Prime Minister shares Sanskrit Subhashitam emphasizing that continuous effort is the true key to success

July 02nd, 04:24 pm

PM Modi shared a Sanskrit Subhashitam, saying that continuous effort is the true key to success. He emphasized that those who move forward with patience, determination and self-confidence are the ones who achieve their goals.

Prime Minister shares Sanskrit Subhashitam emphasizing on discipline and control over mind to achieve ultimate goal

July 01st, 12:13 pm

The Prime Minister, Shri Narendra Modi, shared a Sanskrit Subhashitam:

Prime Minister shares Sanskrit Subhashitam emphasizing on unity to achieve every goal

June 30th, 11:00 am

PM Modi shared a Sanskrit Subhashitam highlighting that unity in thoughts, resolve and purpose is the foundation of every success. He urged everyone to move forward together with a shared vision to achieve the goals of Bharat.

ವಿಶ್ವದ ವೈವಿಧ್ಯಮಯ ಸಂಸ್ಕೃತಿಗಳನ್ನು ಗೌರವಿಸಲು ಒತ್ತು ನೀಡುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ

June 29th, 10:43 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಸುಭಾಷಿತಂ ಹಂಚಿಕೊಂಡಿದ್ದಾರೆ:

ಏಕತೆ ಮತ್ತು ಪರಸ್ಪರ ಸಾಮರಸ್ಯಕ್ಕೆ ಒತ್ತು ನೀಡುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ

June 26th, 12:33 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತಂ ಹಂಚಿಕೊಂಡಿದ್ದು, ಪ್ರತಿಯೊಬ್ಬರೂ ಯಾವಾಗಲೂ ಏಕತೆ ಮತ್ತು ಪರಸ್ಪರ ಸಾಮರಸ್ಯದಿಂದ ಒಟ್ಟಾಗಿ ಕೆಲಸ ಮಾಡಬೇಕು ಎಂದು ಒತ್ತಿ ಹೇಳಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪರವಾಗಿ ಬೆಂಬಲ ಸೂಚಿಸಿದವರಿಗೆ ಪ್ರಧಾನಮಂತ್ರಿ ಅವರು ಗೌರವ ಸಲ್ಲಿಸಿದರು

June 25th, 10:53 am

ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ದೃಢವಾಗಿ ಬೆಂಬಲ ಸೂಚಿಸಿ, ರಕ್ಷಿಸಿದ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗೌರವ ಸಲ್ಲಿಸಿದರು. ಇದನ್ನು ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು ಎಂದು ಶ್ರೀ ಮೋದಿಯವರು ಬಣ್ಣಿಸಿದರು. ಬಂಡಾಯವೆದ್ದು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಆದರ್ಶಗಳನ್ನು ಎತ್ತಿಹಿಡಿದ ಅಸಂಖ್ಯಾತ ನಾಗರಿಕರ ಅಸಾಧಾರಣ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಈ ಅವಧಿಯು ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದರು.

ದೇಶದ ಏಳಿಗೆಗೆ ಸಾಮೂಹಿಕ ಉತ್ಸಾಹ ಮತ್ತು ಕ್ರಿಯೆಗಳು ಕಾರಣ ಎಂಬುದನ್ನು ಒತ್ತಿಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

June 24th, 03:34 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮೂಹಿಕ ಸಮರ್ಪಣೆ ಮತ್ತು ಪ್ರಯತ್ನದಿಂದ ರಾಷ್ಟ್ರದ ಸಮೃದ್ಧಿಯು ಅಚಲವಾಗಿ ಉಳಿಯುತ್ತದೆ ಎಂಬುದನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. ಇದೇ ಮನೋಭಾವವು ಸಮಾಜಕ್ಕೆ ಹೊಸ ಚೈತನ್ಯವನ್ನು ತುಂಬಿ, ಅಭಿವೃದ್ಧಿಯ ಸಂಕಲ್ಪಗಳನ್ನು ಸಾಕಾರಗೊಳಿಸುವ ಮಾರ್ಗವನ್ನು ಸುಗಮಗೊಳಿಸುತ್ತದೆ ಎಂದು ಹೇಳಿದ್ದಾರೆ.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ “ಬಲಿದಾನ ದಿವಸ”ದ ಅಂಗವಾಗಿ ಅವರಿಗೆ ಪ್ರಧಾನಮಂತ್ರಿಯವರು ಗೌರವ ನಮನ ಸಲ್ಲಿಸಿದರು, ಹಾಗೂ, ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡರು

