ಪವಿತ್ರ ಪ್ರಕಾಶ್ ಉತ್ಸವದಂದು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ
December 27th, 12:06 pm
ಇಂದು ಪವಿತ್ರ ಪ್ರಕಾಶ್ ಉತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದರು. ಗುರು ಗೋವಿಂದ ಸಿಂಗ್ ಅವರು ಧೈರ್ಯ, ಕರುಣೆ ಮತ್ತು ತ್ಯಾಗದ ಸಾಕಾರರೂಪವಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ದೆಹಲಿಯಲ್ಲಿ ನಡೆದ ವೀರ್ ಬಾಲ್ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
December 26th, 01:30 pm
ಇಂದು ದೇಶವು ವೀರ್ ಬಾಲ್ ದಿವಸ್ ಆಚರಿಸುತ್ತಿದೆ. ಇದೀಗ ವಂದೇ ಮಾತರಂನ ಸುಂದರವಾದ ಗಾಯನವನ್ನು ನಾವು ಆಲಿಸಿದ್ದೇವೆ, ನಿಮ್ಮ ಕಠಿಣ ಪರಿಶ್ರಮ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ನಡೆದ ವೀರ ಬಾಲ ದಿವಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು
December 26th, 01:00 pm
ನವದೆಹಲಿಯ ಭಾರತ ಮಂಟಪದಲ್ಲಿ ಇಂದು ನಡೆದ 'ವೀರ ಬಾಲ ದಿವಸ್' ರಾಷ್ಟ್ರೀಯ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ದೇಶದಾದ್ಯಂತ ಆಗಮಿಸಿದ್ದ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಅಲ್ಲಿ ನೆರೆದಿದ್ದ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದು ದೇಶವು 'ವೀರ ಬಾಲ ದಿವಸ್' ಆಚರಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾದ 'ವಂದೇ ಮಾತರಂ'ನ ಸುಂದರ ಪ್ರದರ್ಶನವನ್ನು ಅವರು ಶ್ಲಾಘಿಸಿದರು ಹಾಗೂ ಪ್ರದರ್ಶನಕಾರರ ಸಮರ್ಪಣೆ ಮತ್ತು ಶ್ರಮವು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದರು.ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪುರಬ್ ಅಂಗವಾಗಿ ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ
November 05th, 10:26 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪುರಬ್ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಶ್ರೀ ಗುರುನಾನಕ್ ದೇವ್ ಅವರ ಜೀವನ ಮತ್ತು ಸಂದೇಶವು ಕಾಲಾತೀತ ಜ್ಞಾನದೊಂದಿಗೆ ಮಾನವೀಯತೆಗೆ ಮಾರ್ಗದರ್ಶನ ನೀಡುತ್ತಲೇ ಇದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅವರ ಸಹಾನುಭೂತಿ, ಸಮಾನತೆ, ನಮ್ರತೆ ಮತ್ತು ಸೇವೆಯ ಬೋಧನೆಗಳು ಬಹಳ ಸ್ಫೂರ್ತಿದಾಯಕವಾಗಿವೆ, ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ಪಾಟ್ನಾ ಸಾಹಿಬ್ ನ ತಖತ್ ಶ್ರೀ ಹರಿಮಂದಿರ ಜಿ ನಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ
November 02nd, 10:10 pm
ತಖತ್ ಶ್ರೀ ಹರಿಮಂದಿರ ಜಿ ಪಾಟ್ನಾ ಸಾಹಿಬ್ ನಲ್ಲಿ ಪ್ರಾರ್ಥನೆ ಸಲ್ಲಿಸುವುದು ಅತ್ಯಂತ ದೈವಿಕ ಅನುಭವ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸಿಖ್ ಗುರುಗಳ ಉದಾತ್ತ ಬೋಧನೆಗಳು ಇಡೀ ಮನುಕುಲಕ್ಕೆ ಪ್ರೇರಣೆ ನೀಡುತ್ತವೆ ಎಂದು ಅವರು ಹೇಳಿದರು.ಶ್ರೀ ಗುರು ಗೋಬಿಂದ್ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಅತ್ಯಂತ ಪುಣ್ಯಮಯ ಮತ್ತು ಅಮೂಲ್ಯವಾದ ಪವಿತ್ರ 'ಜೋರೆ ಸಾಹಿಬ್' ನ ಸುರಕ್ಷತೆ ಮತ್ತು ಸೂಕ್ತ ಪ್ರದರ್ಶನಕ್ಕೆ ಸಂಬಂಧಿಸಿದ ಶಿಫಾರಸ್ಸು ಸಲ್ಲಿಸಿರುವ ಸಿಖ್ ನಿಯೋಗದ ಗಣ್ಯರು ಮತ್ತು ಕೌಶಲ್ಯಯುತ ಸದಸ್ಯರಿಗೆ ಪ್ರಧಾನಮಂತ್ರಿ ಸ್ವಾಗತ
