26ನೇ ಎಸ್.ಸಿ.ಒ. ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ
September 01st, 01:58 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಿರ್ಗಿಜ್ ಗಣರಾಜ್ಯದ ಬಿಷ್ಕೆಕ್‌ನಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 01, 2026 ರವರೆಗೆ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 26ನೇ ಸಭೆಯಲ್ಲಿ ಇಂದು ಭಾಗವಹಿಸಿದರು.ಕಿರ್ಗಿಜ್ ಗಣರಾಜ್ಯದ ಬಿಷ್ಕೆಕ್‌ನಲ್ಲಿ ನಡೆದ 26ನೇ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
September 01st, 01:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಿರ್ಗಿಜ್ ಗಣರಾಜ್ಯದ ಬಿಷ್ಕೆಕ್‌ನಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 01, 2026 ರವರೆಗೆ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 26ನೇ ಸಭೆಯಲ್ಲಿ ಇಂದು ಭಾಗವಹಿಸಿದರು.ಪ್ರಧಾನಮಂತ್ರಿ ಅವರಿಂದ ಭಾರತ ಸರ್ಕಾರದ ಕಾರ್ಯದರ್ಶಿಗಳೊಂದಿಗೆ 3ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ
August 20th, 09:37 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಅಧಿಕೃತ ನಿವಾಸವಾದ 7, ಲೋಕ ಕಲ್ಯಾಣ ಮಾರ್ಗದಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಮೂರನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೂಲಸೌಕರ್ಯ ಮತ್ತು ಸಂಪರ್ಕ, ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳು ಹಾಗೂ ಆಡಳಿತಕ್ಕೆ ಸಂಬಂಧಿಸಿದ ಸಚಿವಾಲಯಗಳು ಮತ್ತು ಇಲಾಖೆಗಳ ಭವಿಷ್ಯದ ಕಾರ್ಯಸೂಚಿಯ ಬಗ್ಗೆ ಅವರು ಚರ್ಚಿಸಿದರು.ಜಪಾನ್ ರಕ್ಷಣಾ ಸಚಿವರಿಂದ ಪ್ರಧಾನಮಂತ್ರಿ ಮೋದಿ ಭೇಟಿ
August 20th, 09:04 pm
ಪ್ರಸ್ತುತ ಭಾರತಕ್ಕೆ ಅಧಿಕೃತ ಭೇಟಿಯಲ್ಲಿರುವ ಜಪಾನ್ ರಕ್ಷಣಾ ಸಚಿವರಾದ ಶ್ರೀ ಶಿಂಜಿರೊ ಕೊಯಿಜುಮಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೆಂಪು ಕೋಟೆಯ ವೇದಿಕೆಯಿಂದ ಮಾಡಿದ ಭಾಷಣದ ಪ್ರಮುಖ ಮುಖ್ಯಾಂಶಗಳು
August 15th, 04:44 pm
80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇಂದು ಕೆಂಪು ಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಕಳೆದ 12 ವರ್ಷಗಳಲ್ಲಿ ಉತ್ಪಾದನೆ, ಡಿಜಿಟಲ್ ಬೆಳವಣಿಗೆ ಮತ್ತು ನಾಗರಿಕ ವಿತರಣೆಯಲ್ಲಿ ಭಾರತದ ಪ್ರಗತಿಯ ವಿವರವಾದ ವರದಿ ಕಾರ್ಡ್ ಅನ್ನು ಅವರು ಪ್ರಸ್ತುತಪಡಿಸಿದರು. ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಏಳು ಪ್ರಮುಖ ವಲಯಗಳನ್ನು ಒಳಗೊಂಡಿರುವ ಪರಿವರ್ತಕ ಸಪ್ತ ಧಾರವನ್ನು ಸಹ ಅವರು ಅನಾವರಣಗೊಳಿಸಿದರು.12 ವರ್ಷಗಳ ಪರಿವರ್ತನೆ: ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಭಾರತದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ
