ಸ್ವಾಮಿನಾರಾಯಣ ಶಿಕ್ಷಾಪತ್ರಿಯ ದ್ವಿಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
January 23rd, 02:12 pm
ಇಂದು ನಾವೆಲ್ಲರೂ ಒಂದು ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದ್ದೇವೆ. 200 ವರ್ಷಗಳ ಈ ಸಂದರ್ಭದಲ್ಲಿ, ಸ್ವಾಮಿನಾರಾಯಣ ಶಿಕ್ಷಾಪತ್ರಿಯ ದ್ವಿಶತಮಾನೋತ್ಸವ ಆಚರಣೆಯು, ನಾವೆಲ್ಲರೂ ಈ ಪವಿತ್ರ ಉತ್ಸವದಲ್ಲಿ ಭಾಗವಹಿಸುತ್ತಿರುವುದು ನಮಗೆಲ್ಲರಿಗೂ ಶುಭದ ಸಂಗತಿ. ಈ ಪವಿತ್ರ ಅವಧಿಯಲ್ಲಿ, ನಿಮ್ಮೆಲ್ಲ ಸಂತರಿಗೆ ನಾನು ನಮಸ್ಕರಿಸುತ್ತೇನೆ. ದ್ವಿಶತಮಾನೋತ್ಸವ ಉತ್ಸವದಂದು ಸ್ವಾಮಿನಾರಾಯಣರ ಕೋಟ್ಯಂತರ ಅನುಯಾಯಿಗಳನ್ನು ನಾನು ಅಭಿನಂದಿಸುತ್ತೇನೆ.ʻಶಿಕ್ಷಾಪತ್ರಿ ದ್ವಿಶತಾಬ್ದಿ ಮಹೋತ್ಸವʼ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 23rd, 02:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಶಿಕ್ಷಾಪತ್ರಿ ದ್ವಿಶತಾಬ್ದಿ ಮಹೋತ್ಸವʼದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ತಮ್ಮ ಮಾತುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ಭಗವಾನ್ ಸ್ವಾಮಿನಾರಾಯಣ ಅವರ ʻಶಿಕ್ಷಾಪತ್ರಿʼಯ 200ನೇ ವರ್ಷಾಚರಣೆಯ ವಿಶೇಷ ಸಂದರ್ಭಕ್ಕೆ ಇಂದು ಎಲ್ಲರೂ ಸಾಕ್ಷಿಯಾಗುತ್ತಿದ್ದಾರೆ ಎಂದು ಒತ್ತಿ ಹೇಳಿದರು. ದ್ವಿಶತಮಾನೋತ್ಸವ ಆಚರಣೆಯು ಈ ಪವಿತ್ರ ಸಂದರ್ಭದ ಭಾಗಿಯಾಗುವುದು ನಿಜಕ್ಕೂ ಪ್ರತಿಯೊಬ್ಬರ ಸೌಭಾಗ್ಯವೇ ಸರಿ ಎಂದರು. ಈ ಪವಿತ್ರ ಸಮಯದಲ್ಲಿ ಎಲ್ಲಾ ಸಂತರಿಗೆ ನಮಸ್ಕರಿಸುವುದಾಗಿ ಹೇಳಿದ ಶ್ರೀ ಮೋದಿ ಅವರು, ದ್ವಿಶತಮಾನೋತ್ಸವದ ಸಂದರ್ಭದಲ್ಲಿ ಭಗವಾನ್ ಸ್ವಾಮಿನಾರಾಯಣರ ಕೋಟ್ಯಂತರ ಅನುಯಾಯಿಗಳಿಗೆ ಶುಭಾಶಯಗಳನ್ನು ಕೋರಿದರು.ಗುಜರಾತ್‌ನಲ್ಲಿ ಆಯೋಜಿಸಿದ್ದ ಸೋಮನಾಥ್ ಸ್ವಾಭಿಮಾನ್ ಪರ್ವ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 11th, 12:00 pm
ಗುಜರಾತ್‌ನ ಗೌರವಾನ್ವಿತ ಮತ್ತು ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಶಕ್ತಿಶಾಲಿ ಉಪಮುಖ್ಯಮಂತ್ರಿ ಹರ್ಷ ಸಂಘವಿ ಜಿ, ಗುಜರಾತ್ ಸರ್ಕಾರದ ಸಚಿವರಾದ ಜಿತುಭಾಯಿ ವಾಘಾನಿ, ಅರ್ಜುನ್‌ಭಾಯಿ ಮೋಧ್ವಾಡಿಯಾ, ಡಾ. ಪ್ರದ್ಯುಮ್ನ ವಾಜ, ಕೌಶಿಕ್‌ಭಾಯಿ ವೆಕಾರಿಯಾ, ಸಂಸತ್ ಸದಸ್ಯ ರಾಜೇಶ್‌ಭಾಯಿ, ಇಲ್ಲಿರುವ ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ. ಇಂದು ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರಿಗೂ ಸಹ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ - ಸೋಮನಾಥನಿಗೆ ವಿಜಯವಾಗಲಿ.ಗುಜರಾತ್ ನ ಸೋಮನಾಥದಲ್ಲಿ ನಡೆದ 'ಸೋಮನಾಥ ಸ್ವಾಭಿಮಾನ ಪರ್ವ' ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
