Today, India is becoming the key growth engine of the global economy: PM Modi
December 06th, 08:14 pm
In his address at the Hindustan Times Leadership Summit, PM Modi highlighted India’s Quarter-2 GDP growth of over 8%, noting that today’s India is not only transforming itself but also transforming tomorrow. Criticising the use of the term “Hindu rate of growth,” he said India is now striving to shed its colonial mindset and reclaim pride across every sector. The PM appealed to all 140 crore Indians to work together to rid the country fully of the colonial mindset.Prime Minister Shri Narendra Modi addresses the Hindustan Times Leadership Summit 2025 in New Delhi
December 06th, 08:13 pm
In his address at the Hindustan Times Leadership Summit, PM Modi highlighted India’s Quarter-2 GDP growth of over 8%, noting that today’s India is not only transforming itself but also transforming tomorrow. Criticising the use of the term “Hindu rate of growth,” he said India is now striving to shed its colonial mindset and reclaim pride across every sector. The PM appealed to all 140 crore Indians to work together to rid the country fully of the colonial mindset.ಐ.ಬಿ.ಎಸ್.ಎ ನಾಯಕರ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ
November 23rd, 12:45 pm
ಐಬಿಎಸ್‌ಎ ಕೇವಲ ಮೂರು ದೇಶಗಳ ವೇದಿಕೆಯಲ್ಲ; ಇದು ಮೂರು ಖಂಡಗಳು, ಮೂರು ಪ್ರಮುಖ ಪ್ರಜಾಪ್ರಭುತ್ವ ಶಕ್ತಿಗಳು ಮತ್ತು ಮೂರು ಮಹತ್ವದ ಆರ್ಥಿಕತೆಗಳನ್ನು ಜೋಡಿಸುವ ಪ್ರಮುಖ ವೇದಿಕೆಯಾಗಿದೆ. ಇದು ನಮ್ಮ ವೈವಿಧ್ಯತೆ, ಹಂಚಿಕೆಯ ಮೌಲ್ಯಗಳು ಮತ್ತು ಹಂಚಿಕೆಯ ಆಕಾಂಕ್ಷೆಗಳಲ್ಲಿ ಬೇರೂರಿರುವ ಆಳವಾದ ಮತ್ತು ನಿರಂತರ ಪಾಲುದಾರಿಕೆಯಾಗಿದೆ.ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಐ.ಬಿ.ಎಸ್.ಎ ನಾಯಕರ ಸಭೆಯಲ್ಲಿ ಪ್ರಧಾನಮಂತ್ರಿ ಭಾಗಿ
November 23rd, 12:30 pm
ಸಭೆಯನ್ನು ಸಕಾಲಿಕ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಕಾಕತಾಳೀಯವೆಂದರೆ ಇದು ಆಫ್ರಿಕಾದ ನೆಲದಲ್ಲಿ ನಡೆದ ಮೊದಲ ಜಿ20 ಶೃಂಗಸಭೆಯಾಗಿದೆ ಮತ್ತು ಜಾಗತಿಕ ದಕ್ಷಿಣ ದೇಶಗಳು ಸತತ ನಾಲ್ಕು ಜಿ20 ಸಭೆಗಳ ಅಧ್ಯಕ್ಷತೆಗಳನ್ನು ವಹಿಸಿಕೊಂಡವು, ಅವುಗಳಲ್ಲಿ ಕೊನೆಯ ಮೂರು ಐ.ಬಿ.ಎಸ್.ಎ ಸದಸ್ಯ ರಾಷ್ಟ್ರಗಳದ್ದಾಗಿದ್ದವು ಎಂದು ಉಲ್ಲೇಖಿಸಿದರು. ಇದು ಮಾನವ ಕೇಂದ್ರಿತ ಅಭಿವೃದ್ಧಿ, ಬಹುಪಕ್ಷೀಯ ಸುಧಾರಣೆ ಮತ್ತು ಸುಸ್ಥಿರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದ ಹಲವಾರು ಪ್ರಮುಖ ಉಪಕ್ರಮಗಳಿಗೆ ಕಾರಣವಾಗಿದೆ ಎಂದು ಅವರು ಉಲ್ಲೇಖಿಸಿದರು.ಭೂತಾನ್ ನ ಮಹಾರಾಜ ಅವರ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
November 11th, 12:00 pm
ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಇದರ ಹಿಂದಿನ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಬಿಡಲಾಗುವುದಿಲ್ಲ.ಭೂತಾನ್ ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
November 11th, 11:39 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೂತಾನ್ ನ ಥಿಂಪು ನಗರದಲ್ಲಿರುವ ಚಾಂಗ್ಲಿಮೆಥಾಂಗ್ ಸಂಭ್ರಮಾಚರಣೆ ಮೈದಾನದಲ್ಲಿ ನಡೆದ, ಭೂತಾನ್ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಭೂತಾನ್ನ ದೊರೆ, ಘನತೆವೆತ್ತ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ಅವರಿಗೆ ಹಾಗೂ ನಾಲ್ಕನೇ ದೊರೆ, ಘನತೆವೆತ್ತ ಜಿಗ್ಮೆ ಸಿಂಗ್ಯೆ ವಾಂ ಗ್ಚುಕ್ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು. ಅಲ್ಲದೆ, ರಾಜಮನೆತನದ ಗೌರವಾನ್ವಿತ ಸದಸ್ಯರು, ಭೂತಾನ್ ನ ಪ್ರಧಾನ ಮಂತ್ರಿಗಳಾದ ಘನತೆವೆತ್ತ ಶ್ರೀ ಶೆರಿಂಗ್ ತೊಬ್ಗೆ ಅವರು ಹಾಗೂ ಅಲ್ಲಿ ಉಪಸ್ಥಿತರಿದ್ದ ಇತರ ಗಣ್ಯಾತಿಗಣ್ಯರಿಗೆ ಪ್ರಧಾನಮಂತ್ರಿಗಳು ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಿದರು.ನವೆಂಬರ್ 9ರಂದು ಡೆಹ್ರಾಡೂನ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
November 08th, 09:26 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಹ್ರಾಡೂನ್ ಗೆ ಭೇಟಿ ನೀಡಲಿದ್ದು, ನವೆಂಬರ್ 9 ರಂದು ಮಧ್ಯಾಹ್ನ 12:30ರ ಸುಮಾರಿಗೆ ಉತ್ತರಾಖಂಡದ ರಚನೆಯ ರಜತ ಮಹೋತ್ಸವ ಆಚರಣೆಯ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿರುವ ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.The energy here today, especially among the youth, says it all - ‘Phir Ek Baar, NDA Sarkar’: PM Modi in Nawada, Bihar
November 02nd, 02:15 pm
