ಕುವೈತ್ ಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧಿಕೃತ ಭೇಟಿ (ಡಿಸೆಂಬರ್ 21-22, 2024): ಜಂಟಿ ಹೇಳಿಕೆ
December 22nd, 07:46 pm
ಕುವೈತ್ ದೇಶದ ದೊರೆ (ಅಮೀರ್) ಘನತೆವೆತ್ತ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 21-22 ಡಿಸೆಂಬರ್ 2024 ರಂದು ಕುವೈಟ್ ಗೆ ಅಧಿಕೃತ ಭೇಟಿ ನೀಡಿದರು. ಕುವೈತ್ ಗೆ ಅವರ ಮೊದಲ ಭೇಟಿಯಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 21 ಡಿಸೆಂಬರ್ 2024 ರಂದು ಅಮೀರ್ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಗೌರವಾನ್ವಿತ ಅತಿಥಿಯಾಗಿ ಕುವೈತ್ ನಲ್ಲಿ ನಡೆದ 26ನೇ ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.ಕುವೈತ್ ರಾಜಕುಮಾರನನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
December 22nd, 05:32 pm
ಕುವೈತ್ ನೊಂದಿಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಭಾರತ ಅತ್ಯಂತ ಮಹತ್ವ ನೀಡುವುದಾಗಿ ಪ್ರಧಾನಿಯವರು ತಿಳಿಸಿದರು. ದ್ವಿಪಕ್ಷೀಯ ಸಂಬಂಧಗಳು ಉತ್ತಮವಾಗಿ ಪ್ರಗತಿ ಸಾಧಿಸುತ್ತಿವೆ ಎಂದು ಉಭಯ ನಾಯಕರು ಒಪ್ಪಿಕೊಂಡು, ವ್ಯೂಹಾತ್ಮಕ ಪಾಲುದಾರಿಕೆಗೆ ಉಭಯ ದೇಶಗಳ ಉನ್ನತಿಯನ್ನು ಸ್ವಾಗತಿಸಿದರು. ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಎರಡೂ ದೇಶಗಳ ನಡುವೆ ನಿಕಟ ಸಮನ್ವಯಕ್ಕೆ ಅವರು ಒತ್ತು ನೀಡಿದರು. ಕುವೈತ್ ಅಧ್ಯಕ್ಷತೆಯ ಅಡಿಯಲ್ಲಿ ಭಾರತ-ಜಿಸಿಸಿ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂಬ ವಿಶ್ವಾಸವನ್ನು ಪ್ರಧಾನಿಯವರು ವ್ಯಕ್ತಪಡಿಸಿದರು.ಕುವೈತ್ ನ ಪ್ರಧಾನಮಂತ್ರಿಯಾಗಿ ಮರು ನೇಮಕಗೊಂಡಿರುವ ಶೇಕ್ ಸಬ್ಹಾ ಅಲ್-ಖಾಲೆದ್ ಆಲ್-ಅಹ್ಮದ್ ಅಲ್-ಸಭಾ ಅವರಿಗೆ ಪ್ರಧಾನಿ ಅಭಿನಂದನೆ
December 08th, 10:48 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್ ರಾಷ್ಟ್ರದ ನೂತನ ಪ್ರಧಾನಮಂತ್ರಿಯಾಗಿ ಮರು ನೇಮಕಗೊಂಡಿರುವ ಗೌರವಾನ್ವಿತ ಶೇಕ್ ಸಬ್ಹಾ ಅಲ್–ಖಾಲೆದ್ ಆಲ್–ಅಹ್ಮದ್ ಅಲ್–ಸಭಾ ಅವರನ್ನು ಅಭಿನಂದಿಸಿದ್ದಾರೆ.