The trust of 140 crore Indians is our greatest strength and responsibility: PM Modi at the NDA Leaders’ Conclave
June 10th, 06:33 pm
PM Modi addressed the NDA Leaders' Conclave in New Delhi, highlighting the government's commitment to fulfilling the aspirations of 140 crore Indians and accelerating India's journey towards a Viksit Bharat. Speaking at the NDA Conclave at Bharat Mandapam after becoming the longest continuously serving elected Prime Minister of India, he said, To have the opportunity to serve Maa Bharti for such a long time is possible only through God's blessings. For me, 'Janta Janardan' is God.PM Modi addresses NDA Leaders' Conclave, reaffirms commitment to Viksit Bharat
June 10th, 06:30 pm
PM Modi addressed the NDA Leaders' Conclave in New Delhi, highlighting the government's commitment to fulfilling the aspirations of 140 crore Indians and accelerating India's journey towards a Viksit Bharat. Speaking at the NDA Conclave at Bharat Mandapam after becoming the longest continuously serving elected Prime Minister of India, he said, To have the opportunity to serve Maa Bharti for such a long time is possible only through God's blessings. For me, 'Janta Janardan' is God.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸತತ ಅವಧಿಗಳಿಗೆ ಅತ್ಯಂತ ದೀರ್ಘಕಾಲ ಚುನಾಯಿತ ಪ್ರಧಾನಮಂತ್ರಿಯಾಗಿರುವುದನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟದಿಂದ ನಿರ್ಣಯ ಅಂಗೀಕಾರ
June 10th, 01:50 pm
ಕೇಂದ್ರ ಸಚಿವ ಸಂಪುಟವು ಇಂದು ಒಂದು ಮಹತ್ವದ ನಿರ್ಣಯವನ್ನು ಅಂಗೀಕರಿಸಿದೆ. ಈ ಮೂಲಕ ಜೂನ್ 10, 2026ರ ದಿನವನ್ನು ಭಾರತೀಯ ಪ್ರಜಾಪ್ರಭುತ್ವದ ಪಯಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿ ಗುರುತಿಸಲಾಗಿದ್ದು, ಶ್ರೀ ನರೇಂದ್ರ ಮೋದಿಯವರು ದೇಶದ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿಯಾಗಿರುವುದನ್ನು ಶ್ಲಾಘಿಸಲಾಗಿದೆ. ಚುನಾಯಿತ ಪ್ರಧಾನಿಯಾಗಿ ಸತತ 4,399 ದಿನಗಳ ಕಾಲ ನಿರಂತರ ಸೇವೆ ಸಲ್ಲಿಸುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಅವರು ಶ್ರೀ ಜವಾಹರಲಾಲ್ ನೆಹರೂ ಅವರ ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಮೀರಿದ್ದಾರೆ. ನೆಹರೂ ಅವರು 1952 ರಿಂದ 1964 ರವರೆಗೆ ಸತತ 4,398 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭವು ಭಾರತದ ಪ್ರಜಾಪ್ರಭುತ್ವದ ಜಾಗೃತಿ, ಸಾರ್ವಜನಿಕರ ನಂಬಿಕೆ ಮತ್ತು ದೇಶದ ಜನರ ಭಾಗವಹಿಸುವಿಕೆಯ ಶಕ್ತಿಯ ಸಂಕೇತವಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಇದು 'ರಾಷ್ಟ್ರ ಮೊದಲು' ಎಂಬ ದೃಢ ಸಂಕಲ್ಪದೊಂದಿಗೆ ಮುನ್ನಡೆಯುವ ನಾಯಕನಿಗೆ ದೇಶದ ಜನತೆ ನೀಡಿದ ಅಭೂತಪೂರ್ವ ಬೆಂಬಲವನ್ನು ತೋರಿಸುತ್ತದೆ.ದಮನ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ/ರಾಷ್ಟ್ರಕ್ಕೆ ಸಮರ್ಪಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
June 05th, 07:20 pm
ನೀವು ಇಲ್ಲಿ ನೆರೆದಿರುವಂತೆಯೇ, ಲಕ್ಷದ್ವೀಪದಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯ ಜನರು ವೀಡಿಯೊ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ, ಏಕೆಂದರೆ ಇಂದು ಲಕ್ಷದ್ವೀಪದಲ್ಲಿ ಅಭಿವೃದ್ಧಿಯ ಹೊಸ ಆರಂಭ, ಲಕ್ಷದ್ವೀಪದ ಜನರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಹೊಸ ಯೋಜನೆ, ಉದ್ಘಾಟನೆಗೊಂಡಿದೆ ಮತ್ತು ಕೆಲವು ಯೋಜನೆಗಳಿಗೆ ಅಡಿಪಾಯ ಹಾಕಲಾಗಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಾಮನ್‌ನಲ್ಲಿ ಸುಮಾರು ₹2,970 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಅರ್ಪಿಸಿ ಮತ್ತು ಶಿಲಾನ್ಯಾಸ ನೆರವೇರಿಸಿದರು
June 05th, 07:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಾಮನ್‌ನಲ್ಲಿ ಸುಮಾರು ₹2,970 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ ಮತ್ತು ಶಿಲಾನ್ಯಾಸ ನೆರವೇರಿಸಿದರು. ಸ್ಥಳೀಯ ನಾಯಕರು ಮತ್ತು ನಾಗರಿಕರ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅಗಾಧವಾದ ಸಾರ್ವಜನಿಕ ಭಾಗವಹಿಸುವಿಕೆಗೆ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ತಮ್ಮ ಹಿಂದಿನ ಭೇಟಿಯನ್ನು ನೆನಪಿಸಿಕೊಳ್ಳುತ್ತಾ, ತಮ್ಮ ಹಿಂದಿನ ಅವಲೋಕನವು ಹೇಗೆ ವಾಸ್ತವಕ್ಕೆ ಪರಿವರ್ತನೆಯಾಯಿತು ಎಂಬುದರತ್ತ ಗಮನ ಸೆಳೆದರು, ಈ ಪ್ರದೇಶವು ಈಗ ಹೆಮ್ಮೆಯಿಂದ ರಾಷ್ಟ್ರದ ವೈವಿಧ್ಯಮಯ ಮತ್ತು ಚೈತನ್ಯಶೀಲ ಸಾರವನ್ನು ಪ್ರತಿನಿಧಿಸುತ್ತಿದೆ ಎಂದರು. ದಾಮನ್ ಮಿನಿ ಭಾರತದ ಜೀವಂತ ಉದಾಹರಣೆಯಾಗಿದೆ, ಇಲ್ಲಿ ವಿವಿಧ ಪ್ರದೇಶಗಳ ಜನರ ವಾಸ್ತವ್ಯವು ಇಡೀ ದೇಶದ ಸುಂದರ ನೋಟವನ್ನು ಒದಗಿಸುತ್ತದೆ ಎಂದೂ ಶ್ರೀ ಮೋದಿ ಹೇಳಿದರು.ನೆದರ್‌ಲ್ಯಾಂಡ್ಸ್ ನಲ್ಲಿ ನಡೆದ ಭಾರತೀಯ ಸಮುದಾಯದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 16th, 01:30 pm
