ಗುಜರಾತ್‌ನ ಸನಂದ್‌ನಲ್ಲಿ ಸಿಜಿ ಸೆಮಿ ಒಎಸ್‌ಎಟಿ ಸೌಲಭ್ಯ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
July 04th, 05:15 pm
2024ರಲ್ಲಿ ಈ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ನನಗೆ ಸಿಕ್ಕಿತ್ತು. 2025 ಆಗಸ್ಟ್ ಹೊತ್ತಿಗೆ ಚಿಪ್ ಪರೀಕ್ಷಾ ಕಾರ್ಯ ಇಲ್ಲಿ ಪ್ರಾರಂಭವಾಯಿತು, ಇಂದು ಈ ಸ್ಥಾವರವನ್ನು ಉದ್ಘಾಟಿಸಲಾಗಿದೆ. ಶಂಕುಸ್ಥಾಪನೆಯಿಂದ ಹಿಡಿದು ಉತ್ಪಾದನೆಯ ತನಕದ ಪ್ರಯಾಣವು ನಿಸ್ಸಂದೇಹವಾಗಿ ಅನೇಕ ಸಹೋದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ಸುಬ್ಬಯ್ಯ ಜಿ ಅವರಂತಹ ನಾಯಕರ ಫಲವಾಗಿದೆ. ವೇದಿಕೆಗೆ ಬರುವ ಮೊದಲು, ಈ ಯೋಜನೆಗೆ ಸಂಬಂಧಿಸಿದ ಅನೇಕರೊಂದಿಗೆ ಸಂವಹನ ನಡೆಸುವ ಅವಕಾಶ ನನಗೆ ಸಿಕ್ಕಿತು. ಈ ಕ್ಯಾಂಪಸ್‌ನಲ್ಲಿ ಒಂದು ಮಿನಿ ಭಾರತ ವಾಸಿಸುತ್ತಿದೆ ಎಂದು ಭಾಸವಾಯಿತು - ಎಲ್ಲಾ ಭಾಷೆ, ಉಡುಪು ಮತ್ತು ಪಾಕ ಪದ್ಧತಿಯ ಜನರು ಇಲ್ಲಿದ್ದಾರೆ. ನನ್ನ ಪ್ರದರ್ಶನ ಭೇಟಿಯ ಸಮಯದಲ್ಲಿ ನಾನು ಅನೇಕ ಯುವಕ-ಯುವತಿಯರೊಂದಿಗೆ ಮಾತನಾಡಿದೆ. ನಾನು ಹೆಮ್ಮೆಯಿಂದ ಉಲ್ಲೇಖಿಸಬೇಕಾದ ಒಂದು ವಿಷಯವೆಂದರೆ, ಅವರ ಆತ್ಮವಿಶ್ವಾಸದ ಮಟ್ಟ. ಅವರು ಮಾತನಾಡಿದ ದೃಢನಿಶ್ಚಯ, ತಂತ್ರಜ್ಞಾನದ ಮೇಲಿನ ಅವರ ನಂಬಿಕೆ – ಇದರಿಂದ ನಾನು ನಿಜವಾಗಿಯೂ ಪ್ರಭಾವಿತನಾದೆ.ಗುಜರಾತ್‌ನ ಸನಂದ್‌ನಲ್ಲಿ ಸಿಜಿ ಸೆಮಿ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (ಒಎಸ್‌ಎಟಿ) ಸೌಲಭ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು
July 04th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಸನಂದ್‌ನಲ್ಲಿ CG ಸೆಮಿ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (OSAT) ಸೌಲಭ್ಯವನ್ನು ಉದ್ಘಾಟಿಸಿದರು. ಈ ಸಂದರ್ಭದ ಮಹತ್ವವನ್ನು ವಿವರಿಸಿದ, ಪ್ರಧಾನಮಂತ್ರಿಯವರು ಈ ಉಡಾವಣೆಯನ್ನು ರಾಷ್ಟ್ರವು ತನ್ನ ಗುರಿಗಳಿಗೆ ಹೊಂದಿರುವ ಅಚಲ ಬದ್ಧತೆಗೆ ಸಾಕ್ಷಿಯಾಗಿ ರೂಪಿಸಿದರು. ದೇಶವು ತನ್ನ ಬಲವಾದ ನಿರ್ಣಯಗಳನ್ನು ಹಿಂಜರಿಕೆಯಿಲ್ಲದೆ ನಿರಂತರವಾಗಿ ಸ್ಪಷ್ಟ ವಾಸ್ತವಗಳಾಗಿ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು. ಭಾರತವು ಏನು ಮಾಡಲು ನಿರ್ಧರಿಸಿದರೂ ಅದು ದೃಢವಾಗಿ ಸಾಧಿಸುತ್ತದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಪುರಾವೆಯಾಗಿದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.ಜುಲೈ 4 ರಂದು ಪ್ರಧಾನಮಂತ್ರಿ ಅವರಿಂದ ರಾಜಸ್ಥಾನ ಮತ್ತು ಗುಜರಾತ್ ಭೇಟಿ
