ರೋಜ್‌ಗಾರ್ ಮೇಳದ ನೇಮಕಾತಿ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

May 23rd, 11:15 am

ಈ ಹಂತವನ್ನು ತಲುಪಲು ನೀವು ದೀರ್ಘ ತಯಾರಿ ಮತ್ತು ಕಠಿಣ ಪರಿಶ್ರಮದ ಮೂಲಕ ಬಂದಿದ್ದೀರಿ. ಈ ಸಾಧನೆಗಾಗಿ ನಾನು ನಿಮಗೆ ಮತ್ತು ನಿಮ್ಮ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮನ್ನು ಇಲ್ಲಿಗೆ ಕರೆತರುವಲ್ಲಿ ನಿಮ್ಮ ಪೋಷಕರು ಮತ್ತು ಕುಟುಂಬಗಳ ಕೊಡುಗೆ ಅಪಾರವಾಗಿದೆ. ನಾವು ಈ ಹಂತಕ್ಕೆ ತಲುಪಲು ಕುಟುಂಬ ಮತ್ತು ಸಮಾಜ ಮಾತ್ರವೇ ದೊಡ್ಡ ಪಾತ್ರವನ್ನು ವಹಿಸಿರುವುದಿಲ್ಲ. ನಾವು ಇಲ್ಲಿಗೆ ಬಂದಿರುವುದು ನಮ್ಮಿಂದಾಗಿ ಅಥವಾ ನಮ್ಮ ಕುಟುಂಬಗಳಿಂದಾಗಿ ಮಾತ್ರ ಅಲ್ಲ. ಈ ವಿಶಾಲ ರಾಷ್ಟ್ರದ 140 ಕೋಟಿ ನಾಗರಿಕರ ಕೊಡುಗೆಯೂ ಸಹ ಬಹಳ ಮಹತ್ವದ್ದಾಗಿದೆ. ಆದ್ದರಿಂದ, ನಮ್ಮ ಜವಾಬ್ದಾರಿ ನಮ್ಮ ಮತ್ತು ನಮ್ಮ ಕುಟುಂಬಗಳ ಕಡೆಗೆ ಮಾತ್ರವಲ್ಲ, ಇಡೀ ಸಮಾಜದ ಕಡೆಗೂ ಹೋಗಬೇಕು. ಈ ಎಲ್ಲಾ ಕೆಲಸಗಳಿಗೆ ನೀವು ಇನ್ನಷ್ಟು ಸಮರ್ಥರಾಗುತ್ತೀರಿ ಎಂಬ ವಿಶ್ವಾಸ ನನಗಿದೆ. ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.

ಉದ್ಯೋಗ ಮೇಳದ ಅಡಿಯಲ್ಲಿ ಸರ್ಕಾರಿ ಇಲಾಖೆಗಳಿಗೆ ಹೊಸದಾಗಿ ಆಯ್ಕೆಯಾದ ಯುವಕರಿಗೆ, 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

May 23rd, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ, ಬೆಳಿಗ್ಗೆ 11 ಗಂಟೆಗೆ ನಡೆದ 19ನೇ ಉದ್ಯೋಗ ಮೇಳದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ಆಯ್ಕೆಯಾದ ಯುವಕರಿಗೆ, 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂದರ್ಭವನ್ನು ದೇಶಾದ್ಯಂತದ ಸಾವಿರಾರು ಯುವಕರಿಗೆ ಅತ್ಯಂತ ಮಹತ್ವದ ದಿನ ಎಂದು ಬಣ್ಣಿಸಿದರು. ಸರ್ಕಾರಿ ಸೇವೆಗೆ ಹೊಸದಾಗಿ ಸೇರಿದವರನ್ನು ಸ್ವಾಗತಿಸಿದ ಅವರು, ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಅಭಿವೃದ್ಧಿಗೆ ಅವರು ನೀಡಲಿರುವ ಮುಂಬರುವ ಕೊಡುಗೆಯ ಬಗ್ಗೆ ಒತ್ತಿಹೇಳಿದರು. ಮುಂಬರುವ ವರ್ಷಗಳಲ್ಲಿ, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ನೀವೆಲ್ಲರೂ ನಿರ್ಣಾಯಕ ಪಾತ್ರ ವಹಿಸಲಿದ್ದೀರಿ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಇಟಲಿ ಪ್ರಧಾನಮಂತ್ರಿ ಜತೆ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

May 20th, 05:00 pm

ಕಳೆದ ಸುಮಾರು ಮೂರೂವರೆ ವರ್ಷಗಳಲ್ಲಿ ಪ್ರಧಾನಮಂತ್ರಿ ಮೆಲೋನಿ ಅವರನ್ನು ಭೇಟಿ ಮಾಡಲು ನನಗೆ ಹಲವಾರು ಅವಕಾಶಗಳು ಸಿಕ್ಕಿವೆ. ಇದು ಭಾರತ ಮತ್ತು ಇಟಲಿ ನಡುವಿನ ನಿಕಟ ಸಹಕಾರ ಮತ್ತು ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಅವರ ನಾಯಕತ್ವದಲ್ಲಿ, ನಮ್ಮ ಸಂಬಂಧಗಳು ಹೊಸ ಆವೇಗ, ಹೊಸ ದಿಕ್ಕು ಮತ್ತು ನವೀಕೃತ ವಿಶ್ವಾಸವನ್ನು ಪಡೆದುಕೊಂಡಿವೆ. ನಾವು ನಮ್ಮ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಂತೆ, ನಾವು ವಿಶೇಷ ಕಾರ್ಯತಂತ್ರ ಪಾಲುದಾರಿಕೆಯನ್ನು ಘೋಷಿಸುತ್ತಿದ್ದೇವೆ ಎಂಬುದರಿಂದ ನನಗೆ ಸಂತೋಷವಾಗಿದೆ.

