ರಷ್ಯಾದ ಅಧ್ಯಕ್ಷರೊಂದಿಗಿನ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಆರಂಭಿಕ ಹೇಳಿಕೆ
September 01st, 01:24 pm
ನಿಮ್ಮನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ ಮತ್ತು ನಿಮ್ಮನ್ನು ಭೇಟಿಯಾಗುವುದು ಯಾವಾಗಲೂ ನೆನಪಿನಲ್ಲಿಡುವ ಸಂದರ್ಭ ಎಂದು ನಾನು ಭಾವಿಸುತ್ತೇನೆ. ಇದು ವಿವಿಧ ವಿಷಯಗಳ ಬಗ್ಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ನಮಗೆ ಅವಕಾಶವನ್ನು ಒದಗಿಸುತ್ತದೆ.ರಷ್ಯಾ ಒಕ್ಕೂಟದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
September 01st, 01:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚೀನಾದ ಟಿಯಾಂಜಿನ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನೇಪಥ್ಯದಲ್ಲಿ ರಷ್ಯಾ ಒಕ್ಕೂಟದ ಅಧ್ಯಕ್ಷ ಘನತೆವೆತ್ತ ಶ್ರೀ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದರು.ರಷ್ಯಾ-ಯುಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವ ಕುರಿತು ಪ್ರಧಾನಿ ಮೋದಿ ಅವರ ದೊಡ್ಡ ಹೇಳಿಕೆ
September 01st, 12:48 pm
ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಸಿದರು, ಅಲ್ಲಿ ಯುಕ್ರೇನ್ ಸಂಘರ್ಷವು ಚರ್ಚೆಯ ಕೇಂದ್ರಬಿಂದುವಾಗಿತ್ತು. ಶಾಂತಿಗಾಗಿ ಇತ್ತೀಚಿನ ಪ್ರಯತ್ನಗಳನ್ನು ಪ್ರಧಾನಿ ಮೋದಿ ಸ್ವಾಗತಿಸಿದರು ಮತ್ತು ಎಲ್ಲಾ ಕಡೆಯವರು ರಚನಾತ್ಮಕವಾಗಿ ಮುಂದುವರಿಯುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಶಾಶ್ವತ ಶಾಂತಿಗೆ ಮಾರ್ಗವನ್ನು ಕಂಡುಕೊಳ್ಳುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು. ವಿಶಾಲ ಮಾನವ ಆಯಾಮವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಇದು ಕೇವಲ ಪ್ರಾದೇಶಿಕ ಕಾಳಜಿಯಲ್ಲ, ಬದಲಾಗಿ ಮಾನವೀಯತೆಯ ಕರೆ ಎಂದು ಹೇಳಿದರು.25ನೇ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ
September 01st, 10:14 am
ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) 25ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನನಗೆ ಸಂತಸವಾಗಿದೆ. ಸಂಭ್ರಮದಿಂದ ಸ್ವಾಗತಿಸಿ, ಸಂತೋಷದಿಂದ ಆತಿಥ್ಯ ಸತ್ಕಾರ ನೀಡಿದ ಅಧ್ಯಕ್ಷರಾದ ಕ್ಸಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಚೀನಾದ ಟಿಯಾಂಜಿನ್ ನಲ್ಲಿ ನಡೆದ 25ನೇ ʻಎಸ್‌ಸಿಒʼ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು
September 01st, 10:00 am
