ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಓಮನ್ ಭೇಟಿಯ ಸಂದರ್ಭದಲ್ಲಿ ಭಾರತ - ಓಮನ್ ಜಂಟಿ ಹೇಳಿಕೆ

December 18th, 05:28 pm

ಓಮನ್ ಸುಲ್ತಾನ್ ಗೌರವಾನ್ವಿತ ಹೈತಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಡಿಸೆಂಬರ್ 17-18 ರಂದು ಓಮನ್ ಸುಲ್ತಾನೇಟ್ ಗೆ ಅಧಿಕೃತ ಭೇಟಿ ನೀಡಿದರು. ಪ್ರಧಾನಮಂತ್ರಿಯವರನ್ನು ವಿಮಾನ ನಿಲ್ದಾಣದಲ್ಲಿ ರಕ್ಷಣಾ ವ್ಯವಹಾರಗಳ ಉಪಪ್ರಧಾನಮಂತ್ರಿ ಗೌರವಾನ್ವಿತ ಸೈಯದ್ ಶಿಹಾಬ್ ಬಿನ್ ತಾರಿಕ್ ಅವರು ಬರಮಾಡಿಕೊಂಡರು ಮತ್ತು ಅವರಿಗೆ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಡಿಸೆಂಬರ್ 18, 2025 ರಂದು ಅಲ್ ಬರಕಾ ಅರಮನೆಯಲ್ಲಿ ಗೌರವಾನ್ವಿತ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಪ್ರಧಾನಮಂತ್ರಿಯವರನ್ನು ಬರಮಾಡಿಕೊಂಡರು.

ಪ್ರಧಾನಮಂತ್ರಿ ಅವರು ಓಮನ್ ನ ದೊರೆ ಸುಲ್ತಾನ್ ಅವರನ್ನು ಭೇಟಿ ಮಾಡಿದರು

December 18th, 05:22 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಸ್ಕತ್ ನಲ್ಲಿ ಮಹಾರಾಜ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ರಾಜಭವನಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ದೊರೆ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು ಔಪಚಾರಿಕ ಸ್ವಾಗತ ನೀಡಿದರು.

ಪ್ರಧಾನಮಂತ್ರಿ ಅವರಿಗೆ 'ಆರ್ಡರ್ ಆಫ್ ಒಮಾನ್' ಗೌರವ ಪ್ರದಾನ

December 18th, 05:22 pm

ಭಾರತ-ಓಮನ್ ಸಂಬಂಧಗಳು ಮತ್ತು ದೂರದೃಷ್ಟಿಯ ನಾಯಕತ್ವ ಮೂಲಕ ಉಭಯ ದೇಶಗಳ ಅಭಿವೃದ್ಧಿಯ ನಿಟ್ಟಿನಲ್ಲಿ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಓಮನ್‌ ನ ದೊರೆ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ 'ಆರ್ಡರ್ ಆಫ್ ಓಮನ್' ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್‌ಗೆ ಪ್ರಧಾನಮಂತ್ರಿ ಭೇಟಿ

December 11th, 08:43 pm

ಗೌರವಾನ್ವಿತ ದೊರೆ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025 ಡಿಸೆಂಬರ್ 15ರಿಂದ 16ರ ವರೆಗೆ ಜೋರ್ಡಾನ್‌ನ ಹ್ಯಾಶೆಮೈಟ್ ಸಾಮ್ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪ್ರಧಾನ ಮಂತ್ರಿ ಅವರು ಗೌರವಾನ್ವಿತ ದೊರೆ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರನ್ನು ಭೇಟಿ ಮಾಡಿ ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಲಿದ್ದಾರೆ, ಪ್ರಾದೇಶಿಕ ವಿಷಯಗಳ ಕುರಿತು ದೃಷ್ಟಿಕೋನಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವಾರ್ಷಿಕೋತ್ಸವವನ್ನು ಗುರುತಿಸುವ ಈ ಭೇಟಿಯು, ಭಾರತ-ಜೋರ್ಡಾನ್ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು, ಪರಸ್ಪರ ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಸಹಯೋಗದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಪ್ರಾದೇಶಿಕ ಶಾಂತಿ, ಸಮೃದ್ಧಿ, ಭದ್ರತೆ ಮತ್ತು ಸ್ಥಿರತೆ ಉತ್ತೇಜಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಅವಕಾಶ ಒದಗಿಸುತ್ತದೆ.

