ಗುಜರಾತ್‌ನ ವಡೋದರಾದಲ್ಲಿ ಸರ್ದಾರ್‌ಧಾಮ್ ಹಾಸ್ಟೆಲ್ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 11th, 06:15 pm
ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ಜಿ, ಕೇಂದ್ರ ಸಚಿವರು ಮತ್ತು ಸ್ಥಾಪಕ ಟ್ರಸ್ಟಿಗಳಾದ ಮನ್ಸುಖ್ ಭಾಯಿ ಮಾಂಡವೀಯ, ಸರ್ದಾರ್ ಧಾಮ್‌ನ ಅಧ್ಯಕ್ಷ ಗಗ್ಜಿ ಭಾಯಿ ಸುತಾರಿಯಾ ಜಿ, ದುಷ್ಯಂತ್ ಭಾಯಿ ಪಟೇಲ್, ಪಂಕಜ್ ಭಾಯಿ ಪಟೇಲ್, ರಾಜ್ಯ ಬಿಜೆಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಜಿ, ವೇದಿಕೆಯಲ್ಲಿರುವ ಗುಜರಾತ್ ಸರ್ಕಾರದ ಎಲ್ಲಾ ಸಚಿವರೆ, ಎಲ್ಲಾ ದಾನಿಗಳೆ, ಟ್ರಸ್ಟಿಗಳೆ, ಗಣ್ಯ ಅತಿಥಿಗಳೆ ಮತ್ತು ಗುಜರಾತ್‌ನ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ.ಗುಜರಾತ್‌ನ ವಡೋದರಾದಲ್ಲಿ ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 11th, 06:00 pm
ಗುಜರಾತ್‌ನ ವಡೋದರಾದಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಿದರು. ಸೋಮನಾಥ ದೇವಾಲಯವು ತನ್ನ 75ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವವನ್ನು ಆಚರಿಸಿದ ದಿನದಂದು ವಡೋದರಾದ ಸರ್ದಾರ್ ಧಾಮ್‌ನಲ್ಲಿ ನಡೆದ ಗಣ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಶಿಕ್ಷಣ ಸಂಸ್ಥೆಗಳ ಉದ್ಘಾಟನೆ ಮತ್ತು ಆಧ್ಯಾತ್ಮಿಕ ಸ್ಮರಣಾರ್ಥ ಶುಭ ಸಂದರ್ಭದ ಕಾಕತಾಳೀಯತೆಯನ್ನು ಉಲ್ಲೇಖಿಸಿದರು. ಡಾ. ದುಷ್ಯಂತ್ ಮತ್ತು ದಕ್ಷಾ ಪಟೇಲ್ ಸಂಕೀರ್ಣವನ್ನು ಉದ್ಘಾಟಿಸುವುದರ ಜೊತೆಗೆ ಬೋಧನಾ ಸಹಾಯ ಯೋಜನೆಯನ್ನು ಉದ್ಘಾಟಿಸುವುದು ಮತ್ತು ಬಹು ಶೈಕ್ಷಣಿಕ ಯೋಜನೆಗಳಿಗೆ ಶಿಲಾನ್ಯಾಸ ಸಮಾರಂಭಗಳನ್ನು ನಡೆಸುವುದರೊಂದಿಗೆ, ಪ್ರಧಾನಮಂತ್ರಿಯವರು ಈ ಉಪಕ್ರಮಗಳನ್ನು ಯುವಜನರ ಭವಿಷ್ಯದ ವೃತ್ತಿಜೀವನಕ್ಕಾಗಿರುವ ಉಡಾವಣಾ ಪ್ಯಾಡ್‌ಗಳೆಂದು ಬಣ್ಣಿಸಿದರು. ಕೆಲವೇ ಗಂಟೆಗಳ ಹಿಂದೆ, ನಾನು ಪ್ರಭಾಸ್ ಪಠಾಣ್‌ನಲ್ಲಿ ಸೋಮನಾಥ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದ್ದೆ, ಮತ್ತು ಈಗ ನಾವು ಇಲ್ಲಿ ಪರಿವರ್ತನಾತ್ಮಕ ಶಿಕ್ಷಣ ಸಂಸ್ಥೆಗಳನ್ನು ಉದ್ಘಾಟಿಸುತ್ತಿದ್ದೇವೆ, ಈ ಸಂಯೋಜನೆ ಪರಂಪರೆ ಮತ್ತು ಪ್ರಗತಿ ಹೇಗೆ ಒಟ್ಟಿಗೆ ಮುಂದುವರಿಯುತ್ತದೆ ಎಂಬುದನ್ನು ಸಂಕೇತಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.ವಡೋದರಾಕ್ಕೆ ಹೋಗುವ ದಾರಿಯಲ್ಲಿ ತೆಗೆದ ಸೋಮನಾಥ ದೇವಾಲಯದ ಛಾಯಾಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
