗಳ ವೆಚ್ಚದಲ್ಲಿ ಹೈಬ್ರಿಡ್ ವರ್ಷಾಶನ ಮಾದರಿಯಲ್ಲಿ 4 ಪಥದ ಮರಕ್ಕನಂ-ಪುದುಚೇರಿ (ಎನ್.ಎಚ್-332ಎ) ನಿರ್ಮಾಣಕ್ಕೆ ಸಂಪುಟದ ಅನುಮೋದನೆ
August 08th, 04:08 pm
ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ತಮಿಳುನಾಡಿನಲ್ಲಿ ನಾಲ್ಕು ಪಥದ ಮರಕ್ಕನಂ - ಪುದುಚೇರಿ (46 ಕಿ.ಮೀ) ನಿರ್ಮಾಣಕ್ಕೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಹೈಬ್ರಿಡ್ ವರ್ಷಾಶನ ಮೋಡ್ (ಎಚ್.ಎ.ಎಂ) ನಲ್ಲಿ ಒಟ್ಟು 2,157 ಕೋಟಿ ರೂ.ಗಳ ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.ತಮಿಳುನಾಡಿನ ರೈತ ಸಮೂಹದಿಂದ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಭೇಟಿ
August 07th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಇಂದು ತಮಿಳುನಾಡಿನ ರೈತರ ಗುಂಪನ್ನು ಭೇಟಿಯಾದರು. ಇಳುವರಿಯನ್ನು ಹೆಚ್ಚಿಸುವ ಜೊತೆಗೆ ಸುಸ್ಥಿರತೆಯನ್ನು ವೃದ್ಧಿಸಲು ನಾವಿನ್ಯತೆ ಮತ್ತು ಹೊಸ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳಲು ಅವರ ಆದ್ಯತೆ ಹಾಗೂ ಅವರ ಅನುಭವಗಳನ್ನು ಆಲಿಸಿ ಶ್ರೀ ಮೋದಿ ಅವರು ವಿಸ್ಮಯಗೊಂಡರು.ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
August 02nd, 11:30 am
ನಮಃ ಪಾರ್ವತಿ ಪತಯೇ, ಹರ್ ಹರ್ ಮಹಾದೇವ, ಪವಿತ್ರ ಶ್ರಾವಣ ಮಾಸದ ಇಂದು, ಕಾಶಿಯ ನನ್ನ ಕುಟುಂಬ ಸದಸ್ಯರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿದೆ. ಕಾಶಿಯ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ನಾನು ನಮಸ್ಕರಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 2,200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು
August 02nd, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 2,200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾ್ಥಾಪನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ, ಶ್ರಾವಣ ಮಾಸದ ಶುಭಸಂದರ್ಭದಲ್ಲಿ ವಾರಾಣಸಿಯ ಜನರನ್ನು ಭೇಟಿಯಾಗುತ್ತಿರುವ ಬಗ್ಗೆ ತಮ್ಮ ಹೃತ್ಪೂರ್ವಕ ಭಾವನೆಗಳನ್ನು ವ್ಯಕ್ತಪಡಿಸಿದರು. ವಾರಾಣಸಿಯ ಜನರೊಂದಿಗಿನ ತಮ್ಮ ಗಾಢವಾದ ಭಾವನಾತ್ಮಕ ಬಾಂಧವ್ಯವನ್ನು ಎತ್ತಿ ತೋರಿಸಿದ ಶ್ರೀ ಮೋದಿ, ನಗರದ ಪ್ರತಿಯೊಂದು ಕುಟುಂಬದ ಸದಸ್ಯರಿಗೂ ಗೌರವಯುತ ಶುಭಾಶಯಗಳನ್ನು ತಿಳಿಸಿದರು. ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ದೇಶಾದ್ಯಂತದ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕ ಸಾಧಿಸಿದ್ದಕ್ಕೆ ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು.ತಮಿಳುನಾಡಿನ ಗಂಗೈಕೊಂಡ ಚೋಳಪುರಂ ದೇವಸ್ಥಾನದಲ್ಲಿ ಆದಿ ತಿರುವಥಿರೈ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 27th, 12:30 pm
ಅತ್ಯಂತ ಗೌರವಾನ್ವಿತ ಆಧೀನಂ ಮಠಾಧೀಶಗನ್ (ಮುಖ್ಯಸ್ಥರೆ), ಚಿನ್ಮಯ ಮಿಷನ್ ಸ್ವಾಮಿಗಳೆ, ತಮಿಳುನಾಡು ರಾಜ್ಯಪಾಲರಾದ ಆರ್ ಎನ್ ರವಿ ಜಿ, ನನ್ನ ಸಂಪುಟ ಸಹೋದ್ಯೋಗಿ ಡಾ. ಎಲ್ ಮುರುಗನ್ ಜಿ, ಸ್ಥಳೀಯ ಸಂಸದರಾದ ತಿರುಮ-ವಲವನ್ ಜಿ, ವೇದಿಕೆಯಲ್ಲಿರುವ ತಮಿಳುನಾಡು ಸಚಿವರೆ, ಸಂಸತ್ತಿನ ನನ್ನ ಸಹೋದ್ಯೋಗಿ ಶ್ರೀ ಇಳಯರಾಜ ಜಿ, ಇಲ್ಲಿ ನೆರೆದಿರುವ ಎಲ್ಲಾ ಭಕ್ತರೆ, ವಿದ್ಯಾರ್ಥಿಗಳೆ, ಸಹೋದರ ಸಹೋದರಿಯರೆ! ನಮಃ ಶಿವಾಯಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ಗಂಗೈಕೊಂಡ ಚೋಳಪುರಂನಲ್ಲಿ ʻಆದಿ ತಿರುವಥಿರೈʼ ಉತ್ಸವ ಉದ್ದೇಶಿಸಿ ಮಾತನಾಡಿದರು
July 27th, 12:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಗಂಗೈಕೊಂಡ ಚೋಳಪುರಂ ದೇವಸ್ಥಾನದಲ್ಲಿ `ಆದಿ ತಿರುವಥಿರೈ' ಉತ್ಸವ ಉದ್ದೇಶಿಸಿ ಮಾತನಾಡಿದರು. ಸರ್ವಶಕ್ತನಾದ ಶಿವನಿಗೆ ನಮಿಸುತ್ತಾ, ರಾಜ ರಾಜ ಚೋಳನ ಪವಿತ್ರ ಭೂಮಿಯಲ್ಲಿ ದೈವಿಕ ಶಿವದರ್ಶನದ ಮೂಲಕ ಅನುಭವಿಸಿದ ಆಳವಾದ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಮಾತನಾಡಿದರು. ಶ್ರೀ ಇಳಯರಾಜಾ ಅವರ ಸಂಗೀತ ಮತ್ತು ಒಥುವರರ ಪವಿತ್ರ ಪಠಣದೊಂದಿಗೆ, ಆಧ್ಯಾತ್ಮಿಕ ವಾತಾವರಣವು ಆತ್ಮವನ್ನು ಆಳವಾಗಿ ಪ್ರಭಾವಿಸಿದೆ ಎಂದು ಶ್ರೀ ಮೋದಿ ಹೇಳಿದರು.ತಮಿಳುನಾಡಿನ ತೂತುಕುಡಿಯಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 26th, 08:16 pm
ತಮಿಳುನಾಡು ರಾಜ್ಯಪಾಲರಾದ ಗೌರವಾನ್ವಿತ ಆರ್.ಎನ್. ರವಿ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಕಿಂಜರಾಪು ರಾಮಮೋಹನ್ ನಾಯ್ಡು ಜಿ, ಡಾ. ಎಲ್. ಮುರುಗನ್ ಜಿ, ತಮಿಳುನಾಡು ಸಚಿವರಾದ ತಂಗಂ ತೆನ್ನರಸು ಜಿ, ಡಾ. ಟಿ.ಆರ್.ಬಿ. ರಾಜಾ ಜಿ, ಪಿ. ಗೀತಾ ಜೀವನ್ ಜಿ, ಅನಿತಾ ಆರ್. ರಾಧಾಕೃಷ್ಣನ್ ಜಿ, ಸಂಸದೆ ಕನಿಮೊಳಿ ಜಿ, ತಮಿಳುನಾಡು ಬಿಜೆಪಿ ಅಧ್ಯಕ್ಷರು ಮತ್ತು ನಮ್ಮ ಶಾಸಕರಾದ ನಾಯನಾರ್ ನಾಗೇಂದ್ರನ್ ಜಿ, ಮತ್ತು ತಮಿಳುನಾಡಿನ ನನ್ನ ಸಹೋದರ ಸಹೋದರಿಯರೆ!