ಭಾರತದ ಪ್ರಧಾನಮಂತ್ರಿಯಾಗಿ ಮೂರನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಶ್ರೀ ನರೇಂದ್ರ ಮೋದಿ ಅವರಿಗೆ ವಿಶ್ವ ನಾಯಕರುಗಳಿಂದ ಶುಭ ಹಾರೈಕೆಗಳ ಮುಂದುವರಿಕೆ

June 11th, 05:47 pm

ಭಾರತದ ಪ್ರಧಾನಮಂತ್ರಿಯಾಗಿ ಮೂರನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಶ್ರೀ ನರೇಂದ್ರ ಮೋದಿ ವಿಶ್ವ ನಾಯಕರ ಅಭಿನಂದನಾ ಸಂದೇಶಗಳಿಗೆ ಧನ್ಯವಾದ ತಿಳಿಸಿದ್ದಾರೆ. ಶ್ರೀ ಮೋದಿ ಅವರಿಗೆ ವಿಶ್ವ ನಾಯಕರು ಸಂದೇಶಗಳು ಮತ್ತು ದೂರವಾಣಿ ಕರೆ ಮೂಲಕ ಅಭಿನಂದನೆ ತಿಳಿಸಿದ್ದು, ಪ್ರಧಾನಮಂತ್ರಿಗಳು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಒಮಾನ್ ಸುಲ್ತಾನರಿಂದ ಅಭಿನಂದನಾ ದೂರವಾಣಿ ಕರೆ ಸ್ವೀಕರಿಸಿದ ಪ್ರಧಾನಮಂತ್ರಿಗಳು

June 11th, 01:50 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಮಾನ್‌ನ ಸುಲ್ತಾನರಾದ ಘನತೆವೆತ್ತ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.

ಓಮನ್ ಸುಲ್ತಾನರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

December 16th, 09:29 pm

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಓಮನ್ ಸುಲ್ತಾನ ಹೈಥಮ್ ಬಿನ್ ತಾರಿಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಾಯಕರು ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು.

ಒಮಾನ್ ಸುಲ್ತಾನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಹೇಳಿಕೆ (ಡಿಸೆಂಬರ್ 16, 2023)

December 16th, 07:02 pm

ನಿಮ್ಮೆಲ್ಲರನ್ನು ಭಾರತಕ್ಕೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಭಾರತ ಮತ್ತು ಒಮಾನ್ ನಡುವಿನ ಸಂಬಂಧದಲ್ಲಿ ಇಂದು ಐತಿಹಾಸಿಕ ದಿನ. 26 ವರ್ಷಗಳ ನಂತರ ಇಂದು ಒಮಾನ್ ಸುಲ್ತಾನ್ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ. 140 ಕೋಟಿ ಭಾರತೀಯರ ಪರವಾಗಿ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವ ಅವಕಾಶ ಪಡೆದಿದ್ದೇನೆ. ನಮ್ಮೆಲ್ಲಾ ದೇಶವಾಸಿಗಳ ಪರವಾಗಿ, ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಓಮನ್ ಸುಲ್ತಾನ್ ಘನತೆವೆತ್ತ ಸುಲ್ತಾನ್ ಹೈತ್ಹಮ್ ಬಿನ್ ತಾರಿಕ್ ನಡುವೆ ದೂರವಾಣಿ ಮಾತುಕತೆ

February 17th, 09:43 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಓಮನ್ ಸುಲ್ತಾನ್ ಘನತೆವೆತ್ತ ಸುಲ್ತಾನ್ ಹೈತ್ಹಮ್ ಬಿನ್ ತಾರಿಕ್ ಅವರೊಂದಿಗೆ ಇಂದು ಬೆಳಗ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.