May 11th, 05:14 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೋಮನಾಥದಿಂದ ವಡೋದರಾಕ್ಕೆ ಹೋಗುವ ದಾರಿಯಲ್ಲಿ ತೆಗೆದ ಸೋಮನಾಥ ದೇವಾಲಯದ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ.ಸೋಮನಾಥದಲ್ಲಿ ಐಎಎಫ್ ನ ಸೂರ್ಯಕಿರಣ್ ತಂಡದ ಮೈಪುಳಕಿತಗೊಳಿಸುವ ಹಾರಾಟವನ್ಮು ವೀಕ್ಷಿಸಿದ ಪ್ರಧಾನಮಂತ್ರಿ
May 11th, 04:13 pm
ಸೋಮನಾಥ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ಮೈಪುಳಕಿತಗೊಳಿಸುವ ಹಾರಾಟವನ್ಮು ಪ್ರಧಾನಮಂತ್ರಿ ಅವರು ವೀಕ್ಷಿಸಿದರು.ಗುಜರಾತ್ ನ ಸೋಮನಾಥ ದೇವಾಲಯದಲ್ಲಿ ಮಹಾಪೂಜೆ ಮತ್ತು ಕುಂಭಾಭಿಷೇಕ ನೆರವೇರಿಸಿದ ಪ್ರಧಾನಮಂತ್ರಿ
May 11th, 03:49 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಸೋಮನಾಥ ದೇವಾಲಯದಲ್ಲಿ ಮಹಾಪೂಜೆ ಮತ್ತು ಕುಂಭಾಭಿಷೇಕ ನೆರವೇರಿಸಿದರು.ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ
May 11th, 12:28 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದರು ಮತ್ತು ಪುನರ್ ನಿರ್ಮಾಣಗೊಂಡ ದೇವಾಲಯವು ಭಕ್ತರಿಗೆ ಬಾಗಿಲು ತೆರೆದು 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.ಗುಜರಾತ್‌ನ ಪ್ರಭಾಸ್ ಪಠಾಣ್‌ನಲ್ಲಿ ನಡೆದ ಸೋಮನಾಥ್ ಅಮೃತ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 11th, 10:20 am
ಗುಜರಾತ್ ಮುಖ್ಯಮಂತ್ರಿಗಳಾದ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಉಪಮುಖ್ಯಮಂತ್ರಿ ಭಾಯಿ ಹರ್ಷ ಸಂಘವಿ ಜಿ, ಗುಜರಾತ್ ಸರ್ಕಾರದ ಸಚಿವರೆ, ಸಂಸತ್ ಸದಸ್ಯರೆ ಮತ್ತು ಶಾಸಕರೆ, ಇಲ್ಲಿರುವ ಎಲ್ಲಾ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ,ಗುಜರಾತ್‌ನ ಪುನಃಸ್ಥಾಪಿತ ಸೋಮನಾಥ ದೇವಾಲಯ ಉದ್ಘಾಟನೆಯಾಗಿ 75 ವರ್ಷಗಳು, ಸೋಮನಾಥ ಅಮೃತ ಮಹೋತ್ಸವದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗಿ
May 11th, 10:15 am
ಗುಜರಾತ್‌ನ ಪುನಃಸ್ಥಾಪಿತ ಸೋಮನಾಥ ದೇವಾಲಯ ಉದ್ಘಾಟನೆಗೊಂಡು 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಂದು ಸೋಮನಾಥ ಅಮೃತ ಮಹೋತ್ಸವದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು.ಗುಜರಾತ್‌ನ ಜಾಮ್‌ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರ ವಿಶೇಷ ಭಾಷಣ
May 10th, 09:35 pm