In a public rally in Nawada, PM Modi highlighted the enthusiasm among the women of Bihar whenever he visited the state. He noted that from Jeevika Didis powering the rural economy to Lakhpati Didis setting examples of self-reliance, and to Krishi Sakhis, Bank Sakhis and Namo Drone Didis, women are leading the Bihar's transformation. Urging the crowd to switch on their mobile flashlights, he gathered support for the NDAPM Modi addresses large public gatherings in Arrah and Nawada, Bihar
November 02nd, 01:45 pm
Massive crowd attended PM Modi’s rallies in Arrah and Nawada, Bihar, today. Addressing the gathering in Arrah, the PM said that when he sees the enthusiasm of the people, the resolve for a Viksit Bihar becomes even stronger. He emphasized that a Viksit Bihar is the foundation of a Viksit Bharat and explained that by a Viksit Bihar, he envisions strong industrial growth in the state and employment opportunities for the youth within Bihar itself.ನವದೆಹಲಿಯಲ್ಲಿ ನಡೆದ ಕೃಷಿ ಕಾರ್ಯಕ್ರಮದಲ್ಲಿ ರೈತರೊಂದಿಗೆ ಪ್ರಧಾನಮಂತ್ರಿ ಅವರು ನಡೆಸಿದ ಸಂವಾದದ ಕನ್ನಡ ಅವತರಣಿಕೆ
October 12th, 06:45 pm
ರಾಮ್-ರಾಮ್! ನಾನು ಹರಿಯಾಣದ ಹಿಸಾರ್ ಜಿಲ್ಲೆಯವನು. ನಾನು ಕಾಬೂಲಿ ಚನಾ (ಕಡಲೆ) ಕೃಷಿಯೊಂದಿಗೆ ಕೃಷಿ ಮಾಡಲು ಪ್ರಾರಂಭಿಸಿದೆ. ಆರಂಭದಲ್ಲಿ, ಸ್ವಲ್ಪ ಮಾತ್ರ ಇತ್ತು..ಕೃಷಿ ಕ್ಷೇತ್ರದಲ್ಲಿ ₹35,440 ಕೋಟಿ ಮೌಲ್ಯದ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಕೃಷಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರೊಂದಿಗೆ ಸಂವಾದ ನಡೆಸಿದರು
October 12th, 06:25 pm
ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಇಂದು ಆಯೋಜಿಸಲಾಗಿದ್ದ ಕೃಷಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮವು ರೈತರ ಕಲ್ಯಾಣ, ಕೃಷಿಯಲ್ಲಿ ಸ್ವಾವಲಂಬನೆ ಮತ್ತು ಗ್ರಾಮೀಣ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರಿಗಿರುವ ನಿರಂತರ ಬದ್ಧತೆಯನ್ನು ಸಾರುತ್ತದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ರೈತರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರು, ನಂತರ ಕೃಷಿ ವಲಯಕ್ಕಾಗಿ ₹35,440 ಕೋಟಿ ವೆಚ್ಚದ ಎರಡು ಬೃಹತ್ ಯೋಜನೆಗಳಿಗೆ ಚಾಲನೆ ನೀಡಿದರು. ಅವರು ₹24,000 ಕೋಟಿ ವೆಚ್ಚದ 'ಪಿ.