ಇಲ್ಲಿ ತುಂಬಾ ಪ್ರೀತಿ, ತುಂಬಾ ಉತ್ಸಾಹ ಕಾಣುತ್ತಿದೆ. ನಿಜ ಹೇಳಬೇಕೆಂದರೆ, ನಾನು ನೆದರ್‌ಲ್ಯಾಂಡ್ಸ್‌ನಲ್ಲಿದ್ದೇನೆ ಎಂಬುದನ್ನು ಒಂದು ಕ್ಷಣ ಮರೆತೇ ಬಿಟ್ಟಿದ್ದೆ. ಭಾರತದಲ್ಲಿಯೇ ಎಲ್ಲೋ ಒಂದು ಹಬ್ಬ ನಡೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ!ನೆದರ್ಲ್ಯಾಂಡ್ಸ್ ನಲ್ಲಿರುವ ಅನಿವಾಸಿ ಭಾರತೀಯ ಸಮುದಾಯದವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 16th, 01:20 pm
ಇಂದು ನಡೆದ ಭಾರತೀಯ ವಲಸಿಗ ಸಮುದಾಯದ ಸ್ವಾಗತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಗ್ ನಲ್ಲಿ ಭಾಗವಹಿಸಿದ್ದರು. ಆಗಮಿಸಿದಾಗ, ನೆದರ್ಲ್ಯಾಂಡ್ಸ್ ನಲ್ಲಿರುವ ಭಾರತೀಯ ವಲಸಿಗರು ಮತ್ತು ಭಾರತದ ಸ್ನೇಹಿತರ ದೊಡ್ಡ ಸಭೆಯಿಂದ ಅವರಿಗೆ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ದೊರೆಯಿತು.TMC government is run either by goons or only after High Court and Supreme Court orders: PM Modi in Arambagh, West Bengal
April 26th, 01:50 pm
Addressing a Vijay Sankalp rally in Arambagh, West Bengal, PM Modi remarked that after 15 years of intimidation, the people of Bengal are now determined to defeat injustice. He noted that the TMC government acts only after the court intervention. He concluded by urging people to vote decisively for BJP, stating that only a government free from fear, corruption and syndicate control can unlock Bengal’s true potential.The expiry date of this 15-year syndicate TMC raj is 4 May: PM Modi in Bangaon, West Bengal
April 26th, 01:30 pm
Addressing a massive public rally in Bangaon, West Bengal, PM Modi delivered a sharp message against TMC’s corruption, syndicate raj and fear politics. Stating that “Nari Shakti” has been the worst affected under TMC rule, he called upon women to lead the change. He also outlined BJP’s roadmap for development, security and prosperity in West Bengal and recalled the legacy of Syama Prasad Mookerjee.PM Modi’s impactful rallies in Bangaon and Arambagh, West Bengal
April 26th, 01:24 pm
PM Modi addressed massive public gatherings in Bangaon and Arambagh, delivering a sharp message against TMC’s corruption, syndicate raj and fear politics, while presenting BJP’s roadmap for development, security and prosperity in West Bengal.ಕೊರಿಯಾ ಗಣರಾಜ್ಯದ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ.