January 11th, 11:41 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಸೋಮನಾಥದಲ್ಲಿ ನಡೆದ 'ಸೋಮನಾಥ ಸ್ವಾಭಿಮಾನ ಪರ್ವ' ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಈ ಸಮಯ ಅಸಾಧಾರಣವಾದುದು, ಈ ವಾತಾವರಣ ಅಸಾಧಾರಣವಾದುದು ಮತ್ತು ಈ ಆಚರಣೆಯೂ ಅಸಾಧಾರಣವಾದುದು ಎಂದು ಅವರು ಬಣ್ಣಿಸಿದರು. ಒಂದು ಕಡೆ ಸಾಕ್ಷಾತ್ ಮಹಾದೇವನಿದ್ದರೆ, ಮತ್ತೊಂದೆಡೆ ಸಮುದ್ರದ ಬೃಹತ್ ಅಲೆಗಳು, ಸೂರ್ಯನ ಕಿರಣಗಳು, ಮಂತ್ರಘೋಷಗಳ ಅನುರಣನ ಮತ್ತು ಭಕ್ತಿಯ ಉಲ್ಬಣವಿದೆ ಎಂದು ಅವರು ವಿವರಿಸಿದರು. ಈ ದೈವಿಕ ಪರಿಸರದಲ್ಲಿ ಸೋಮನಾಥನ ಭಕ್ತರ ಉಪಸ್ಥಿತಿಯು ಈ ಸಂದರ್ಭವನ್ನು ಮತ್ತಷ್ಟು ಭವ್ಯ ಹಾಗೂ ಪವಿತ್ರವಾಗಿಸಿದೆ ಎಂದು ಅವರು ತಿಳಿಸಿದರು. ಸೋಮನಾಥ ದೇವಾಲಯ ಟ್ರಸ್ಟ್‌ನ ಅಧ್ಯಕ್ಷರಾಗಿ, ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ತಮ್ಮ ಮಹಾನ್ ಸೌಭಾಗ್ಯ ಎಂದು ಶ್ರೀ ಮೋದಿ ಹಂಚಿಕೊಂಡರು. ಕಳೆದ 72 ಗಂಟೆಗಳಿಂದ ನಿರಂತರವಾಗಿ ನಡೆಯುತ್ತಿರುವ ಓಂಕಾರ ಜಪ ಮತ್ತು ಮಂತ್ರಘೋಷಗಳ ಪಠಣವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾವಿರ ಡ್ರೋನ್ ಗಳು ಮತ್ತು ವೇದ ಪಾಠಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಸೋಮನಾಥದ ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಪ್ರಸ್ತುತಪಡಿಸಿದ್ದನ್ನು ಅವರು ಉಲ್ಲೇಖಿಸಿದರು. ಅಲ್ಲದೆ, ಇಂದು 108 ಕುದುರೆಗಳನ್ನೊಳಗೊಂಡ 'ಶೌರ್ಯ ಯಾತ್ರೆ' ದೇವಾಲಯವನ್ನು ತಲುಪಿದೆ ಎಂದು ತಿಳಿಸಿದರು. ಮಂತ್ರಗಳು ಮತ್ತು ಭಜನೆಗಳ ಈ ಮನಮೋಹಕ ಪ್ರಸ್ತುತಿಯು ಪದಗಳಿಗೆ ನಿಲುಕದ್ದು, ಈ ಅನುಭವವನ್ನು ಕಾಲ ಮಾತ್ರವೇ ಸೆರೆಹಿಡಿಯಲು ಸಾಧ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಸಂಭ್ರಮವು ಕೇವಲ ಒಂದು ಉತ್ಸವವಲ್ಲ; ಇದು ಸ್ವಾಭಿಮಾನ, ಗೌರವ, ಘನತೆ, ಜ್ಞಾನ, ಭವ್ಯತೆ, ಪರಂಪರೆ, ಆಧ್ಯಾತ್ಮಿಕತೆ, ಸಾಕ್ಷಾತ್ಕಾರ, ಆನಂದ ಮತ್ತು ಆತ್ಮೀಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಎಲ್ಲಕ್ಕಿಂತ ಮಿಗಿಲಾಗಿ, ಈ ಕಾರ್ಯಕ್ರಮವು ಭಗವಾನ್ ಮಹಾದೇವನ ಆಶೀರ್ವಾದವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.ಸೋಮನಾಥ ದೇಗುಲ ಭೇಟಿಯ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