2025ರ ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 25ನೇ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು. ಶೃಂಗಸಭೆಯು ʻಎಸ್‌ಸಿಒʼ ಅಭಿವೃದ್ಧಿ ಕಾರ್ಯತಂತ್ರ, ಜಾಗತಿಕ ಆಡಳಿತದ ಸುಧಾರಣೆ, ಭಯೋತ್ಪಾದನೆ ನಿಗ್ರಹ, ಶಾಂತಿ ಮತ್ತು ಭದ್ರತೆ, ಆರ್ಥಿಕ ಮತ್ತು ಹಣಕಾಸು ಸಹಕಾರ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ನಿರ್ಮಾಣಾತ್ಮಕ ಚರ್ಚೆಗಳಿಗೆ ಸಾಕ್ಷಿಯಾಯಿತು.ಪ್ರಧಾನಿ ಮೋದಿ ಅವರು ಚೀನಾದ ಟಿಯಾಂಜಿನ್‌ಗೆ ಆಗಮಿಸಿದರು
August 30th, 04:00 pm
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಚೀನಾಕ್ಕೆ ಆಗಮಿಸಿದರು. ಭೇಟಿಯ ಸಮಯದಲ್ಲಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅವರು ಟಿಯಾಂಜಿನ್‌ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಶೃಂಗಸಭೆಯ ಸಂದರ್ಭದಲ್ಲಿ ಅವರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಧ್ಯಕ್ಷ ಪುಟಿನ್ ಮತ್ತು ಇತರ ನಾಯಕರನ್ನು ಭೇಟಿ ಮಾಡಲಿದ್ದಾರೆ.ಪ್ರಧಾನಮಂತ್ರಿ ಅವರ ಜಪಾನ್ ಮತ್ತು ಚೀನಾ ದೇಶಗಳ ಭೇಟಿಯ ಮುನ್ನಾ ದಿನದಂದು ನೀಡಿರುವ ನಿರ್ಗಮನ ಹೇಳಿಕೆ
August 28th, 08:40 pm
ನನ್ನ ಭೇಟಿಯ ಸಮಯದಲ್ಲಿ, ಕಳೆದ ಹನ್ನೊಂದು ವರ್ಷಗಳಲ್ಲಿ ಆಗಿರುವ ಸ್ಥಿರತೆ ಕುರಿತು ಮತ್ತು ಗಮನಾರ್ಹ ಪ್ರಗತಿಯನ್ನು ಸಾಧಿಸಿರುವ ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಮುಂದಿನ ಹಂತವನ್ನು ರೂಪಿಸುವತ್ತ ನಾವು ಗಮನಹರಿಸುತ್ತೇವೆ. ನಮ್ಮ ಸಹಯೋಗಕ್ಕೆ ಹೊಸ ರೆಕ್ಕೆ ಹಾಗೂ ಆಯಾಮಗಳನ್ನು ನೀಡಲು, ನಮ್ಮ ಆರ್ಥಿಕ ಮತ್ತು ಹೂಡಿಕೆ ಸಂಬಂಧಗಳ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ವಿಸ್ತರಿಸಲು ಮತ್ತು ಕೃತಕ ಬುದ್ಧಿಮತ್ತೆ (ಎಐ)ಮತ್ತು ಸೆಮಿಕಂಡಕ್ಟರ್ ಗಳು ಸೇರಿದಂತೆ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಮುನ್ನಡೆಸಲು ನಾವು ಪ್ರಯತ್ನಿಸುತ್ತೇವೆ. ಈ ಭೇಟಿಯು ನಮ್ಮ ನಾಗರಿಕತೆಯ ಪರಸ್ಪರ ಬಂಧಗಳು ಮತ್ತು ನಮ್ಮ ಜನರನ್ನು ಸಂಪರ್ಕಿಸುವ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಒಂದು ಅವಕಾಶವಾಗಿದೆ.ಜಪಾನ್ ಮತ್ತು ಚೀನಾಕ್ಕೆ ಪ್ರಧಾನ ಮಂತ್ರಿಗಳ ಭೇಟಿ
August 22nd, 06:15 pm
