79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶಗಳು

August 15th, 03:52 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕೆಂಪು ಕೋಟೆಯ ಕೊತ್ತಲಗಳಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಶ್ರೀ ಮೋದಿ ಅವರ 103 ನಿಮಿಷಗಳ ಕಾಲ ಕೆಂಪು ಕೋಟೆಯಿಂದ ಮಾಡಿದ ಭಾಷಣವು ಅತ್ಯಂತ ದೀರ್ಘ ಮತ್ತು ನಿರ್ಣಾಯಕ ಭಾಷಣವಾಗಿದ್ದು, 2047ರ ವೇಳೆಗೆ ವಿಕ್ಷಿತ ಭಾರತಕ್ಕಾಗಿ ದಿಟ್ಟ ಮಾರ್ಗಸೂಚಿಯನ್ನು ರೂಪಿಸಿದೆ. ಪ್ರಧಾನಮಂತ್ರಿ ಅವರ ಭಾಷಣವು ಸ್ವಾವಲಂಬನೆ, ನಾವೀನ್ಯತೆ ಮತ್ತು ನಾಗರಿಕ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿತ್ತು, ಇತರರನ್ನು ಅವಲಂಬಿಸಿದ ರಾಷ್ಟ್ರದಿಂದ ಜಾಗತಿಕವಾಗಿ ಆತ್ಮವಿಶ್ವಾಸ, ತಾಂತ್ರಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸ್ಥಿತಿಸ್ಥಾಪಕತ್ವದ ಶಕ್ತಿಯುಳ್ಳ ದೇಶದವರೆಗೆ ಭಾರತದ ಪ್ರಯಾಣವನ್ನು ಎತ್ತಿ ತೋರಿಸಿತು.

79ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೆಂಪು ಕೋಟೆಯ ಪ್ರಾಂಗಣದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

August 15th, 07:00 am

ಈ ಸ್ವಾತಂತ್ರ್ಯೋತ್ಸವವು ನಮ್ಮ ಜನರ 140 ಕೋಟಿ ಸಂಕಲ್ಪಗಳ ಆಚರಣೆಯಾಗಿದೆ. ಈ ಸ್ವಾತಂತ್ರ್ಯೋತ್ಸವವು ಸಾಮೂಹಿಕ ಸಾಧನೆಗಳು ಮತ್ತು ಹೆಮ್ಮೆಯ ಕ್ಷಣವಾಗಿದೆ ಮತ್ತು ನಮ್ಮ ಹೃದಯಗಳು ಸಂತೋಷದಿಂದ ತುಂಬಿವೆ. ರಾಷ್ಟ್ರವು ನಿರಂತರವಾಗಿ ಏಕತೆಯ ಮನೋಭಾವವನ್ನು ಬಲಪಡಿಸುತ್ತಿದೆ. ಇಂದು, 140 ಕೋಟಿ ಭಾರತೀಯರು ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿದ್ದಾರೆ. ಮರುಭೂಮಿಯಾಗಿರಲಿ, ಹಿಮಾಲಯದ ಶಿಖರಗಳಾಗಿರಲಿ, ಸಮುದ್ರ ತೀರಗಳಾಗಿರಲಿ, ಅಥವಾ ಜನನಿಬಿಡ ಪ್ರದೇಶಗಳಾಗಿರಲಿ, 'ಹರ್ ಘರ್ ತಿರಂಗಾ' ಹಾರುತ್ತಿದೆ, ಎಲ್ಲೆಡೆ ಒಂದೇ ಪ್ರತಿಧ್ವನಿ, ಒಂದೇ ಹರ್ಷೋದ್ಗಾರ: ನಮ್ಮ ಜೀವಕ್ಕಿಂತ ಪ್ರಿಯವಾದ ನಮ್ಮ ತಾಯ್ನಾಡಿಗೆ ಜೈ.