ಗುಜರಾತ್‌ನ ಜಾಮ್‌ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಗುಜರಾತ್‌ನ ಗಮನಾರ್ಹ ಅಭಿವೃದ್ಧಿ ಪ್ರಯಾಣವನ್ನು ಪ್ರತಿಬಿಂಬಿಸುತ್ತಾ, ರಾಜ್ಯವು ಉಪ್ಪು ಉತ್ಪಾದನೆಗೆ ಮಾತ್ರ ಹೆಸರುವಾಸಿಯಾಗಿದ್ದ ರಾಜ್ಯದಿಂದ ಸೆಮಿಕಂಡಕ್ಟರ್‌ಗಳು, ಮೆಟ್ರೋ ಕೋಚ್‌ಗಳು, ರೈಲ್ವೆ ಎಂಜಿನ್‌ಗಳು, ನವೀಕರಿಸಬಹುದಾದ ಇಂಧನ ಮತ್ತು ಉದಯೋನ್ಮುಖ ವಿಮಾನ ಉತ್ಪಾದನೆಯ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ರಾಜ್ಯದ ನಿರಂತರ ಬೆಳವಣಿಗೆ ಮತ್ತು ಪ್ರಗತಿಗೆ ಗುಜರಾತ್ ಜನರು ಮತ್ತು ಬಿಜೆಪಿ ಕಾರ್ಯಕರ್ತರಿಗೆ ಅವರು ಮನ್ನಣೆ ನೀಡಿದರು.ಪ್ರಧಾನಮಂತ್ರಿ ಮೇ 10-11 ರಂದು ಗುಜರಾತ್‌ಗೆ ಭೇಟಿ
May 09th, 11:19 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮೇ 10-11 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಅವರು ಮೇ 10 ರಂದು ತಡರಾತ್ರಿ ಗುಜರಾತ್‌ನ ಜಾಮ್‌ನಗರಕ್ಕೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿ ಮೇ 11 ರಂದು ಬೆಳಿಗ್ಗೆ 10:15 ರ ಸುಮಾರಿಗೆ ಸೋಮನಾಥ ದೇವಾಲಯದಲ್ಲಿ ಸೋಮನಾಥ ಅಮೃತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಂತರ ಪ್ರಧಾನಮಂತ್ರಿ ಸಂಜೆ 6 ಗಂಟೆಗೆ ವಡೋದರಾಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಸರ್ದಾರ್ ಧಾಮ್ ವಸತಿ ನಿಲಯವನ್ನು ಉದ್ಘಾಟಿಸಲಿದ್ದಾರೆ. ಎರಡೂ ಸಂದರ್ಭಗಳಲ್ಲಿ ಅವರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ಗುಜರಾತ್‌ನಲ್ಲಿ ಆಯೋಜಿಸಿದ್ದ ಸೋಮನಾಥ್ ಸ್ವಾಭಿಮಾನ್ ಪರ್ವ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 11th, 12:00 pm
ಗುಜರಾತ್‌ನ ಗೌರವಾನ್ವಿತ ಮತ್ತು ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಶಕ್ತಿಶಾಲಿ ಉಪಮುಖ್ಯಮಂತ್ರಿ ಹರ್ಷ ಸಂಘವಿ ಜಿ, ಗುಜರಾತ್ ಸರ್ಕಾರದ ಸಚಿವರಾದ ಜಿತುಭಾಯಿ ವಾಘಾನಿ, ಅರ್ಜುನ್‌ಭಾಯಿ ಮೋಧ್ವಾಡಿಯಾ, ಡಾ. ಪ್ರದ್ಯುಮ್ನ ವಾಜ, ಕೌಶಿಕ್‌ಭಾಯಿ ವೆಕಾರಿಯಾ, ಸಂಸತ್ ಸದಸ್ಯ ರಾಜೇಶ್‌ಭಾಯಿ, ಇಲ್ಲಿರುವ ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ. ಇಂದು ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರಿಗೂ ಸಹ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ - ಸೋಮನಾಥನಿಗೆ ವಿಜಯವಾಗಲಿ.ಗುಜರಾತ್ ನ ಸೋಮನಾಥದಲ್ಲಿ ನಡೆದ 'ಸೋಮನಾಥ ಸ್ವಾಭಿಮಾನ ಪರ್ವ' ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
