ತಮ್ಮ ಆಂಧ್ರಪ್ರದೇಶ ಭೇಟಿಯ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

October 16th, 09:55 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಆಂಧ್ರಪ್ರದೇಶ ಭೇಟಿಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ. ಶ್ರೀಶೈಲಂನಲ್ಲಿ, ಶ್ರೀ ಬ್ರಹ್ಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಶ್ರೀ ನರೇಂದ್ರ ಮೋದಿ ಅವರು ಶ್ರೀ ಶಿವಾಜಿ ಧ್ಯಾನ ಮಂದಿರ ಮತ್ತು ಶ್ರೀ ಶಿವಾಜಿ ದರ್ಬಾರ್ ಸಭಾಂಗಣಕ್ಕೆ ಭೇಟಿ ನೀಡಿದರು. ನಂತರ ಅವರು ಕರ್ನೂಲ್ ನಲ್ಲಿ ಸುಮಾರು 13,430 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಉದ್ಘಾಟಿಸಿದರು.