ಭಾರತ ಮತ್ತು ಭೂತಾನ್ ನಡುವಿನ ಅನನ್ಯ ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ಗಾಢವಾಗಿಸಲು ಬದ್ಧ : ಪ್ರಧಾನಮಂತ್ರಿ

February 21st, 07:16 pm

ನವದೆಹಲಿಯಲ್ಲಿ ನಡೆದಿರುವ ಎಸ್ ಒ ಯು ಎಲ್ ನಾಯಕತ್ವ ಸಮಾವೇಶದಲ್ಲಿ ಭೂತಾನ್‌ ಪ್ರಧಾನಿ ಶೆರಿಂಗ್ ಟೋಬ್ಗೇ ಅವರ ಭಾಷಣವನ್ನು ಶ್ಲಾಘಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತ ಮತ್ತು ಭೂತಾನ್ ನಡುವಿನ ಅನನ್ಯ ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ಆಳವಾಗಿಸಲು ನಾವು ಬದ್ಧ ಎಂದು ಭರವಸೆ ನೀಡಿದ್ದಾರೆ.

ಫೆಬ್ರವರಿ 21ರಂದು ದೆಹಲಿಯಲ್ಲಿ ಸೋಲ್ ಲೀಡರ್ ಷಿಪ್ ಸಮ್ಮೇಳನದ ಮೊದಲ ಆವೃತ್ತಿಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

February 19th, 06:31 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 21 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಸೋಲ್ ಲೀಡರ್ ಷಿಪ್ ಸಮ್ಮೇಳನದ ಮೊದಲ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭೂತಾನ್ ಪ್ರಧಾನಮಂತ್ರಿ ದಾಶೊ ತ್ಸೆರಿಂಗ್ ಟೊಬ್ ಗೆ ಅವರು ಗೌರವಾನ್ವಿತ ಅತಿಥಿಯಾಗಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.