India celebrates 79th Independence Day

August 15th, 06:45 am

PM Modi, in his address to the nation on the 79th Independence day paid tribute to the Constituent Assembly, freedom fighters, and Constitution makers. He reiterated that India will always protect the interests of its farmers, livestock keepers and fishermen. He highlighted key initiatives—GST reforms, Pradhan Mantri Viksit Bharat Rozgar Yojana, National Sports Policy, and Sudharshan Chakra Mission—aimed at achieving a Viksit Bharat by 2047. Special guests like Panchayat members and “Drone Didis” graced the Red Fort celebrations.

ಜಾಗತಿಕ ಬಾಹ್ಯಾಕಾಶ ಪರಿಶೋಧನೆ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ವೀಡಿಯೊ ಕಾನ್ಫರೆನ್ಸ್ ಭಾಷಣ

May 07th, 12:00 pm

ಗೌರವಾನ್ವಿತ ಪ್ರತಿನಿಧಿಗಳೆ, ಗೌರವಾನ್ವಿತ ವಿಜ್ಞಾನಿಗಳೆ, ಅನುಶೋಧಕರೆ, ಗಗನಯಾತ್ರಿಗಳೆ ಮತ್ತು ವಿಶ್ವದೆಲ್ಲೆಡೆಯಿಂದ ಆಗಮಿಸಿರುವ ಸ್ನೇಹಿತರೆ,

ಬಾಹ್ಯಾಕಾಶ ಅನ್ವೇಷಣೆ ಕುರಿತ ಜಾಗತಿಕ ಸಮ್ಮೇಳನ (ಜಿಎಲ್ಇಎಕ್ಸ್) 2025 ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