ಜಪಾನ್ ಪ್ರಧಾನಿ ಶಿಗೇರು ಇಶಿಬಾ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಆಗಸ್ಟ್ 29–30, 2025 ರವರೆಗೆ ಜಪಾನ್‌ಗೆ ಮತ್ತು ಆಗಸ್ಟ್ 31–1, 2025 ರವರೆಗೆ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಜಪಾನ್‌ನಲ್ಲಿ, ಪ್ರಧಾನಿಯವರು 15 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಜಪಾನಿನ ಪ್ರಧಾನಿ ಇಶಿಬಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಚೀನಾದಲ್ಲಿ, ಪ್ರಧಾನಿಯವರು ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಚೀನಾ ವಿದೇಶಾಂಗ ಸಚಿವರಾದ ವಾಂಗ್ ಯಿ
August 19th, 07:34 pm
ಇಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಚೀನಾದ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯ ಹಾಗೂ ವಿದೇಶಾಂಗ ಸಚಿವರಾದ ಶ್ರೀ ವಾಂಗ್ ಯಿ ಅವರನ್ನು ಬರಮಾಡಿಕೊಂಡರು.22ನೇ ʻಭಾರತ-ರಷ್ಯಾ ವಾರ್ಷಿಕ ಶೃಂಗಸಭೆʼ ಬಳಿಕ ಉಭಯ ದೇಶಗಳ ಜಂಟಿ ಹೇಳಿಕೆ
July 09th, 09:54 pm
1. 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಘನತೆವೆತ್ತ ಶ್ರೀ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜುಲೈ 8 ಮತ್ತು 9ರಂದು ರಷ್ಯಾ ಒಕ್ಕೂಟಕ್ಕೆ ಅಧಿಕೃತ ಭೇಟಿ ನೀಡಿದರು.ಎಸ್.ಸಿ.ಒ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ
July 04th, 01:29 pm
ಭಾರತ 2017 ರಲ್ಲಿ ಕಝಖ್ ಎಸ್.ಸಿ.ಒ ಸದಸ್ಯ ದೇಶವಾಗಿ ಭಾಗವಹಿಸಿದ್ದನ್ನು ಭಾರತ ಸ್ಮರಿಸಿಕೊಳ್ಳುತ್ತಿದೆ. ಅಲ್ಲಿಂದ ಈ ವರೆಗೆ ನಾವು ಎಸ್.ಸಿ.ಒ ಅಧ್ಯಕ್ಷತೆಯ ಒಂದು ಸಂಪೂರ್ಣ ವೃತ್ತವನ್ನು ಪೂರೈಸಿದ್ದೇವೆ. ಭಾರತ 2020 ರಲ್ಲಿ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ ಸಭೆ ಮತ್ತು ಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್ ಸಭೆಯಲ್ಲಿ 2023 ರಲ್ಲಿ ಆಯೋಜಿಸಿತ್ತು. ಎಸ್.ಸಿ.ಒ ನಮ್ಮ ವಿದೇಶಾಂಗ ನೀತಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.ಎಸ್.ಸಿ.ಒ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ
July 04th, 01:25 pm
ಭಾರತ 2017 ರಲ್ಲಿ ಕಝಖ್ ಎಸ್.ಸಿ.ಒ ಸದಸ್ಯ ದೇಶವಾಗಿ ಭಾಗವಹಿಸಿದ್ದನ್ನು ಭಾರತ ಸ್ಮರಿಸಿಕೊಳ್ಳುತ್ತಿದೆ. ಅಲ್ಲಿಂದ ಈ ವರೆಗೆ ನಾವು ಎಸ್.ಸಿ.ಒ ಅಧ್ಯಕ್ಷತೆಯ ಒಂದು ಸಂಪೂರ್ಣ ವೃತ್ತವನ್ನು ಪೂರೈಸಿದ್ದೇವೆ. ಭಾರತ 2020 ರಲ್ಲಿ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ ಸಭೆ ಮತ್ತು ಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್ ಸಭೆಯಲ್ಲಿ 2023 ರಲ್ಲಿ ಆಯೋಜಿಸಿತ್ತು. ಎಸ್.ಸಿ.ಒ ನಮ್ಮ ವಿದೇಶಾಂಗ ನೀತಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.ಕಜಕಿಸ್ತಾನದ ಅಧ್ಯಕ್ಷರಿಂದ ಪ್ರಧಾನಮಂತ್ರಿ ಅವರಿಗೆ ದೂರವಾಣಿ ಕರೆ
