ನವ ರಾಯಪುರದಲ್ಲಿ ಬ್ರಹ್ಮಕುಮಾರಿಯರ ಧ್ಯಾನ ಕೇಂದ್ರ “ಶಾಂತಿ ಶಿಖರ್” ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 01st, 11:15 am
ಛತ್ತೀಸ್‌ಗಢ ರಾಜ್ಯಪಾಲರಾದ ಶ್ರೀ ರಾಮೆನ್ ಡೇಕಾ, ರಾಜ್ಯದ ಜನಪ್ರಿಯ ಮತ್ತು ಕ್ರಿಯಾಶೀಲ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯಿ, ರಾಜಯೋಗಿನಿ ಸಹೋದರಿ ಜಯಂತಿ, ರಾಜಯೋಗಿ ಮೃತ್ಯುಂಜಯ್, ಎಲ್ಲಾ ಬ್ರಹ್ಮ ಕುಮಾರಿ ಸಹೋದರಿಯರೆ, ಇಲ್ಲಿ ಉಪಸ್ಥಿತರಿರುವ ಇತರೆ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!ಛತ್ತೀಸ್ ಗಢದ ನವ ರಾಯ್ ಪುರದಲ್ಲಿ ಶಾಂತಿ ಶಿಖರ - ಧ್ಯಾನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ನೆರೆದಿದ್ದ ಬ್ರಹ್ಮ ಕುಮಾರಿಗಳನ್ನುದ್ದೇಶಿಸಿ ಭಾಷಣ ಮಾಡಿದರು
November 01st, 11:00 am
ಛತ್ತೀಸ್ ಗಢದ ನವ ರಾಯ್ ಪುರದಲ್ಲಿ ಇಂದು ಆಧ್ಯಾತ್ಮಿಕ ಕಲಿಕೆ, ಶಾಂತಿ ಮತ್ತು ಧ್ಯಾನಕ್ಕಾಗಿ ಆಧುನಿಕ ಕೇಂದ್ರವಾದ ಶಾಂತಿ ಶಿಖರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಹ್ಮ ಕುಮಾರಿಗಳನ್ನು ಉದ್ದೇಶಿಸಿ ಭಾಷಣ ಮಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಛತ್ತೀಸ್ ಗಢ ರಚನೆಯಾಗಿ 25 ವರ್ಷಗಳು ತುಂಬುತ್ತಿರುವುದರಿಂದ ಇಂದು ಅತ್ಯಂತ ವಿಶೇಷ ದಿನವಾಗಿದೆ ಎಂದು ಹೇಳಿದರು. ಛತ್ತೀಸ್ ಗಢ, ಜಾರ್ಖಂಡ್ ಮತ್ತು ಉತ್ತರಾಖಂಡ್ ಗಳ ಜೊತೆಗೆ ಸ್ಥಾಪನೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ . ದೇಶಾದ್ಯಂತ ಹಲವಾರು ಇತರ ರಾಜ್ಯಗಳು ಇಂದು ತಮ್ಮ ರಾಜ್ಯತ್ವ ದಿನವನ್ನು ಆಚರಿಸುತ್ತಿವೆ ಎಂದು ಹೇಳಿದರು. ಈ ಎಲ್ಲಾ ರಾಜ್ಯಗಳ ಜನತೆಗೆ ಅವರ ರಾಜ್ಯತ್ವ ದಿನದಂದು ಶ್ರೀ ಮೋದಿ ಅವರು ಶುಭಾಶಯಗಳನ್ನು ತಿಳಿಸಿದರು. ರಾಜ್ಯಗಳ ಅಭಿವೃದ್ಧಿಯು ರಾಷ್ಟ್ರದ ಪ್ರಗತಿಗೆ ಇಂಧನ ನೀಡುತ್ತದೆ ಎಂಬ ಮಾರ್ಗದರ್ಶಿ ತತ್ವದಿಂದ ಪ್ರೇರಿತರಾಗಿ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಧ್ಯೇಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.