ಕಚ್ ಮತ್ತು ಸೌರಾಷ್ಟ್ರ ಪ್ರಾಂತ್ಯದ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ
January 11th, 02:45 pm
2026ರ ಆರಂಭದ ನಂತರ ಗುಜರಾತ್ ಗೆ ಇದು ನನ್ನ ಮೊದಲ ಭೇಟಿಯಾಗಿದೆ. ಈ ವರ್ಷದ ನನ್ನ ಪ್ರಯಾಣವು ಸೋಮನಾಥ ದಾದಾ ಅವರ ಪಾದಗಳಿಗೆ ತಲೆಬಾಗುವ ಮೂಲಕ ಪ್ರಾರಂಭವಾಗಿರುವುದು ಅತ್ಯಂತ ಮಂಗಳಕರ ಸಂಗತಿಯಾಗಿದೆ. ಈಗ ನಾನು ಈ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜಕೋಟ್ ನಲ್ಲಿದ್ದೇನೆ. 'ಅಭಿವೃದ್ಧಿ ಮತ್ತು ಪರಂಪರೆ' ಎಂಬ ಮಂತ್ರವು ಇಂದು ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಮತ್ತು ವಿಶ್ವದಾದ್ಯಂತ ಈ 'ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆ'ಗೆ ಆಗಮಿಸಿರುವ ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ಸ್ವಾಗತ ಮತ್ತು ಶುಭಾಶಯಗಳನ್ನು ಕೋರುತ್ತೇನೆ.ರಾಜ್‌ಕೋಟ್‌ನಲ್ಲಿ ಕಚ್ ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು
January 11th, 02:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕಚ್ ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, 2026ರಲ್ಲಿ ಇದು ಗುಜರಾತ್‌ಗೆ ಅವರ ಮೊದಲ ಭೇಟಿ ಎಂದು ಹೇಳಿದರು. ಬೆಳಿಗ್ಗೆ ತಾವು ಭಗವಾನ್ ಸೋಮನಾಥನ ದಿವ್ಯ ದರ್ಶನ ಪಡೆದು, ಈಗ ರಾಜ್‌ಕೋಟ್‌ನಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಹೇಳಿದರು. ವಿಕಾಸ್ ಭಿ, ವಿರಾಸತ್ ಭಿ ಎಂಬ ಮಂತ್ರ ಎಲ್ಲೆಡೆ ಪ್ರತಿಧ್ವನಿಸುತ್ತಿದೆ ಎಂದರು. ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದಿಂದ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆಯಲ್ಲಿ ಭಾಗವಹಿಸಲು ಬಂದಿದ್ದ ಎಲ್ಲಾ ಸಹೋದ್ಯೋಗಿಗಳನ್ನು ಪ್ರಧಾನಮಂತ್ರಿ ಸ್ವಾಗತಿಸಿದರು ಮತ್ತು ಶುಭಾಶಯಗಳನ್ನು ತಿಳಿಸಿದರು.ನವದೆಹಲಿಯಲ್ಲಿ ನಡೆದ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2025ರಲ್ಲಿ ಪ್ರಧಾನಮಂತ್ರಿ ಅವರ ಭಾಷಣ
October 17th, 11:09 pm
ಶ್ರೀಲಂಕಾದ ಗೌರವಾನ್ವಿತ ಪ್ರಧಾನಮಂತ್ರಿ ಹರಿಣಿ ಅಮರಸೂರ್ಯ ಜೀ, ಆಸ್ಟ್ರೇಲಿಯಾದ ಗೌರವಾನ್ವಿತ ಮಾಜಿ ಪ್ರಧಾನ ಮಂತ್ರಿ, ನನ್ನ ಸ್ನೇಹಿತ ಟೋನಿ ಅಬಾಟ್ ಜೀ, ಯುಕೆಯ ಮಾಜಿ ಪ್ರಧಾನಿ ರಿಷಿ ಸುನಕ್ ಜೀ, ಗೌರವಾನ್ವಿತ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ಕಾರ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ನಡೆದ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2025 ಉದ್ದೇಶಿಸಿ ಭಾಷಣ ಮಾಡಿದರು
October 17th, 08:00 pm
