ಸೌದಿ ಅರೇಬಿಯಾದ ಯುವರಾಜಕುಮಾರ ಹಾಗೂ ಪ್ರಧಾನಮಂತ್ರಿ ಗೌರವಾನ್ವಿತ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಪ್ರಧಾನಮಂತ್ರಿ ಮಾತುಕತೆ
March 28th, 09:17 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಯುವರಾಜರು ಹಾಗೂ ಪ್ರಧಾನಮಂತ್ರಿ ಗೌರವಾನ್ವಿತ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಚರ್ಚಿಸಿದರು.ಸೌದಿ ಅರೇಬಿಯಾದ ಯುವರಾಜ ಹಾಗೂ ಪ್ರಧಾನಮಂತ್ರಿಯೊಂದಿಗೆ ಮಾತುಕತೆ ನಡೆಸಿದ ಪ್ರಧಾನಮಂತ್ರಿ
March 02nd, 07:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನಮಂತ್ರಿಯಾಗಿರುವ ಘನತೆವೆತ್ತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಚರ್ಚೆ ನಡೆಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅರಬ್ ವಿದೇಶಾಂಗ ಸಚಿವರ ನಿಯೋಗವನ್ನು ಬರಮಾಡಿಕೊಂಡರು
January 31st, 02:39 pm
ಭಾರತ-ಅರಬ್ ದೇಶಗಳ ವಿದೇಶಾಂಗ ಸಚಿವರ ಎರಡನೇ ಸಭೆಗಾಗಿ ಭಾರತಕ್ಕೆ ಆಗಮಿಸಿರುವ ಅರಬ್ ರಾಷ್ಟ್ರಗಳ ವಿದೇಶಾಂಗ ಸಚಿವರು, ಅರಬ್ ರಾಷ್ಟ್ರಗಳ ಲೀಗ್ ನ ಪ್ರಧಾನ ಕಾರ್ಯದರ್ಶಿ ಮತ್ತು ಅರಬ್ ನಿಯೋಗಗಳ ಮುಖ್ಯಸ್ಥರ ನಿಯೋಗವನ್ನು ಪ್ರಧಾನಮಂತ್ರಿ ಅವರು ಸ್ವಾಗತಿಸಿ ಬರಮಾಡಿಕೊಂಡರು.ಮದೀನಾದಲ್ಲಿ ಭಾರತೀಯ ಪ್ರಜೆಗಳು ಭಾಗಿಯಾಗಿದ್ದ ಅಪಘಾತದಲ್ಲಿ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ
November 17th, 12:34 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಮದೀನಾದಲ್ಲಿ ಭಾರತೀಯ ಪ್ರಜೆಗಳನ್ನು ಒಳಗೊಂಡ ಅಪಘಾತದಲ್ಲಿ ಉಂಟಾದ ಜೀವಹಾನಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಅವರು ಹೃದಯಾಂತರಾಳದ ಸಂತಾಪ ಸೂಚಿಸಿದರು ಮತ್ತು ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.ಸೌದಿ ಅರೇಬಿಯಾ ಸಾಮ್ರಾಜ್ಯದ ಗ್ರ್ಯಾಂಡ್ ಮುಫ್ತಿ, ಗೌರವಾನ್ವಿತರಾದ ಶೇಖ್ ಅಬ್ದುಲ್ ಅಜೀಜ್ ಬಿನ್ ಅಬ್ದುಲ್ಲಾ ಬಿನ್ ಮೊಹಮ್ಮದ್ ಅಲ್ ಅಲ್ ಶೇಖ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಅವರು ಸಂತಾಪ ಸೂಚಿಸಿದ್ದಾರೆ
September 24th, 08:49 am
ಸೌದಿ ಅರೇಬಿಯಾ ಸಾಮ್ರಾಜ್ಯದ ಗ್ರ್ಯಾಂಡ್ ಮುಫ್ತಿ, ಗೌರವಾನ್ವಿತರಾದ ಶೇಖ್ ಅಬ್ದುಲಜೀಜ್ ಬಿನ್ ಅಬ್ದುಲ್ಲಾ ಬಿನ್ ಮೊಹಮ್ಮದ್ ಅಲ್ ಅಲ್ ಶೇಖ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ.ಸೌದಿ ಅರೇಬಿಯಾಕ್ಕೆ ಪ್ರಧಾನಮಂತ್ರಿಯವರ ಅಧಿಕೃತ ಭೇಟಿಯ ಸಮಾರೋಪದಲ್ಲಿ ನೀಡಲಾದ ಜಂಟಿ ಹೇಳಿಕೆ
April 23rd, 12:44 pm
ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನ ಮಂತ್ರಿ ಗೌರವಾನ್ವಿತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ ಭಾರತ ಗಣರಾಜ್ಯದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025 ರ ಏಪ್ರಿಲ್ 22 ರಂದು ಸೌದಿ ಅರೇಬಿಯಾಕ್ಕೆ ಅಧಿಕೃತ ಭೇಟಿ ನೀಡಿದರು.ನಿರ್ಣಯಗಳ ಪಟ್ಟಿ: ಸೌದಿ ಅರೇಬಿಯಾಕ್ಕೆ ಪ್ರಧಾನಮಂತ್ರಿ ಅವರ ಅಧಿಕೃತ ಭೇಟಿ
April 23rd, 02:25 am
ಭಾರತ-ಸೌದಿ ಅರೇಬಿಯಾ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಮಂಡಳಿಯ (ಎಸ್ ಪಿಸಿ) ಎರಡನೇ ನಾಯಕರ ಸಭೆಯು ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನ ಮಂತ್ರಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸಹ ಅಧ್ಯಕ್ಷತೆಯಲ್ಲಿ 2025 ರ ಏಪ್ರಿಲ್ 22 ರಂದು ಜೆಡ್ಡಾದಲ್ಲಿ ನಡೆಯಿತು. ರಾಜಕೀಯ, ರಕ್ಷಣೆ, ಭದ್ರತೆ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಕೃಷಿ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳನ್ನು ಒಳಗೊಂಡಿರುವ ಎಸ್ ಪಿಸಿ ಅಡಿಯಲ್ಲಿ ವಿವಿಧ ಸಮಿತಿಗಳು, ಉಪಸಮಿತಿಗಳು ಮತ್ತು ಕಾರ್ಯ ಗುಂಪುಗಳ ಕೆಲಸವನ್ನು ಮಂಡಳಿ ಪರಿಶೀಲಿಸಿತು. ಚರ್ಚೆಗಳ ನಂತರ ಉಭಯ ನಾಯಕರು ಸಂಕ್ಷಿಪ್ತ ಟಿಪ್ಪಣಿಗಳಿಗೆ ಸಹಿ ಹಾಕಿದರು.ಪ್ರಧಾನಮಂತ್ರಿಯವರನ್ನು ಮುಸ್ಲಿಂ ವರ್ಲ್ಡ್ ಲೀಗ್ ನ ಪ್ರಧಾನ ಕಾರ್ಯದರ್ಶಿ ಭೇಟಿ ಮಾಡಿದರು
April 23rd, 02:23 am
ಮುಸ್ಲಿಂ ವರ್ಲ್ಡ್ ಲೀಗ್ ನ ಪ್ರಧಾನ ಕಾರ್ಯದರ್ಶಿ ಶೇಖ್ ಡಾ. ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್-ಇಸ್ಸಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಜೆಡ್ಡಾದಲ್ಲಿ ಭೇಟಿ ಮಾಡಿದರು. ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದರು ಮತ್ತು ಜೀವ ಕಳೆದುಕೊಂಡ ಅಮಾಯಕರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದರು.ಸೌದಿ ಅರೇಬಿಯಾ ಸಾಮ್ರಾಜ್ಯದ ಯುವರಾಜ ಮತ್ತು ಮಹಾರಾಜ ಪರಂಪರೆಯ ಘನತೆವೆತ್ತ ಪ್ರಧಾನಮಂತ್ರಿ ಅವರನ್ನು ಪ್ರಧಾನಮಂತ್ರಿಯವರು ಭೇಟಿ ಮಾಡಿದರು ಮತ್ತು ಭಾರತ-ಸೌದಿ ಅರೇಬಿಯಾ ವ್ಯೂಹಾತ್ಮಕ ಪಾಲುದಾರಿಕೆ ಮಂಡಳಿಯ ಸಹ-ಅಧ್ಯಕ್ಷತೆ ವಹಿಸಿದರು
April 23rd, 02:20 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 22, 2025 ರಂದು ಸೌದಿ ಅರೇಬಿಯಾ ರಾಜ್ಯಕ್ಕೆ ಭೇಟಿ ನೀಡಿದರು. ಪ್ರಧಾನಮಂತ್ರಿ ಅವರನ್ನು ಜೆಡ್ಡಾದ ಮಹಾರಾಜರ ಅರಮನೆಯಲ್ಲಿ ಸೌದಿ ಅರೇಬಿಯಾದ ಯುವರಾಜ ಮತ್ತು ಮಹಾರಾಜ ಪರಂಪರೆಯ ಘನತೆವೆತ್ತ ಪ್ರಧಾನಮಂತ್ರಿ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಪ್ರಧಾನಮಂತ್ರಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು ವಿಧ್ಯುಕ್ತ ಸ್ವಾಗತವನ್ನು ನೀಡಿದರು.ಪ್ರಧಾನಿ ಮೋದಿ ಸೌದಿ ಅರೇಬಿಯಾದ ಜೆಡ್ಡಾಗೆ ಆಗಮಿಸಿದರು
April 22nd, 04:29 pm
ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಸೌದಿ ಅರೇಬಿಯಾದ ಜೆಡ್ಡಾಗೆ ಆಗಮಿಸಿದರು. ವಿಶೇಷ ಸನ್ನೆಯಲ್ಲಿ, ಸೌದಿ ವಾಯುಪಡೆಯ ಜೆಟ್‌ಗಳು ಪ್ರಧಾನಿ ಮೋದಿ ಅವರ ವಿಮಾನವನ್ನು ಸೌದಿ ವಾಯುಪ್ರದೇಶಕ್ಕೆ ಪ್ರವೇಶಿಸಿದಾಗ ಬೆಂಗಾವಲು ಮಾಡಿ ಜೆಡ್ಡಾಗೆ ಕರೆದೊಯ್ದವು. ಪ್ರಧಾನಿ ಮೋದಿಗೆ ಜೆಡ್ಡಾದಲ್ಲಿ ಭವ್ಯ ಸ್ವಾಗತ ದೊರೆಯಿತು. ಅವರು ಸೌದಿ ಅರೇಬಿಯಾದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಸೌದಿ ಅರೇಬಿಯಾ ಭೇಟಿಗೂ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನ ಹೇಳಿಕೆ
April 22nd, 08:30 am
ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಮಂತ್ರಿ ಘನತೆವೆತ್ತ ಮೊಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರರ ಆಹ್ವಾನದ ಮೇರೆಗೆ, ಇಂದು ನಾನು ಸೌದಿ ರಾಜ್ಯಕ್ಕೆ ಎರಡು ದಿನಗಳ ಅಧಿಕೃತ ಭೇಟಿಗೆ ತೆರಳುತ್ತಿದ್ದೇನೆ.ಕಾರ್ಯತಂತ್ರದ ಮರುಹೊಂದಿಕೆ: ಪಶ್ಚಿಮ ಏಷ್ಯಾದಲ್ಲಿ ಭಾರತದ ಪಾತ್ರವನ್ನು ಇನ್ನಷ್ಟು ಆಳಗೊಳಿಸಲು ಪ್ರಧಾನಿ ಮೋದಿಯವರ ಸೌದಿ ಭೇಟಿ
April 21st, 04:51 pm
ಪ್ರಧಾನಿ ನರೇಂದ್ರ ಮೋದಿಯವರ ಏಪ್ರಿಲ್ 22–23, 2025 ರ ಸೌದಿ ಅರೇಬಿಯಾ ಭೇಟಿಯು ನಿರ್ಣಾಯಕ ಹಂತದಲ್ಲಿದೆ - ಜಾಗತಿಕ ಶಕ್ತಿ ಚಲನಶೀಲತೆ ಮತ್ತು ವೇಗವಾಗಿ ರೂಪಾಂತರಗೊಳ್ಳುತ್ತಿರುವ ಪಶ್ಚಿಮ ಏಷ್ಯಾದಿಂದ ರೂಪುಗೊಂಡ ಒಂದು.ಪ್ರಧಾನಿ ಮೋದಿ ಏಪ್ರಿಲ್ 22-23, 2025 ರಂದು ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ
April 19th, 01:55 pm
ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಸೌದಿ ಅರೇಬಿಯಾ ನಿಕಟ ಮತ್ತು ಸ್ನೇಹಪರ ಸಂಬಂಧಗಳನ್ನು ಹೊಂದಿವೆ. ಈ ಭೇಟಿಯು ನಮ್ಮ ಬಹುಮುಖ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು ಮತ್ತು ಬಲಪಡಿಸಲು ಹಾಗೂ ಪರಸ್ಪರ ಆಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.ಭಕ್ತರಿಗೆ ಉತ್ತಮ ತೀರ್ಥಯಾತ್ರೆ ಅನುಭವಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ: ಪ್ರಧಾನಮಂತ್ರಿ
January 13th, 06:17 pm
ಸೌದಿ ಅರೇಬಿಯಾ ಸಾಮ್ರಾಜ್ಯದ ಹಜ್ ಖಾತೆ ಸಚಿವರಾದ ಮತ್ತು ಉಮ್ರಾಹ್ ಗೌರವಾನ್ವಿತ ತೌಫಿಕ್ ಬಿನ್ ಫೌಜಾನ್ ಅಲ್-ರಬಿಯಾ ಅವರೊಂದಿಗೆ ಸಹಿ ಹಾಕಲಾದ ಹಜ್ ಒಪ್ಪಂದ 2025 ನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಒಪ್ಪಂದವು ಭಾರತದ ಹಜ್ ಯಾತ್ರಿಕರಿಗೆ ಸಂತಸದ ಸುದ್ದಿಯಾಗಿದೆ ಎಂದು ಹೇಳಿದರು. ಭಕ್ತರಿಗೆ ಉತ್ತಮ ಸೌಕರ್ಯ ಹೊಂದಿರುವ ತೀರ್ಥಯಾತ್ರೆ ಅನುಭವಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.ಹೂಡಿಕೆ ಕುರಿತಾದ ಉನ್ನತ ಮಟ್ಟದ ಕಾರ್ಯಪಡೆಯ ಚೊಚ್ಚಲ ಸಭೆ ನಡೆಸಿದ ಭಾರತ-ಸೌದಿ ಅರೇಬಿಯಾ
July 28th, 11:37 pm
