ನಾಗಾಲ್ಯಾಂಡ್ ಜನತೆಗೆ ರಾಜ್ಯ ಉದಯ ದಿನದ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ

December 01st, 06:09 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಾಗಾಲ್ಯಾಂಡ್ ಜನತೆಗೆ ರಾಜ್ಯ ಉದಯ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಸೇವೆ, ಧೈರ್ಯ ಮತ್ತು ದಯೆ ಬೇರೂರಿರುವ ಅದ್ಭುತ ನಾಗಾ ಸಂಸ್ಕೃತಿಯನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. “ನಾಗಾಲ್ಯಾಂಡ್ ಜನರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ರಾಜ್ಯವು ಸಮೃದ್ಧಿ ಮತ್ತು ಪ್ರಗತಿಯೊಂದಿಗೆ ಮುಂದುವರಿಯಲಿ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಜಾರ್ಖಂಡ್ ರಾಜ್ಯ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದ ಪ್ರಧಾನಮಂತ್ರಿ

November 15th, 08:22 am

ಜಾರ್ಖಂಡ್‌ ರಾಜ್ಯದ ಸ್ಥಾಪನಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಖಂಡ್‌ನ ಎಲ್ಲಾ ಜನರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಜಾರ್ಖಂಡ್ ಶ್ರೀಮಂತ ಬುಡಕಟ್ಟು ಸಂಸ್ಕೃತಿಯಿಂದ ಸಮೃದ್ಧವಾಗಿರುವ ಅದ್ಭುತ ಭೂಮಿಯಾಗಿದೆ ಎಂದು ಅವರು ಹೇಳಿದರು. ಭಗವಾನ್ ಬಿರ್ಸಾ ಮುಂಡಾ ಅವರ ಪರಂಪರೆಯನ್ನು ನೆನಪಿಸಿಕೊಳ್ಳುತ್ತಾ, ಈ ಪವಿತ್ರ ಭೂಮಿಯ ಇತಿಹಾಸವು ಧೈರ್ಯ, ಹೋರಾಟ ಮತ್ತು ಘನತೆಯ ಸ್ಪೂರ್ತಿದಾಯಕ ಕಥೆಗಳಿಂದ ತುಂಬಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಉತ್ಕಲ ದಿನದ ಅಂಗವಾಗಿ ಪ್ರಧಾನಮಂತ್ರಿ ಶುಭಾಶಯ

April 01st, 08:59 am

ಉತ್ಕಲ ದಿವಸದ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಒಡಿಶಾದ ಇತಿಹಾಸ, ಸಾಹಿತ್ಯ ಮತ್ತು ಸಂಗೀತ ಭಾರತಕ್ಕೆ ಹೆಮ್ಮೆ ಎಂದು ಬಣ್ಣಿಸಿರುವ ಅವರು, ಕೇಂದ್ರ ಸರ್ಕಾರ ಮತ್ತು ಒಡಿಶಾ ಸರ್ಕಾರಗಳು ರಾಜ್ಯದ ಪ್ರಗತಿ ವರ್ಧನೆಗೆ ವ್ಯಾಪಕವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.

PM Modi greets the people of Nagaland on their Statehood Day

December 01st, 12:28 pm

The Prime Minister Shri Narendra Modi today greeted the people of Nagaland on their Statehood Day. He remarked that Naga culture was known for its spirit of duty and compassion.

​​​​​​​ಮಿಜೋರಾಂ ಜನತೆಗೆ ರಾಜ್ಯೋತ್ಸವ ದಿನದ ಶುಭ ಕೋರಿದ ಪ್ರಧಾನ ಮಂತ್ರಿ ಮೋದಿ

February 20th, 10:49 am

ಮಿಜೋರಾಂ ರಾಜ್ಯೋತ್ಸವದ ಅಂಗವಾಗಿ ಅಲ್ಲಿನ ಜನತೆಗೆ ಶುಭ ಕೋರಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ರಾಜ್ಯದ ನಿರಂತರ ಪ್ರಗತಿ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ್ದಾರೆ.

ಹಿಮಾಚಲ ಪ್ರದೇಶದ ಜನರಿಗೆ ಅವರ ರಾಜ್ಯೋತ್ಸವ ದಿನದಂದು ಶುಭಾಶಯ ಕೋರಿದ ಪ್ರಧಾನಮಂತ್ರಿ

January 25th, 09:42 am

ಹಿಮಾಚಲ ಪ್ರದೇಶದ ಜನತೆಗೆ ಅವರ ರಾಜ್ಯೋತ್ಸವ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

ರಾಜ್ಯ ಸ್ಥಾಪನಾ ದಿನದಂದು ಮಣಿಪುರದ ಜನತೆಗೆ ಪ್ರಧಾನಮಂತ್ರಿ ಅಭಿನಂದನೆ

January 21st, 09:24 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಣಿಪುರದ ಜನತೆಗೆ ರಾಜ್ಯ ಸ್ಥಾಪನಾ ದಿನದ ಅಭಿನಂದನೆ ಸಲ್ಲಿಸಿದ್ದಾರೆ.