January 11th, 11:41 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಸೋಮನಾಥದಲ್ಲಿ ನಡೆದ 'ಸೋಮನಾಥ ಸ್ವಾಭಿಮಾನ ಪರ್ವ' ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಈ ಸಮಯ ಅಸಾಧಾರಣವಾದುದು, ಈ ವಾತಾವರಣ ಅಸಾಧಾರಣವಾದುದು ಮತ್ತು ಈ ಆಚರಣೆಯೂ ಅಸಾಧಾರಣವಾದುದು ಎಂದು ಅವರು ಬಣ್ಣಿಸಿದರು. ಒಂದು ಕಡೆ ಸಾಕ್ಷಾತ್ ಮಹಾದೇವನಿದ್ದರೆ, ಮತ್ತೊಂದೆಡೆ ಸಮುದ್ರದ ಬೃಹತ್ ಅಲೆಗಳು, ಸೂರ್ಯನ ಕಿರಣಗಳು, ಮಂತ್ರಘೋಷಗಳ ಅನುರಣನ ಮತ್ತು ಭಕ್ತಿಯ ಉಲ್ಬಣವಿದೆ ಎಂದು ಅವರು ವಿವರಿಸಿದರು. ಈ ದೈವಿಕ ಪರಿಸರದಲ್ಲಿ ಸೋಮನಾಥನ ಭಕ್ತರ ಉಪಸ್ಥಿತಿಯು ಈ ಸಂದರ್ಭವನ್ನು ಮತ್ತಷ್ಟು ಭವ್ಯ ಹಾಗೂ ಪವಿತ್ರವಾಗಿಸಿದೆ ಎಂದು ಅವರು ತಿಳಿಸಿದರು. ಸೋಮನಾಥ ದೇವಾಲಯ ಟ್ರಸ್ಟ್‌ನ ಅಧ್ಯಕ್ಷರಾಗಿ, ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ತಮ್ಮ ಮಹಾನ್ ಸೌಭಾಗ್ಯ ಎಂದು ಶ್ರೀ ಮೋದಿ ಹಂಚಿಕೊಂಡರು. ಕಳೆದ 72 ಗಂಟೆಗಳಿಂದ ನಿರಂತರವಾಗಿ ನಡೆಯುತ್ತಿರುವ ಓಂಕಾರ ಜಪ ಮತ್ತು ಮಂತ್ರಘೋಷಗಳ ಪಠಣವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾವಿರ ಡ್ರೋನ್ ಗಳು ಮತ್ತು ವೇದ ಪಾಠಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಸೋಮನಾಥದ ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಪ್ರಸ್ತುತಪಡಿಸಿದ್ದನ್ನು ಅವರು ಉಲ್ಲೇಖಿಸಿದರು. ಅಲ್ಲದೆ, ಇಂದು 108 ಕುದುರೆಗಳನ್ನೊಳಗೊಂಡ 'ಶೌರ್ಯ ಯಾತ್ರೆ' ದೇವಾಲಯವನ್ನು ತಲುಪಿದೆ ಎಂದು ತಿಳಿಸಿದರು. ಮಂತ್ರಗಳು ಮತ್ತು ಭಜನೆಗಳ ಈ ಮನಮೋಹಕ ಪ್ರಸ್ತುತಿಯು ಪದಗಳಿಗೆ ನಿಲುಕದ್ದು, ಈ ಅನುಭವವನ್ನು ಕಾಲ ಮಾತ್ರವೇ ಸೆರೆಹಿಡಿಯಲು ಸಾಧ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಸಂಭ್ರಮವು ಕೇವಲ ಒಂದು ಉತ್ಸವವಲ್ಲ; ಇದು ಸ್ವಾಭಿಮಾನ, ಗೌರವ, ಘನತೆ, ಜ್ಞಾನ, ಭವ್ಯತೆ, ಪರಂಪರೆ, ಆಧ್ಯಾತ್ಮಿಕತೆ, ಸಾಕ್ಷಾತ್ಕಾರ, ಆನಂದ ಮತ್ತು ಆತ್ಮೀಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಎಲ್ಲಕ್ಕಿಂತ ಮಿಗಿಲಾಗಿ, ಈ ಕಾರ್ಯಕ್ರಮವು ಭಗವಾನ್ ಮಹಾದೇವನ ಆಶೀರ್ವಾದವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.ಸೋಮನಾಥ ದೇಗುಲ ಭೇಟಿಯ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
