2026-27ನೇ ಹಣಕಾಸು ವರ್ಷದಿಂದ 2030-31ನೇ ಹಣಕಾಸು ವರ್ಷದವರೆಗಿನ 'ಸಣ್ಣ ಜಲ ವಿದ್ಯುತ್ (ಎಸ್‌ಎಚ್‌ಪಿ) ಅಭಿವೃದ್ಧಿ ಯೋಜನೆ'ಗೆ ಸಂಪುಟದ ಅನುಮೋದನೆ
March 18th, 04:12 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಅಂದಾಜು 1500 ಮೆಗಾವ್ಯಾಟ್ ಸಾಮರ್ಥ್ಯದ ʻಸಣ್ಣ ಜಲ ವಿದ್ಯುತ್ (ಎಸ್‌ಎಚ್‌ಪಿ) ಸ್ಥಾವರʼಗಳ ಸ್ಥಾಪನೆಗಾಗಿ 2,584.60 ಕೋಟಿ ರೂ.ವೆಚ್ಚದಲ್ಲಿ ʻಸಣ್ಣ ಜಲ ವಿದ್ಯುತ್ (ಎಸ್‌ಎಚ್‌ಪಿ) ಅಭಿವೃದ್ಧಿ ಯೋಜನೆ'ಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಗೆ '2026-27ನೇ ಹಣಕಾಸು ವರ್ಷದಿಂದ 2030-31ನೇ ಹಣಕಾಸು ವರ್ಷದವರೆಗೆ ಅನುಮೋದನೆ ನೀಡಲಾಗಿದೆ.