ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪರವಾಗಿ ಬೆಂಬಲ ಸೂಚಿಸಿದವರಿಗೆ ಪ್ರಧಾನಮಂತ್ರಿ ಅವರು ಗೌರವ ಸಲ್ಲಿಸಿದರು
June 25th, 10:53 am
ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ದೃಢವಾಗಿ ಬೆಂಬಲ ಸೂಚಿಸಿ, ರಕ್ಷಿಸಿದ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗೌರವ ಸಲ್ಲಿಸಿದರು. ಇದನ್ನು ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು ಎಂದು ಶ್ರೀ ಮೋದಿಯವರು ಬಣ್ಣಿಸಿದರು. ಬಂಡಾಯವೆದ್ದು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಆದರ್ಶಗಳನ್ನು ಎತ್ತಿಹಿಡಿದ ಅಸಂಖ್ಯಾತ ನಾಗರಿಕರ ಅಸಾಧಾರಣ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಈ ಅವಧಿಯು ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದರು.ʼಸಂವಿಧಾನ ಹತ್ಯಾ ದಿವಸʼವು ಭಾರತದ ಸಂವಿಧಾನವನ್ನು ಯಾವಾಗ ದಮನಿಸಲಾಯಿತು ಎನ್ನುವುದನ್ನು ನೆನಪಿಸುತ್ತದೆ: ಪ್ರಧಾನಮಂತ್ರಿ
July 12th, 05:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 25 ಅನ್ನು ʼಸಂವಿಧಾನ್ ಹತ್ಯಾ ದಿವಸ್ʼ ಎಂದು ಘೋಷಿಸುವುದು ಭಾರತದ ಸಂವಿಧಾನವನ್ನು ದಮನಿಸಿದ ಕಾಲವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.