August 15th, 01:18 pm
ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ 12 ವರ್ಷಗಳಲ್ಲಿ ಭಾರತದ ಪರಿವರ್ತನೆಯನ್ನು ಎತ್ತಿಹಿಡಿದರು, ಉತ್ಪಾದನೆ, ಡಿಜಿಟಲ್ ಮೂಲಸೌಕರ್ಯ, ಮೂಲಭೂತ ಸೌಕರ್ಯಗಳು, ಇಂಧನ ಭದ್ರತೆ, ಯುವ ಸಬಲೀಕರಣ, ನಾವೀನ್ಯತೆ, ಸಾಮಾಜಿಕ ಭದ್ರತೆ ಮತ್ತು ಇತರ ಪ್ರಮುಖ ವಲಯಗಳಾದ್ಯಂತ ಸಾಧಿಸಿದ ಪ್ರಗತಿಯನ್ನು ವಿವರಿಸಿದರು.ಅಮೆರಿಕ ಉಪಾಧ್ಯಕ್ಷರಿಂದ ದೂರವಾಣಿ ಕರೆ ಸ್ವೀಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
August 08th, 10:58 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕ ಉಪಾಧ್ಯಕ್ಷರಾದ ಶ್ರೀ ಜೆ.ಡಿ. ವ್ಯಾನ್ಸ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.ಅಭಿವೃದ್ಧಿ ಹೊಂದಿದ ಭಾರತದ ಬೆಳವಣಿಗೆಯ ಎಂಜಿನ್ ಆಗುವ ಸಾಮರ್ಥ್ಯ ಆಂಧ್ರಪ್ರದೇಶಕ್ಕೆ ಇದೆ: ಪ್ರಧಾನಿ ಮೋದಿ
August 01st, 11:45 am
ಪ್ರಧಾನ ಮಂತ್ರಿ ಮೋದಿ ಆಂಧ್ರಪ್ರದೇಶದಲ್ಲಿ ಸುಮಾರು ₹18,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಸಮರ್ಪಿಸಿದರು, ಇದು ವಿಕ್ಷಿತ್ ಭಾರತದ ಬೆಳವಣಿಗೆಯ ಎಂಜಿನ್ ಆಗಿ ರಾಜ್ಯ ಹೊರಹೊಮ್ಮುವುದನ್ನು ಎತ್ತಿ ತೋರಿಸಿತು. ವಿಶ್ವ ದರ್ಜೆಯ ಸಂಪರ್ಕ ಮತ್ತು ಲಾಜಿಸ್ಟಿಕ್ಸ್‌ನಿಂದ ಸೆಮಿಕಂಡಕ್ಟರ್‌ಗಳು, AI, ಹಸಿರು ಶಕ್ತಿ ಮತ್ತು ಉತ್ಪಾದನೆಯವರೆಗೆ, ಉದ್ಯೋಗಗಳನ್ನು ಸೃಷ್ಟಿಸುವ, ಹೂಡಿಕೆಯನ್ನು ಆಕರ್ಷಿಸುವ ಮತ್ತು ಆಂಧ್ರಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸುವ ದೃಷ್ಟಿಕೋನವನ್ನು ಪ್ರಧಾನಿ ಮೋದಿ ವಿವರಿಸಿದರು."ಆಂಧ್ರಪ್ರದೇಶದ ಭೋಗಪುರಂನಲ್ಲಿ ₹17,900 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ "
August 01st, 11:30 am
ವಿಕಸಿತ್ ಭಾರತದ ಬೆಳವಣಿಗೆಯ ಎಂಜಿನ್ ಆಗಿ ರಾಜ್ಯ ಹೊರಹೊಮ್ಮುವುದನ್ನು ಎತ್ತಿ ತೋರಿಸುವ ಮೂಲಕ ಆಂಧ್ರಪ್ರದೇಶದಲ್ಲಿ ಸುಮಾರು ₹18,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ವಿಶ್ವ ದರ್ಜೆಯ ಸಂಪರ್ಕ ಮತ್ತು ಲಾಜಿಸ್ಟಿಕ್ಸ್‌ನಿಂದ ಸೆಮಿಕಂಡಕ್ಟರ್‌ಗಳು, ಎಐ, ಹಸಿರು ಶಕ್ತಿ ಮತ್ತು ಉತ್ಪಾದನೆಯವರೆಗೆ, ಉದ್ಯೋಗಗಳನ್ನು ಸೃಷ್ಟಿಸುವ, ಹೂಡಿಕೆಯನ್ನು ಆಕರ್ಷಿಸುವ ಮತ್ತು ಆಂಧ್ರಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸುವ ದೃಷ್ಟಿಕೋನವನ್ನು ಪ್ರಧಾನಿ ಮೋದಿ ವಿವರಿಸಿದರು.ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಗಳೊಂದಿಗೆ 2ನೇ ಉನ್ನತ ಮಟ್ಟದ ಸಭೆ