January 10th, 11:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.ಪ್ರಧಾನಮಂತ್ರಿ ಜನವರಿ 10-11 ರಂದು ಗುಜರಾತ್‌ನ ಸೋಮನಾಥಕ್ಕೆ ಭೇಟಿ, ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗಿ
January 09th, 12:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 10-11 ರಂದು ಗುಜರಾತ್‌ನ ಸೋಮನಾಥಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗವಹಿಸಲಿದ್ದಾರೆ. ಜನವರಿ 10 ರಂದು ರಾತ್ರಿ 8 ಗಂಟೆಗೆ ಪ್ರಧಾನಮಂತ್ರಿ ಓಂಕಾರ ಮಂತ್ರ ಪಠಣದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಸೋಮನಾಥ ದೇವಾಲಯದಲ್ಲಿ ಡ್ರೋಣ್ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.ಪ್ರಧಾನಮಂತ್ರಿ ಜನವರಿ 10-12 ರವರೆಗೆ ಗುಜರಾತ್ ಭೇಟಿ
January 09th, 12:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 10 ರಿಂದ 12 ರವರೆಗೆ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಪ್ರಧಾನಮಂತ್ರಿ ಅವರು ಜನವರಿ 10 ರಂದು ಸಂಜೆ ಸೋಮನಾಥಕ್ಕೆ ಆಗಮಿಸಲಿದ್ದಾರೆ ಮತ್ತು ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನಮಂತ್ರಿ ಓಂಕಾರ ಮಂತ್ರ ಪಠಣದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಅವರು ಸೋಮನಾಥ ದೇವಾಲಯದಲ್ಲಿ ಡ್ರೋಣ್ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.ದೇಶದ ಸಾಮೂಹಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಸೋಮನಾಥ ದೇಗುಲದ ಕಾಲಾತೀತ ಪಾತ್ರವನ್ನು ಸುಭಾಷಿತ ಮೂಲಕ ಪ್ರಧಾನಮಂತ್ರಿ ಅವರು ಸಾರಿದ್ದಾರೆ
January 09th, 08:44 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪವಿತ್ರ ಸೋಮನಾಥ ದೇವರಿಗೆ ನಮನ ಸಲ್ಲಿಸಿದ್ದಾರೆ. ರಾಷ್ಟ್ರದ ಸಾಮೂಹಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ದೇವಾಲಯದ ಕಾಲಾತೀತ ಪಾತ್ರವನ್ನು ಅವರು ಸುಭಾಷಿತದ ಮೂಲಕ ಸಾರಿದ್ದಾರೆ.ಸೋಮನಾಥ ಸ್ವಾಭಿಮಾನ್ ಪರ್ವ್ ಆರಂಭದ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
January 08th, 10:22 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೋಮನಾಥ ಸ್ವಾಭಿಮಾನ್ ಪರ್ವ ಆರಂಭದ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಹಸ್ರಮಾನಗಳಿಗೂ ಹೆಚ್ಚು ಕಾಲದಿಂದ ಸೋಮನಾಥವನ್ನು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿರಿಸಿರುವ ಕಾಲಾತೀತ ನಾಗರಿಕತೆಯ ಸ್ಫೂರ್ತಿಯನ್ನು ಅವರು ಸ್ಮರಿಸಿದರು.