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಗೌರವಾನ್ವಿತ ಡಾ.ಪಿ.ಕೆ. ಮಿಶ್ರಾ ಮತ್ತು ಸೌದಿ ಇಂಧನ ಸಚಿವ ರಾಜಕುಮಾರ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಸಹ ಅಧ್ಯಕ್ಷತೆಯಲ್ಲಿ ಹೂಡಿಕೆಗಳ ಕುರಿತ ಭಾರತ-ಸೌದಿ ಅರೇಬಿಯಾ ಉನ್ನತ ಮಟ್ಟದ ಕಾರ್ಯಪಡೆಯ ಮೊದಲ ಸಭೆಯು ಇಂದು ವರ್ಚುವಲ್ ಮಾದರಿಯಲ್ಲಿ ನಡೆಯಿತು.ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ ದೇಶವಾಸಿಗಳಿಗೆ ಕೃತಜ್ಞತೆಗಳು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
June 30th, 11:00 am
'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
June 21st, 06:31 am
ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಮತ್ತು ಧ್ಯಾನದ ತಪೋಭೂಮಿ ಕಾಶ್ಮೀರದಲ್ಲಿ ಇರುವುದು ನನ್ನ ಸುದೈವವಾಗಿದೆ. ಕಾಶ್ಮೀರ ಮತ್ತು ಶ್ರೀನಗರದ ಪರಿಸರ, ಶಕ್ತಿ ಮತ್ತು ಅನುಭವಗಳು ಯೋಗದಿಂದ ನಾವು ಪಡೆಯುವ ಶಕ್ತಿಯನ್ನು ಅನುಭವಿಸಲು ಅನುವು ಮಾಡಿಕೊಡುತ್ತವೆ. ವಿಶ್ವ ಯೋಗ ದಿನದಂದು ನನ್ನೆಲ್ಲಾ ದೇಶವಾಸಿಗಳಿಗೆ ಮತ್ತು ಪ್ರಪಂಚದ ಮೂಲೆ ಮೂಲೆಯಲ್ಲಿ ಯೋಗಾಭ್ಯಾಸ ಮಾಡುತ್ತಿರುವವರಿಗೆ ನಾನು ಕಾಶ್ಮೀರದ ನೆಲದಿಂದ ಶುಭಾಶಯಗಳನ್ನು ಕೋರುತ್ತೇನೆ.ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ʻಅಂತಾರಾಷ್ಟ್ರೀಯ ಯೋಗ ದಿನ-2024’ ಉದ್ದೇಶಿಸಿಪ್ರಧಾನಮಂತ್ರಿಯವರ ಭಾಷಣ
June 21st, 06:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ಐವೈಡಿ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯ ನೇತೃತ್ವ ವಹಿಸಿದ್ದರು ಮತ್ತು ಯೋಗ ಅಧಿವೇಶನದಲ್ಲಿ ಪಾಲ್ಗೊಂಡರು.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.
December 26th, 08:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.140 ಕೋಟಿ ಜನರು ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದಾರೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
November 26th, 11:30 am
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ 'ಮನದ ಮಾತಿ' ಗೆ ನಿಮಗೆ ಸ್ವಾಗತ. ಆದರೆ ನವೆಂಬರ್ 26 ಇಂದಿನ ದಿನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನವೇ ದೇಶದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದರು. ಆದರೆ ಆ ದಾಳಿಯಿಂದ ಚೇತರಿಸಿಕೊಂಡು ಈಗ ಸಂಪೂರ್ಣ ಧೈರ್ಯದಿಂದ ಭಯೋತ್ಪಾದನೆಯನ್ನು ಹತ್ತಿಕ್ಕುತ್ತಿರುವುದು ಭಾರತದ ಶಕ್ತಿಯಾಗಿದೆ. ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರ ಪುರುಷರನ್ನು ಇಂದು ದೇಶ ಸ್ಮರಿಸಿಕೊಳ್ಳುತ್ತಿದೆ.