July 28th, 08:48 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸ 7ರಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಗಳೊಂದಿಗೆ 2ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಮತ್ತು ಆರ್ಥಿಕತೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳೊಂದಿಗೆ ವ್ಯವಹರಿಸುವ ಸಚಿವಾಲಯಗಳು ಮತ್ತು ಇಲಾಖೆಗಳ ಭವಿಷ್ಯದ ಕಾರ್ಯಸೂಚಿಯನ್ನು ಅವರು ಪರಿಶೀಲಿಸಿದರು. ವಿಕಸಿತ ಭಾರತದ ಗುರಿಗಳತ್ತ ಪ್ರಗತಿಯನ್ನು ವೇಗಗೊಳಿಸುವತ್ತ ಸಭೆ ಗಮನ ಹರಿಸಿತು.ಪ್ರಕೃತಿಯನ್ನು ಸಂರಕ್ಷಿಸುವ ಮಹತ್ವವನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ
July 28th, 07:48 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮನುಕುಲದ ಕಲ್ಯಾಣವು ಪ್ರಕೃತಿಯ ರಕ್ಷಣೆ ಮತ್ತು ಗೌರವದಲ್ಲಿ ಅಡಗಿದೆ ಎಂದು ಹೇಳಿದ್ದಾರೆ. ಭಾರತದ ಕಾಲಾತೀತ ಸಂಪ್ರದಾಯಗಳು ಈ ನ್ಯಾಯಯುತ ಜೀವನ ವಿಧಾನವನ್ನು ಎತ್ತಿಹಿಡಿಯಲು ಮತ್ತು ನೈಸರ್ಗಿಕ ಪ್ರಪಂಚದೊಂದಿಗೆ ಸಾಮರಸ್ಯದಿಂದ ಬದುಕಲು ನಮಗೆ ಸ್ಫೂರ್ತಿ ನೀಡುತ್ತವೆ ಎಂದು ಅವರು ಹೇಳಿದರು.ನ್ಯೂಜಿಲೆಂಡ್ ಪ್ರಧಾನಮಂತ್ರಿಯೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ
July 11th, 08:09 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಕ್ಲೆಂಡ್‌ನ ಸರ್ಕಾರಿ ಭವನದಲ್ಲಿಂದು ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಸರ್ಕಾರಿ ಭವನಕ್ಕೆ ಆಗಮಿಸಿದಾಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸಾಂಪ್ರದಾಯಿಕ ಮಾವೊರಿ ಸ್ವಾಗತ ನೀಡಲಾಯಿತು. ಸಮಾರಂಭದಲ್ಲಿ ಶಾಂತಿ, ಗೌರವ ಮತ್ತು ಸ್ವಾಗತವನ್ನು ಸಂಕೇತಿಸುವ ಸಾಂಪ್ರದಾಯಿಕ ಮಾವೊರಿ ಆಚರಣೆಗಳು ಒಳಗೊಂಡಿದ್ದವು. ಸಾಂಪ್ರದಾಯಿಕ ಸ್ವಾಗತದ ನಂತರ, ಪ್ರಧಾನಮಂತ್ರಿಯವರು ಗೌರವ ರಕ್ಷೆ (ಗಾರ್ಡ್ ಆಫ್ ಆನರ್ ) ಸ್ವೀಕರಿಸಿದರು.ಭಾರತ-ನ್ಯೂಜಿಲೆಂಡ್ ಕಾರ್ಯತಾಂತ್ರಿಕ ಪಾಲುದಾರಿಕೆ: 2030ರ ನೀಲನಕ್ಷೆ
July 11th, 08:06 am