June 25th, 06:21 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಜಕಿಸ್ತಾನದ ಅಧ್ಯಕ್ಷ ಘನತೆವೆತ್ತ ಶ್ರೀ ಕಾಸಿಮ್ ಜೊಮಾರ್ಟ್ ಟೊಕಯೆವ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.23ನೇ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
July 04th, 12:30 pm
23ನೇ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗಸಭೆಗೆ ನಿಮ್ಮೆಲ್ಲರನ್ನು ಇಂದು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಕಳೆದ 2 ದಶಕಗಳಲ್ಲಿ ಎಸ್‌ಸಿಒ ಸಂಘಟನೆಯು ಇಡೀ ಏಷ್ಯಾ ವಲಯದಲ್ಲಿ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಮಹತ್ವದ ವೇದಿಕೆಯಾಗಿ ಹೊರಹೊಮ್ಮಿದೆ. ಭಾರತ ಮತ್ತು ಏಷ್ಯಾ ಭಾಗದ ನಡುವೆ ಇರುವ ಸಾವಿರಾರು ವರ್ಷಗಳ ಸಾಂಸ್ಕೃತಿಕ ಮತ್ತು ಜನರಿಂದ ಜನರ ಸಂಬಂಧಗಳು ನಮ್ಮ ಹಂಚಿಕೆಯ ಪರಂಪರೆಗೆ ಜೀವಂತ ಸಾಕ್ಷಿಯಾಗಿವೆ. ನಾವು ಈ ಪ್ರದೇಶವನ್ನು ವಿಸ್ತೃತ ನೆರೆಹೊರೆ ಎಂದು ನೋಡುವುದಿಲ್ಲ, ಆದರೆ ವಿಶಾಲ ಕುಟುಂಬ ಎಂದು ನೋಡುತ್ತೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಘನತೆವೆತ್ತ ಶ್ರೀ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
December 16th, 03:51 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಘನತೆವೆತ್ತ ಶ್ರೀ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.ಎಸ್.ಸಿ.ಒ ಶೃಂಗ ಸಭೆ ಅಂಗವಾಗಿ ಟರ್ಕಿ ಅಧ್ಯಕ್ಷ ಗೌರವಾನ್ವಿತ ರೆಸಿಪ್ ತಯ್ಯಿಪ್ ಎರ್ಡೋಗನ್ ಅವರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ
September 16th, 11:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಸೆಪ್ಟೆಂಬರ್ 16 ರಂದು ಎಸ್.ಸಿ.ಒ ಶೃಂಗಸಭೆ ಹಿನ್ನೆಲೆಯಲ್ಲಿ ಟರ್ಕಿ ಗೌರವಾನ್ವಿತ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗಾನ್ ಅವರನ್ನು ಭೇಟಿ ಮಾಡಿದರು.ಎಸ್.ಸಿ.ಒ ಶೃಂಗಸಭೆ ಅಂಗವಾಗಿ ಇರಾನ್ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ
September 16th, 11:06 pm
ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ಕೌನ್ಸಿಲ್ ಆಫ್ ಸ್ಟೇಟ್ ಮುಖ್ಯಸ್ಥರ – ಎಸ್.ಸಿ.ಒ ಸಭೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಇಸ್ಲಾಮಿಕ್ ಗಣರಾಜ್ಯ ಇರಾನ್ ನ ಗೌರವಾನ್ವಿತ ಅಧ್ಯಕ್ಷ ಶ್ರೀ ಇಬ್ರಾಹಿಂ ರೈಸಿ ಅವರನ್ನು ಭೇಟಿ ಮಾಡಿದರು. ಅಧ್ಯಕ್ಷರಾದ ರೈಸಿ ಅವರು 2021 ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಮಂತ್ರಿ ಹಾಗೂ ಇರಾನ್ ಅಧ್ಯಕ್ಷ ರೈಸಿ ಅವರ ನಡುವೆ ನಡೆದ ಮೊದಲ ಭೇಟಿ ಇದಾಗಿದೆ.ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ರಷ್ಯಾ ಒಕ್ಕೂಟದ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
September 16th, 08:42 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆಯ (ಎಸ್ ಸಿಒ) 22ನೇ ಸಭೆಯ ನೇಪಥ್ಯದಲ್ಲಿ ಇಂದು ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ರಷ್ಯಾ ಒಕ್ಕೂಟದ ಅಧ್ಯಕ್ಷ ಘನತೆವೆತ್ತ ಶ್ರೀ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು.ಪ್ರಧಾನಮಂತ್ರಿ ಮತ್ತು ಉಜ್ಬೇಕಿಸ್ತಾನದ ಅಧ್ಯಕ್ಷರ ನಡುವೆ ದ್ವಿಪಕ್ಷೀಯ ಸಭೆ
September 16th, 08:34 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್.ಸಿ.ಒ) ಮುಖ್ಯಸ್ಥರ ಮಂಡಳಿಯ 22ನೇ ಸಭೆಯ ನೇಪಥ್ಯದಲ್ಲಿ ಉಜ್ಬೇಕಿಸ್ತಾನ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಶ್ರೀ ಶೌಕತ್ ಮಿರ್ಜಿಯೊಯೆವ್ ಅವರನ್ನು ಭೇಟಿಯಾದರು.ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣ
September 16th, 01:30 pm
ಇಂದು, ಇಡೀ ಜಗತ್ತು ಸಾಂಕ್ರಾಮಿಕ ರೋಗದ ನಂತರ ಆರ್ಥಿಕ ಚೇತರಿಕೆಯ ಸವಾಲುಗಳನ್ನು ಎದುರಿಸುತ್ತಿರುವಾಗ ಎಸ್‌ಸಿಒ ಪಾತ್ರವು ಬಹಳ ಮುಖ್ಯವಾಗಿದೆ. ಎಸ್ ಸಿ ಒ ಸದಸ್ಯ ರಾಷ್ಟ್ರಗಳು ಜಾಗತಿಕ ಜಿಡಿಪಿಯ ಸುಮಾರು 30 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ ಮತ್ತು ವಿಶ್ವದ ಜನಸಂಖ್ಯೆಯ 40 ಪ್ರತಿಶತದಷ್ಟು ಜನರು ಎಸ್‌ಸಿಒ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತವು ಎಸ್‌ಸಿಒ ಸದಸ್ಯರ ನಡುವೆ ಹೆಚ್ಚಿನ ಸಹಕಾರ ಮತ್ತು ಪರಸ್ಪರ ನಂಬಿಕೆಯನ್ನು ಬೆಂಬಲಿಸುತ್ತದೆ. ಉಕ್ರೇನ್‌ನಲ್ಲಿನ ಸಾಂಕ್ರಾಮಿಕ ಮತ್ತು ಬಿಕ್ಕಟ್ಟು ಜಾಗತಿಕ ಪೂರೈಕೆ ಸರಪಳಿಯಲ್ಲಿ ಅನೇಕ ಅಡೆತಡೆಗಳನ್ನು ಉಂಟುಮಾಡಿತು, ಈ ಕಾರಣದಿಂದಾಗಿ ಇಡೀ ಪ್ರಪಂಚವು ಹಿಂದೆಂದೂ ಕಾಣದಂತಹ ಇಂಧನ ಮತ್ತು ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಮ್ಮ ಪ್ರದೇಶದಲ್ಲಿ ವಿಶ್ವಾಸಾರ್ಹ, ಚೇತರಿಸಿಕೊಳ್ಳಬಲ್ಲ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸಲು ಎಸ್ ಸಿ ಒ ಪ್ರಯತ್ನಗಳನ್ನು ಮಾಡಬೇಕು. ಇದಕ್ಕೆ ಉತ್ತಮ ಸಂಪರ್ಕದ ಅಗತ್ಯವಿರುತ್ತದೆ, ಜೊತೆಗೆ ನಾವೆಲ್ಲರೂ ಪರಸ್ಪರ ಸಾರಿಗೆಯ ಸಂಪೂರ್ಣ ಹಕ್ಕುಗಳನ್ನು ನೀಡುವುದು ಸಹ ಮುಖ್ಯವಾಗಿದೆ.