ವೈವಿಧ್ಯಮಯ ರಸ್ತೆ ಅಡೆತಡೆಗಳು ಮತ್ತು ವೇಗ ಅಡೆತಡೆಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ, ತಡೆಯಲಾಗದ ಭಾರತ ದ ಸುತ್ತಲಿನ ಚರ್ಚೆಯು ಸ್ವಾಭಾವಿಕ ಮತ್ತು ಸಮಯೋಚಿತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹನ್ನೊಂದು ವರ್ಷಗಳ ಹಿಂದಿನ ಮತ್ತು ಇಂದಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ವಿಷಯವನ್ನು ಇರಿಸಲು ಅವರು ಪ್ರಯತ್ನಿಸಿದರು. 2014ರ ಹಿಂದಿನ ಯುಗವನ್ನು ಸ್ಮರಿಸಿದ ಶ್ರೀ ನರೇಂದ್ರ ಮೋದಿ ಅವರು, ಆ ಸಮಯದಲ್ಲಿ ಅಂತಹ ಶೃಂಗಸಭೆಗಳಲ್ಲಿ ಪ್ರಾಬಲ್ಯ ಹೊಂದಿದ್ದ ಚರ್ಚೆಗಳ ಸ್ವರೂಪವನ್ನು ಬಿಂಬಿಸಿದರು. ಭಾರತವು ಜಾಗತಿಕ ಪ್ರತಿಕೂಲ ಪರಿಸ್ಥಿತಿಯನ್ನು ಹೇಗೆ ತಡೆದುಕೊಳ್ಳುತ್ತದೆ, ಅದು ದುರ್ಬಲ ಐದು ಗುಂಪಿನಿಂದ ಹೇಗೆ ನಿರ್ಗಮಿಸುತ್ತದೆ, ರಾಷ್ಟ್ರವು ಎಷ್ಟು ಕಾಲ ನೀತಿ ಪಾರ್ಶ್ವವಾಯುವಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ದೊಡ್ಡ ಪ್ರಮಾಣದ ಹಗರಣಗಳ ಯುಗವು ಯಾವಾಗ ಕೊನೆಗೊಳ್ಳುತ್ತದೆ ಎಂಬ ಕಳವಳಗಳನ್ನು ಅವರು ಗಮನಸೆಳೆದರು.ಒಡಿಶಾದ ಜಾರ್ಸುಗುಡದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 27th, 11:45 am
ಇಲ್ಲಿ ಕೆಲವು ಯುವ ಸ್ನೇಹಿತರು ಅನೇಕ ಕಲಾಕೃತಿಗಳನ್ನು ತಂದಿದ್ದಾರೆ. ಒಡಿಶಾದ ಕಲೆಯ ಮೇಲಿನ ಪ್ರೀತಿ ವಿಶ್ವಪ್ರಸಿದ್ಧವಾಗಿದೆ. ನಾನು ನಿಮ್ಮೆಲ್ಲರಿಂದ ಈ ಉಡುಗೊರೆಗಳನ್ನು ಸ್ವೀಕರಿಸುತ್ತೇನೆ, ನನ್ನ ಎಸ್‌ಪಿಜಿ ಸಹೋದ್ಯೋಗಿಗಳನ್ನು ಈ ಎಲ್ಲಾ ವಸ್ತುಗಳನ್ನು ನಿಮ್ಮಿಂದ ಸಂಗ್ರಹಿಸಲು ವಿನಂತಿಸುತ್ತೇನೆ. ನೀವು ನಿಮ್ಮ ಹೆಸರು ಮತ್ತು ವಿಳಾಸವನ್ನು ಹಿಂಭಾಗದಲ್ಲಿ ಬರೆದರೆ, ಖಂಡಿತವಾಗಿಯೂ ನನ್ನಿಂದ ನಿಮಗೆ ಪತ್ರ ಬರುತ್ತದೆ. ಅಲ್ಲಿ ಹಿಂಭಾಗದಲ್ಲಿ, ಆ ಮಗು ಬಹಳ ಹೊತ್ತಿನಿಂದ ಏನನ್ನೋ ಕೈಯಲ್ಲಿ ಹಿಡಿದಿರುವುದನ್ನು ನಾನು ನೋಡುತ್ತಿದ್ದೇನೆ. ಅವನ ಕೈಗಳು ನೋಯುತ್ತಿರಬೇಕು. ದಯವಿಟ್ಟು ಅವನಿಗೆ ಸಹಾಯ ಮಾಡಿ ಮತ್ತು ಅದನ್ನೂ ಪಡೆಯಿರಿ. ನೀವು ನಿಮ್ಮ ಹೆಸರನ್ನು ಹಿಂಭಾಗದಲ್ಲಿ ಬರೆದಿದ್ದರೆ, ನಾನು ಖಂಡಿತವಾಗಿಯೂ ನಿಮಗೆ ಪತ್ರ ಬರೆಯುತ್ತೇನೆ. ಈ ಕಲಾಕೃತಿಗಳನ್ನು ಸಿದ್ಧಪಡಿಸಿದ್ದಕ್ಕಾಗಿ ನಿಮ್ಮ ಈ ಪ್ರೀತಿಗಾಗಿ ಎಲ್ಲಾ ಯುವಕರು, ಯುವತಿಯರು ಮತ್ತು ಪುಟ್ಟ ಮಕ್ಕಳಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಒಡಿಶಾದ ಜಾರ್ಸುಗುಡದಲ್ಲಿ 60,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
September 27th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಜಾರ್ಸುಗುಡದಲ್ಲಿ 60,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ಗಣ್ಯರಿಗೆ ಗೌರವಯುತ ಶುಭಾಶಯಗಳನ್ನು ಸಲ್ಲಿಸಿದರು. ಪ್ರಸ್ತುತ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿರುವುದನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಈ ಶುಭ ದಿನಗಳಲ್ಲಿ ಮಾ ಸಮಲೈ ಮತ್ತು ಮಾ ರಾಮಚಂಡಿಯ ಪವಿತ್ರ ಭೂಮಿಗೆ ಭೇಟಿ ನೀಡಿ ಅಲ್ಲಿ ನೆರೆದಿದ್ದ ಜನರನ್ನು ಭೇಟಿ ಮಾಡುವ ಅದೃಷ್ಟ ತಮಗೆ ಸಿಕ್ಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರು ಇರುವುದನ್ನು ಗಮನಿಸಿದ ಪ್ರಧಾನಮಂತ್ರಿ, ಅವರ ಆಶೀರ್ವಾದವೇ ನಿಜವಾದ ಶಕ್ತಿಯ ಮೂಲ ಎಂದು ಹೇಳಿದರು, ಜನರಿಗೆ ನಮನಗಳನ್ನು ಅರ್ಪಿಸಿದರು.