June 23rd, 03:39 pm

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ “ಬಲಿದಾನ ದಿವಸ”ದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಅಪಾರ ಕೊಡುಗೆಯನ್ನು ಸ್ಮರಿಸಿಕೊಂಡರು.

ಯೋಗದ ಪರಿವರ್ತನಾತ್ಮಕ ಪರಿಣಾಮವನ್ನು ಪ್ರಮುಖವಾಗಿ ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ

June 22nd, 08:13 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂತಾರಾಷ್ಟ್ರೀಯ ಯೋಗ ದಿನದ ಗಮನಾರ್ಹ ಯಶಸ್ಸು ಯೋಗವು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ದೈಹಿಕ ಯೋಗಕ್ಷೇಮವನ್ನು ಸಾಧಿಸಲು ಸಹಾಯ ಮಾಡುವುದಲ್ಲದೆ, ಆತ್ಮವಿಶ್ವಾಸದಿಂದ ಸಕಾರಾತ್ಮಕ ಜೀವನ ನಡೆಸಲು ಪ್ರೇರೇಪಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಜ್ಞಾನ, ಬುದ್ಧಿವಂತಿಕೆ ಮತ್ತು ದೂರದೃಷ್ಟಿಯ ಮಹತ್ವವನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ

June 19th, 08:15 am

ಜ್ಞಾನ, ಬುದ್ಧಿವಂತಿಕೆ ಮತ್ತು ದೂರದೃಷ್ಟಿಯಂತಹ ಸದ್ಗುಣಗಳು ಜೀವನದಲ್ಲಿ ಯಶಸ್ಸಿನ ಅಡಿಪಾಯ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಗುಣಗಳಿಂದ ಶ್ರೀಮಂತರಾಗಿರುವ ವ್ಯಕ್ತಿಯು ಅತ್ಯಂತ ಕಷ್ಟಕರವಾದ ಸವಾಲುಗಳನ್ನು ಸಹ ಜಯಿಸಲು ಮತ್ತು ವಿಜಯಶಾಲಿಯಾಗಿ ಹೊರಹೊಮ್ಮಲು ಸಮರ್ಥನಾಗಿರುತ್ತಾನೆ ಎಂದು ಅವರು ಹೇಳಿದರು.

'ಸತ್ಯ, ಸೇವೆ, ಅಧ್ಯಯನ ಮತ್ತು ಕಾರ್ಯದ ಸತ್ಪ್ರವೃತ್ತಿ' ಗುಣಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

June 18th, 09:23 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸತ್ಯದ ಹಿಂದೆ ಸಂಪತ್ತು ಬರುತ್ತದೆ, ನಿಸ್ವಾರ್ಥ ಸೇವೆಯ ಹಿಂದೆ ಕೀರ್ತಿ ಬರುತ್ತದೆ, ನಿರಂತರ ಅಭ್ಯಾಸದ ಹಿಂದೆ ಜ್ಞಾನ ಬರುತ್ತದೆ ಮತ್ತು ಕಾರ್ಯದ ಹಿಂದೆ ವಿವೇಕ ಬರುತ್ತದೆ ಎಂದು ಹೇಳಿದ್ದಾರೆ. ಈ ಮೌಲ್ಯಗಳು ವ್ಯಕ್ತಿಯ ಸ್ವಭಾವ ರೂಪಿಸುವಲ್ಲಿ ಹಾಗೂ ಸಮೂಹದ ಪ್ರಗತಿಗೆ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ.