September 19th, 04:28 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಖ್ ನಿಯೋಗದ ಗಣ್ಯರು ಮತ್ತು ಕೌಶಲ್ಯಯುತ ಸದಸ್ಯರನ್ನು ಬರಮಾಡಿಕೊಂಡರು. ಅವರು ಶ್ರೀ ಗುರು ಗೋವಿಂದ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಅತ್ಯಂತ ಪುಣ್ಯ ಮತ್ತು ಅಮೂಲ್ಯವಾದ ಪವಿತ್ರ 'ಜೋರ್ ಸಾಹಿಬ್' ನ ಸುರಕ್ಷತೆ ಮತ್ತು ಸೂಕ್ತ ಪ್ರದರ್ಶನಕ್ಕೆ ಸಂಬಂಧಿಸಿದಂತೆ ತಮ್ಮ ಶಿಫಾರಸುಗಳನ್ನು ಸಲ್ಲಿಸಿದರು. ಸಿಖ್ ಇತಿಹಾಸದ ಭವ್ಯ ಭಾಗವಾಗಿರುವ 'ಜೋರ್ ಸಾಹಿಬ್' ಆಧ್ಯಾತ್ಮಿಕವಾಗಿ ಪ್ರಮುಖವಾಗಿರುವಷ್ಟೇ ನಮ್ಮ ರಾಷ್ಟ್ರದ ಸಾಂಸ್ಕೃತಿಕ ಚೈತನ್ಯದ ಅಂಗವಾಗಿರುವ ಪವಿತ್ರ ಅವಶೇಷಗಳು ಸಹ ಮಹತ್ವದ್ದಾಗಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಶ್ರೀ ಗುರು ಗೋವಿಂದ ಸಿಂಗ್ ಅವರು ತೋರಿದ ಶೌರ್ಯ, ಸದಾಚಾರ, ನ್ಯಾಯ ಮತ್ತು ಸಾಮಾಜಿಕ ಸಾಮರಸ್ಯದ ಮಾರ್ಗವನ್ನು ಅನುಸರಿಸಲು ಪವಿತ್ರ ಅವಶೇಷಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.ಶ್ರೀ ಗುರು ಗ್ರಂಥ ಸಾಹಿಬ್ ಅವರ ಪ್ರಕಾಶ್ ಪುರಬ್ ಪವಿತ್ರ ಸಂದರ್ಭದಲ್ಲಿ ಶುಭಾಶಯ ಕೋರಿದ ಪ್ರಧಾನಮಂತ್ರಿ
August 24th, 01:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ಗ್ರಂಥ ಸಾಹಿಬ್ ಅವರ ಪ್ರಕಾಶ್ ಪುರಬ್ ಪವಿತ್ರ ಸಂದರ್ಭದಲ್ಲಿ ಆತ್ಮೀಯವಾಗಿ ಶುಭಾಶಯಗಳನ್ನು ಕೋರಿದ್ದಾರೆ.ಮಂಗಳಕರವಾದ ಪರ್ಕಾಶ್ ಪುರಬ್ ನ ಸುಸಂದರ್ಭದಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
April 18th, 12:26 pm
ಪ್ರಧಾನಮಂತ್ರಿಯವರು ಇಂದು ಮಂಗಳಕರವಾದ ಪ್ರಕಾಶ್ ಪುರಬ್ ಸಂದರ್ಭದಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸಿದರು. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಅಚಲವಾಗಿ ನಿರತರಾಗಿದ್ದ ಶ್ರೀ ಗುರು ತೇಗ್ ಬಹದ್ದೂರ್ ಅವರ ಜೀವನವು ಧೈರ್ಯ ಮತ್ತು ಸಹಾನುಭೂತಿಯ ಸೇವೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.ಗುರುದ್ವಾರ ರಕಬ್ ಗಂಜ್ ಸಾಹಿಬ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಮಂತ್ರಿ ಕ್ರಿಸ್ಟೋಫರ್ ಲಕ್ಸನ್ ಭೇಟಿ
March 17th, 10:26 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ನವದೆಹಲಿಯಲ್ಲಿ ಗುರುದ್ವಾರ ರಕಬ್ ಗಂಜ್ ಸಾಹಿಬ್ ಗೆ ಭೇಟಿ ನೀಡಿದರು. ಈ ಭೇಟಿಯ ಬಗ್ಗೆ ಕೆಲವು ನೋಟಗಳನ್ನು ಹಂಚಿಕೊಂಡಿರುವ ಶ್ರೀ ಮೋದಿ ಅವರು, ಸಿಖ್ ಸಮುದಾಯದ ಸೇವೆ ಮತ್ತು ಮಾನವೀಯತೆಗೆ ಅಚಲ ಬದ್ಧತೆಯು ಪ್ರಪಂಚದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.ಪ್ರಕಾಶ್ ಉತ್ಸವದಂದು ಶ್ರೀ ಗುರು ಗೋಬಿಂದ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ
January 06th, 09:33 am
ಪ್ರಕಾಶ್ ಉತ್ಸವದಂದು ಶ್ರೀ ಗುರು ಗೋಬಿಂದ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ ಮತ್ತು ಗೋಬಿಂದ್ ಸಿಂಗ್ ಅವರ ಚಿಂತನೆಗಳು ಪ್ರಗತಿಪರ, ಸಮೃದ್ಧ ಮತ್ತು ಕರುಣಾಮಯ ಸಮಾಜವನ್ನು ನಿರ್ಮಿಸಲು ಪ್ರೇರಣೆ ನೀಡುತ್ತವೆ ಎಂದು ಹೇಳಿದ್ದಾರೆ.PM Modi's candid interaction with Rashtriya Bal Puraskar winners