ಎಂ. ಧನ ಧಾನ್ಯ ಕೃಷಿ ಯೋಜನೆ' ಹಾಗೂ ₹11,440 ಕೋಟಿ ವೆಚ್ಚದ 'ಬೇಳೆಕಾಳುಗಳಲ್ಲಿ ಆತ್ಮನಿರ್ಭರತೆ ಮಿಷನ್' ಅನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ವಲಯಗಳಿಗೆ ಸಂಬಂಧಿಸಿದ ₹5,450 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. ಜೊತೆಗೆ, ಸುಮಾರು ₹815 ಕೋಟಿ ಮೌಲ್ಯದ ಹೆಚ್ಚುವರಿ ಯೋಜನೆಗಳಿಗೂ ಶಂಕುಸ್ಥಾಪನೆ ನೆರವೇರಿಸಿದರು.ಪ್ರಧಾನಮಂತ್ರಿ ಅಕ್ಟೋಬರ್ 8-9ರಂದು ಮಹಾರಾಷ್ಟ್ರಕ್ಕೆ ಭೇಟಿ
October 07th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಕ್ಟೋಬರ್ 8-9 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಮಂತ್ರಿ ನವಿ ಮುಂಬೈ ತಲುಪಲಿದ್ದಾರೆ ಮತ್ತು ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೊಸದಾಗಿ ನಿರ್ಮಿಸಲಾದ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವೀಕ್ಷಣೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ 3:30 ರ ಸುಮಾರಿಗೆ ಪ್ರಧಾನ ಮಂತ್ರಿ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಮತ್ತು ಮುಂಬೈನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 22nd, 11:36 am
ಅರುಣಾಚಲ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಕೆ.ಟಿ. ಪರ್ನಾಯಕ್ ಜಿ, ರಾಜ್ಯದ ಜನಪ್ರಿಯ ಮತ್ತು ಕ್ರಿಯಾಶೀಲ ಮುಖ್ಯಮಂತ್ರಿ ಪೇಮಾ ಖಂಡು ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಕಿರಣ್ ರಿಜಿಜು, ರಾಜ್ಯ ಸರ್ಕಾರದ ಸಚಿವರು, ನನ್ನ ಸಹ ಸಂಸದರಾದ ನಬಮ್ ರೆಬಿಯಾ ಜಿ ಮತ್ತು ಟ್ಯಾಪಿರ್ ಗಾವೊ ಜಿ, ಎಲ್ಲಾ ಶಾಸಕರು, ಇತರ ಜನಪ್ರತಿನಿಧಿಗಳೆ ಮತ್ತು ಅರುಣಾಚಲ ಪ್ರದೇಶದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅರುಣಾಚಲಪ್ರದೇಶದ ಇಟಾನಗರದಲ್ಲಿ ಸುಮಾರು 5,100 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ
September 22nd, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಸುಮಾರು 5,100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವಶಕ್ತ ಡೊನ್ಯಿ ಪೊಲೊಗೆ ಗೌರವ ಸಲ್ಲಿಸಿ, ಎಲ್ಲರಿಗೂ ಆಶೀರ್ವಾದ ಮಾಡಬೇಕೆಂದು ಪ್ರಾರ್ಥಿಸಿದರು.ಭಾರತದ ಆರ್ಥಿಕತೆ ದಾಖಲೆಗಳನ್ನು ಮುರಿಯುತ್ತಿದೆ - ಪ್ರಧಾನಿ ಮೋದಿ ಅದ್ಭುತ ಬೆಳವಣಿಗೆಯ ಮೈಲಿಗಲ್ಲುಗಳನ್ನು ಹಂಚಿಕೊಂಡಿದ್ದಾರೆ
August 21st, 09:25 pm
