The National Games are a celebration of India's incredible sporting talent: PM Modi in Dehradun

January 28th, 09:36 pm

PM Modi during the 38th National Games inauguration in Dehradun addressed the nation's youth, highlighting the role of sports in fostering unity, fitness, and national development. He emphasized the government's efforts in promoting sports, the importance of sports infrastructure, and India's growing sports economy.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಹ್ರಾಡೂನ್‌ನಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದರು

January 28th, 09:02 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರಾಖಂಡ ಇಂದು ಯುವಜನರ ಶಕ್ತಿಯಿಂದ ಬೆಳಗುತ್ತಿದೆ ಎಂದರು. ಬಾಬಾ ಕೇದಾರನಾಥ, ಬದರೀನಾಥ ಮತ್ತು ಗಂಗಾ ಮಾತೆಯ ಆಶೀರ್ವಾದದಿಂದ 38ನೇ ರಾಷ್ಟ್ರೀಯ ಕ್ರೀಡಾಕೂಟ ಇಂದು ಆರಂಭವಾಗುತ್ತಿದೆ ಎಂದರು. ಇದು ಉತ್ತರಾಖಂಡದ ರಚನೆಯ 25ನೇ ವರ್ಷವಾಗಿದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರದಾದ್ಯಂತದ ಯುವಕರು ಈ ಯುವ ರಾಜ್ಯದಲ್ಲಿ ತಮ್ಮ ಸಾಮರ್ಥ್ಯ‌ವನ್ನು ಪ್ರದರ್ಶಿಸಲಿದ್ದಾರೆ ಎಂದರು. ಈ ಕಾರ್ಯಕ್ರಮವು ‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’ ನ ಸುಂದರವಾದ ಚಿತ್ರವನ್ನು ಪ್ರದರ್ಶಿಸಿತು ಎಂದು ಅವರು ಹೇಳಿದರು. ರಾಷ್ಟ್ರೀಯ ಕ್ರೀಡಾಕೂಟದ ಈ ಆವೃತ್ತಿಯಲ್ಲಿಅನೇಕ ಸ್ಥಳೀಯ ಆಟಗಳನ್ನು ಸೇರಿಸಲಾಗಿದೆ ಮತ್ತು ಪರಿಸರ ಸ್ನೇಹಿ ವಸ್ತುಗಳ ಬಳಕೆ ಇರುವುದರಿಂದ ‘ಗ್ರೀನ್‌ ಗೇಮ್ಸ್’(ಹಸಿರು ಕ್ರೀಡಾಕೂಟ) ಘೋಷವಾಕ್ಯವಾಗಿದೆ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಮತ್ತಷ್ಟು ವಿವರಿಸಿದ ಪ್ರಧಾನಮಂತ್ರಿ ಅವರು, ಟ್ರೋಫಿಗಳು ಮತ್ತು ಪದಕಗಳನ್ನು ಸಹ ಇ-ತ್ಯಾಜ್ಯದಿಂದ ತಯಾರಿಸಲಾಗಿದೆ ಮತ್ತು ಪ್ರತಿ ಪದಕ ವಿಜೇತರ ಹೆಸರಿನಲ್ಲಿಒಂದು ಮರವನ್ನು ನೆಡಲಾಗುವುದು, ಇದು ಉತ್ತಮ ಉಪಕ್ರಮವಾಗಿದೆ ಎಂದು ಅವರು ಹೇಳಿದರು. ಉತ್ತಮ ಪ್ರದರ್ಶನಕ್ಕಾಗಿ ಅವರು ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಇಂತಹ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಉತ್ತರಾಖಂಡ ಸರ್ಕಾರ ಮತ್ತು ಜನರನ್ನು ಅವರು ಅಭಿನಂದಿಸಿದರು.

ವಾರಣಾಸಿಯಲ್ಲಿ ಮತದಾರರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

May 30th, 02:32 pm

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಮತದಾರರೊಂದಿಗೆ ವಿಡಿಯೋ ಸಂದೇಶದ ಮೂಲಕ ಸಂವಾದ ನಡೆಸಿದರು. ಬಾಬಾ ವಿಶ್ವನಾಥರ ಅಪಾರ ಕೃಪೆ ಹಾಗೂ ಕಾಶಿ ಜನತೆಯ ಆಶೀರ್ವಾದದಿಂದ ಮಾತ್ರ ಈ ನಗರವನ್ನು ಪ್ರತಿನಿಧಿಸಲು ಸಾಧ್ಯವಾಗಿದೆ ಎಂದು ಅವರು ವ್ಯಕ್ತಪಡಿಸಿದರು. ಹೊಸ ಕಾಶಿಯೊಂದಿಗೆ ಹೊಸ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಈ ಚುನಾವಣೆಯನ್ನು ಉಲ್ಲೇಖಿಸಿದ ಪ್ರಧಾನಿ, ಕಾಶಿಯ ನಿವಾಸಿಗಳು, ವಿಶೇಷವಾಗಿ ಯುವಕರು, ಮಹಿಳೆಯರು ಮತ್ತು ರೈತರು ಜೂನ್ 1 ರಂದು ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಅಮೇಥಿ ಸಂಸದ್ ಖೇಲ್ ಪ್ರತಿಯೋಗಿತಾ 2023 ರ ಸಮಾರೋಪದಲ್ಲಿ ಪ್ರಧಾನಮಂತ್ರಿ ಅವರ ವೀಡಿಯೊ ಸಂದೇಶದ ಕನ್ನಡ ಅನುವಾದ