December 26th, 09:55 pm
PM Modi interacted with the 17 awardees of Rashtriya Bal Puraskar in New Delhi. During the candid interaction, the PM heard the life stories of the children and encouraged them to strive harder in their lives. He congratulated all the youngsters and wished them the very best for their future endeavours.ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ
December 26th, 09:54 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ 3ನೇ ವೀರ ಬಾಲ ದಿವಸ್ ಸಂದರ್ಭದಲ್ಲಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು. ಶೌರ್ಯ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ ಮತ್ತು ಕಲೆ ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತುOur constitution embodies the Gurus’ message of Sarbat da Bhala—the welfare of all: PM Modi
December 26th, 12:05 pm
The Prime Minister, Shri Narendra Modi participated in Veer Baal Diwas today at Bharat Mandapam, New Delhi.Addressing the gathering on the occasion of the 3rd Veer Baal Diwas, he said their Government had started the Veer Baal diwas in memory of the unparalleled bravery and sacrifice of the Sahibzades.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ನಡೆದ ವೀರ್ ಬಾಲ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು
December 26th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ ವೀರ ಬಾಲ ದಿವಸ್ ಕಾರ್ಯಕ್ರಮಲ್ಲಿ ಪಾಲ್ಗೊಂಡರು. 3ನೇ ವೀರ್ ಬಾಲ್ ದಿವಸ್ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸಾಹಿಬ್ ಜಾದೆಗಳ ಸಾಟಿಯಿಲ್ಲದ ಶೌರ್ಯ ಮತ್ತು ತ್ಯಾಗದ ನೆನಪಿಗಾಗಿ ತಮ್ಮ ಸರ್ಕಾರ ವೀರ್ ಬಾಲ್ ದಿವಸ್ ಆರಂಭಿಸಿದೆ ಎಂದರು. ಈ ದಿನವು ಈಗ ಕೋಟ್ಯಂತರ ಭಾರತೀಯರಿಗೆ ರಾಷ್ಟ್ರೀಯ ಸ್ಫೂರ್ತಿಯ ಹಬ್ಬವಾಗಿದೆ ಎಂದು ಅವರು ಹೇಳಿದರು. ಈ ದಿನವು ಅದಮ್ಯ ಧೈರ್ಯದಿಂದ ಅನೇಕ ಮಕ್ಕಳು ಮತ್ತು ಯುವಕರನ್ನು ಪ್ರೇರೇಪಿಸುವ ಕೆಲಸ ಮಾಡಿದೆ ಎಂದು ಅವರು ಹೇಳಿದರು. ಶೌರ್ಯ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ ಮತ್ತು ಕಲೆ ಕ್ಷೇತ್ರಗಳಲ್ಲಿ ಇಂದು ವೀರ್ ಬಾಲ್ ಪ್ರಶಸ್ತಿಗಳನ್ನು ಪಡೆದ 17 ಮಕ್ಕಳನ್ನು ಶ್ರೀ ನರೇಂದ್ರ ಮೋದಿ ಶ್ಲಾಘಿಸಿದರು. ಇಂದಿನ ಪ್ರಶಸ್ತಿ ವಿಜೇತರು ಭಾರತದ ಮಕ್ಕಳು ಮತ್ತು ಯುವಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಸಾಮರ್ಥ್ಯವನ್ನು ಸಂಕೇತಿಸಿದ್ದಾರೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಗುರುಗಳು ಮತ್ತು ಧೈರ್ಯಶಾಲಿ ಸಾಹಿಬ್ ಜಾದೆಗಳಿಗೆ ಗೌರವ ನಮನ ಸಲ್ಲಿಸಿದರು ಮತ್ತು ಪ್ರಶಸ್ತಿ ವಿಜೇತರು ಮತ್ತು ಅವರ ಕುಟುಂಬಗಳನ್ನು ಅಭಿನಂದಿಸಿದರು.ಪ್ರಧಾನಮಂತ್ರಿಯವರು ಶ್ರೀ ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ
November 15th, 08:44 am
ಇಂದು ಶ್ರೀ ಗುರುನಾನಕ್ ಜಯಂತಿಯ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಶ್ರೀ ಗುರುನಾನಕ್ ದೇವ್ ಅವರ ಬೋಧನೆಗಳು ಸಹಾನುಭೂತಿ, ದಯೆ ಮತ್ತು ನಮ್ರತೆಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲು ನಮಗೆ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ಗ್ರಂಥ ಸಾಹಿಬ್‌ನ ಪ್ರಕಾಶ್ ಪುರಬ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ
September 04th, 03:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ಗುರು ಗ್ರಂಥ ಸಾಹಿಬ್ ನ ಪ್ರಕಾಶ್ ಪುರಬ್ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.PM wishes on Sikh New Year
March 14th, 12:11 pm
The Prime Minister, Shri Narendra Modi, extended his warm wishes on the occasion of Sikh New Year today.ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರ ಪರ್ಕಾಶ್ ಉತ್ಸವ್ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ
January 17th, 08:13 am
ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರ ಪ್ರರ್ಕಾಶ್ ಉತ್ಸವ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ ಮತ್ತು ಅವರ ಧೈರ್ಯ ಹಾಗೂ ಕರುಣೆಯನ್ನು ಸ್ಮರಿಸಿಕೊಂಡಿದ್ದಾರೆ. ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರಿಗೆ ಸಂಬಂಧಿಸಿದ ತಮ್ಮ ಆಲೋಚನೆಗಳ ಕುರಿತಾದ ವಿಡಿಯೋವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.PM Narendra Modi addresses public meetings in Pali & Pilibanga, Rajasthan
November 20th, 12:00 pm
Amidst the ongoing election campaigning in Rajasthan, PM Modi’s rally spree continued as he addressed public meetings in Pali and Pilibanga. Addressing a massive gathering, PM Modi emphasized the nation’s commitment to development and the critical role Rajasthan plays in India’s advancement in the 21st century. The Prime Minister underlined the development vision of the BJP government and condemned the misgovernance of the Congress party in the state.ನಾನಾಕ್ಷಹಿ ಸಮ್ಮತ್ 555 ರ ಹಿನ್ನೆಲೆ ಸಿಖ್ ಸಮುದಾಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯ
March 14th, 09:56 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾನಾ ಕ್ಷಹಿ ಸಮ್ಮತ್ 555 ರ ಸಂದರ್ಭದಲ್ಲಿ ಪ್ರಪಂಚದಾದ್ಯಂತದ ಸಿಖ್ ಸಮುದಾಯಕ್ಕೆ ಶುಭಾಶಯ ಕೋರಿದ್ದಾರೆ.