January 10th, 11:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.ಪ್ರಧಾನಮಂತ್ರಿ ಜನವರಿ 10-11 ರಂದು ಗುಜರಾತ್‌ನ ಸೋಮನಾಥಕ್ಕೆ ಭೇಟಿ, ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗಿ
January 09th, 12:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 10-11 ರಂದು ಗುಜರಾತ್‌ನ ಸೋಮನಾಥಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗವಹಿಸಲಿದ್ದಾರೆ. ಜನವರಿ 10 ರಂದು ರಾತ್ರಿ 8 ಗಂಟೆಗೆ ಪ್ರಧಾನಮಂತ್ರಿ ಓಂಕಾರ ಮಂತ್ರ ಪಠಣದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಸೋಮನಾಥ ದೇವಾಲಯದಲ್ಲಿ ಡ್ರೋಣ್ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.ಪ್ರಧಾನಮಂತ್ರಿ ಜನವರಿ 10-12 ರವರೆಗೆ ಗುಜರಾತ್ ಭೇಟಿ
January 09th, 12:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 10 ರಿಂದ 12 ರವರೆಗೆ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಪ್ರಧಾನಮಂತ್ರಿ ಅವರು ಜನವರಿ 10 ರಂದು ಸಂಜೆ ಸೋಮನಾಥಕ್ಕೆ ಆಗಮಿಸಲಿದ್ದಾರೆ ಮತ್ತು ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನಮಂತ್ರಿ ಓಂಕಾರ ಮಂತ್ರ ಪಠಣದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಅವರು ಸೋಮನಾಥ ದೇವಾಲಯದಲ್ಲಿ ಡ್ರೋಣ್ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.ದೇಶದ ಸಾಮೂಹಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಸೋಮನಾಥ ದೇಗುಲದ ಕಾಲಾತೀತ ಪಾತ್ರವನ್ನು ಸುಭಾಷಿತ ಮೂಲಕ ಪ್ರಧಾನಮಂತ್ರಿ ಅವರು ಸಾರಿದ್ದಾರೆ
January 09th, 08:44 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪವಿತ್ರ ಸೋಮನಾಥ ದೇವರಿಗೆ ನಮನ ಸಲ್ಲಿಸಿದ್ದಾರೆ. ರಾಷ್ಟ್ರದ ಸಾಮೂಹಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ದೇವಾಲಯದ ಕಾಲಾತೀತ ಪಾತ್ರವನ್ನು ಅವರು ಸುಭಾಷಿತದ ಮೂಲಕ ಸಾರಿದ್ದಾರೆ.ಸೋಮನಾಥ ಸ್ವಾಭಿಮಾನ್ ಪರ್ವ್ ಆರಂಭದ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
January 08th, 10:22 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೋಮನಾಥ ಸ್ವಾಭಿಮಾನ್ ಪರ್ವ ಆರಂಭದ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಹಸ್ರಮಾನಗಳಿಗೂ ಹೆಚ್ಚು ಕಾಲದಿಂದ ಸೋಮನಾಥವನ್ನು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿರಿಸಿರುವ ಕಾಲಾತೀತ ನಾಗರಿಕತೆಯ ಸ್ಫೂರ್ತಿಯನ್ನು ಅವರು ಸ್ಮರಿಸಿದರು.ಗಾಂಧಿನಗರದಲ್ಲಿ ನಡೆದ ಗುಜರಾತ್ ನಗರಾಭಿವೃದ್ಧಿ ಇತಿಹಾಸದ 20ನೇ ವಾರ್ಷಿಕೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