ಗೌರವ ಮತ್ತು ಮೆಚ್ಚುಗೆಯ ಮೌಲ್ಯವನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ

June 17th, 09:05 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ರೀತಿಯ ಗೌರವ ಮತ್ತು ಸ್ವೀಕಾರ ವ್ಯಕ್ತಿಗೆ ಮೌಲ್ಯಯುತ, ಹೆಮ್ಮೆ ಮತ್ತು ತೃಪ್ತಿಯ ಭಾವನೆ ಮೂಡಿಸುತ್ತದೆ ಎಂದು ಹೇಳಿದ್ದಾರೆ. ಅಂತಹ ಮಾನ್ಯತೆಯು ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ವ್ಯಕ್ತಿಯಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತದೆ ಎಂದು ಅವರು ಹೇಳಿದರು.

ವಿವೇಚನೆ ಮತ್ತು ಚಿಂತನಾಶೀಲ ನಿರ್ಧಾರ ಕೈಗೊಳ್ಳುವಿಕೆಯ ಮಹತ್ವವನ್ನು ಎತ್ತಿಹಿಡಿಯುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

June 16th, 08:53 am

ತಾಳ್ಮೆ, ಬುದ್ಧಿವಂತಿಕೆ ಮತ್ತು ದೂರದೃಷ್ಟಿಯಿಂದ ಮಾರ್ಗದರ್ಶನ ಮಾಡುವ ಕ್ರಿಯೆಗಳ ಮೂಲಕ ಸಂತೋಷ ಮತ್ತು ಸಮೃದ್ಧಿಯ ಬಾಗಿಲು ತೆರೆಯುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಸರಿಯಾದ ಚಿಂತನೆ ಮತ್ತು ಪರಿಗಣನೆಯೊಂದಿಗೆ ತೆಗೆದುಕೊಂಡ ಹೆಜ್ಜೆಗಳ ಮೇಲೆ ಯಶಸ್ಸು ನಿರ್ಮಾಣವಾಗುವುದರಿಂದ ಪ್ರತಿಯೊಂದು ನಿರ್ಧಾರಕ್ಕೂ ಎಚ್ಚರಿಕೆಯ ತಿಳುವಳಿಕೆ ಅಗತ್ಯವಿರುತ್ತದೆ ಎಂದು ಅವರು ವಿವರಿಸಿದರು.

ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ವೈವಿಧ್ಯತೆಯ ಪಾತ್ರವನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

June 15th, 08:55 am

ನಾವೀನ್ಯತೆ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾದ ಚಿಂತನೆಯ ಮಾರ್ಗ ಮತ್ತು ವಿಶಿಷ್ಟವಾದ ಸೃಜನಶೀಲ ದೃಷ್ಟಿಕೋನವನ್ನು ಹೊಂದಿರುತ್ತಾನೆ ಮತ್ತು ಈ ವೈವಿಧ್ಯತೆಯೇ ಹೊಸ ಸಾಧ್ಯತೆಗಳಿಗೆ ಕಾರಣವಾಗುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ. ಪ್ರತಿಯೊಂದು ನೀರಿನ ಮೂಲವು ವಿಭಿನ್ನ ರುಚಿಸ್ವಾದಯನ್ನು ಹೊಂದಿರುವಂತೆ, ಪ್ರತಿಯೊಂದು ಪ್ರತಿಭೆಯೂ ತನ್ನದೇ ಆದ ವಿಶಿಷ್ಟ ಗುರುತು ಮತ್ತು ಕೊಡುಗೆಯನ್ನು ಹೊಂದಿದೆ. ವೈವಿಧ್ಯಮಯ ವಿಚಾರಗಳು ಮತ್ತು ಸಾಮರ್ಥ್ಯಗಳ ಒಮ್ಮುಖದ ಮೂಲಕ ನಾವೀನ್ಯತೆ ಮತ್ತು ಪ್ರಗತಿ ಸಾಧ್ಯವಾಗುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ವಿಭಿನ್ನ ಕ್ಷೇತ್ರಗಳಲ್ಲಿ ಮಹಿಳೆಯರ ನೇತೃತ್ವದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರದ ಪ್ರಯತ್ನಗಳನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ

June 12th, 12:39 pm

ಕಳೆದ 12 ವರ್ಷಗಳಲ್ಲಿ ಸರ್ಕಾರವು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಇದು ಎಲ್ಲಾ ವಲಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದ್ದು, ಆರ್ಥಿಕ ಸೇರ್ಪಡೆ ಮತ್ತು ಉದ್ಯಮಶೀಲತೆಯಿಂದ ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ, ವಸತಿ, ಕ್ರೀಡೆ, ವಿಜ್ಞಾನ ಮತ್ತು ಆಡಳಿತದವರೆಗೆ, ಮಹಿಳೆಯರು ವೈವಿಧ್ಯಮಯ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

Prime Minister shares a Sanskrit Subhashitam highlighting agriculture and crops as the foundation of human life

June 11th, 11:34 am

PM Modi shared a Sanskrit Subhashitam highlighting the vital role of agriculture in sustaining society and the nation. Emphasising that farming is more than a livelihood, he said the hard work and dedication of India’s farmers nourish millions of lives and form the foundation of the country’s prosperity and well-being.

ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಅತ್ಯಂತ ದೊಡ್ಡ ಪರೀಕ್ಷೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಗಳಿಸುವ ಮಾರ್ಗ ಎಂಬುದನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

June 10th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಅತ್ಯಂತ ದೊಡ್ಡ ಪರೀಕ್ಷೆ ಎಂಬುದನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವೊಂದನ್ನು ಇಂದು ಹಂಚಿಕೊಂಡಿದ್ದಾರೆ. ನಮ್ರತೆ, ಸಮರ್ಪಣಾ ಭಾವ ಮತ್ತು ಕರ್ತವ್ಯ ನಿಷ್ಠೆಯಿಂದ ನಿರಂತರವಾಗಿ ಕೆಲಸ ಮಾಡುವ ವ್ಯಕ್ತಿ ಮಾತ್ರ ಸಾರ್ವಜನಿಕರ ನಂಬಿಕೆಯನ್ನು ಗಳಿಸುತ್ತಾನೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದ್ದಾರೆ.

ಸಮಾಜದ ಕಲ್ಯಾಣಕ್ಕಾಗಿ ಸಮರ್ಪಿತವಾದ ನಿಜವಾದ ಬುದ್ಧಿವಂತ ವ್ಯಕ್ತಿಯ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

June 09th, 10:27 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಮಾಜದ ಕಲ್ಯಾಣಕ್ಕಾಗಿ ಸಮರ್ಪಿತವಾದ ನಿಜವಾದ ಬುದ್ಧಿವಂತ ವ್ಯಕ್ತಿಯ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಪುಸ್ತಕವನ್ನು ಹಂಚಿಕೊಂಡಿದ್ದಾರೆ.

ಎಲ್ಲಾ ಜೀವಿಗಳ ಕಲ್ಯಾಣ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ

June 08th, 08:01 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತಂ ಪುಸ್ತಕವನ್ನು ಹಂಚಿಕೊಂಡಿದ್ದು, ಪ್ರಕೃತಿಯೊಂದಿಗೆ ಸಮತೋಲನ ಸಾಧಿಸುವ ಮೂಲಕ ಎಲ್ಲಾ ಜೀವಿಗಳ ಕಲ್ಯಾಣವನ್ನು ಸಾಧಿಸುವುದು ನಮ್ಮ ಸಂಸ್ಕೃತಿಯ ಪ್ರಮುಖ ಸ್ಫೂರ್ತಿಯಾಗಿದೆ ಎಂದು ಒತ್ತಿ ಹೇಳಿದರು.

ವಿಶ್ವ ಪರಿಸರ ದಿನದಂದು ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ

June 05th, 09:53 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶ್ವ ಪರಿಸರ ದಿನದಂದು ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದ್ದು, ಪರಿಸರ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರನ್ನೂ ಶ್ಲಾಘಿಸಿದ್ದಾರೆ.