ಹಸ್ತಪ್ರತಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆಚಾರ್ಯ ಶ್ರೀ ಕೈಲಾಸಸಾಗರಸುರಿ ಜ್ಞಾನಮಂದಿರದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
March 31st, 01:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಸ್ತಪ್ರತಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆಚಾರ್ಯ ಶ್ರೀ ಕೈಲಾಸಸಾಗರಸುರಿ ಜ್ಞಾನಮಂದಿರ ಅವರು ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ನಮ್ಮ ರಾಷ್ಟ್ರವು ಮುಂಚೂಣಿಯಲ್ಲಿರುವ ಇಂತಹ ಅನೇಕ ಭಾವೋದ್ರಿಕ್ತ ತಂಡಗಳನ್ನು ಹೊಂದಿದೆ ಎಂದು ನನಗೆ ಹೆಮ್ಮೆ ಇದೆ, ಮುಂದಿನ ಪೀಳಿಗೆಯು ನಮ್ಮ ಶ್ರೀಮಂತ ಇತಿಹಾಸದೊಂದಿಗೆ ಸಂಪರ್ಕದಲ್ಲಿರುವುದನ್ನು ಖಚಿತಪಡಿಸುತ್ತದೆ, ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.