July 03rd, 11:25 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 4, 2026 ರಂದು ರಾಜಸ್ಥಾನ ಮತ್ತು ಗುಜರಾತಿಗೆ ಭೇಟಿ ನೀಡಲಿದ್ದಾರೆ. ಸುಮಾರು ಬೆಳಿಗ್ಗೆ 10:45ಕ್ಕೆ, ಪ್ರಧಾನಮಂತ್ರಿ ಅವರು ಜೋಧ್ ಪುರ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಮತ್ತು ಜೋಧ್ಪುರದಲ್ಲಿ ಮಾರ್ಪಡಿಸಿದ ಉಡಾನ್ ('ಮೋಡಿಫೈಡ್ ಉಡಾನ್') ಯೋಜನೆಗೆ ಚಾಲನೆ ನೀಡಲಿದ್ದಾರೆ. ತದನಂತರ, ಮಧ್ಯಾಹ್ನ ಸುಮಾರು 12:15ಕ್ಕೆ ಅವರು ಬಲೋತ್ರಾಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಸುಮಾರು ₹1.06 ಲಕ್ಷ ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಲಿದ್ದಾರೆ, ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ಗುಜರಾತ್‌ನ ಸನಂದ್‌ನಲ್ಲಿ ಕೇನ್ಸ್ ಸೆಮಿಕಾನ್ ಸ್ಥಾವರ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
March 31st, 01:05 pm
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ರಾಜ್ಯದ ಉಪಮುಖ್ಯಮಂತ್ರಿ ಶ್ರೀ ಹರ್ಷ ಭಾಯಿ ಸಂಘವಿ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಅಶ್ವಿನಿ ವೈಷ್ಣವ್ ಜೀ, ರಾಜ್ಯ ಸಚಿವ ಸಹೋದರ ಅರ್ಜುನ್ ಮೋಧ್ವಾಡಿಯಾ ಜೀ, ಕೇನ್ಸ್ ಮತ್ತು ಆಲ್ಫಾ ಒಮೆಗಾ ಸೆಮಿಕಂಡಕ್ಟರ್‌ಗಳ ಪ್ರತಿನಿಧಿಗಳೇ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಗುಜರಾತಿನ ಸಾನಂದ್ ನಲ್ಲಿ ಕೇನ್ಸ್ ಸೆಮಿಕಾನ್ ಘಟಕ ಉದ್ಘಾಟನೆ
March 31st, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಸಾನಂದ್ ನಲ್ಲಿ ಕೇನ್ಸ್ ಟೆಕ್ನಾಲಜಿ ಸೆಮಿಕಂಡಕ್ಟರ್ ಘಟಕವನ್ನು ಉದ್ಘಾಟಿಸುವ ಮೂಲಕ ಉತ್ಪಾದನಾ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಫೆಬ್ರವರಿ 28ರಂದು ಮೈಕ್ರಾನ್ ಘಟಕದ ಉತ್ಪಾದನಾ ಆರಂಭದ ವೇಳೆ ತಾವು ಸಾನಂದ್ ನಲ್ಲಿದ್ದುದ್ದನ್ನು ಸ್ಮರಿಸಿದ ಅವರು, ಸರಿಯಾಗಿ ಒಂದು ತಿಂಗಳ ನಂತರ ಕೇನ್ಸ್ ಸಂಸ್ಥೆಯ ಈ ಮೈಲಿಗಲ್ಲಿಗೆ ಸಾಕ್ಷಿಯಾಗಲು ಮರಳಿ ಬಂದಿರುವುದು ಭಾರತದ ಸೆಮಿಕಂಡಕ್ಟರ್ ಪಯಣದ ವೇಗಕ್ಕೆ ಹಿಡಿದ ಕನ್ನಡಿ ಎಂದು ಬಣ್ಣಿಸಿದರು. ಇದು ಕೇವಲ ಕಾಕತಾಳೀಯವಲ್ಲ; ಬದಲಾಗಿ ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯು ಎಂತಹ ಕ್ಷಿಪ್ರ ವೇಗದಲ್ಲಿ ವಿಕಸನಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ, ಎಂದು ಶ್ರೀ ಮೋದಿ ಅವರು ಹರ್ಷ ವ್ಯಕ್ತಪಡಿಸಿದರು.ಮಾರ್ಚ್ 31ರಂದು ಗುಜರಾತ್‌ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
March 30th, 11:05 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮಾರ್ಚ್ 31ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಮಂತ್ರಿಯವರು ಗಾಂಧಿನಗರದಲ್ಲಿ ʻಸಾಮ್ರಾಟ್ ಸಂಪ್ರತಿʼ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 12:45ರ ಸುಮಾರಿಗೆ ಪ್ರಧಾನಮಂತ್ರಿಯವರು ಅಹಮದಾಬಾದ್‌ನ ಸನಂದ್‌ನಲ್ಲಿ ʻಕೇನ್ಸ್ ಸೆಮಿಕಾನ್ʼ ಘಟಕವನ್ನು ಉದ್ಘಾಟಿಸಲಿದ್ದಾರೆ. ಅಲ್ಲಿಯೂ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ, ಪ್ರಧಾನಮಂತ್ರಿಯವರು ವಾವ್-ಥರಾಡ್‌ಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಅವರು ಸಂಜೆ 4 ಗಂಟೆಗೆ 20,000 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.ಫೆಬ್ರವರಿ 28 ರಂದು ಗುಜರಾತ್‌ಗೆ ಪ್ರಧಾನಮಂತ್ರಿ ಭೇಟಿ
February 27th, 03:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಫೆಬ್ರವರಿ 28, 2026 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3:45ರ ಸುಮಾರಿಗೆ, ಪ್ರಧಾನಮಂತ್ರಿಗಳು ಸನಂದ್‌ನಲ್ಲಿ ಮೈಕ್ರಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟ್ ಮತ್ತು ಪ್ಯಾಕೇಜಿಂಗ್ (ATMP) ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಅವರು ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಅಡಿಯಲ್ಲಿ ಮತ್ತೊಂದು ಸೆಮಿಕಂಡಕ್ಟರ್ (ಅರೆವಾಹಕ) ಘಟಕಕ್ಕೆ ಕ್ಯಾಬಿನೆಟ್ ಅನುಮೋದನೆ
September 02nd, 03:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಗುಜರಾತ್‌ನ ಸನಂದ್‌ನಲ್ಲಿ ಅರೆವಾಹಕ ಘಟಕವನ್ನು ಸ್ಥಾಪಿಸುವ ಕೇನ್ಸ್ ಸೆಮಿಕಾನ್ ಪ್ರೈವೇಟ್ ಲಿಮಿಟೆಡ್‌ನ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಅರೆವಾಹಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.ಮಾರ್ಚ್ 13 ರಂದು ' ಇಂಡಿಯಾಸ್ ಟೆಕ್ಕೇಡ್ : ಚಿಪ್ಸ್ ಫಾರ್ ವಿಕಸಿತ ಭಾರತ ' ನಲ್ಲಿ ಭಾಗವಹಿಸಲಿರುವ ಪ್ರಧಾನಿ ಮತ್ತು ಸುಮಾರು 1.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೂರು ಅರೆವಾಹಕ ಸೌಲಭ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
March 12th, 03:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಮಾರ್ಚ್ 13ರಂದು ಬೆಳಗ್ಗೆ 10:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ' ಇಂಡಿಯಾಸ್ ಟೆಕ್ಕೇಡ್: ಚಿಪ್ಸ್ ಫಾರ್ ವಿಕಸಿತ ಭಾರತ ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು ಸುಮಾರು 1.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೂರು ಅರೆವಾಹಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ದೇಶಾದ್ಯಂತದ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.People have no expectations left from Congress; they are being defeated in every state: PM Modi
December 10th, 12:48 pm
Prime Minister Narendra Modi today hit out at the Congress for insulting Gujarat. He alleged that the Congress only worked for welfare of rich and never thought about well being of the poor section of the society.