2025ರ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಶ್ಲಾಘಿಸಿದ ಪ್ರಧಾನಮಂತ್ರಿ

March 16th, 02:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಜಿಟಲ್ ಪರಿವರ್ತನಾ (ಟ್ರಾನ್ಸ್‌ ಫರ್ಮೇಷನ್) ಪ್ರಶಸ್ತಿ 2025 ಅನ್ನು ಗೆದ್ದಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ ) ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ ಬಿ ಐ, ದೇಶೀಯವಾಗಿ ತನ್ನ ಇನ್‌ ಹೌಸ್‌ ಡೆವಲಪರ್‌ ತಂಡದ ಮೂಲಕ ಅಭಿವೃದ್ಧಿಪಡಿಸಿರುವ ಪ್ರವಾಹ್ ಮತ್ತು ಸಾರಥಿ – ನವೀನ ಡಿಜಿಟಲ್‌ ಉಪಕ್ರಮಗಳನ್ನು ಗುರುತಿಸಿರುವ ಲಂಡನ್ ನಲ್ಲಿರುವ ಯುನೈಟೆಡ್‌ ಕಿಂಗ್ಡಮ್ ನ ಕೇಂದ್ರ ಬ್ಯಾಂಕ್, ಆರ್ ಬಿ ಐ ಗೆ ಡಿಜಿಟಲ್ ಪರಿವರ್ತನಾ ಪ್ರಶಸ್ತಿ 2025 ನೀಡಿ ಗೌರವಿಸಿದೆ.