May 07th, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಹ್ಯಾಕಾಶ ಅನ್ವೇಷಣೆ ಕುರಿತ ಜಾಗತಿಕ ಸಮ್ಮೇಳನ (ಜಿಎಲ್ಇಎಕ್ಸ್) 2025ನ್ನು ಉದ್ದೇಶಿಸಿ ಭಾಷಣ ಮಾಡಿದರು. ವಿಶ್ವದಾದ್ಯಂತದ ಗೌರವಾನ್ವಿತ ಪ್ರತಿನಿಧಿಗಳು, ವಿಜ್ಞಾನಿಗಳು ಮತ್ತು ಗಗನಯಾತ್ರಿಗಳನ್ನು ಸ್ವಾಗತಿಸಿದ ಅವರು, ಜಿಎಲ್ಇಎಕ್ಸ್ 2025ರಲ್ಲಿ ಭಾರತದ ಗಮನಾರ್ಹ ಬಾಹ್ಯಾಕಾಶ ಪ್ರಯಾಣವನ್ನು ಪ್ರಸ್ತಾಪಿಸಿದ ಅವರು ಬಾಹ್ಯಾಕಾಶವು ಕೇವಲ ಒಂದು ಗಮ್ಯಸ್ಥಾನವಲ್ಲ ಜೊತೆಗೆ ಅದು ಕುತೂಹಲ, ಧೈರ್ಯ ಮತ್ತು ಸಾಮೂಹಿಕ ಪ್ರಗತಿಯ ಘೋಷಣೆಯಾಗಿದೆ ಎಂದು ಹೇಳಿದರು. 1963ರಲ್ಲಿ ಸಣ್ಣ ರಾಕೆಟ್ ಉಡಾವಣೆಯಿಂದ ಹಿಡಿದು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ರಾಷ್ಟ್ರವಾಗುವವರೆಗೆ ಭಾರತದ ಬಾಹ್ಯಾಕಾಶ ಸಾಧನೆಗಳು ಈ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಭಾರತೀಯ ರಾಕೆಟ್ ಗಳು ಪೇಲೋಡ್ ಗಳಿಗಿಂತ (ಸಾಮರ್ಥ್ಯಕ್ಕಿಂತ) ಹೆಚ್ಚಿನದನ್ನು ಸಾಗಿಸುತ್ತವೆ - ಅವು 1.4 ಬಿಲಿಯನ್ ಭಾರತೀಯರ ಕನಸುಗಳನ್ನು ಹೊತ್ತೊಯ್ಯುತ್ತವೆ ಎಂದು ಅವರು ಹೇಳಿದರು, ಭಾರತದ ಬಾಹ್ಯಾಕಾಶ ಪ್ರಗತಿಗಳು ಗಮನಾರ್ಹ ವೈಜ್ಞಾನಿಕ ಮೈಲಿಗಲ್ಲುಗಳಾಗಿವೆ ಮತ್ತು ಮಾನವ ಚೈತನ್ಯವು ಗುರುತ್ವಾಕರ್ಷಣೆಯನ್ನು ಮೀರಬಲ್ಲದು ಎಂಬುದಕ್ಕೆ ಪುರಾವೆಯಾಗಿದೆ ಎಂದು ಹೇಳಿದರು. 2014 ರಲ್ಲಿ ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿದ ಭಾರತದ ಐತಿಹಾಸಿಕ ಸಾಧನೆಯನ್ನು ಅವರು ಸ್ಮರಿಸಿದರು. ಚಂದ್ರಯಾನ -1 ಚಂದ್ರನ ಮೇಲ್ಮೈಯಲ್ಲಿ ನೀರನ್ನು ಕಂಡುಹಿಡಿಯಲು ಸಹಾಯ ಮಾಡಿತು, ಚಂದ್ರಯಾನ -2 ಚಂದ್ರನ ಮೇಲ್ಮೈಯ ಅತಿ ಹೆಚ್ಚು ರೆಸಲ್ಯೂಶನ್ (ಸ್ಪಷ್ಟ) ಚಿತ್ರಗಳನ್ನು ಒದಗಿಸಿತು ಮತ್ತು ಚಂದ್ರಯಾನ -3 ಚಂದ್ರನ ದಕ್ಷಿಣ ಧ್ರುವದ ತಿಳುವಳಿಕೆಯನ್ನು ಹೆಚ್ಚಿಸಿತು ಎಂದು ಅವರು ಒತ್ತಿ ಹೇಳಿದರು. ಭಾರತವು ದಾಖಲೆಯ ಸಮಯದಲ್ಲಿ ಕ್ರಯೋಜೆನಿಕ್ ಎಂಜಿನ್ ಗಳನ್ನು ಅಭಿವೃದ್ಧಿಪಡಿಸಿದೆ, ಒಂದೇ ಕಾರ್ಯಾಚರಣೆಯಲ್ಲಿ 100 ಉಪಗ್ರಹಗಳನ್ನು ಉಡಾವಣೆ ಮಾಡಿದೆ ಮತ್ತು ಭಾರತೀಯ ಉಡಾವಣಾ ವಾಹನಗಳನ್ನು ಬಳಸಿಕೊಂಡು 34 ದೇಶಗಳಿಗೆ 400 ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ನಿಯೋಜಿಸಿದೆ ಎಂಬುದರತ್ತ ಅವರು ಗಮನಸೆಳೆದರು. ಭಾರತದ ಇತ್ತೀಚಿನ ಸಾಧನೆಗಳತ್ತ ಬೆಟ್ಟು ಮಾಡಿದ ಅವರು ಈ ವರ್ಷ ಎರಡು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸಿರುವುದು ಬಾಹ್ಯಾಕಾಶ ಅನ್ವೇಷನೆಯತ್ತ ಪ್ರಮುಖ ಹೆಜ್ಜೆಯಾಗಿದೆ ಎಂದರು.

ಈ ವಾರ ಭಾರತದ ಬಗ್ಗೆ ವಿಶ್ವ

April 22nd, 12:27 pm

ರಾಜತಾಂತ್ರಿಕ ಫೋನ್ ಕರೆಗಳಿಂದ ಹಿಡಿದು ಹೊಸ ವೈಜ್ಞಾನಿಕ ಆವಿಷ್ಕಾರಗಳವರೆಗೆ, ಈ ವಾರ ಜಾಗತಿಕ ವೇದಿಕೆಯಲ್ಲಿ ಭಾರತದ ಉಪಸ್ಥಿತಿಯು ಸಹಯೋಗ, ನಾವೀನ್ಯತೆ ಮತ್ತು ಸಾಂಸ್ಕೃತಿಕ ಹೆಮ್ಮೆಯಿಂದ ಗುರುತಿಸಲ್ಪಟ್ಟಿದೆ.