ನಾರ್ವೆ-ಭಾರತ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

May 18th, 11:49 pm

ಇದು ಕೇವಲ ಸಾಧ್ಯತೆಗಳ ಪಾಲುದಾರಿಕೆಯಲ್ಲ, ಇದು ಸಾಬೀತಾಗಿರುವ ಪಾಲುದಾರಿಕೆಯಾಗಿದೆ. ಇಂದು ಆಹಾರ, ಇಂಧನ ಮತ್ತು ರಸಗೊಬ್ಬರ ಭದ್ರತೆಯು ಜಾಗತಿಕ ಸವಾಲುಗಳಾಗಿ ಮಾರ್ಪಟ್ಟಿರುವಾಗ, ಭಾರತ ಮತ್ತು ನಾರ್ವೆ ಅವುಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಅದು ಭಾರತದ ಆಹಾರ ವಲಯದಲ್ಲಿ ಓರ್ಕ್ಲಾದ ಹೂಡಿಕೆಗಳಾಗಲಿ, ಈಕ್ವಿನಾರ್ ಭಾರತಕ್ಕೆ ಮಾಡುವ ಎಲ್ಪಿಜಿ ಮತ್ತು ಎಲ್ಎನ್ ಜಿ ಪೂರೈಕೆಯಾಗಿರಲಿ ಅಥವಾ ಭಾರತದ ರಸಗೊಬ್ಬರ ವಲಯಕ್ಕೆ ಯಾರಾ ಇಂಟರ್ ನ್ಯಾಷನಲ್‌ನ ಕೊಡುಗೆಯಾಗಿರಲಿ - ಈ ಸಹಭಾಗಿತ್ವಗಳು ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತಿವೆ.

ಭಾರತ-ನಾರ್ವೆ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

May 18th, 08:50 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಓಸ್ಲೋದಲ್ಲಿ ನಡೆದ ಭಾರತ-ನಾರ್ವೆ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಗೌರವಾನ್ವಿತ ರಾಜಕುಮಾರ ಹಾಕನ್ ಮತ್ತು ನಾರ್ವೆಯ ಪ್ರಧಾನಮಂತ್ರಿ ಗೌರವಾನ್ವಿತ ಜೋನಾಸ್ ಗಹರ್ ಸ್ಟೋರೆ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಸುಸ್ಥಿರತೆ ಕ್ಷೇತ್ರದಲ್ಲಿ ಸಹಕಾರ ಕುರಿತು ಭಾರತ - ಕೊರಿಯಾ ಜಂಟಿ ಹೇಳಿಕೆ

April 20th, 10:55 pm

ಇನ್ನು ಮುಂದೆ ಎರಡೂ ಕಡೆಯವರು ಎಂದು ಕರೆಯಲ್ಪಡುವ ಭಾರತ ಮತ್ತು ಕೊರಿಯಾ ದೇಶಗಳು ಹವಾಮಾನ ಬದಲಾವಣೆ, ಸಮುದ್ರ ಮತ್ತು ಉತ್ತರ ಧ್ರುವ ಸುತ್ತಲಿನ ದೊಡ್ಡ ಮತ್ತು ಅತ್ಯಂತ ಶೀತ ಪ್ರದೇಶ(ಆರ್ಕ್ಟಿಕ್)ದ ಸುಧಾರಣೆ ವಿಷಯಗಳಲ್ಲಿ ಪ್ರಾಯೋಗಿಕ ಸಹಭಾಗಿತ್ವ ಹೊಂದುವ ಮೂಲಕ ಜಾಗತಿಕ ಸುಸ್ಥಿರತೆಯ ಸವಾಲುಗಳನ್ನು ಎದುರಿಸಲು ದ್ವಿಪಕ್ಷೀಯ ಸಹಕಾರ ಬಲಪಡಿಸಲು ಒಪ್ಪಿಕೊಂಡಿವೆ.

ಭಾರತ-ಕೊರಿಯಾ ಗಣರಾಜ್ಯ (ಆರ್‌ಒಕೆ-ದಕ್ಷಿಣ ಕೊರಿಯಾ) ವಿಶೇಷ ಕಾರ್ಯತಂತ್ರ ಪಾಲುದಾರಿಕೆಗಾಗಿ ಜಂಟಿ ಕಾರ್ಯತಂತ್ರ ದೃಷ್ಟಿಕೋನ

April 20th, 10:53 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಕೊರಿಯಾ ಗಣರಾಜ್ಯದ(ದಕ್ಷಿಣ ಕೊರಿಯಾ-ಆರ್‌ಒಕೆ) ಅಧ್ಯಕ್ಷ ಗೌರವಾನ್ವಿತ ಲೀ ಜೇ ಮ್ಯುಂಗ್ ಅವರು 2026 ಏಪ್ರಿಲ್ 19ರಿಂದ 21ರ ವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಇದು ಕೊರಿಯಾದ ಅಧ್ಯಕ್ಷರೊಬ್ಬರು ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ನೀಡಿದ ಚೊಚ್ಚಲ ಭೇಟಿಯಾಗಿದೆ. ಅಧ್ಯಕ್ಷ ಲೀ ಜೇ ಮ್ಯುಂಗ್ ಅವರೊಂದಿಗೆ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಕೊರಿಯಾ ಉದ್ಯಮ ರಂಗದ ಪ್ರಮುಖ ಸಿಇಒಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗ ಆಗಮಿಸಿತ್ತು.