ಜಪಾನ್ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
August 29th, 03:59 pm
ಇಂದಿನ ನಮ್ಮ ಚರ್ಚೆಯು ಫಲಪ್ರದ ಮತ್ತು ನಿರ್ದಿಷ್ಟ ಉದ್ದೇಶಗಳನ್ನು ಒಳಗೊಂಡಿತ್ತು. ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವಗಳಾಗಿ, ನಮ್ಮ ಪಾಲುದಾರಿಕೆಯು ನಮ್ಮ ಎರಡೂ ದೇಶಗಳಿಗೆ ಮಾತ್ರವಲ್ಲದೆ ಜಾಗತಿಕ ಶಾಂತಿ ಮತ್ತು ಸ್ಥಿರತೆಗೂ ಬಹಳ ಮುಖ್ಯವಾಗಿದೆ ಎಂಬುದನ್ನು ನಾವಿಬ್ಬರೂ ಒಪ್ಪುತ್ತೇವೆ.ಐಎನ್‌ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್ ಕಾರ್ಯಾರಂಭ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಇಂಗ್ಲಿಷ್ ಭಾಷಣ
January 15th, 11:08 am
ಮಹಾರಾಷ್ಟ್ರದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಸಿಪಿ ರಾಧಾಕೃಷ್ಣನ್ ಅವರು, ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ, ಶ್ರೀ ದೇವೇಂದ್ರ ಫಡ್ನವೀಸ್ ಅವರು, ಮಂತ್ರಿ ಪರಿಷತ್ತಿನಲ್ಲಿ ನನ್ನ ಹಿರಿಯ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ಅವರು, ಸಂಜಯ್ ಸೇಠ್ ಜಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಅವರೊಂದಿಗೆ ಇಂದು ನಮ್ಮ ಇಬ್ಬರು ಉಪಮುಖ್ಯಮಂತ್ರಿಗಳಾದ. ಉಪಮುಖ್ಯಮಂತ್ರಿ ಶ್ರೀ.ಏಕನಾಥ ಶಿಂಧೆಯವರು, ಶ್ರೀ ಅಜಿತ್ ಪವಾರ್ ಅವರು, CDS, CNS, ಎಲ್ಲ ನೌಕಾ ಸಿಬ್ಬಂದಿ, ಮಡಗಾಂವ್ ನೌಕಾನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಹೋದ್ಯೋಗಿಗಳೇ, ಇತರ ಆಹ್ವಾನಿತರೆ, ಮಹಿಳೆಯರೇ ಮತ್ತು ಮಹನೀಯರೇ,ಮುಂಚೂಣಿ ಯುದ್ಧ ನೌಕೆಗಳಾದ ಐ ಎನ್ ಎಸ್ ಸೂರತ್, ಐ ಎನ್ ಎಸ್ ನೀಲಗಿರಿ ಮತ್ತು ಐ ಎನ್ ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 15th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈಯ ನೌಕಾ ಹಡಗುಕಟ್ಟೆಯಲ್ಲಿ ಮೂರು ಮುಂಚೂಣಿ ನೌಕಾ ಯುದ್ಧ ನೌಕೆಗಳಾದ ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಜನವರಿ 15 ಅನ್ನು ಸೇನಾ ದಿನವಾಗಿ ಆಚರಿಸಲಾಗುತ್ತದೆ ಮತ್ತು ರಾಷ್ಟ್ರದ ಸುರಕ್ಷತೆ ಹಾಗು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಪ್ರತಿಯೊಬ್ಬ ಧೈರ್ಯಶಾಲಿ ಯೋಧನಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಎಲ್ಲ ವೀರ ಯೋಧರನ್ನು ಅಭಿನಂದಿಸಿದರು.