May 27th, 11:30 am
ವೇದಿಕೆಯಲ್ಲಿ ಉಪಸ್ಥಿತರಿರುವ ಗುಜರಾತ್ ರಾಜ್ಯಪಾಲರಾದ ಗೌರವಾನ್ವಿತ ಆಚಾರ್ಯ ದೇವವ್ರತ ಜೀ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳೆ, ಮನೋಹರ್ ಲಾಲ್ ಜೀ, ಸಿ.ಆರ್. ಪಾಟೀಲ್ ಜೀ, ಗುಜರಾತ್ ಸರ್ಕಾರದ ಸಚಿವರೆ, ಸಂಸದರೆ, ಶಾಸಕರೆ ಮತ್ತು ಗುಜರಾತ್‌ನ ವಿವಿಧೆಡೆಯಿಂದ ಆಗಮಿಸಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,ಗುಜರಾತ್ ನಗರ ಬೆಳವಣಿಗೆಯ 20 ವರ್ಷಗಳ ಸಂಭ್ರಮಾಚರಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
May 27th, 11:09 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಗುಜರಾತ್ ನಗರ ವಿಕಾಸದ 20 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, 'ನಗರ ಅಭಿವೃದ್ಧಿ ವರ್ಷ 2005'ರ 20 ವರ್ಷಗಳ ನೆನಪಿಗಾಗಿ ನಗರ ಅಭಿವೃದ್ಧಿ ವರ್ಷ 2025 ಅನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಲ್ಲಿ ವಡೋದರ, ದಹೋದ್, ಭುಜ್, ಅಹಮದಾಬಾದ್ ಮತ್ತು ಗಾಂಧಿನಗರಕ್ಕೆ ಭೇಟಿ ನೀಡಿದಾಗ, ಆಪರೇಷನ್ ಸಿಂಧೂರ್ನ ಯಶಸ್ಸಿನ ಘೋಷಣೆಗಳು ಮತ್ತು ಹಾರಾಡುತ್ತಿದ್ದ ತ್ರಿವರ್ಣ ಧ್ವಜಗಳೊಂದಿಗೆ ದೇಶಭಕ್ತಿಯ ಉತ್ಸಾಹವನ್ನು ಅನುಭವಿಸಿದೆ. ಈ ದೃಶ್ಯ ಅದ್ಭುತವಾಗಿತ್ತು ಮತ್ತು ಈ ಭಾವನೆ ಕೇವಲ ಗುಜರಾತ್ ನಲ್ಲಿ ಮಾತ್ರವಲ್ಲ, ಭಾರತದ ಮೂಲೆಮೂಲೆಯಲ್ಲೂ ಮತ್ತು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಇತ್ತು. ಭಾರತವು ಭಯೋತ್ಪಾದನೆಯ ಮುಳ್ಳನ್ನು ಕಿತ್ತೊಗೆಯಲು ನಿರ್ಧರಿಸಿತ್ತು ಮತ್ತು ಅದನ್ನು ದೃಢ ಸಂಕಲ್ಪದಿಂದ ಸಾಧಿಸಿತು ಎಂದು ಪ್ರಧಾನಮಂತ್ರಿಗಳು ನುಡಿದರು.ಗುಜರಾತ್‌ನ ದಾಹೋದ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
May 26th, 11:45 am
ಗುಜರಾತ್‌ನ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ, ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಗುಜರಾತ್ ಸಚಿವ ಸಂಪುಟದ ನನ್ನ ಎಲ್ಲಾ ಸಹೋದ್ಯೋಗಿಗಳೆ, ಸಂಸತ್ ಸದಸ್ಯರೆ, ವಿಧಾನಸಭೆ ಸದಸ್ಯರೆ, ಇತರೆ ಗಣ್ಯರೆ, ದಾಹೋದ್‌ನ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!