58ನೇ ʻಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್‌ʼನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ

July 19th, 07:09 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 58ನೇ ʻಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್‌ʼನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದ ದೇಬದತ್ತ ಪ್ರಿಯದರ್ಶಿ, ಹರ್ಷಿತ್ ಸಿಂಘಾಲ್, ಕಬೀರ್ ಚಿಲ್ಲರ್ ಮತ್ತು ಸಂದೀಪ್ ಕುಚಿ ಅವರನ್ನೊಳಗೊಂಡ ಭಾರತೀಯ ತಂಡವನ್ನು ಅಭಿನಂದಿಸಿದರು. ಇದು ಪ್ರತಿಷ್ಠಿತ ಜಾಗತಿಕ ಸ್ಪರ್ಧೆಯಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ತಂಡದ ಪ್ರತಿಭೆ, ಸಮರ್ಪಣೆ ಮತ್ತು ವಿಜ್ಞಾನದ ಬಗೆಗಿನ ಉತ್ಸಾಹವು ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಜೊತೆಗೆ ಇದು ಅಸಂಖ್ಯಾತ ಯುವ ಮನಸ್ಸುಗಳನ್ನು ರಸಾಯನಶಾಸ್ತ್ರದಲ್ಲಿ ಅಧ್ಯಯನ ಮಾಡಲು ಮತ್ತು ಉತ್ತಮ ಸಾಧನೆ ಮಾಡಲು ಪ್ರೇರೇಪಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.