April 20th, 01:05 pm
ಅಧ್ಯಕ್ಷ ಲೀ ಅವರನ್ನು ಭಾರತಕ್ಕೆ ಅವರ ಮೊದಲ ಭೇಟಿಯಲ್ಲಿ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಅವರ ಜೀವನವು ಅಭ್ಯುದಯ, ಸೇವೆ ಮತ್ತು ಸಮರ್ಪಣೆಯ ಸ್ಪೂರ್ತಿದಾಯಕ ಉದಾಹರಣೆಯಾಗಿ ನಿಂತಿದೆ. ಅವರು ಎದುರಿಸಿದ ಪ್ರತಿಯೊಂದು ಸವಾಲು ಜನರಿಗೆ ಸೇವೆ ಸಲ್ಲಿಸುವ ಅವರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದೆ. ಇದು ಭಾರತಕ್ಕೆ ಅವರ ಮೊದಲ ಭೇಟಿಯಾಗಿದ್ದರೂ, ನಮ್ಮ ಮೊದಲ ಭೇಟಿಯಿಂದಲೇ ಅವರ ದೇಶದ ಮೇಲಿನ ಪ್ರೀತಿ ಮತ್ತು ಬಾಂಧವ್ಯ ಸ್ಪಷ್ಟವಾಗಿದೆ.ಮನ್ ಕಿ ಬಾತ್‌ನಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟನ್ನು ನಿವಾರಿಸಲು 140 ಕೋಟಿ ಭಾರತೀಯರ ಒಗ್ಗಟ್ಟಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ
March 29th, 11:30 am
ಈ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದರು ಮತ್ತು ಬಿಕ್ಕಟ್ಟನ್ನು ನಿವಾರಿಸಲು ಒಗ್ಗಟ್ಟಾಗಿ ಉಳಿಯುವ ಅಗತ್ಯವನ್ನು ಒತ್ತಿ ಹೇಳಿದರು. ನಾಗರಿಕರು ವದಂತಿಗಳಿಂದ ದಾರಿತಪ್ಪಿಸಬೇಡಿ ಮತ್ತು ಸರ್ಕಾರ ನೀಡುವ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕೆಂದು ಅವರು ಮನವಿ ಮಾಡಿದರು. ಜ್ಞಾನ ಭಾರತಂ ಸಮೀಕ್ಷೆ, ಕ್ರೀಡೆ ಮತ್ತು ಫಿಟ್‌ನೆಸ್, ನೀರಿನ ಸಂರಕ್ಷಣೆ, ಮೀನು ಸಾಕಣೆ ಮತ್ತು ಸೌರಶಕ್ತಿಯಂತಹ ಪ್ರಮುಖ ವಿಷಯಗಳ ಮೇಲೂ ಪ್ರಧಾನಿ ಮಾತನಾಡಿದರು.ಅಜ್ಮೀರ್ ನಲ್ಲಿ ಅಭಿವೃದ್ಧಿ ಕಾರ್ಯಗಳು, ಎಚ್ ಪಿ ವಿ ಲಸಿಕೆಗಾಗಿ ದೇಶವ್ಯಾಪಿ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
February 28th, 12:00 pm
ಇಂದು, ತೀರ್ಥರಾಜ ಪುಷ್ಕರ್ ಮತ್ತು ಮಾತಾ ಸಾವಿತ್ರಿಯ ಈ ಪವಿತ್ರ ಭೂಮಿಯಲ್ಲಿ, ನಿಮ್ಮೆಲ್ಲರ ನಡುವೆ ಇದ್ದು ನಿಮ್ಮ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ಈ ವೇದಿಕೆಯಿಂದ, ನಾನು ಸುರಾಸುರನ ತೇಜಜಿ ಧಾಮ ಮತ್ತು ಪೃಥ್ವಿರಾಜ್ ಅವರ ನೆಲ ಅಜ್ಮೀರ್ ಗೆ ನಮಸ್ಕರಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ₹17,000 ಕೋಟಿ ಮೌಲ್ಯದ ರಾಷ್ಟ್ರವ್ಯಾಪಿ ಎಚ್‌ಪಿವಿ ಲಸಿಕೆ ಅಭಿಯಾನಕ್ಕೆ ಚಾಲನೆ ಮತ್ತು ಅಭಿವೃದ್ಧಿ ಯೋಜನೆ ಲೋಕಾರ್ಪಣೆ
February 28th, 11:30 am
ರಾಜಸ್ಥಾನದಲ್ಲಿನ ಡಬಲ್-ಎಂಜಿನ್ ಸರ್ಕಾರ ಎರಡು ವರ್ಷಗಳ ತ್ವರಿತ ಪ್ರಗತಿಯನ್ನು ಪೂರ್ಣಗೊಳಿಸಿದೆ ಎಂದು ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು. ಜನರಿಗೆ ಸೇವೆ ಸಲ್ಲಿಸಲು ಬಂದ ಅಭಿವೃದ್ಧಿಯ ಭರವಸೆಗಳನ್ನು ಸರ್ಕಾರ ಪೂರೈಸುತ್ತಿದೆ. ಮತ್ತು ಇಂದು ಈ ಅಭಿವೃದ್ಧಿಯ ಅಭಿಯಾನವನ್ನು ಮತ್ತಷ್ಟು ವೇಗಗೊಳಿಸುವ ದಿನವಾಗಿದೆ. ಎಂದು ಮೋದಿ ಅವರು ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ ರಸ್ತೆಗಳು, ವಿದ್ಯುತ್, ನೀರು, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು ₹17,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆದಿದ್ದು, ರಾಜಸ್ಥಾನದ ಜನರ ಅನುಕೂಲತೆಯನ್ನು ಹೆಚ್ಚಿಸಲು ಮತ್ತು ಯುವಕರಿಗೆ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದು ಪ್ರಧಾನಿ ಹೇಳಿದರು.