Cabinet approves the establishment of “Third Launch Pad”

January 16th, 03:00 pm

The Union Cabinet chaired by the Prime Minister Shri Narendra Modi today approved the establishment of the Third Launch Pad (TLP) at Satish Dhawan Space Centre of ISRO at Sriharikota, Andhra Pradesh.

ಉಪಗ್ರಹಗಳ ಬಾಹ್ಯಾಕಾಶ ನಿಲ್ದಾಣದ ಯಶಸ್ವಿ ಪ್ರದರ್ಶನಕ್ಕಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ

January 16th, 01:36 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಉಪಗ್ರಹಗಳ ಬಾಹ್ಯಾಕಾಶ ಡಾಕಿಂಗ್ ನ ಯಶಸ್ವಿ ಪ್ರದರ್ಶನಕ್ಕಾಗಿ ಇಸ್ರೋ ಮತ್ತು ಇಡೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಶ್ರೀ ಮೋದಿಯವರು ಈ ಸಾಹಸೀ ಪ್ರದರ್ಶನವನ್ನು ಮುಂಬರುವ ವರ್ಷಗಳಲ್ಲಿ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಾಚರಣೆಗಳ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಕೇರಳದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

February 27th, 12:24 pm

ಕೇರಳದ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಜೀ, ನನ್ನ ಸಹೋದ್ಯೋಗಿ ಮತ್ತು ರಾಜ್ಯ ಸಚಿವ ಶ್ರೀ ವಿ. ಮುರಳೀಧರನ್, ಇಸ್ರೋ ಕುಟುಂಬದ ಎಲ್ಲರೂ ನಮಸ್ಕಾರ!

ಕೇರಳದ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಧಾನಿ ಭೇಟಿ

February 27th, 12:02 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳದ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ ಎಸ್ ಸಿ)ಗೆ ಭೇಟಿ ನೀಡಿದ್ದರು ಮತ್ತು ಸುಮಾರು 1800 ಕೋಟಿ ರೂ. ಮೌಲ್ಯದ ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಯೋಜನೆಗಳಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಎಸ್ ಎಲ್ ವಿ ಇಂಟಿಗ್ರೇಷನ್ ಫೆಸಿಲಿಟಿ (ಪಿಐಎಫ್ ); ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಹೊಸ 'ಸೆಮಿ-ಕ್ರಯೋಜೆನಿಕ್ಸ್ ಇಂಟಿಗ್ರೇಟೆಡ್ ಇಂಜಿನ್ ಮತ್ತು ಸ್ಟೇಜ್ ಟೆಸ್ಟ್ ಸೌಲಭ್ಯ'; ಮತ್ತು ತಿರುವನಂತಪುರಂನ ವಿಎಸ್ ಎಸ್ ಸಿಯಲ್ಲಿ ‘ಟ್ರೈಸಾನಿಕ್ ವಿಂಡ್ ಟನಲ್’ ಒಳಗೊಂಡಿವೆ. ಶ್ರೀ ನರೇಂದ್ರ ಮೋದಿ ಅವರು ಗಗನಯಾನ ಮಿಷನ್‌ನ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ನಾಲ್ಕು ಗಗನಯಾತ್ರಿಗಳಿಗೆ 'ಗಗನಯಾತ್ರಿ ರೆಕ್ಕೆಗಳನ್ನು' ನೀಡಿದರು. ಆ ಗಗನಯಾತ್ರಿಗಳೆಂದರೆ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ.

15 ನೇ ಬ್ರಿಕ್ಸ್ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

August 23rd, 03:30 pm

15ನೇ ಬ್ರಿಕ್ಸ್ ಶೃಂಗಸಭೆಯ ಅದ್ಧೂರಿ ಆಯೋಜನೆ ಮತ್ತು ನಮಗೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ನಾನು ಮತ್ತೊಮ್ಮೆ ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ರಾಮಾಫೋಸಾ ಅವರನ್ನು ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ.

PM Modi interacts with the Indian community in Paris

July 13th, 11:05 pm

PM Modi interacted with the Indian diaspora in France. He highlighted the multi-faceted linkages between India and France. He appreciated the role of Indian community in bolstering the ties between both the countries.The PM also mentioned the strides being made by India in different domains and invited the diaspora members to explore opportunities of investing in India.

ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಭಾಷಾಂತರ

September 10th, 10:31 am

ಗುಜರಾತಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್ ಜೀ, ವಿವಿಧ ರಾಜ್ಯ ಸರ್ಕಾರಗಳ ಸಚಿವರೇ, ನವೋದ್ಯಮಗಳ ಜಗತ್ತಿನ ಎಲ್ಲಾ ಸಹೋದ್ಯೋಗಿಗಳೇ, ವಿದ್ಯಾರ್ಥಿಗಳೇ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

PM inaugurates ‘Centre-State Science Conclave’ in Ahmedabad via video conferencing

September 10th, 10:30 am

PM Modi inaugurated the ‘Centre-State Science Conclave’ in Ahmedabad. The Prime Minister remarked, Science is like that energy in the development of 21st century India, which has the power to accelerate the development of every region and the development of every state.

ಜೂನ್ 10 ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

June 08th, 07:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 10 ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಸುಮಾರು 10.15 ಕ್ಕೆ ಪ್ರಧಾನಮಂತ್ರಿ ಅವರು ನವಸಾರಿಯಲ್ಲಿ ಗುಜರಾತ್ ಗೌರವ್ ಅಭಿಯಾನ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳನ್ವಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಪರಾಹ್ನ 12.15 ಕ್ಕೆ ಎ.ಎಂ. ನಾಯಕ್ ಆರೋಗ್ಯ ಸಂಕೀರ್ಣ ಮತ್ತು ನರಾಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ತರುವಾಯ 3.45 ಕ್ಕೆ ಅಹಮದಾಬಾದ್ ನ ಬೋಪಾಲ್ ನಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ದೃಢೀಕರಣ ಕೇಂದ್ರ [ಇನ್-ಸ್ಪೇಸ್]ವನ್ನು ಉದ್ಘಾಟಿಸಲಿದ್ದಾರೆ.

ರಾಷ್ಟ್ರೀಯ ತಂತ್ರಜ್ಞಾನ ದಿನದಂದು ಭಾರತೀಯ ವಿಜ್ಞಾನಿಗಳಿಗೆ ಪ್ರಧಾನ ಮಂತ್ರಿ ಕೃತಜ್ಞತೆ

May 11th, 09:29 am

1998ರಲ್ಲಿ ಯಶಸ್ವಿಯಾಗಿ ಪೋಖ್ರಾನ್ ಪರೀಕ್ಷೆಯನ್ನು ನಡೆಸಲು ಕಾರಣರಾದ ನಮ್ಮ ಪ್ರತಿಭಾವಂತ ವಿಜ್ಞಾನಿಗಳು ಮತ್ತು ಅವರ ಪ್ರಯತ್ನಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಯಶಸ್ಸಿಗೆ ಒಂದೇ ಒಂದು ಮಂತ್ರವಿದೆ - 'ದೀರ್ಘಾವಧಿಯ ಯೋಜನೆ ಮತ್ತು ನಿರಂತರ ಬದ್ಧತೆ', ಹೇಳಿದ್ದಾರೆ ಪ್ರಧಾನಿ

March 12th, 06:40 pm

ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ 11 ನೇ ಖೇಲ್ ಮಹಾಕುಂಭವನ್ನು ಉದ್ಘಾಟಿಸಿದರು. ಕ್ರೀಡೆಯಲ್ಲಿ ಯಶಸ್ಸಿಗೆ 360 ಡಿಗ್ರಿ ವಿಧಾನದ ಅಗತ್ಯವಿದೆ. ಅದೇ ರೀತಿ, ದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಭಾರತವು ಸಮಗ್ರ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ. ಖೇಲೋ ಇಂಡಿಯಾ ಕಾರ್ಯಕ್ರಮವು ಅಂತಹ ಚಿಂತನೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಅಹಮದಾಬಾದ್‌ನಲ್ಲಿ ʻಗುಜರಾತ್ ಪಂಚಾಯತ್ ಮಹಾಸಮ್ಮೇಳನʼ ಉದ್ದೇಶಿಸಿ ಮಾತನಾಡಿದ ಪ್ರಧಾನಿ

March 12th, 06:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹ್ಮದಾಬಾದ್‌ನಲ್ಲಿ ʻಗುಜರಾತ್ ಪಂಚಾಯತ್ ಮಹಾಸಮ್ಮೇಳನʼ ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ಪಂಚಾಯತ್ ರಾಜ್ ಪ್ರತಿನಿಧಿಗಳು ಭಾಗವಹಿಸಿದ್ದರು.