ಭಾರತದ ತ್ವರಿತ ಆರ್ಥಿಕ ಪ್ರಗತಿಯು ಜಾಗತಿಕ ಮನ್ನಣೆಯನ್ನು ಗಳಿಸುತ್ತಿದೆ ಮತ್ತು 140 ಕೋಟಿ ಭಾರತೀಯರ ಸಾಮೂಹಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ರಾಷ್ಟ್ರದ ಬೆಳವಣಿಗೆಯ ಪ್ರಯಾಣವು ಆತ್ಮವಿಶ್ವಾಸ, ಸ್ಥಿತಿಸ್ಥಾಪಕತ್ವ ಮತ್ತು ಹೊಸ ಅವಕಾಶಗಳಿಂದ ಗುರುತಿಸಲ್ಪಟ್ಟಿದೆ ಎಂದು ಅವರು ಒತ್ತಿ ಹೇಳಿದರು.ಭಾರತದ 100 ಗಿಗಾವ್ಯಾಟ್ ಸೋಲಾರ್ ಫೋಟೋವೋಲ್ಟಾಯಿಕ್ ಮಾಡ್ಯೂಲ್(ಸೌರ ಫಲಕ) ಉತ್ಪಾದನಾ ಸಾಮರ್ಥ್ಯದಲ್ಲಿ ಸ್ವಾವಲಂಬನೆಯ ಮೈಲಿಗಲ್ಲು ಹಾಗೂ ಶುದ್ಧ ಇಂಧನವನ್ನು ಜನಪ್ರಿಯಗೊಳಿಸುವ ಪರಿಶ್ರಮನ್ನು ಶ್ಲಾಘಿಸಿದ ಪ್ರಧಾನಮಂತ್ರಿ
August 13th, 08:48 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 100 ಗಿಗಾವ್ಯಾಟ್ ಸೋಲಾರ್ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವಲ್ಲಿ ಸ್ವಾವಲಂಬನೆಯ ಮೈಲಿಗಲ್ಲು ಮತ್ತು ಶುದ್ಧ ಇಂಧನವನ್ನು ಜನಪ್ರಿಯಗೊಳಿಸುವ ಭಾರತದ ಪಯತ್ನಗಳನ್ನು ಶ್ಲಾಘಿಸಿದ್ದಾರೆ.18ನೇ ಅಂತಾರಾಷ್ಟ್ರೀಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಗಾಗಿ ಪ್ರಧಾನಮಂತ್ರಿಯವರ ವೀಡಿಯೋ ಸಂದೇಶ
August 12th, 04:34 pm
64 ದೇಶಗಳಿಂದ ಆಗಮಿಸಿರುವ 300 ಕ್ಕೂ ಹೆಚ್ಚು ತರುಣ ಪ್ರತಿಭೆಗಳ ಜೊತೆ ಸಂವಾದ ನಡೆಸಲು ನನಗೆ ಸಂತೋಷವಾಗುತ್ತಿದೆ. 18ನೇ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಒಲಿಂಪಿಯಾಡ್ ಗೆ ನಿಮ್ಮೆಲ್ಲರನ್ನೂ ಭಾರತಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಭಾರತದಲ್ಲಿ ಸಂಪ್ರದಾಯ ಮತ್ತು ಹೊಸತನ, ಆಧ್ಯಾತ್ಮಿಕತೆ ಮತ್ತು ವಿಜ್ಞಾನ, ಕುತೂಹಲ ಮತ್ತು ಸೃಜನಶೀಲತೆ ಒಂದಾಗುತ್ತವೆ. ಶತಮಾನಗಳಿಂದಲೂ ಭಾರತೀಯರು ಆಕಾಶವನ್ನು ವೀಕ್ಷಿಸುತ್ತಾ, ಅನೇಕ ದೊಡ್ಡ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದಾರೆ. ಉದಾಹರಣೆಗೆ, 5ನೇ ಶತಮಾನದಲ್ಲಿ, ಆರ್ಯಭಟ ಸೊನ್ನೆಯನ್ನು ಕಂಡುಹಿಡಿದರು. ಭೂಮಿಯು ತನ್ನದೇ ಅಕ್ಷದ ಮೇಲೆ ಸುತ್ತುತ್ತದೆ ಎಂದು ಹೇಳಿದ ಮೊದಲ ವ್ಯಕ್ತಿ ಕೂಡ ಇವರೇ. ಅಕ್ಷರಶಃ, ಅವರು ಸೊನ್ನೆಯಿಂದಲೇ ಇತಿಹಾಸ ಸೃಷ್ಟಿಸಿದರು!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 18ನೇ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಉದ್ದೇಶಿಸಿ ಮಾತನಾಡಿದರು
August 12th, 04:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ 18 ನೇ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು 64 ದೇಶಗಳಿಂದ ಬಂದಿದ್ದ 300 ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ಅಂತರರಾಷ್ಟ್ರೀಯ ಒಲಿಂಪಿಯಾಡ್‌ಗಾಗಿ ಭಾರತಕ್ಕೆ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಭಾರತದಲ್ಲಿ, ಸಂಪ್ರದಾಯವು ನಾವೀನ್ಯತೆಯನ್ನು ಭೇಟಿ ಮಾಡುತ್ತದೆ, ಆಧ್ಯಾತ್ಮಿಕತೆಯು ವಿಜ್ಞಾನವನ್ನು ಸಂಗಮಿಸುತ್ತದೆ ಮತ್ತು ಕುತೂಹಲವು ಸೃಜನಶೀಲತೆಯನ್ನು ಭೇಟಿ ಮಾಡುತ್ತದೆ. ಶತಮಾನಗಳಿಂದ, ಭಾರತೀಯರು ಆಕಾಶವನ್ನು ಗಮನಿಸುತ್ತಿದ್ದಾರೆ ಮತ್ತು ದೊಡ್ಡ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. 