ಮಲೇಷ್ಯಾದಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
February 07th, 03:59 pm
ನಿಮ್ಮ ಶುಭಾಶಯಗಳ ಆತ್ಮೀಯತೆಯು ನಮ್ಮ ಹಂಚಿಕೆಯ ಸಂಸ್ಕೃತಿಯ ಸುಂದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಲೇಷ್ಯಾದ ಕೌಲಾಲಂಪುರ್ ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
February 07th, 03:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಆತ್ಮೀಯ ಸ್ವಾಗತವು ನಮ್ಮ ಹಂಚಿಕೆಯ ಸಂಸ್ಕೃತಿಯ ಸುಂದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಸಮುದಾಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ತಮ್ಮ ಆತ್ಮೀಯ ಮಿತ್ರರಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ವಿಮಾನ ನಿಲ್ದಾಣಕ್ಕೆ ಬಂದು ತಮ್ಮನ್ನು ಸ್ವಾಗತಿಸಿ, ತಮ್ಮ ಕಾರಿನಲ್ಲೇ ಈ ಕಾರ್ಯಕ್ರಮಕ್ಕೆ ಕರೆತಂದಿದ್ದನ್ನು ಅವರು ಸ್ಮರಿಸಿದರು. ಈ ವಿಶೇಷ ಸನ್ನೆಗಳು ಭಾರತದ ಮೇಲೆ ಮತ್ತು ಇಲ್ಲಿ ಉಪಸ್ಥಿತರಿರುವ ಜನರ ಮೇಲೆ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗಿರುವ ಪ್ರೀತಿ ಮತ್ತು ಗೌರವವನ್ನು ಪ್ರತಿಬಿಂಬಿಸುತ್ತವೆ ಎಂದು ಶ್ರೀ ಮೋದಿ ಸೇರಿಸಿದರು.ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಅವರ ಉತ್ತರ
February 05th, 05:35 pm
ವಂದನಾ ನಿರ್ಣಯಕ್ಕೆ ಬೆಂಬಲವಾಗಿ ಈ ಸದನದ ಮುಂದೆ ನನ್ನ ಭಾವನೆಗಳನ್ನು ಮಂಡಿಸುವುದು ನನ್ನ ಸೌಭಾಗ್ಯವೇ ಸರಿ.ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉತ್ತರ
February 05th, 05:00 pm
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಿಸಿದರು. ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ವಂದನಾ ನಿರ್ಣಯವನ್ನು ಬೆಂಬಲಿಸಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಹೇಳಿದರು. ಕಳೆದ ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಪ್ರಯಾಣದಲ್ಲಿ ತ್ವರಿತ ಪ್ರಗತಿಯಾಗಿದ್ದು, ಪ್ರತಿಯೊಂದು ವಲಯದಲ್ಲಿ ಮತ್ತು ಸಮಾಜದ ಎಲ್ಲಾ ವರ್ಗಗಳಲ್ಲಿ ಪರಿವರ್ತನೆ ಗೋಚರಿಸುತ್ತಿದೆ, ರಾಷ್ಟ್ರವು ಸರಿಯಾದ ದಿಕ್ಕಿನಲ್ಲಿ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತಿದೆ ಎಂದು ಹೇಳಿದರು. ರಾಷ್ಟ್ರಪತಿಗಳು ಈ ವಿಷಯಗಳನ್ನು ಸೂಕ್ಷ್ಮತೆ ಮತ್ತು ಸ್ಪಷ್ಟತೆಯೊಂದಿಗೆ ಪ್ರಸ್ತುತಪಡಿಸಿದ್ದಾರೆ ಎಂಬುದನ್ನೂ ಶ್ರೀ ಮೋದಿ ಉಲ್ಲೇಖಿಸಿದರು.ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಭಾರತ-ಯುರೋಪ್ ಒಕ್ಕೂಟದ ವ್ಯವಹಾರ ವೇದಿಕೆಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ
January 27th, 04:32 pm
ಭಾರತ-ಯುರೋಪಿಯನ್ ಒಕ್ಕೂಟದ ವ್ಯವಹಾರ ವೇದಿಕೆಯಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ. ಯುರೋಪಿಯನ್ ಒಕ್ಕೂಟದ ಮಂಡಳಿ ಮತ್ತು ಆಯೋಗದ ಅಧ್ಯಕ್ಷರ ಭಾರತ ಭೇಟಿಯು ಸಾಮಾನ್ಯ ರಾಜತಾಂತ್ರಿಕ ಪ್ರವಾಸವಲ್ಲ; ಇದು ಭಾರತ-ಯುರೋಪಿಯನ್ ಒಕ್ಕೂಟದ ಸಂಬಂಧಗಳಲ್ಲಿ ಹೊಸ ಯುಗಕ್ಕೆ ಕಹಳೆ ಮೊಳಗಿಸುತ್ತಿದೆ. ಮೊದಲ ಬಾರಿಗೆ, ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಒಕ್ಕೂಟದ ನಾಯಕರು ಭಾಗವಹಿಸುವುದು, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಭಾರತದ ಇತಿಹಾಸದಲ್ಲಿ ಅತಿದೊಡ್ಡ ಎಫ್.ಟಿ.ಎ. ಯ ಅಂಗೀಕಾರ, ಮತ್ತು ಇಂದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭಾರತ-ಯುರೋಪಿಯನ್ ಒಕ್ಕೂಟದ ವ್ಯವಹಾರ ವೇದಿಕೆಯ ಸಂಘಟನೆ, ಅದೂ ಹಲವಾರು ಸಿ.ಇ.ಒ. ಗಳೊಂದಿಗೆ - ಈ ಎಲ್ಲಾ ಸಾಧನೆಗಳು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳ ನಡುವೆ ನಡೆಯುತ್ತಿರುವ ಅಭೂತಪೂರ್ವ ಹೊಂದಾಣಿಕೆಯ ಸಂಕೇತಗಳಾಗಿವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವ ದೆಹಲಿಯಲ್ಲಿ ಭಾರತ-ಯುರೋಪ್ ಒಕ್ಕೂಟದ ವ್ಯವಹಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು
January 27th, 04:30 pm
ನವ ದೆಹಲಿಯ ಭಾರತ್ ಮಂಟಪದಲ್ಲಿ ಇಂದು ಭಾರತ-ಯುರೋಪಿಯನ್ ಯೂನಿಯನ್ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಭಾರತ-ಯುರೋಪಿಯನ್ ಯೂನಿಯನ್ (ಇಯು) ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಯುರೋಪಿಯನ್ ಯೂನಿಯನ್ ಕೌನ್ಸಿಲ್ ಮತ್ತು ಆಯೋಗದ ಅಧ್ಯಕ್ಷರ ಭಾರತ ಭೇಟಿ ಸಾಮಾನ್ಯ ರಾಜತಾಂತ್ರಿಕ ಪ್ರವಾಸವಲ್ಲ, ಅದು ಭಾರತ-ಯುರೋಪಿಯನ್ ಯೂನಿಯನ್ ಸಂಬಂಧಗಳಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿದರು. ಭಾರತದ ಗಣರಾಜ್ಯೋತ್ಸವದಲ್ಲಿ ಇದೇ ಮೊದಲ ಬಾರಿಗೆ ಯುರೋಪಿಯನ್ ಯೂನಿಯನ್ ನಾಯಕರು ಮುಖ್ಯ ಅತಿಥಿಗಳಾಗಿ ಸೇರಿಕೊಂಡರು, ಭಾರತ ಮತ್ತು ಯುರೋಪಿಯನ್ ಯೂನಿಯನ್ ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಿದವು ಮತ್ತು ಇಂದು, ಹಲವಾರು ಸಿಇಒಗಳ ಉಪಸ್ಥಿತಿಯೊಂದಿಗೆ, ಭಾರತ-ಯುರೋಪಿಯನ್ ಯೂನಿಯನ್ ವ್ಯಾಪಾರ ವೇದಿಕೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ ಎಂದೂ ಶ್ರೀ ಮೋದಿ ಎತ್ತಿ ತೋರಿಸಿದರು. ಈ ಸಾಧನೆಗಳು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳ ನಡುವಿನ ಅಭೂತಪೂರ್ವ ಹೊಂದಾಣಿಕೆಯನ್ನು ಸಂಕೇತಿಸುತ್ತವೆ ಎಂದೂ ಅವರು ಹೇಳಿದರು.