ಭಾರತ ಮತ್ತು ನ್ಯೂಜಿಲೆಂಡ್ ಪ್ರಧಾನಮಂತ್ರಿಗಳು 2026ರ ಜುಲೈ 11 ರಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದರು ಮತ್ತು ಭಾರತ-ನ್ಯೂಜಿಲೆಂಡ್ ಕಾರ್ಯತಾಂತ್ರಿಕ ಪಾಲುದಾರಿಕೆಯನ್ನು ರೂಪಿಸುವುದಾಗಿ ಘೋಷಿಸಿದರು. ಮುಂದಿನ ನಾಲ್ಕು ವರ್ಷಗಳಲ್ಲಿ ಜಂಟಿ ಕ್ರಮಕ್ಕೆ ಮಾರ್ಗದರ್ಶನ ನೀಡಲು ಮತ್ತು ಭಾರತ-ನ್ಯೂಜಿಲೆಂಡ್ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹಂಚಿಕೆಯ ಚೌಕಟ್ಟಾಗಿ 2030 ರ ಈ ನೀಲನಕ್ಷೆಯನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಅನುಮೋದಿಸಿದರು. ಕಾರ್ಯತಂತ್ರದ ಪಾಲುದಾರಿಕೆಯು ಈ ಮಾರ್ಗಸೂಚಿಯ ಕೆಳಗಿನ ಸ್ತಂಭ(ಆಧಾರ)ಗಳಲ್ಲಿ ನಿಗದಿಪಡಿಸಲಾದ ಕ್ಷೇತ್ರಗಳು ಮತ್ತು ಉಪಕ್ರಮಗಳನ್ನು ಒಳಗೊಂಡವೆ, ಆದರೆ ಅವುಗಳಿಗೆ ಮಾತ್ರ ಸೀಮಿತವಾಗಿಲ್ಲ.ಭಾರತ-ನ್ಯೂಜಿಲೆಂಡ್ ಜಂಟಿ ಹೇಳಿಕೆ
July 11th, 07:59 am
ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜುಲೈ 10 ಮತ್ತು 11 ರಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಅಧಿಕೃತ ಭೇಟಿ ನೀಡಿದ್ದರು. 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಇದು ಐತಿಹಾಸಿಕ ಮೈಲಿಗಲ್ಲೆಂದು ಗುರುತಿಸಲಾಗಿದೆ ಮತ್ತು ಎರಡೂ ರಾಷ್ಟ್ರಗಳ ನಡುವಿನ ಕಾಯಂ ಸ್ನೇಹ ಮತ್ತು ಪಾಲುದಾರಿಕೆಯಲ್ಲಿ ಹೊಸ ಹಾದಿಯನ್ನು ರೂಪಿಸುತ್ತದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಸ್ಟ್ರೇಲಿಯಾ ಭೇಟಿಯ ಫಲಿತಾಂಶಗಳ ಪಟ್ಟಿ
July 09th, 12:34 pm
ಭದ್ರತೆಯ ಮೇಲಿನ ಅಸ್ತಿತ್ವದಲ್ಲಿರುವ ಜಂಟಿ ಘೋಷಣೆಯನ್ನು (2009) ನವೀಕರಿಸುತ್ತದೆ. ಇದು ಪಡೆಗಳ ಪರಸ್ಪರ ಕಾರ್ಯಾಚರಣೆ, ಸಾಮರ್ಥ್ಯ ನಿರ್ಮಾಣ, ಕಡಲ ವಲಯ, ರಕ್ಷಣಾ ಕೈಗಾರಿಕಾ ಸಹಯೋಗ, ಸೈಬರ್ ಭದ್ರತೆ ಮತ್ತು ತಂತ್ರಜ್ಞಾನ, ಭಯೋತ್ಪಾದನೆ ನಿಗ್ರಹ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಮತ್ತು UNCLOS, ಆಸಿಯಾನ್, ಪಿಐಎಫ್, ಐ ಒ ಆರ್ ಎ ಗಳಲ್ಲಿ ಏಕೀಕೃತ ವಿಧಾನವನ್ನು ಸಹಕಾರದ ಕ್ಷೇತ್ರಗಳಾಗಿ ಗುರುತಿಸುತ್ತದೆ.India-Australia Joint Statement on Energy Security
July 09th, 11:02 am
The India-Australia Joint Statement on Energy Security noted the two countries' deep concern over the situation in the Middle East. They shared their commitment to working together to strengthen energy supply chain resilience, including by deepening regional cooperation, accelerating the energy transition, promoting the uptake of renewable energy resources and upholding open trade arrangements for energy and liquid fuels.Third India-Australia Annual Summit Joint Statement
