ಶ್ರೀಮದ್ ವಿಜಯರತ್ನ ಸುಂದರ್ ಸುರೀಶ್ವರ್ಜಿ ಮಹಾರಾಜ್ ಅವರ 500ನೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಸಂದೇಶ
January 11th, 01:00 pm
ಈ ಪವಿತ್ರ ಸಮಾರಂಭದಲ್ಲಿ ನಮ್ಮ ಸ್ಫೂರ್ತಿಯ ಸೆಲೆಯಾದ ಪೂಜ್ಯ ಭುವನಭಾನು ಸುರೀಶ್ವರ್ ಜಿ ಮಹಾರಾಜ್ ಅವರ ಪಾದಗಳಿಗೆ ನಾನು ಮೊದಲು ನಮಸ್ಕರಿಸುತ್ತೇನೆ. ಈ ಸಮಾರಂಭದಲ್ಲಿ ಉಪಸ್ಥಿತರಿರುವ ಪ್ರಶಾಂತಮೂರ್ತಿ ಸುವಿಶಾಲ ಗಚ್ಛಾಧಿಪತಿ ಪೂಜ್ಯ ಶ್ರೀಮದ್ ವಿಜಯ್ ರಾಜೇಂದ್ರ ಸುರೀಶ್ವರ ಜೀ ಮಹಾರಾಜ್, ಪೂಜ್ಯ ಗಚ್ಛಾಧಿಪತಿ ಶ್ರೀ ಕಲ್ಪತರು ಸುರೀಶ್ವರ್ ಜಿ ಮಹಾರಾಜ್, ಸರಸ್ವತಿ ಕೃಪಾಪಾತ್ರ ಪರಮ ಪೂಜ್ಯ ಆಚಾರ್ಯ ಭಗವಂತ ಶ್ರೀಮದ್ ವಿಜಯರತ್ನ ಸುಂದರ ಸುರೀಶ್ವರ ಜೀ ಮಹಾರಾಜರು ಮತ್ತು ಇಲ್ಲಿ ನೆರೆದಿರುವ ಎಲ್ಲಾ ಸಾಧು ಸಂತರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.ಶ್ರೀಮದ್ ವಿಜಯರತ್ನ ಸುಂದರ್ ಸುಂದರ್ ಸುರೀಶ್ವರ್ಜಿ ಮಹಾರಾಜ್ ಅವರ 500ನೇ ಪುಸ್ತಕ ಬಿಡುಗಡೆ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ
January 11th, 12:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಂದೇಶದ ಮೂಲಕ ಶ್ರೀಮದ್ ವಿಜಯರತ್ನ ಸುಂದರ್ ಸುಂದರ್ ಸುರೀಶ್ವರ್ಜಿ ಮಹಾರಾಜ್ ಅವರ 500ನೇ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ತಮ್ಮ ಭಾಷಣ ಮಾಡಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ಈ ಪವಿತ್ರ ಸಂದರ್ಭದಲ್ಲಿ ತಾವು ಮೊದಲು ಪೂಜ್ಯ ಭುವನ್ ಭಾನುಸುರೀಶ್ವರ್ ಜೀ ಮಹಾರಾಜ್ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ಪ್ರಶಾಂತಮೂರ್ತಿ ಸುವಿಶಾಲ್ ಗಚ್ಚಾಧಿಪತಿ ಪೂಜ್ಯ ಶ್ರೀಮದ್ ವಿಜಯ ರಾಜೇಂದ್ರಸುರೀಶ್ವರ್ ಜಿ ಮಹಾರಾಜ್, ಪೂಜ್ಯ ಗಚ್ಚಾಧಿಪತಿ ಶ್ರೀ ಕಲ್ಪತರುಸುರೀಶ್ವರ್ ಜೀ ಮಹಾರಾಜ್, ಸರಸ್ವತಿ ಕೃಪಾಪಾತ್ರ ಪರಂ ಪೂಜ್ಯ ಆಚಾರ್ಯ ಭಗವಂತ ಶ್ರೀಮದ್ ವಿಜಯರತ್ನಸುಂದರಸುರೀಶ್ವರ್ ಜೀ ಮಹಾರಾಜ್ ಮತ್ತು ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲಾ ಸಂತರು ಮತ್ತು ಸಾಧ್ವಿಗಳಿಗೆ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದರು. ಊರ್ಜಾ ಮಹೋತ್ಸವ ಸಮಿತಿಯ ಎಲ್ಲಾ ಸದಸ್ಯರನ್ನು ಅವರು ಶ್ಲಾಘಿಸಿದರು ಮತ್ತು ಅಭಿನಂದಿಸಿದರು.