ಭಾರತದ ಯುವಜನತೆ ಈಗ ಏನಾದರೂ ದೊಡ್ಡಪ್ರಮಾಣದಲ್ಲಿ ಹೊಸ ಪ್ರಯತ್ನವನ್ನು ಮಾಡಲು ಬಯಸುತ್ತಾರೆ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.

August 29th, 11:30 am

ಮನ್ ಕಿ ಬಾತ್ ಸಮಯದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೇಜರ್ ಧ್ಯಾನಚಂದ್ ಅವರಿಗೆ ಗೌರವ ಸಲ್ಲಿಸಿದರು ಮತ್ತು ವಿಶ್ವ ವೇದಿಕೆಯಲ್ಲಿ ದೇಶವನ್ನು ಹೆಮ್ಮೆಪಡುವಂತೆ ಮಾಡಿದ ನಮ್ಮ ಒಲಿಂಪಿಯನ್ ಗಳ ಬಗ್ಗೆ ಮಾತನಾಡಿದರು. ದೇಶದ ಯುವಕರು ಅಪಾಯಗಳನ್ನು ತೆಗೆದುಕೊಂಡು ಮುಂದೆ ಸಾಗುವ ಸಾಮರ್ಥ್ಯಕ್ಕಾಗಿ ಅವರು ಶ್ಲಾಘಿಸಿದರು. ಪ್ರಧಾನಮಂತ್ರಿಯವರು ನಮ್ಮ ನುರಿತ ಮಾನವಶಕ್ತಿಯ ಪ್ರಯತ್ನಗಳನ್ನು ಎತ್ತಿ ತೋರಿಸಿದರು ಮತ್ತು ಭಗವಾನ್ ವಿಶ್ವಕರ್ಮರಿಗೆ ಗೌರವ ಸಲ್ಲಿಸಿದರು.

ವಿವಾ ಟೆಕ್ 5 ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ಅವರ ದಿಕ್ಸೂಚಿ ಭಾಷಣದ ಪಠ್ಯ

June 16th, 04:00 pm

ಈ ವೇದಿಕೆಯು ಫ್ರಾನ್ಸ್ ನ ತಾಂತ್ರಿಕ ಮುನ್ನೋಟವನ್ನು ಪ್ರತಿಬಿಂಬಿಸುತ್ತದೆ. ಭಾರತ ಮತ್ತು ಫ್ರಾನ್ಸ್ ಗಳು ಅನೇಕ ವಿಷಯಗಳಲ್ಲಿ ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಇವುಗಳಲ್ಲಿ, ತಂತ್ರಜ್ಞಾನ ಮತ್ತು ಡಿಜಿಟಲ್ ಕ್ಷೇತ್ರಗಳು ಸಹಕಾರದ ವಲಯಗಳಾಗಿ ಮೂಡಿ ಬರುತ್ತಿವೆ. ಇಂತಹ ಸಹಕಾರ ಇನ್ನಷ್ಟು ಬೆಳೆಯಬೇಕು ಎನ್ನುವುದು ಈ ಸಮಯದ ಆವಶ್ಯಕತೆಯಾಗಿದೆ. ಇದರಿಂದ ನಮ್ಮ ದೇಶಗಳಿಗೆ ಲಾಭವಾಗುವುದು ಮಾತ್ರವಲ್ಲ ವಿಸ್ತಾರವ್ಯಾಪ್ತಿಯಲ್ಲಿ ವಿಶ್ವಕ್ಕೂ ಲಾಭವಾಗಲಿದೆ.