5 ನೇ ಶತಮಾನದಲ್ಲಿ ಶೂನ್ಯವನ್ನು ಕಂಡುಹಿಡಿದ ಮತ್ತು ಭೂಮಿಯು ತನ್ನ ಅಕ್ಷದ ಮೇಲೆ ತಿರುಗುತ್ತದೆ ಎಂದು ಮೊದಲು ಹೇಳಿದ ಆರ್ಯಭಟನ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. ಅಕ್ಷರಶಃ, ಅವರು ಶೂನ್ಯದಿಂದ ಪ್ರಾರಂಭಿಸಿ ಇತಿಹಾಸವನ್ನು ನಿರ್ಮಿಸಿದರು! ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು.ನವದೆಹಲಿಯಲ್ಲಿ ಸಂಸತ್ ಸದಸ್ಯರಿಗಾಗಿ ಹೊಸದಾಗಿ ನಿರ್ಮಿಸಲಾದ ಫ್ಲ್ಯಾಟ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
August 11th, 11:00 am
ಶ್ರೀ ಓಂ ಬಿರ್ಲಾ ಜೀ, ಮನೋಹರ್ ಲಾಲ್ ಜೀ, ಕಿರಣ್ ರಿಜಿಜು ಜೀ, ಮಹೇಶ್ ಶರ್ಮಾ ಜೀ, ಎಲ್ಲಗೌರವಾನ್ವಿತ ಸಂಸತ್ ಸದಸ್ಯರು, ಲೋಕಸಭೆಯ ಪ್ರಧಾನ ಕಾರ್ಯದರ್ಶಿ, ಮಹಿಳೆಯರೇ ಮತ್ತು ಮಹನೀಯರೇ!ನವದೆಹಲಿಯಲ್ಲಿ ಸಂಸದರಿಗಾಗಿ ಹೊಸದಾಗಿ ನಿರ್ಮಿಸಲಾದ ವಸತಿ ಸಮುಚ್ಚಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು
August 11th, 10:30 am
ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಸಂಸತ್ ಸದಸ್ಯರಿಗಾಗಿ ಹೊಸದಾಗಿ ನಿರ್ಮಿಸಲಾದ 184 ಟೈಪ್-VII ಬಹುಮಹಡಿ ವಸತಿ ಸಮುಚ್ಚಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕರ್ತವ್ಯ ಪಥದಲ್ಲಿರುವ ಕರ್ತವ್ಯ ಭವನ ಎಂದು ಕರೆಯಲಾಗುವ ಸಾಮಾನ್ಯ ಕೇಂದ್ರ ಸಚಿವಾಲಯವನ್ನು ಇತ್ತೀಚೆಗೆ ಉದ್ಘಾಟಿಸಿದೆ ಮತ್ತು ಇಂದು ಸಂಸದರಿಗಾಗಿ ಹೊಸದಾಗಿ ನಿರ್ಮಿಸಲಾದ ವಸತಿ ಸಮುಚ್ಚಯವನ್ನು ಉದ್ಘಾಟಿಸುವ ಅವಕಾಶ ದೊರೆತಿದೆ ಎಂದು ಹೇಳಿದರು. ಭಾರತದ ನಾಲ್ಕು ಮಹಾ ನದಿಗಳಾದ ಕೃಷ್ಣಾ, ಗೋದಾವರಿ, ಕೋಸಿ ಮತ್ತು ಹೂಗ್ಲಿ ಹೆಸರುಗಳನ್ನು ಸಮುಚ್ಚಯದ ನಾಲ್ಕು ಗೋಪುರಗಳಿಗೆ ಇಡಲಾಗಿದೆ. ಲಕ್ಷಾಂತರ ಜನರಿಗೆ ಬದುಕು ನೀಡುವ ಈ ನದಿಗಳು ಈಗ ಸಾರ್ವಜನಿಕ ಪ್ರತಿನಿಧಿಗಳ ಜೀವನದಲ್ಲಿ ಹೊಸ ಸಂತೋಷದ ಅಲೆಯನ್ನು ತರುತ್ತವೆ ಎಂದು ಅವರು ಹೇಳಿದರು. ನದಿಗಳಿಗೆ ಹೆಸರಿಡುವ ಸಂಪ್ರದಾಯವು ದೇಶವನ್ನು ಏಕತೆಯ ಎಳೆಯಲ್ಲಿ ಬಂಧಿಸುತ್ತದೆ ಎಂದು ಅವರು ಹೇಳಿದರು. ಈ ಹೊಸ ಸಮುಚ್ಚಯವು ದೆಹಲಿಯಲ್ಲಿ ಸಂಸದರ ಜೀವನವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ದೆಹಲಿಯಲ್ಲಿ ಸಂಸದರಿಗೆ ಸರ್ಕಾರಿ ವಸತಿ ಸೌಕರ್ಯಗಳು ಈಗ ಹೆಚ್ಚಾಗಲಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರು ಎಲ್ಲಾ ಸಂಸದರನ್ನು ಅಭಿನಂದಿಸಿದರು ಮತ್ತು ವಸತಿ ಸಮುಚ್ಚಯ ನಿರ್ಮಾಣದಲ್ಲಿ ಭಾಗಿಯಾದ ಎಂಜಿನಿಯರ್ ಗಳು ಮತ್ತು ಕಾರ್ಮಿಕರನ್ನು ಶ್ಲಾಘಿಸಿದರು. ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಅವರು ಶ್ಲಾಘಿಸಿದರು.