July 09th, 10:58 am
At the invitation of Australian PM Anthony Albanese, PM Modi visited Australia from 8-10 July 2026 for the Third Australia-India Annual Summit in Melbourne. The two leaders reaffirmed their shared commitment to further consolidate and expand the India-Australia Comprehensive Strategic Partnership (CSP) and explore new areas of cooperation for the peace, prosperity and stability of the shared region.ರಕ್ಷಣೆ ಮತ್ತು ಭದ್ರತಾ ಸಹಕಾರ ಕುರಿತು ಭಾರತ-ಆಸ್ಟ್ರೇಲಿಯಾ ಜಂಟಿ ಘೋಷಣೆ
July 09th, 10:55 am
ನಾವು, ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳಾದ ನಾವು, ನಮ್ಮ ನಿರಂತರವಾಗಿ ಬೆಳೆಯುತ್ತಿರುವ ದ್ವಿಪಕ್ಷೀಯ ಬಾಂಧವ್ಯದಿಂದ ಒಗ್ಗೂಡಿದ್ದೇವೆ. ನಮ್ಮ ರಾಷ್ಟ್ರಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ದೃಢಸಂಕಲ್ಪ ಮಾಡಿದ್ದೇವೆ. ಮುಕ್ತ, ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ಗಾಗಿರುವ ಸಾಮಾನ್ಯ ಮಹತ್ವಾಕಾಂಕ್ಷೆಯಿಂದ ಪ್ರೇರಿತರಾಗಿ, ಈ ಮೂಲಕ ರಕ್ಷಣೆ ಮತ್ತು ಭದ್ರತಾ ಸಹಕಾರದ ಜಂಟಿ ಘೋಷಣೆಗೆ ಬದ್ಧರಾಗಿದ್ದೇವೆ.ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
July 07th, 11:21 am
2018ರಲ್ಲಿ ಸ್ಥಾಪನೆಯಾದ ನಮ್ಮ ʻಸಮಗ್ರ ಕಾರ್ಯತಂತ್ರದ ಸಹಭಾಗಿತ್ವʼವು ಇಂದು ಹೊಸ ಎತ್ತರವನ್ನು ತಲುಪುತ್ತಿದೆ. ಅಭಿವೃದ್ಧಿ, ಭದ್ರತೆ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಶಿಕ್ಷಣ ಸೇರಿದಂತೆ ಸಹಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಗಮನಾರ್ಹ ದಾಪುಗಾಲು ಹಾಕುತ್ತಿದ್ದೇವೆ.16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಚರ್ಚೆ ಕುರಿತು ಜಂಟಿ ಹೇಳಿಕೆ
July 02nd, 10:22 pm
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಜಪಾನ್ ಪ್ರಧಾನಮಂತ್ರಿ ಶ್ರೀಮತಿ ತಕೈಚಿ ಸಾನೆ ಅವರು 2026 ಜುಲೈ 1-3ರ ವರೆಗೆ 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಪ್ರಧಾನಿ ತಕೈಚಿ ಅವರೊಂದಿಗೆ ಹಿರಿಯ ಅಧಿಕಾರಿಗಳು, ಸಿಇಒಗಳು ಮತ್ತು ಉದ್ಯಮ ವಲಯದ ದಿಗ್ಗಜರು ಸೇರಿದಂತೆ ಉನ್ನತ ಮಟ್ಟದ ನಿಯೋಗ ಆಗಮಿಸಿತ್ತು. ಇದು ಜಪಾನ್ ಪ್ರಧಾನಿ ತಕೈಚಿ ಅವರು ಭಾರತಕ್ಕೆ ನೀಡಿದ ಚೊಚ್ಚಲ ಅಧಿಕೃತ ಭೇಟಿಯಾಗಿತ್ತು.