2021ರ ಮಾರ್ಚ್ 11ರಂದು ಸ್ವಾಮಿ ಚಿದ್ಭಾವನಾನಂದಜೀ ಅವರ ಭಗವದ್ಗೀತೆಯ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ

March 10th, 05:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಮಾರ್ಚ್ 11ರಂದು (ಗುರುವಾರ) ಬೆಳಗ್ಗೆ 10.25ಕ್ಕೆ ವರ್ಚುವಲ್ ಮಾಧ್ಯಮದ ಮೂಲಕ ಸ್ವಾಮಿ ಚಿದ್ಭಾವನಾನಂದಜೀ ಅವರ ಭಗವದ್ಗೀತೆಯ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು, ಈ ಸಂದರ್ಭದಲ್ಲಿ ಭಾಷಣ ಮಾಡಲಿದ್ದಾರೆ. ಸ್ವಾಮಿ ಚಿದ್ಭಾವನಾನಂದ ಸ್ವಾಮೀಜಿ ಅವರ ಭಗವದ್ಗೀತೆಯ 5 ಲಕ್ಷ ಪ್ರತಿಗಳು ಮಾರಾಟವಾದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.