October 13th, 01:00 pm

ಅಮೇಥಿಯಲ್ಲಿರುವ ನನ್ನ ಪ್ರೀತಿಯ ಕುಟುಂಬ ಸದಸ್ಯರಿಗೆ ಶುಭಾಶಯಗಳು! ಅಮೇಥಿಯಲ್ಲಿ ನಡೆದ ಅಮೇಥಿ ಸಂಸದ್ ಖೇಲ್-ಕೂಡ್ ಪ್ರತಿಯೋಗಿತದ ಸಮಾರೋಪದಲ್ಲಿ ನಿಮ್ಮೊಂದಿಗೆ ಇರುವುದು ನನಗೆ ತುಂಬಾ ವಿಶೇಷವಾಗಿದೆ. ಈ ತಿಂಗಳು ನಮ್ಮ ದೇಶದಲ್ಲಿ ಕ್ರೀಡೆಗೆ ಶುಭವಾಗಿದೆ. ನಮ್ಮ ಕ್ರೀಡಾಪಟುಗಳು ಏಷ್ಯನ್ ಕ್ರೀಡಾಕೂಟದಲ್ಲಿ ಶತಕ ಪದಕಗಳನ್ನು ಗಳಿಸಿದ್ದಾರೆ. ಈ ಕ್ರೀಡಾಕೂಟಗಳಲ್ಲಿಯೂ ಅಮೇಥಿಯ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸಂಸದ್ ಖೇಲ್-ಕೂಡ್ ಪ್ರತಿಯೋಗಿತದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳನ್ನು ನಾನು ಅಭಿನಂದಿಸುತ್ತೇನೆ. ಈ ಸ್ಪರ್ಧೆಯು ಒದಗಿಸಿದ ಹೊಸ ಶಕ್ತಿ ಮತ್ತು ವಿಶ್ವಾಸವನ್ನು ನೀವು ಅನುಭವಿಸುತ್ತಿರಬಹುದು, ಮತ್ತು ನೀವು ಮಾತ್ರವಲ್ಲ, ಪ್ರದೇಶದಾದ್ಯಂತದ ಜನರು ಸಹ ಇದನ್ನು ಅನುಭವಿಸುತ್ತಿದ್ದಾರೆ, ಮತ್ತು ಅದರ ಬಗ್ಗೆ ಕೇಳಿದಾಗ ನನಗೂ ಅನಿಸುತ್ತದೆ. ನಾವು ಈ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಮತ್ತು ಪೋಷಿಸಬೇಕು, ಅದಕ್ಕೆ ನೀರು ಹಾಕಬೇಕು ಮತ್ತು ಅದನ್ನು ಬೆಳೆಯಲು ಬಿಡಬೇಕು. ಕಳೆದ 25 ದಿನಗಳಲ್ಲಿ ನೀವು ಅನುಭವಿಸಿದ ಅನುಭವಗಳು ನಿಮ್ಮ ಕ್ರೀಡಾ ವೃತ್ತಿಜೀವನಕ್ಕೆ ಮಹತ್ವದ ಆಸ್ತಿಯಾಗಿದೆ. ಇಂದು, ಶಿಕ್ಷಕರಾಗಿ, ಮೇಲ್ವಿಚಾರಕರಾಗಿ, ಶಾಲಾ ಮತ್ತು ಕಾಲೇಜು ಪ್ರತಿನಿಧಿಯಾಗಿ ಪಾತ್ರ ವಹಿಸಿದ ಮತ್ತು ಈ ಭವ್ಯ ಅಭಿಯಾನದ ಮೂಲಕ ಈ ಯುವ ಕ್ರೀಡಾಪಟುಗಳನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ. ಒಂದು ಲಕ್ಷಕ್ಕೂ ಹೆಚ್ಚು ಕ್ರೀಡಾಪಟುಗಳು, ವಿಶೇಷವಾಗಿ ಅಂತಹ ಸಣ್ಣ ಪ್ರದೇಶದಲ್ಲಿ ಒಟ್ಟುಗೂಡಿರುವುದು ಗಮನಾರ್ಹ ಸಾಧನೆಯಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಅಮೇಥಿಯ ಸಂಸತ್ ಸದಸ್ಯೆ ಸ್ಮೃತಿ ಇರಾನಿ ಅವರಿಗೆ ನಾನು ವಿಶೇಷ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಅಮೇಠಿ ಸಂಸದ್ ಖೇಲ್ ಪ್ರತಿಯೋಗಿತಾ 2023 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಿದರು

October 13th, 12:40 pm

ಅಮೇಠಿ ಸಂಸದ್ ಖೇಲ್ ಪ್ರತಿಯೋಗಿತಾ 2023 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು.